ಚಿಕ್ಕೋಡಿ: ಉಕ್ಕಿ ಹರಿಯುತ್ತಿರುವ ಕೃಷ್ಣಾ ನದಿಗೆ ಹಾರಿ ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ (Self Harming) ಶರಣಾಗಿದ್ದಾರೆ. ಅಂಕಲಿ – ನಸಲಾಪೂರ ಗ್ರಾಮದ ಮಧ್ಯದ ಸೇತುವೆ ಬಳಿ ಆತ್ಮಹತ್ಯೆ (Krishna River) ಮಾಡಿಕೊಂಡಿದ್ದಾರೆ. ರಾಯಬಾಗ ತಾಲೂಕಿನ ಬಾವನಸೌಂದತ್ತಿ ಗ್ರಾಮದ ಬಾಬುರಾವ ಸಂಭಾಜಿ ಭಾಸ್ಕರ (40) ಆತ್ಮಹತ್ಯೆಗೆ ಶರಣಾದವರು.
ಅಂಕಲಿ ಹಾಗೂ ನಸಲಾಪೂರ ಗ್ರಾಮಗಳ ಮಧ್ಯೆ ನಿರ್ಮಿಸಲಾಗಿರುವಂತಹ ಸೇತುವೆ ಮೇಲೆ ನಿಂತು ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈಗಾಗಲೇ ಅಂಕಲಿ ಪೋಲಿಸರು ಮೃತ ದೇಹವನ್ನು ಹೊರ ತೆಗೆದಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಅಂಕಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ: Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್ ಬಂದ್ ಮಾಡಿದ ಪೊಲೀಸರು
ಪೆನ್ನು ಕದ್ದ ಬಾಲಕನನ್ನು ಕತ್ತಲೆ ಕೋಣೆಯಲ್ಲಿ ಕೂಡಿಟ್ಟ; ಮನಸೋ ಇಚ್ಛೆ ಥಳಿಸಿದ ರಾಮಕೃಷ್ಣ ಆಶ್ರಮದ ಗುರೂಜಿ!
ರಾಯಚೂರು: ರಾಯಚೂರಿನ ರಾಮಕೃಷ್ಣ ಆಶ್ರಮದಲ್ಲಿ (Ramakrishna Ashram) ಅಮಾನವೀಯ ಘಟನೆಯೊಂದು ನಡೆದಿದೆ. ಬಾಲಕನೊಬ್ಬ ಪೆನ್ನು ಕದ್ದಿದ್ದಕ್ಕೆ ಆಶ್ರಮದ ಗುರೂಜಿ ಮನಬಂದಂತೆ ಹಲ್ಲೆ (Assault Case) ನಡೆಸಿದ್ದಾರೆ. ಮೂರು ದಿನಗಳ ಕಾಲ ಕತ್ತಲೆ ಕೋಣೆಯಲ್ಲಿ ಕೂಡಿಟ್ಟು ವಿದ್ಯಾರ್ಥಿಯ ಕಣ್ಣುಗಳು ಬಾವು ಬರುವಂತೆ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ.
ವಿದ್ಯಾರ್ಥಿ ಶ್ರವಣ್ ಕುಮಾರ್ ಹಲ್ಲೆಗೊಳಗಾದ ಬಾಲಕನಾಗಿದ್ದಾನೆ. ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದ ಶ್ರವಣ ಬಡತನದ ಕಾರಣ ಆಶ್ರಮದಲ್ಲಿದ್ದ. ಸಹಪಾಠಿಗಳ ಜತೆ ಆಟವಾಡುತ್ತಾ ಪೆನ್ನು ಕದ್ದಿದ್ದ. ಶ್ರವಣಕುಮಾರ್ ವಿರುದ್ಧ ಸಹಪಾಠಿಗಳು ದೂರೂ ನೀಡಿದ್ದರು. ದೂರಿನ್ವಯ ರಾಮಕೃಷ್ಣ ಮಠದ ಗುರೂಜಿ ವೇಣುಗೋಪಾಲ ಎಂಬಾತ ಶ್ರವಣಗೆ ಮನಬಂದಂತೆ ಥಳಿಸಿದ್ದಾರೆ. ಚಿಕ್ಕ ಹುಡುಗ ಎಂಬುದನ್ನು ಪರಿಗಣಿಸಿದೇ ಮೂರು ದಿನಗಳು ಕತ್ತಲೇ ಕೋಣೆಯಲ್ಲಿ ಕೂಡಿ ಹಾಕಿದ್ದಾರೆ.
