ಬೆಳಗಾವಿ ಜಿಲ್ಲೆಯ ರಾಯಬಾದ ತಾಲೂಕಿನ ಹಂದಿಗುಂದ ಗ್ರಾಮದಲ್ಲಿ ಭೀಕರ ಅಪಘಾತ (Road Accident) ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿ ಕಾರು (Car Accident) ಅಪಘಾತಕ್ಕೀಡಾಗಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಮೃತಪಟ್ಟಿದ್ದಾರೆ. ಪಾಲಬಾವಿ ಗ್ರಾಮದ ಮಹಾಲಿಂಗ ನಿಂಗನೂರ (47) ಮತ್ತು ಈರಪ್ಪಾ ಉಗಾರೆ (32) ಮೃತ ದುರ್ದೈವಿಗಳು.
ಅಪಘಾತವಾಗುತ್ತಿದ್ದಂತೆ ಕಾರು ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ರಸ್ತೆಯಲ್ಲಿ ವೇಗವಾಗಿ ಬಂದ ಕಾರು ವಿದ್ಯುತ್ ಕಂಬ ಡಿಕ್ಕಿ ಹೊಡೆದಿದೆ. ಬಳಿಕ ಕಂಬದ ಸಮೇತ ರಸ್ತೆ ಬದಿಯ ಜಮೀನಿಗೆ ನುಗ್ಗಿದೆ. ಡಿಕ್ಕಿ ರಭಸಕ್ಕೆ ಕಾರಿನ ಹಿಂಬದಿ ಕುಳಿತಿದ್ದ ಇಬ್ಬರಿಗೆ ತೀವ್ರ ರಕ್ತಸ್ರಾವವಾಗಿದೆ. ಅಪಘಾತವಾಗುತ್ತಿದ್ದಂತೆ ಸ್ಥಳೀಯರು ರಕ್ಷಣೆಗೆ ಮುಂದಾಗಿದ್ದಾರೆ. ಕೂಡಲೇ ಕಾರಿನಲ್ಲಿ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದವರನ್ನು ರಕ್ಷಿಸಿದ್ದಾರೆ. ಆದರೆ ಗಂಭೀರ ಗಾಯಗೊಂಡು ಇಬ್ಬರು ಮೃತಪಟ್ಟಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾರೂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ.
ಇದನ್ನೂ ಓದಿ: Shivamogga Accident : ತಿರುವಿನಲ್ಲಿ ಖಾಸಗಿ ಬಸ್ ಪಲ್ಟಿ; ಉರುಳಿ ಬಿದ್ದ ಪ್ರಯಾಣಿಕರಿಗೆ ಗಂಭೀರ ಗಾಯ
ಕಾರಿಗೆ ಬೈಕ್ ಅಡ್ಡ ಹಾಕಿ ಬಾನೆಟ್‌ಗೆ ಒದ್ದ ಬೈಕ್ ಸವಾರ
ಬೆಂಗಳೂರು: ದಾರಿ ಬಿಡುವ ಸಂದರ್ಭದಲ್ಲಿ ಬೈಕ್ ಮತ್ತು ಕಾರು ಚಾಲಕನ ಮಧ್ಯೆ ಜಗಳ ನಡೆದಿರುವ ಘಟನೆ ಯಲಹಂಕ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಮೂಲಕ ನಗರದಲ್ಲಿ ನಡೆಯುತ್ತಿರುವ ರೋಡ್ ರೇಜ್‌ಗೆ ಮತ್ತೊಂದು ಘಟನೆ ಸೇರ್ಪಡೆಯಾದಂತಾಗಿದೆ.
ಜಕ್ಕೂರಿನಲ್ಲಿ ಯೂ ಟರ್ನ್ ಮಾಡುವ ವೇಳೆ ಕಾರು ಚಾಲಕ ಪ್ರವೀಣ್ ಹಾಗೂ ದ್ವಿಚಕ್ರ ವಾಹನ ಸವಾರನ ನಡುವೆ ಕಿರಿಕ್ ನಡೆದಿದೆ. ಈ ವೇಳೆ ಕಾರನ್ನು ಅಡ್ಡ ಹಾಕಿ ಕಾರ್‌ನ ಬಾನೆಟ್‌ಗೆ ಒದ್ದು ಬೈಕ್ ಸವಾರ ಸ್ಥಳದಿಂದ ಪರಾರಿಯಾಗಿದ್ದಾನೆ. ಬಳಿಕ ಫಾಲೋ ಮಾಡಿಕೊಂಡು ಬಂದಿದ್ದ ದ್ವಿಚಕ್ರ ವಾಹನ ಸವಾರ ಶ್ರೀರಾಮಪುರ ವಿಲೇಜ್ ಬಳಿಯೂ ಕಿರಿಕ್ ಮಾಡಿದ್ದಾನೆ. ಕಾರ್ ಡ್ಯಾಷ್ ಕ್ಯಾಮ್ ಬೈಕ್ ಸವಾರನ ಕೃತ್ಯ ಸೆರೆಯಾಗಿದೆ.
