Site icon Vistara News

Sallekhana: ಸಲ್ಲೇಖನ ವ್ರತ ಸ್ವೀಕರಿಸಿ ಸಮಾಧಿಸೇನ ಮುನಿ ಜಿನೈಕ್ಯ

jain monk samadhi sena chikkodi sallekhana

ಚಿಕ್ಕೋಡಿ: ಜೈನಮುನಿಗಳಾದ (Jain Muni) ಬೆಳಗಾವಿ ಜಿಲ್ಲೆ ಚಿಕ್ಕೋಡಿ (Chikkodi news) ತಾಲೂಕಿನ ಕೋಥಳಿಯ ಸಮಾಧಿಸೇನ ಮುನಿಗಳು (Samadhisena Muni) ಜೈನ ಸಂಪ್ರದಾಯದಂತೆ (Jain tradition) ಯಮ ಸಲ್ಲೇಖನ ವ್ರತ (Sallekhana Vrata) ಸ್ವೀಕರಿಸಿ ಕೀರ್ತಿಶೇಷರಾಗಿದ್ದಾರೆ. ಇವರು ಕೋಥಳಿಯ ದೇಶಭೂಷಣ ಮನಿಗಳ ಜೈನ ಆಶ್ರಮದಲ್ಲಿ ಕಳೆದ ನಾಲ್ಕು ದಿನಗಳಿಂದ ಸಲ್ಲೇಖನ ವ್ರತ ನಿರತರಾಗಿದ್ದರು. ಸೋಮವಾರ ರಾತ್ರಿ ಅವರು ಜಿನೈಕ್ಯರಾಗಿದ್ದಾರೆ.

ಸಮಾಧಿಸೇನ ಮುನಿಗಳಿಗೆ 79 ವರ್ಷ ವಯಸ್ಸಾಗಿತ್ತು. ಮೇ 17ರಿಂದ ಅವರು ಆಹಾರ ತ್ಯಾಗ ಮಾಡಿದ್ದರು. ಆಶ್ರಮದ ಆವರಣದಲ್ಲಿಯೇ ಮಂಗಳವಾರ ಅಂತ್ಯಕ್ರಿಯೆ ನೆರವೇರಿದೆ. ಚಿಕ್ಕೋಡಿ, ನಿಪ್ಪಾಣಿ, ಕಾಗವಾಡ, ಅಥಣಿ ತಾಲೂಕು, ಮಹಾರಾಷ್ಟ್ರದ ಕೊಲ್ಲಾಪುರ, ಸಾಂಗ್ಲಿ ಜಿಲ್ಲೆಯಿಂದಲೂ ಅಪಾರ ಸಂಖ್ಯೆಯ ಭಕ್ತರು ಆಶ್ರಮಕ್ಕೆ ಬಂದು ಮುನಿಗಳ ಅಂತಿಮ ದರ್ಶನ ಪಡೆದರು.

ಗದಗ ಜಿಲ್ಲೆಯ ಗಜೇಂದ್ರ ಗಢದವರಾದ ಸಮಾಧಿಸೇನ ಮುನಿಗಳು ಗುಲಾಬಭೂಷಣ ಮುನಿಯವರ ಶಿಷ್ಯರಾಗಿದ್ದರು. ಸಂಸಾರಿಯಾಗಿದ್ದ ಅವರು 2004ರಲ್ಲಿ ಮನೆ ತೊರೆದು ತ್ಯಾಗಿಯಾಗಿ ದೀಕ್ಷೆ ಪಡೆದು ಜೈನ ಧರ್ಮದ ಪ್ರಸಾರ ಕಾರ್ಯದಲ್ಲಿ ತೊಡಗಿದ್ದರು. 2014ರಲ್ಲಿ ಮಹಾರಾಷ್ಟ್ರದ ಚಿಪರಿ ಆಶ್ರಮದ ಧರ್ಮಸೇನಾ ಮುನಿಗಳಿಂದ ಕ್ಷುಲ್ಲಕ ದೀಕ್ಷೆ ಪಡೆದಿದ್ದರು. 2021ರಲ್ಲಿ ಗುಲಾಬಭೂಷಣ ಮುನಿಗಳಿಂದ ಮುನಿ ದೀಕ್ಷೆ ಪಡೆದಿದ್ದ ರು. ಕೋಥಳಿಯ ಆಶ್ರಮದಲ್ಲಿ ದೇಶಭೂಷಣ ಮುನಿಗಳು ಸೇರಿ ಇದುವರೆಗೆ 40ಕ್ಕೂ ಅಧಿಕ ಜೈನಮುನಿಗಳು ಯಮ ಸಲ್ಲೇಖನ ವ್ರತ ಕೈಗೊಂಡು ದೇಹ ತ್ಯಾಗ ಮಾಡಿದ್ದಾರೆ.

