Site icon Vistara News

ಆಟವಾಡುತ್ತಿದ್ದಾಗ ಲಾರಿ ಹರಿದು ಬಾಲಕಿ ಸಾವು

ಬಾಲಕಿ ಸಾವು

ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಹಡಗಿನಾಳದ ಸಜ್ಜಿಹಾಳ ಪ್ಲಾಟ್‌ ಬಳಿ ರಸ್ತೆಯಲ್ಲಿ ಆಟವಾಡುತ್ತಿದ್ದಾಗ ಲಾರಿ ಹರಿದು ಐದು ವರ್ಷದ ಬಾಲಕಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ.

ಶ್ರಾವಣಿ ಮಲ್ಲಪ್ಪ ಸಿದ್ದನ್ನವರ್(5) ಮೃತ ಬಾಲಕಿ. ರಸ್ತೆ ಪಕ್ಕ ಆಟವಾಡುತ್ತಿದ್ದ ಬಾಲಕಿ ಏಕಾಏಕಿ ರಸ್ತೆಗೆ ಬಂದಿದ್ದಾಳೆ. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಲಾರಿ ಹರಿದಿದ್ದರಿಂದ ಬಾಲಕಿ ಮೃತಪಟ್ಟಿದ್ದಾಳೆ. ಅಪಘಾತದಲ್ಲಿ ಬಾಲಕಿ ದೇಹದ ಅರ್ಧಭಾಗ ನಜ್ಜುಗುಜ್ಜಾಗಿವೆ. ಲಾರಿ ಚಾಲಕನನ್ನು ಕುಲಗೋಡ ಪೊಲೀಸರು ವಶಕ್ಕೆ ಪಡೆದದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ | Accident | ರಸ್ತೆ ಬದಿ ನಿಂತಿದ್ದ ಟ್ರ್ಯಾಕ್ಟರ್‌ಗೆ ಬೈಕ್‌ ಡಿಕ್ಕಿ; ಇಬ್ಬರು ಸವಾರರ ಸಾವು

Exit mobile version