ಚಿತ್ರದುರ್ಗ: ಮುರುಘಾಶ್ರೀ(Murugha Seer) ವಿರುದ್ಧ ಸುಳ್ಳು ದೂರು ನೀಡಲು ಪಿತೂರಿ ಪ್ರಕರಣದಲ್ಲಿ ಎರಡನೇ ಆರೋಪಿಯಾದ ಮಠದ ಅಡುಗೆ ಸಹಾಯಕಿಯನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರ ವಿರುದ್ಧ 2ನೇ ಪೋಕ್ಸೊ ಪ್ರಕರಣದಲ್ಲಿ ದೂರು ನೀಡುವಂತೆ ಬಾಲಕಿಗೆ ಕುಮ್ಮಕ್ಕು ನೀಡಿದ ಆರೋಪದ ಮೇರೆಗೆ ಅಡುಗೆ ಸಹಾಯಕಿಯನ್ನು ಬಂಧಿಸಲಾಗಿದೆ. ಮುರುಘಾ ಶ್ರೀಗಳ ವಿರುದ್ಧ ಸುಳ್ಳು ದೂರು ನೀಡುವಂತೆ ಬಾಲಕಿಗೆ ಹೇಳಿರುವ ಆಡಿಯೊ ವೈರಲ್ ಆಗಿತ್ತು.
ಈ ಬಗ್ಗೆ ಮುರುಘಾಮಠದ ಉಸ್ತುವಾರಿ ಬಸವಪ್ರಭುಶ್ರೀ ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಸ್‌ಜೆಎಂ ವಿದ್ಯಾಪೀಠದ ಶಿಕ್ಷಕ, ಅಥಣಿ ಮೂಲದ ಬಸವರಾಜೇಂದ್ರ ಎಂಬುವವರನ್ನು ಬಂಧಿಸಲಾಗಿದೆ. ಇದೀಗ ಪ್ರಕರಣದಲಿ 2ನೇ ಆರೋಪಿಯ ಬಂಧನವಾಗಿದೆ.
ಇದನ್ನೂ ಓದಿ | Murugha Seer | ಪ್ರಚೋದನೆ, ಕಳವು ಪ್ರಕರಣದಲ್ಲಿ ಮಾಜಿ ಶಾಸಕ ಎಸ್.ಕೆ. ಬಸವರಾಜನ್ ಬಂಧನ; 4 ದಿನ ಕಸ್ಟಡಿಗೆ