ರಾಯಚೂರು ನಗರದ ಸ್ಟೇಷನ್ ರಸ್ತೆಯಲ್ಲಿರು ರಾಮಕೃಷ್ಣ ಆಶ್ರಮಕ್ಕೆ ಆಕಸ್ಮಿಕವಾಗಿ ಶ್ರವಣ ತಾಯಿ ಭೇಟಿ ನೀಡಿದಾಗ ವಿಷಯ ಬಹಿರಂಗವಾಗಿದೆ. ಸದ್ಯ ಶ್ರವಣಕುಮಾರ್‌ಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಮೈಕೈ ತುಂಬಾ ಗಾಯಗಳಾಗಿದ್ದು, ಕಣ್ಣು ಪೂರ್ತಿ ಬಾವು ಬಂದಿದೆ. ರಾಯಚೂರು ಪಶ್ಚಿಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪುಟ್ಟ ಬಾಲಕನ ಸ್ಥಿತಿಗೆ ಪೋಷಕರು ಕಣ್ಣೀರು ಹಾಕಿದ್ದಾರೆ.
ಇದನ್ನೂ ಓದಿ: Wayanad Landslide: ವಯನಾಡು ದುರಂತದಲ್ಲಿ ಮೃತರ ಸಂಖ್ಯೆ 344ಕ್ಕೆ ಏರಿಕೆ; ರಾಡಾರ್‌ಗೆ ಸಿಕ್ಕ ನಿಗೂಢ ಉಸಿರಾಟ ಯಾರದ್ದು?
ಯುವತಿಯ ಪರ್ಸ್ ಕಿತ್ತುಕೊಂಡು ಮಂಗಳಮುಖಿಯರಿಂದ ಕಿರುಕುಳ
ಮಂಗಳಮುಖಿಯರ ಕುಕೃತ್ಯವನ್ನು ಯುವತಿಯೊಬ್ಬಳು ಬಿಚ್ಚಿಟ್ಟಿದ್ದಾಳೆ. 10 ರೂಪಾಯಿ ನಿವಾಳಿಸಿ ಕೊಡುತ್ತಿನಿ ಎಂದು 700 ರೂಪಾಯಿ ಪಡೆದರಂತೆ. ಪರ್ಸ್ ಕಿತ್ತು ಅದರಲ್ಲಿದ್ದ ಹಣವನ್ನು ಬಲವಂತವಾಗಿ ಪಡೆದು ಕಿರುಕುಳ ನೀಡಿದ್ದರಂತೆ. 700 ಪಡೆದು ಹತ್ತು ರೂಪಾಯಿ ವಾಪಾಸ್ ಕೊಟ್ಟರಂತೆ. ಮೂರು ಮಂಗಳಮುಖಿಯರಿಂದ ಯುವತಿಗೆ ಬೆಂಗಳೂರಿನ ಮಾರತ್ ಹಳ್ಳಿ ಸಿಗ್ನಲ್ ಬಳಿ ಕಿರುಕುಳ ನೀಡಿದ್ದಾರೆ. ಅಷ್ಟು ಜನ ಇದ್ದರೂ ಏನೂ ಮಾಡೋದಕ್ಕೆ ಸಾಧ್ಯವಾಗಿಲ್ಲ ಎಂದು ವಿಡಿಯೋ ಮಾಡಿ, ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾಳೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