ಚಿಕ್ಕೋಡಿ: ವೈದ್ಯರ ನಿರ್ಲಕ್ಷ್ಯದಿಂದ ಆಪರೇಷನ್ ಬಳಿಕ ಯವಕನೊಬ್ಬ ಮೃತಪಟ್ಟಿರುವ ಬಗ್ಗೆ ಆತನ ಸಂಬಂಧಿಕರು ಚಿಕ್ಕಪಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ರೋಹಿತ್ ಪನಾಳೆ (22) ಮೃತ ಯುವಕ. ಮೂಗಿನ ಸಮಸ್ಯೆ ಎಂದು ಯುವಕ ನಗರದ ಬಿಬಿ ಪಾಟೀಲ್ ಆಸ್ಪತ್ರೆಗೆ ಸೋಮವಾರ ದಾಖಲಾಗಿದ್ದರು. ರೋಹಿತ್‌ನನ್ನು ಪರೀಕ್ಷಿಸಿದ ವೈದ್ಯರು ತುರ್ತು ಆಪರೇಷನ್ ಸಲಹೆ ಕೊಟ್ಟಿದ್ದರು. ಹೀಗಾಗಿ ರೋಹಿತ್ ಹಾಗೂ ಅವರ ಕುಟುಂಬಸ್ಥರು ವೈದ್ಯರ ಮಾತಿಗೆ ಸಹಮತ ವ್ಯಕ್ತಪಡಿಸಿದ್ದು, ಶುಕ್ರವಾರ ಮಧ್ಯಾಹ್ನದ ವೇಳೆಗೆ ಆಪರೇಷನ್ ನಡೆದಿತ್ತು.
ಆಪರೇಷನ್ ಆದ ಬಳಿಕ ರೋಹಿತ್‌ಗೆ ಉಸಿರಾಟದ ತೊಂದರೆ ಶುರುವಾಗಿದೆ. ನಾವು ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿಯನ್ನು ಕರೆದರೂ ಆಸ್ಪತ್ರೆಯಲ್ಲಿ ಯಾರೂ ಇರಲಿಲ್ಲ. ಕೂಡಲೇ ರೋಹಿತ್‌ನನ್ನು ಕೆಎಲ್‌ಇ ಆಸ್ಪತ್ರೆಗೆ ದಾಖಲಿಸಬೇಕು ಎಂದು ಬಿಬಿ ಆಸ್ಪತ್ರೆಯಿಂದ ಹೊರಟೆವು. ಆದರೆ ಆಸ್ಪತ್ರೆಗೆ ದಾಖಲಿಸುವ ಮಾರ್ಗ ಮಧ್ಯೆಯೇ ಮೃತಪಟ್ಟಿರುವುದಾಗಿ ರೋಹಿತ್ ಸಹೋದರ ಶ್ರೀಧರ್ ಆರೋಪಿಸಿದ್ದಾರೆ. ಮೃತ ಯುವಕನ ಸಹೋದರ ನೀಡಿದ ದೂರಿನ ಮೇರೆಗೆ ಚಿಕ್ಕೋಡಿ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ | ಜಾಲತಾಣದಲ್ಲಿ ಕೊಡವ ಜನಾಂಗ, ಮಹಿಳೆಯರನ್ನು ಅವಮಾನಿಸಿದವನ ವಿರುದ್ಧ FIR