Site icon Vistara News

ತಾಕತ್ತಿದ್ದರೆ ಹಿಡಿಯಿರಿ ಎಂದು ಸ್ಟೇಟಸ್‌ನಲ್ಲಿ ಪೊಲೀಸರಿಗೆ ಸವಾಲು ಹಾಕಿದವ ಸಿಕ್ಕಿಬಿದ್ದ!

ವಾಟ್ಸ್‌ಆಪ್‌ ಸ್ಟೇಟಸ್‌

ಚಿಕ್ಕಮಗಳೂರು: ತಾಕತ್ತಿದ್ದರೆ ಹಿಡಿಯಿರಿ ಎಂದು ಸವಾಲು ಹಾಕಿದ ಆಸಾಮಿಯೊಬ್ಬ ಈಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಎನ್.ಆರ್.ಪುರ ತಾಲೂಕಿನ ಅಣ್ಣಪ್ಪನೇ ಬಂಧಿತ ʻʻಹೌದು ನಾನೇ ರಾಜ, ನನ್ನ‌ ಗೆಲ್ಲೋರು ಯಾರಿಲ್ಲ, ನನಗೆ ನಾನೇ ರಾಜ, ನಿಮಗೆ ತಾಕತ್ತು ಇದ್ದರೆ ನನ್ನ ಹಿಡಿಯಿರಿʼʼ ಎಂದು ಸ್ಟೇಟಸ್‌ ಹಾಕಿಕೊಂಡು ಪೊಲೀಸರಿಗೆ ಸವಾಲು ಹಾಕಿದ್ದ.ೀ

ಇದನ್ನೂ ಓದಿ | ಮಳೆಯ ನಡುವೆಯೇ ಅಮಾನವೀಯವಾಗಿ ರೋಗಿಯನ್ನು ಶಿಫ್ಟ್ ಮಾಡಿದ ಸಿಬ್ಬಂದಿ

ತಾಲೂಕು ಆಫೀಸಲ್ಲಿ ಸುಳ್ಳು ದಾಖಲೆ ಸೃಷ್ಟಿಸುತ್ತಿದ್ದ ಆರೋಪದಡಿ ಈತನಿಗಾಗಿ ಪೊಲೀಸರು ಹುಡುಕುತ್ತಿದ್ದರು. ಇದೀಗ ಎನ್.ಆರ್.ಪುರ ತಾಲೂಕಿನ ಬಾಳೆಕೊಪ್ಪದಲ್ಲಿ ಟವರ್ ಲೋಕೇಶನ್ ಆಧಾರದ ಮೇಲೆ ಎನ್. ಆರ್.ಪುರ ತಾಲೂಕು ಕಚೇರಿ ಸಿಬ್ಬಂದಿ ಅಣ್ಣಪ್ಪನನ್ನು ಬಂಧಿಸಲಾಗಿದೆ.

ಇದನ್ನೂ ಓದಿ | ಕಾರ್ಸ್‌24 ಕಂಪನಿಯಿಂದ 600 ಸಿಬ್ಬಂದಿ ವಜಾ

Exit mobile version