ಸಲ್ಲೇಖನ ಎಂದರೇನು?

ಸಲ್ಲೇಖನ ಜೈನ ಧರ್ಮೀಯರ ಒಂದು ಕಠಿಣ ವ್ರತ. ಜೈನ ಧರ್ಮದ ಅನುಸಾರವಾಗಿ ಮೋಕ್ಷ ಅಥವಾ ಸದ್ಗತಿಗಾಗಿ ಧರ್ಮಪೂರ್ವಕವಾಗಿ ಆಹಾರಾದಿಗಳನ್ನು ತ್ಯಜಿಸಿ ಶರೀರ ತ್ಯಾಗ ಮಾಡುವ ವಿಧಿಗೆ ಸಲ್ಲೇಖನ ವ್ರತ ಎನ್ನಲಾಗುತ್ತದೆ. ಇದಕ್ಕೆ ಸಮಾಧಿ ಮರಣ ಎಂಬ ಹೆಸರೂ ಇದೆ. ಸಲ್ಲೇಖನ ವ್ರತವು ಮುನಿಗೆ ಶ್ರೇಷ್ಠವಾದುದು ಹಾಗೂ ಗೃಹಸ್ಥರಿಗೆ ಸಂಪೂರ್ಣ ಐಚ್ಛಿಕ ಕ್ರಿಯೆಯಾಗಿದೆ.

ಕೋಟ್ಯಂತರ ರೂ. ಆಸ್ತಿ ತ್ಯಜಿಸಿ ಜೈನ ಸನ್ಯಾಸ ದೀಕ್ಷೆ ಪಡೆದ ಬೆಂಗಳೂರಿನ ಉದ್ಯಮಿಯ ಪತ್ನಿ, 11 ವರ್ಷದ ಮಗ!

ಬೆಂಗಳೂರು ಮೂಲದ ಉದ್ಯಮಿ ಮನೀಶ್‌ ಎಂಬುವವರ ಪತ್ನಿ ಸ್ವೀಟಿ (30) ಹಾಗೂ 11 ವರ್ಷದ ಮಗ ಹೃಧನ್ ಇತ್ತೀಚೆಗೆ ಜೈನ ಸನ್ಯಾಸ ದೀಕ್ಷೆ ಪಡೆದಿದ್ದಾರೆ. ತಾಯಿ-ಮಗನ ದೀಕ್ಷಾ ಸಮಾರಂಭವು ಗುಜರಾತ್‌ನ ಸೂರತ್‌ನಲ್ಲಿ ಜನವರಿಯಲ್ಲಿ ಬಹಳ ವಿಜೃಂಭಣೆಯಿಂದ ನಡೆದಿದೆ. ಇವರಿಬ್ಬರೂ ಈಗ ಸೂರತ್‌ನಲ್ಲಿ ನೆಲೆಸಿದ್ದಾರೆ.

ಜೈನ ದೀಕ್ಷೆಯ ನಂತರ ತಾಯಿ ಸ್ವೀಟಿಗೆ ಭಾವಶುದ್ಧಿ ರೇಖಾ ಶ್ರೀ ಜಿ ಹಾಗೂ ಮಗ ಹೃದನ್‌ಗೆ ಹಿತಶಯ್ ರತನವಿಜಯ್ ಜಿ. ಎಂದು ಮರು ನಾಮಕರಣ ಮಾಡಲಾಗಿದೆ. ಇದೀಗ ತಾಯಿ-ಮಗ ದೀಕ್ಷೆ ಸ್ವೀಕಾರ ಮಾಡಿರುವ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ಸದ್ಯ ಈ ವಿಡಿಯೊ ಎಲ್ಲೆಡೆ ವೈರಲ್‌ ಆಗಿದೆ.

