Site icon Vistara News

Murder Case: ವೀಕೆಂಡ್‌ ಗೋವಾದಲ್ಲಿ ಮಜಾ ಮಾಡಿ ಮನೆಗೆ ಬಂದು ಪತ್ನಿಯ ಕೊಲೆ ಮಾಡಿದ ಪತಿ!

chikkamagaluru murder

ಚಿಕ್ಕಮಗಳೂರು: ಕಳೆದ ವೀಕೆಂಡ್‌ನಲ್ಲಿ ಪತ್ನಿಯ ಜೊತೆ ಗೋವಾದಲ್ಲಿ ಪೂರ್ತಿ ಸುತ್ತಾಡಿ, ಮನೆಗೆ ಬಂದ ಮರು ದಿನವೇ ಪತ್ನಿಯನ್ನು ಕೊಂದುಹಾಕಿದ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಈ ವಿಚಿತ್ರ ಪತಿ, ಪತ್ನಿಯನ್ನು ಕೊಲೆ ಮಾಡಿ ಸೀದಾ ಪೊಲೀಸ್‌ ಸ್ಟೇಷನ್‌ಗೆ ಬಂದು ಸರೆಂಡರ್ ಆಗಿದ್ದಾನೆ. ಚಿಕ್ಕಮಗಳೂರು ನಗರದ ಕ್ರಿಶ್ಚಿಯನ್ ಕಾಲೋನಿಯಲ್ಲಿ ಘಟನೆ ನಡೆದಿದೆ. ಪತ್ನಿಯನ್ನೇ ಬರ್ಬರವಾಗಿ ಕೊಂದು ಠಾಣೆಗೆ ಬಂದ ಪತಿ ಶಬ್ಬೀರ್ ಅಹ್ಮದ್. ಪತ್ನಿ ಶಮಾ ಭಾನು (34) ಹತ್ಯೆಯಾಗಿದೆ.

ಕಳೆದ ವರ್ಷವಷ್ಟೇ ಇಬ್ಬರಿಗೂ ಮದುವೆಯಾಗಿತ್ತು. ಒಂದು ವರ್ಷದ ಹಿಂದೆ ಶಮಾ ಭಾನು ಅವರನ್ನು ಮದುವೆಯಾಗಿದ್ದ ಶಬ್ಬೀರ್, ಕಳೆದ ವಾರ ಆಕೆಯನ್ನು ಕರೆದುಕೊಂಡು ಗೋವಾಕ್ಕೆ ತೆರಳಿದ್ದ. ಮನೆಗೆ ಮರಳಿದ ನಂತರ ಒಂದೇ ದಿನದಲ್ಲಿ ದೊಣ್ಣೆಯಿಂದ ಹೊಡೆದು ಪತ್ನಿಯನ್ನು ಕೊಂದಿದ್ದಾನೆ. ನಂತರ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಾಕುವಿನಿಂದ ಇರಿದು ಯುವಕನ ಬರ್ಬರ ಹತ್ಯೆ

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಚಾಕುವಿನಿಂದ ಇರಿದು ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಅಸ್ಲಂ ಮಕಾಂದಾರ್ (30) ಕೊಲೆಯಾದ ಯುವಕ. ಮಂಜುನಾಥ್‌ ಎಂಬಾತ ಚಾಕುವಿನಿಂದ ಇರಿದಿದ್ದಾನೆ.

ಬೆಂಗೇರಿಯ ವೆಂಕಟೇಶ್ವರ ಕಾಲನಿಯಲ್ಲಿ ಘಟನೆ ನಡೆದಿದೆ. ಮಂಜುನಾಥ ಸ್ಮಾರ್ಟ್ ವಾಚ್ ವಿಚಾರಕ್ಕೆ ಜಗಳ ತೆಗೆದು ಎದೆ ಮತ್ತು ಹೊಟ್ಟೆಗೆ ಚಾಕುವಿನಿಂದ ಇರಿದಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಸ್ಲಂನನ್ನು ಕಿಮ್ಸ್ ಆಸ್ಪತ್ರೆಗೆ ಸ್ನೇಹಿತರು ದಾಖಲಿಸಿದ್ದರು. ಚಿಕಿತ್ಸೆ ಫಲಿಸದೆ ಕಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಮಂಜುನಾಥನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: ಪ್ರೀತ್ಸೋದ್‌ ತಪ್ಪು ಎಂದಿದ್ದೇ ತಪ್ಪಾಯ್ತು: ಮಗಳ ತಂಟೆಗೆ ಬರಬೇಡ ಎಂದಿದ್ದಕ್ಕೇ ಚಾಕು ಇರಿದು ತಂದೆಯ ಕೊಲೆ

Exit mobile version