Site icon Vistara News

Children heart attack | 13 ವರ್ಷದ ಬಾಲಕ ಹೃದಯಾಘಾತದಿಂದ ನಿಧನ, ಶಾಲೆಯಲ್ಲೇ ಕುಸಿದುಬಿದ್ದು ಉಸಿರು ಚೆಲ್ಲಿದ!

Boy death

ಹುಬ್ಬಳ್ಳಿ: ಪುಟ್ಟ ಪುಟ್ಟ ಮಕ್ಕಳು ಕೂಡಾ ಹೃದಯಾಘಾತಕ್ಕೆ ಬಲಿಯಾಗುವ ಸರಣಿ ರಾಜ್ಯದಲ್ಲಿ ಮುಂದುವರಿದೆ. ರವಾಡ ಜಿಲ್ಲೆ ಕಲಘಟಗಿ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೧೩ ವರ್ಷದ ಬಾಲಕನೊಬ್ಬ ಹೃದಯಾಘಾತದಿಂದ ಮೃತಪಟ್ಟಿದ್ದಾನೆ.

ಮಕ್ತುಮ್ ಮಹ್ಮದ್‌ರಫಿ ಮನಿಯಾರ್ (13) ಮೃತ ಬಾಲಕ. ಈತ ಕಲಘಟಗಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರನೆಯ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಗುರುವಾರ ಶಾಲೆಯಲ್ಲಿ ಇದ್ದಕ್ಕಿದ್ದಂತೆಯೇ ಕುಸಿದು ಬಿದ್ದಿದ್ದ. ಕೂಡಲೇ ಶಿಕ್ಷಕರು ಆತನನ್ನು ಕಲಘಟಗಿ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಅಷ್ಟು ಹೊತ್ತಿಗೆ ಮಕ್ತುಮ್‌ ಹೃದಯಾಘಾತದಿಂದ ಉಸಿರು ಚೆಲ್ಲಿ ಆಗಿತ್ತು.

ಮಕ್ತುಮ್‌ ಕೆಲವು ವರ್ಷಗಳಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಎಂದು ಹೇಳಲಾಗಿದೆ.

ಇದನ್ನೂ ಓದಿ | Children Heart Attack | ಕುಂದಾಪುರದ ಅನುಶ್ರೀ ಸಾವಿನ ಬೆನ್ನಲ್ಲೇ 14 ವರ್ಷದ ಬಾಲಕಿ ವೈಷ್ಣವಿ ಹೃದಯಾಘಾತದಿಂದ ಸಾವು

Exit mobile version