ಸನ್ಯಾಸ ದೀಕ್ಷೆ ಸ್ವೀಕರಿಸುವಾಗ ಮಗನ ತಲೆಯನ್ನು ತಾಯಿ ನೇವರಿಸುತ್ತಾ ಭಾವುಕರಾಗಿದ್ದಾರೆ. ಪರಸ್ಪರ ಹಣೆಗೆ ಕುಂಕುಮ ಇಟ್ಟುಕೊಂಡು, ಅಕ್ಷತೆ ಹಾಕಿಕೊಂಡಿದ್ದು, ನಂತರ ಇಬ್ಬರೂ ಶ್ವೇತ ವಸ್ತ್ರಗಳಲ್ಲಿ ಕಾಣಿಸಿಕೊಂಡಿರುವುದು ವಿಡಿಯೊದಲ್ಲಿದೆ.

ಕುಟುಂಬದ ಸಂಬಂಧಿ ವಿವೇಕ್‌ ಪ್ರತಿಕ್ರಿಯಿಸಿ, ಭಾವಶುದ್ಧಿ ರೇಖಾ ಶ್ರೀ ಜಿ ಅವರು ಗರ್ಭಿಣಿಯಾಗಿದ್ದಾಗಲೇ ಸನ್ಯಾಸಿಯಾಗಲು ಬಯಸಿದ್ದರು. ಅದೇ ಸಮಯದಲ್ಲಿ, ತನ್ನ ಮಗು ಕೂಡ ತನ್ನನ್ನು ಅನುಸರಿಸಿ ಜೈನ ಸನ್ಯಾಸಿಯಾಗಬೇಕೆಂದು ನಿರ್ಧರಿಸಿದ್ದರು. ನಂತರ ಮಗ ಕೂಡ ತಾಯಿ ಹಾದಿಯಲ್ಲೇ ನಡೆಯುವುದಾಗಿ ಹೇಳಿದ್ದ. ಭಾವಶುದ್ಧಿ ರೇಖಾ ಶ್ರೀ ಜಿ ಅವರ ಸಂಕಲ್ಪ ಕೇಳಿದ ನಂತರ ಅವರ ಪತಿ ಮನೀಶ್ ಕೂಡ ಬೆಂಬಲಿಸಿದರು. ಅವರು ದೀಕ್ಷೆ ಪಡೆದಿರುವುದು ಮನೀಶ್ ಮತ್ತು ಕುಟುಂಬದ ಇತರರಿಗೆ ಹೆಮ್ಮೆಯ ವಿಷಯವಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | Akshay Kumar: ಜೈನ ಸನ್ಯಾಸಿಯ 180 ದಿನಗಳ ಉಪವಾಸ ಬ್ರೇಕ್‌ ಮಾಡಿದ ಅಕ್ಷಯ್ ಕುಮಾರ್!

ಈ ಹಿಂದೆ, ಗುಜರಾತ್‌ನ ಶ್ರೀಮಂತ ಜೈನ ದಂಪತಿ ಸುಮಾರು 200 ಕೋಟಿ ರೂ. ಆಸ್ತಿ ತ್ಯಜಿಸಿ ಸನ್ಯಾಸ ದೀಕ್ಷೆ ಪಡೆದಿದ್ದರು. ಭಾವೇಶ್ ಭಂಡಾರಿ ಮತ್ತು ಪತ್ನಿ ಫೆಬ್ರವರಿಯಲ್ಲಿ ಸನ್ಯಾಸ ಜೀವನಕ್ಕೆ ಕಾಲಿಟ್ಟಿದ್ದರು. ದಂಪತಿಗೆ ಒಬ್ಬ ಮಗ ಮತ್ತು ಮಗಳಿದ್ದು, ಅವರು ಕೂಡ 2022ರಲ್ಲಿಯೇ ದೀಕ್ಷೆ ತೆಗೆದುಕೊಂಡಿದ್ದರು.

ಇದನ್ನೂ ಓದಿ: Srinidhi Shetty: ಕೋಲ ಸೇವೆ ಸಲ್ಲಿಸಿದ ಕೆಜಿಎಫ್‌ ಬೆಡಗಿ; ಶ್ರೀನಿಧಿ ಶೆಟ್ಟಿಗೆ ದೈವ ಅಭಯ ನೀಡಿದ್ದೇನು?

Exit mobile version