ಚಿಕ್ಕೋಡಿ: ಜಿಲ್ಲೆಯ ಅಥಣಿ ಪಟ್ಟಣದ ಹೆಸ್ಕಾಂ ಕಚೇರಿ ಆವರಣದಲ್ಲಿ ಯುವಕನೊಬ್ಬ ನೇಣು ಬಿಗಿದುಕೊಂಡು (Suicide Case) ಸೋಮವಾರ (ಸೆ.12) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಜುನಾಥ್ ಮುತ್ತಗಿ (30) ಮೃತ ದುರ್ದೈವಿ ಯಾಗಿದ್ದಾರೆ.
ಮೃತ ಯುವಕ ಗುತ್ತಿಗೆ ಆಧಾರದ ಮೇಲೆ ಅಥಣಿ ವಿದ್ಯುತ್ ಇಲಾಖೆ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ವಿದ್ಯುತ್ ಕಂಬಗಳನ್ನು ನೆಡುವ ಟ್ರ್ಯಾಕ್ಟರ್‌ಗೆ ಏರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | Suicide Case | ಗಂಡ-ಹೆಂಡತಿ ಜಗಳ 12ನೇ ಮಹಡಿಯಿಂದ ಜಿಗಿಯುವ ತನಕ, 3 ವರ್ಷದ ಮಗು ಸೇರಿ ಮೂವರ ಸಾವು!