Site icon Vistara News

Chikkodi Lok Sabha Constituency: ಜೊಲ್ಲೆ vs ಜಾರಕಿಹೊಳಿ; ಯಾರಿಗೆ ಗೆಲುವಿನ ಹೋಳಿ?

Chikkodi Lok Sabha Constituency

Chikkodi Lok Sabha Constituency: Annasaheb Jolle Vs Priyanka Jarkiholi

ಚಿಕ್ಕೋಡಿ: ಕಳೆದ ಎರಡು ದಶಕಗಳಿಂದ ಚಿಕ್ಕೋಡಿ ಲೋಕಸಭೆ ಕ್ಷೇತ್ರದಲ್ಲಿ (Chikkodi Lok Sabha Constituency) ಬಿಜೆಪಿಯೇ ಪ್ರಾಬಲ್ಯ ಸಾಧಿಸಿದೆ. ಆದರೆ, ಈ ಬಾರಿ ಬಿಜೆಪಿಯ ಅಣ್ಣಾ ಸಾಹೇಬ್‌ ಜೊಲ್ಲೆ ಅವರಿಗೆ ಸಚಿವ ಸತೀಶ್‌ ಜಾರಕಿಹೊಳಿ ಅವರ ಪುತ್ರಿ, ಯುವ ನಾಯಕಿ ಪ್ರಿಯಾಂಕಾ ಜಾರಕಿಹೊಳಿ (Priyanka Jarkiholi) ಅವರನ್ನು ಎದುರಿಸುವ ಸವಾಲು ಎದುರಾಗಿದೆ. ಚುನಾವಣೆಯಲ್ಲಿ ಪ್ರಿಯಾಂಕಾ ಜಾರಕಿಹೊಳಿ ಅವರು ಪ್ರಬಲ ಸ್ಪರ್ಧೆಯೊಡ್ಡಿರುವ ಕಾರಣ ಲೋಕಸಭೆ ಚುನಾವಣೆ ಫಲಿತಾಂಶವು ಕುತೂಹಲ ಕೆರಳಿಸಿದೆ.

ಹಾಲಿ ಸಂಸದರೂ ಆಗಿರುವ ಅಣ್ಣಾ ಸಾಹೇಬ್‌ ಜೊಲ್ಲೆ ಅವರಿಗೆ ಟಿಕೆಟ್‌ ತಪ್ಪಿಸಿ, ತಾವು ಟಿಕೆಟ್‌ ಗಿಟ್ಟಿಸಿಕೊಳ್ಳಲು ರಮೇಶ್‌ ಕತ್ತಿ ಅವರು ತಂತ್ರ ಹೆಣೆದರೂ ಅದು ಸಫಲವಾಗಿಲ್ಲ. ಬಳಿಕ ರಮೇಶ್‌ ಕತ್ತಿ ಅವರು ಕಾಂಗ್ರೆಸ್‌ ಸೇರುತ್ತಾರೆ ಎಂಬ ಮಾತುಗಳು ಕೇಳಿಬಂದರೂ, ಅದು ಸಫಲವಾಗಲಿಲ್ಲ. ಅಷ್ಟರಮಟ್ಟಿಗೆ, ಅಣ್ಣಾಸಾಹೇಬ್‌ ಜೊಲ್ಲೆ ಅವರು ಭಿನ್ನಮತವನ್ನು ತಡೆದಿದ್ದು, ಮೋದಿ ಅವರ ಅಲೆ, ಕ್ಷೇತ್ರಕ್ಕೆ ಸಿಕ್ಕ ಯೋಜನೆಗಳೇ ಅವರಿಗೆ ಸಕಾರಾತ್ಮಕವಾಗಲಿವೆ ಎಂದು ರಾಜಕೀಯ ತಜ್ಞರು ಹೇಳುತ್ತಿದ್ದಾರೆ. ಅಣ್ಣಾ ಸಾಹೇಬ್‌ ಜೊಲ್ಲೆ ಅವರ ಪತ್ನಿ ಶಶಿಕಲಾ ಜೊಲ್ಲೆ ಅವರು ಶಾಸಕಿ ಆಗಿರುವ ಕಾರಣ ಅವರ ಪ್ರಾಬಲ್ಯ ಜಾಸ್ತಿ ಇದೆ.

