Site icon Vistara News

Assault Case: ವೃದ್ಧ ದಂಪತಿ ಮೇಲೆ ಕ್ರೈಸ್ತ ಧರ್ಮಗುರು ಹಲ್ಲೆ; ಇಲ್ಲಿದೆ ದೌರ್ಜನ್ಯದ ವಿಡಿಯೊ

assault Case

ಮಂಗಳೂರು: ಚರ್ಚ್‌ಗೆ ದೇಣಿಗೆ ನೀಡದ ಹಿನ್ನೆಲೆಯಲ್ಲಿ ವೃದ್ಧ ದಂಪತಿ ಮೇಲೆ ಕ್ರೈಸ್ತ ಧರ್ಮಗುರು ಹಲ್ಲೆ (Assault Case) ನಡೆಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪೆರಿಯಲ್ತಡ್ಕದಲ್ಲಿ ನಡೆದಿದೆ. ಫೆ.29ರಂದು ನಡೆದಿರುವ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ (Viral News) ಆಗಿದೆ.

ಜಾರ್ಜ್ ಮಾಂತೇರಿಯೋ (79) ಮತ್ತು ಪತ್ನಿ ಫಿಲೋಮಿನಾ (72) ಹಲ್ಲೆಗೊಳಗಾದ ವೃದ್ಧ ದಂಪತಿ. ಪೆರಿಯಲ್ತಡ್ಕ ಕ್ರಿಸ್ತ‌ ಕಿಂಗ್ ಪೆರಿಶ್‌ನ ಧರ್ಮಗುರು ನೆಲ್ಸನ್ ಒಲಿವೇರಾ ಹಲ್ಲೆ ಮಾಡಿದ ಪಾದ್ರಿ ಎಂದು ತಿಳಿದುಬಂದಿದೆ. ಮನೆ ಶುದ್ಧಗೊಳಿಸಲು ವೃದ್ಧ ದಂಪತಿಯ ಮನೆಗೆ ಭೇಟಿ ಧರ್ಮಗುರು ಭೇಟಿ ನೀಡಿದ್ದರು. ಈ ವೇಳೆ ಚರ್ಚ್‌ಗೆ ದೇಣಿಗೆ ನೀಡದೇ ಇರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ, ವೃದ್ಧ ದಂಪತಿ ಮೇಲೆ ಹಲ್ಲೆ ನಡೆಸಿದ್ದಾರೆ.

ಕ್ರೈಸ್ತ ಫಾದರ್‌, ವೃದ್ಧನನ್ನು ಎಳೆದಾಡಿ ಹೊಡೆದಿದ್ದು, ಈ ವೇಳೆ ಅಡ್ಡ ಬಂದ ವೃದ್ಧೆಗೆ ಕಾಲಿನಿಂದ ಒದ್ದಿದ್ದಾರೆ. ಹಲ್ಲೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇದನ್ನೂ ಓದಿ | Blast in Bengaluru: ಗೃಹ ಸಚಿವರೇ ನೀವು ಅನ್‌ಫಿಟ್‌! ರಾಜೀನಾಮೆ ಕೊಟ್ಟು ಹೊರಡಿ ಎಂದ ಬಿಜೆಪಿ

ಬೈಕ್‌ ಮತ್ತು ಕ್ಯಾಂಟರ್‌ ನಡುವೆ ಅಪಘಾತ; ದಂಪತಿ ಸಾವು

ಮೈಸೂರು: ಮೈಸೂರು ಜಿಲ್ಲೆಯ (Mysore News) ಹುಣಸೂರಿನಲ್ಲಿ ಸಂಭವಿಸಿದ ಬೈಕ್‌ ಮತ್ತು ಕ್ಯಾಂಟರ್‌ (Bike-Canter accident) ನಡುವಿನ ಭೀಕರ ಅಪಘಾತದಲ್ಲಿ (Road Accident) ದಂಪತಿ ಪ್ರಾಣ ಕಳೆದುಕೊಂಡಿದ್ದಾರೆ (Road accident couple dead). ದಂಪತಿ ಬೈಕ್‌ನಲ್ಲಿ ಸಾಗುತ್ತಿದ್ದಾಗ ಈ ಅವಘಡ ಸಂಭವಿಸಿದೆ.
ಹುಣಸೂರು ಕನಕ ಭವನ ಬಳಿ ನಡೆದ ಅಪಘಾತದಲ್ಲಿ ಮೃತಪಟ್ಟವರನ್ನು ಮಂಜುನಾಥ ಬಡಾವಣೆಯ ನಿವಾಸಿ ರಾಜು (64) ಮತ್ತು ಅವರ ಪತ್ನಿ ಸುನಂದಾ (55) ಎಂದು ಗುರುತಿಸಲಾಗಿದೆ.

ಮಂಜುನಾಥ್‌ ಅವರು ಬೈಕ್‌ನಲ್ಲಿ ಸಾಗುತ್ತಿದ್ದಾಗ ಹುಣಸೂರು ಕಡೆಯಿಂದ ವೇಗವಾಗಿ ಬಂದ ಕ್ಯಾಂಟರ್ ಗೂಡ್ಸ್ ವಾಹನ ಬೈಕ್‌ಗೆ ಬಡಿದಿದೆ. ಅಪಘಾತ ನಡೆಸಿ ವಾಹನ ನಿಲ್ಲಿಸದೆಯೇ ಗೂಡ್ಸ್‌ ಚಾಲಕ ಪರಾರಿಯಾಗಿದ್ದಾನೆ. ಬಳಿಕ ಸಾರ್ವಜನಿಕರೇ ಬೆನ್ನಟ್ಟಿ ವಾಹನವನ್ನು ತಡೆದು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Blast In Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌; ಇದುವರೆಗೂ ಯಾರನ್ನೂ ಬಂಧಿಸಿಲ್ಲ ಎಂದ ಪೊಲೀಸ್‌ ಕಮಿಷನರ್‌

Road accident : ಚಲಿಸುತ್ತಿರುವ ಟಿಪ್ಪರ್ ಲಾರಿ ಕೆಳಗೆ ಬಿದ್ದು ವ್ಯಕ್ತಿ ಸಾವು

ಚಿಕ್ಕಬಳ್ಳಾಪುರ: ಬಾಗೇಪಲ್ಲಿ ತಾಲ್ಲೂಕಿನ ಜೂಲಪಾಳ್ಯ ಗ್ರಾಮ ಪಂಚಾಯಿತಿ ಕಾರ್ಯದರ್ಶಿಯಾಗಿರುವ ಗೋಪಾಲಯ್ಯ ಎಂಬವರು ಚಲಿಸುತ್ತಿರುವ ಟಿಪ್ಪರ್‌ ಕೆಳಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ಅವರಿಗೆ 59 ವರ್ಷ ವಯಸ್ಸಾಗಿದೆ. ರಸ್ತೆ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಗೋಪಾಲಯ್ಯ ಅವರು ಟಿಪ್ಪರ್‌ನಲ್ಲಿ ಸಾಗುತ್ತಿದ್ದರು. ಆಗ ದುರಂತ ನಡೆದಿದೆ. ಸ್ಥಳಕ್ಕೆ ಶಾಸಕ ಎಸ್ ಎನ್ ಸುಬ್ಬಾರೆಡ್ಡಿ ಭೇಟಿ ನೀಡಿದ್ದಾರೆ. ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version