ನಗರದಲ್ಲಿ ಬೀಡು ಬಿಟ್ಟಿದೆ ತುಪ್ಪ ಕಳ್ಳತನ ಮಾಡೋ ಗ್ಯಾಂಗ್
ಬೆಂಗಳೂರು: ನಗರದಲ್ಲಿ ಹೊಸ ರೀತಿಯ ಕಳ್ಳತನ ಆರಂಭವಾಗಿದೆ. ಇದೀಗ ಕಳ್ಳರು ತುಪ್ಪವನ್ನೇ ಟಾರ್ಗೆಟ್ ಮಾಡಿ ಕಾರ್ಯ ಪ್ರವೃತ್ತರಾಗಿದ್ದಾರೆ. ನಂದಿನಿ ಪಾರ್ಲರ್‌ಗಳು, ಸೂಪರ್ ಮಾರ್ಕೆಟ್‌ಗಳೇ ಇವರ ಮುಖ್ಯ ಗುರಿ. ಅದಕ್ಕೆ ಇತ್ತೀಚಿನ ಉದಾಹರಣೆ ಎಂಬಂತೆ ಅನ್ನಪೂರ್ಣೇಶ್ವರಿ ನಗರದಲ್ಲಿ 15 ಲೀಟರ್ ತುಪ್ಪ ಎಗರಿಸಿ ಕಳ್ಳರು ಪರಾರಿಯಾಗಿದ್ದಾರೆ. ತುಪ್ಪ ಕಳವು ಮಾಡುತ್ತಿರುವ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ (Robbery Case).
ಒಬ್ಬರೇ ಇರುವ ಅಂಗಡಿಗಳನ್ನ ಟಾರ್ಗೆಟ್ ಮಾಡುವ ಕಳ್ಳರು ಕೆಜಿಗಟ್ಟಲೇ ತುಪ್ಪ ಖರೀದಿಸುವ ನೆಪದಲ್ಲಿ ಆಗಮಿಸುತ್ತಾರೆ. ವಳಿಕ ಮತ್ತೊಂದು ವಸ್ತು ಕೇಳಿ ಮಾಲೀಕರು ಅತ್ತ ತಿರುಗುವಷ್ಟರಲ್ಲಿ ತಂದಿಟ್ಟ ತುಪ್ಪವನ್ನು ಎತ್ತಿಕೊಂಡು ಪರಾರಿಯಾತ್ತಾರೆ. ಕಳೆದ ಒಂದು ತಿಂಗಳ ಹಿಂದೆ ಇದೇ ರೀತಿ ನಂದಿನಿ ಪಾರ್ಲರ್ ಒಂದರಿಂದ 15 ಕೆಜಿ ತುಪ್ಪ ಖರೀದಿಸಿ ಖದೀಮರು ಪಾರಾರಿಯಾಗಿದ್ದರು.
ಅಂದು ಕೆಂಗೇರಿ ಕೊಮ್ಮಘಟ್ಟ ನಂದಿನಿ ಪಾರ್ಲರ್‌ನಲ್ಲಿ ಕೈಚಳಕ ತೋರಿದ್ದ ಕಳ್ಳರು ಪೇಡ ಖರೀದಿ ನೆಪದಲ್ಲಿ ತುಪ್ಪ ಕದ್ದೊಯ್ದಿದ್ದರು. ಇದೀಗ ಅದೇ ರೀತಿಯಲ್ಲಿ ಅನ್ನಪೂರ್ಣೇಶ್ವರಿ ನಗರದಲ್ಲಿ ಕಳ್ಳರು ಕೈ ಚಳಕ ತೋರಿದ್ದಾರೆ. ಅನ್ನಪೂರ್ಣೇಶ್ವರಿ ನಗರದ ಪೇರ್ ಪ್ರೈಸ್ ಎಂಬ ಸೂಪರ್ ಮಾರ್ಕೇಟ್‌ನಲ್ಲಿ ಈ ಘಟನೆ ನಡೆದಿದೆ. ಇಲ್ಲಿಂದಲೂ 15 ಲೀಟರ್ ತುಪ್ಪ ಖರೀದಿಸಿದ ಇಬ್ಬರು ಆರೋಪಿಗಳು ಬೈಕ್‌ನಲ್ಲಿ ಪರಾರಿಯಾಗಿದ್ದಾರೆ. ಈ ದೃಶ್ಯ ಸಿಸಿ ಟಿವಿ ಕ್ಯಾ,ಮೆರಾದಲ್ಲಿ ಸೆರೆಯಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