ಎಂಬಿಎ ಪದವೀಧರೆ, ಯುವ ನಾಯಕಿ ಪ್ರಿಯಾಂಕಾ ಜಾರಕಿಹೊಳಿ ಅವರು ಮೊದಲ ಬಾರಿಗೆ ಸ್ಪರ್ಧಿಸುತ್ತಿದ್ದರೂ ಅಪ್ಪ ಸತೀಶ್‌ ಜಾರಕಿಹೊಳಿ ಅವರ ರಾಜಕೀಯ ಅನುಭವವು ಜತೆಗಿರಲಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪ್ರಿಯಾಂಕಾ ಜಾರಕಿಹೊಳಿ ಅವರು ಅಪ್ಪನ ಗೆಲುವಾಗಿ ಓಡಾಟ ನಡೆಸಿದ್ದಾರೆ. ಇನ್ನು, ಚಿಕ್ಕೋಡಿಯಲ್ಲಿ ಲಿಂಗಾಯತ ಸಮುದಾದಯವರ ಮತಗಳೇ ನಿರ್ಣಾಯಕವಾಗವೆ. ಸುಮಾರು 4.10 ಲಕ್ಷ ಲಿಂಗಾಯತ ಮತಗಳಿದ್ದು, ಪರಿಶಿಷ್ಟ ಜಾತಿ 1.65 ಲಕ್ಷ, ಪರಿಶಿಷ್ಟ ಪಂಗಡ 9೦, ಮುಸ್ಲಿಮರ 1.80 ಲಕ್ಷ ಮತಗಳು ಕೂಡ ನಿರ್ಣಾಯಕವಾಗಿವೆ.

ಮತದಾರರ ಸಂಖ್ಯೆ

ಪುರುಷರು8.71 ಲಕ್ಷ
ಮಹಿಳೆಯರು8.58 ಲಕ್ಷ
ಲಿಂಗತ್ವ ಅಲ್ಪಸಂಖ್ಯಾತರು75
ಒಟ್ಟು17.30 ಲಕ್ಷ

2019, 2014ರ ಫಲಿತಾಂಶ ಏನಾಗಿತ್ತು?

2019ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯ ಅಣ್ಣಾ ಸಾಹೇಬ್‌ ಜೊಲ್ಲೆ ಅವರು ಪ್ರಕಾಶ್‌ ಹುಕ್ಕೇರಿ ವಿರುದ್ಧ 1 ಲಕ್ಷಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸಿದ್ದರು. ಆದರೆ, 2014ರಲ್ಲಿ ನರೇಂದ್ರ ಮೋದಿ ಅವರ ಅಲೆಯ ಮಧ್ಯೆಯೂ ಕಾಂಗ್ರೆಸ್‌ನ ಪ್ರಕಾಶ್‌ ಹುಕ್ಕೇರಿ ಅವರು ಬಿಜೆಪಿಯ ರಮೇಶ್‌ ಕತ್ತಿ ವಿರುದ್ಧ ಗೆಲುವು ಸಾಧಿಸಿದ್ದರು. ಇನ್ನು 2009ರಲ್ಲಿ ರಮೇಶ್‌ ಕತ್ತಿ, 2004ರಲ್ಲಿ ರಮೇಶ್‌ ಜಿಗಜಿಣಗಿ ಅವರು ಚಿಕ್ಕೋಡಿ ಕ್ಷೇತ್ರದ ಸಂಸದರಾಗಿ ಆಯ್ಕೆಯಾಗಿದ್ದರು.

ಇದನ್ನೂ ಓದಿ: Lok Sabha Election: ಕಲಬುರಗಿ ಲೋಕಸಭೆ ಕ್ಷೇತ್ರ: ಖರ್ಗೆ ಅಳಿಯ Vs ಜಾಧವ್;‌ ಯಾರಿಗೆ ಗೆಲುವಿನ ಸಿಹಿ?

Exit mobile version