Site icon Vistara News

Child death| ಆಟವಾಡುತ್ತಿದ್ದಾಗ ಬಿಸಿ ಸಾಂಬಾರ್‌ಗೆ ಬಿದ್ದು ಗಾಯಗೊಂಡಿದ್ದ 18 ತಿಂಗಳ ಹಸುಳೆ ದಾರುಣ ಸಾವು

Chilld death

ಧಾರವಾಡ: ಆಟವಾಡುತ್ತಿದ್ದಾಗ ಬಿಸಿ ಸಾಂಬಾರ್‌ಗೆ ಬಿದ್ದು ಬೆಂದು ಹೋಗಿದ್ದ ೧೮ ತಿಂಗಳ ಮಗು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಪ್ರಾಣ ಬಿಟ್ಟಿದೆ.

ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಬಿಳೇಬಾಳ ಗ್ರಾಮದಲ್ಲಿ ಕಳೆದ ನವೆಂಬರ್‌ ೧೧ರಂದು ಘಟನೆ ನಡೆದಿತ್ತು. ೧೮ ತಿಂಗಳ ಪುಟ್ಟ ಮಗು ಸ್ವಾತಿ ಚಲವಾದಿ ಗಾಯಗೊಂಡಿದ್ದಳು. ಗಂಭೀರವಾಗಿ ಗಾಯಗೊಂಡಿದ್ದ ಮಗುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರೂ ಎಳೆ ಹಸುಳೆಯ ಎಳೆ ಜೀವ ಮತ್ತೆ ಬದುಕಿ ಬರಲಾಗದಷ್ಟು ಬೆಂದು ಹೋಗಿದ್ದರಿಂದಾಗಿ ಪ್ರಾಣವನ್ನೇ ಬಿಟ್ಟಿದೆ.

ನವೆಂಬರ್ 10 ರಂದು ಮನೆಯಲ್ಲಿ ಆಟವಾಡುತ್ತಿದ್ದ ವೇಳೆ ಬಿಸಿ ಸಾಂಬಾರು ಮೈಮೇಲೆ ಬಿದ್ದಿತ್ತು. ಮಗುವನ್ನು ಮೊದಲು ಕುಂದಗೋಳ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ, ದೇಹದ ಒಳಭಾಗಕ್ಕೂ ಬಿಸಿ ಹರಡಿ ಅಂಗಾಂಗಗಳು ಬೆಂದು ಹೋಗಿದ್ದರಿಂದ ಬದುಕಿಸಲು ಸಾಧ್ಯವಾಗಲಿಲ್ಲ. ಕುಂದಗೋಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Children Heart Attack | ಕುಂದಾಪುರದ ಅನುಶ್ರೀ ಸಾವಿನ ಬೆನ್ನಲ್ಲೇ 14 ವರ್ಷದ ಬಾಲಕಿ ವೈಷ್ಣವಿ ಹೃದಯಾಘಾತದಿಂದ ಸಾವು

Exit mobile version