ರಾಯಚೂರು: ರಾಯಚೂರು ಜಿಲ್ಲೆಯಲ್ಲಿ ಇನ್ನೂ ಬಾಲ್ಯ ವಿವಾಹ ಪಿಡುಗು ಜೀವಂತವಾಗಿದ್ದು, ಬಾಲ್ಯ ವಿವಾಹಕ್ಕಾಗಿ ಪ್ಲಾನ್ ಮಾಡಿದ ಕುಟುಂಬಸ್ಥರ ಸಂಚನ್ನು ಭೇದಿಸಿ ಆಕೆಯನ್ನು ರಕ್ಷಿಸಲಾಗಿದೆ.
ಆಧಾರ ಕಾರ್ಡ್‌ನಲ್ಲಿ ನಕಲಿ ಜನ್ಮ ದಿನಾಂಕ ಸೃಷ್ಟಿಸಿ ಸಂಬಂಧಿಕರು ವಿವಾಹಕ್ಕೆ ಯತ್ನಿಸಿದ್ದು ಬಯಲಾಗಿದೆ. ಅಸಲಿ ಅಧಾರ ಕಾರ್ಡ್‌ನಂತೆ ಬಾಲಕಿಗೆ 16 ವರ್ಷವಾಗಿದ್ದು, ನಕಲಿ ಆಧಾರ ಕಾರ್ಡ್ ಪ್ರಕಾರ ಬಾಲಕಿಗೆ 18 ವರ್ಷ ಎಂದು ತೋರಿಸಲಾಗಿದೆ. ಅಮಂತ್ರಣ ಪತ್ರಿಕೆಯ ಜೊತೆ ಅದ್ಧೂರಿ ಮದುವೆಗೆ ಸಿದ್ಧತೆ ನಡೆಸಲಾಗುತ್ತಿದ್ದು, ಅಧಿಕಾರಿಗಳ ಸಮಯಪ್ರಜ್ಞೆಯಿಂದ ಬಾಲಕಿಯನ್ನು ರಕ್ಷಿಸಲಾಗಿದೆ.
ದೇವದುರ್ಗದ ಗಲಗ ಗ್ರಾಮದಲ್ಲಿ ನಡೆಯಲಿದ್ದ ಬಾಲ್ಯವಿವಾಹವನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹಾಗೂ ಪೊಲೀಸರು ತಡೆದಿದ್ದಾರೆ. ಇತ್ತೀಚೆಗಷ್ಟೇ SSLC ಮುಗಿಸಿದ್ದ 16 ವರ್ಷದ ಬಾಲಕಿಗೆ ಮದುವೆ ನಿಶ್ಚಯಿಸಲಾಗಿತ್ತು. ಕಳೆದ ಏಪ್ರಿಲ್‌ನಲ್ಲಿ ಈಕೆ ಎಸ್‌ಎಸ್ಎಲ್‌ಸಿ ಪರೀಕ್ಷೆ ಬರೆದಿದ್ದಳು. ಗಲಗ ಗ್ರಾಮದ ವಿನೋದಕುಮಾರ್ ಎಂಬವನ ಜೊತೆ ಮದುವೆ ನಿಶ್ಚಯವಾಗಿತ್ತು. 4 ಜೋಡಿಯ ಮದುವೆಗೆ ಕುಟುಂಬಸ್ಥರು ಸಿದ್ಧತೆ ನಡೆಸಿದ್ದರು. ಇಂದು ನಡೆಯಲಿದ್ದ ವಿವಾಹ ಕಾರ್ಯಕ್ರಮಕ್ಕೆ ಅಧಿಕಾರಿಗಳು ದಾಳಿ ನಡೆಸಿದ್ದು, ಅಧಿಕಾರಿಗಳ ದಾಳಿಯಿಂದ ಬಾಲ್ಯ ವಿವಾಹ ಅರ್ಧಕ್ಕೆ ಮೊಟಕುಗೊಂಡಿದೆ. ರಾಯಚೂರಿನ ಬಾಲಕಿಯರ ಬಾಲಮಂದಿರದಲ್ಲಿ ಬಾಲಕಿಯನ್ನು ರಕ್ಷಿಸಲಾಗಿದೆ.
ಇದನ್ನೂ ಓದಿ: Child Marriage: ಬಾಲ್ಯ ವಿವಾಹ ತಡೆಯಲು 200 ಕೋಟಿ ರೂ. ಮೀಸಲಿಟ್ಟ ಅಸ್ಸಾಂ ಸರ್ಕಾರ!