Site icon Vistara News

ಗಾಂಧಿ ಜಯಂತಿ ದಿನ ನಕಲಿ ಗಾಂಧಿ ಬಗ್ಗೆ ಮಾತಾಡುವುದಿಲ್ಲ: ರಾಹುಲ್‌ ಬಗ್ಗೆ ಸಿಎಂ ಹೇಳಿಕೆ

gandhi jayanti

ಬೆಂಗಳೂರು: ಗಾಂಧಿ ಜಯಂತಿಯ ದಿನದಂದು ನಕಲಿ ಗಾಂಧಿಗಳ ಬಗ್ಗೆ ಏಕೆ ಮಾತನಾಡಲಿ ಎಂದು ರಾಹುಲ್‌ ಗಾಂಧಿ ಹೇಳಿಕೆ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.

ಮಹಾತ್ಮ ಗಾಂಧಿ ಹಾಗೂ ಲಾಲ್‌ಬಹದ್ದೂರ್‌ ಶಾಸ್ತ್ರಿಯವರ ಜನ್ಮದಿನದಂದು ವಿಧಾನಸೌಧದಲ್ಲಿ ಪ್ರತಿಮೆಗಳಿಗೆ ಪುಷ್ಪಾರ್ಚನೆ ಸಲ್ಲಿಸಿದ ನಂತರ ಮಾಧ್ಯಮಗಳ ಜತೆಗೆ ಮಾತನಾಡಿದರು.

ಅವರ ಇಡೀ ಪಕ್ಷ ಜಾಮೀನಿನಲ್ಲಿದೆ. ರಾಹುಲ್‌ ಗಾಂಧಿ, ಸೋನಿಯಾ ಗಾಂಧಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಜಾಮೀನಿನ ಮೇಲೆ ಹೊರಗಿದ್ದಾರೆ. ಕರ್ನಾಟಕ ರಾಜ್ಯ ಕಾಂಗ್ರೆಸ್‌ಗೆ ATM ಆಗಿತ್ತು, ಈಗ ಅದು ಇಲ್ಲ. 40% ಇಲ್ಲ, ಏನೂ ಇಲ್ಲ. ಏನಾದ್ರು ನಡೆದಿದ್ದರೆ ತನಿಖೆ ಮಾಡಿಸ್ತೀನಿ. ದಾಖಲೆ ಕೊಡಲಿ ಎಂದರು.

ಇದನ್ನೂ ಓದಿ | Mahatma Gandhi | ಬೆಳ್ಳಿ ಪರದೆಯಲ್ಲಿ ಕಂಡ ಮಹಾತ್ಮ ಗಾಂಧಿ; ಬಾಪುವನ್ನು ಚಿತ್ರಿಸಿದ ಜನಪ್ರಿಯ ಚಲನಚಿತ್ರಗಳಿವು

ಇದಕ್ಕೂ ಮುನ್ನ ಮಾತನಾಡಿದ ಸಿಎಂ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಜನ್ಮದಿನ ಇಂದು. ನಾವೆಲ್ಲರೂ ಗೌರವ ಸಮರ್ಪಣೆ ಮಾಡಿದ್ದೇವೆ. ಮಹಾತ್ಮ ಗಾಂಧಿಯವರು ಇಡೀ ದೇಶಕ್ಕೆ ಪ್ರೇರಕ ಶಕ್ತಿ. ಬದುಕಿನಲ್ಲಿ ಹತ್ತು ಹಲವು ಅಪಮಾನವನ್ನು ಅನುಭವಿಸಿದರೂ, ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ಅಸ್ತ್ರವನ್ನು ಕೊಟ್ಟರು. ಸತ್ಯ, ಅಹಿಂಸಾ ತತ್ವಗಳನ್ನು ಅವರು ಯಾವತ್ತೂ ಬಿಟ್ಟಿರಲಿಲ್ಲ. ಗ್ರಾಮಸ್ವರಾಜ್ ಎಂಬ ಘೋಷಣೆ ಕೆಳಹಂತದಲ್ಲಿ ಗ್ರಾಮ ಕಟ್ಟಲು ಸಹಾಯಕ ಆಗಿದೆ. ಗಾಂಧೀಜಿಯವರು ಸತ್ಯ, ಅಹಿಂಸೆ ಎರಡು ಅಸ್ತ್ರ ಕೊಟ್ಟರು. ಈ ಅಸ್ತ್ರದಿಂದಲ್ಲೇ ಬ್ರಿಟಿಷ್ ಸಾಮ್ರಾಜ್ಯ ಅಲುಗಾಡಿದೆ. ಗಾಂಧೀಜಿ ಹೇಳಿದಂತೆ ಅವರ ಜೀವನ ತೆರೆದ ಪುಸ್ತಕ. ಗಾಂಧಿ ಮಾರ್ಗದಲ್ಲಿ ನಾವೆಲ್ಲ ಮುಂದುವರಿದರೆ ನಮ್ಮಗೆಲ್ಲ ಜೀವನದಲ್ಲಿ ಶಾಂತಿ ಸಿಗುತ್ತದೆ ಎಂದರು

ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನದ ಕುರಿತು ಮಾತನಾಡಿದ ಸಿಎಂ ಬೊಮ್ಮಾಯಿ, ಲಾಲ್ ಬಹದ್ದೂರ್‌ ಶಾಸ್ತ್ರಿ ಪ್ರಧಾನಿಯಾಗಿ ಬಹಳಷ್ಟು ದಿನ ಇರಲಿಲ್ಲ. ಬಡತನದಿಂದ ಬಂದರೂ ತಮ್ಮ ಆದರ್ಶ ಬಿಟ್ಟುಕೊಟ್ಟಿರಲಿಲ್ಲ. ಅವರು ದೇಶವನ್ನು ಅತ್ಯಂತ ಸಮರ್ಥವಾಗಿ ನಡೆಸಿದರು. ದೇಶದಲ್ಲಿ ಆಹಾರದಲ್ಲಿ ಸ್ವಾವಲಂಬನೆ ಆಗಿರಲಿಲ್ಲವಾದ್ಧರಿಂದ ಜೈ ಜವಾನ್ ಜೈ ಕಿಸಾನ್ ಎಂಬ ಘೋಷಣೆ ನೀಡಿ ದೇಶ ಕಾಯುವ ಸೈನಿಕರು ಹಾಗೂ ರೈತರು ಬಗ್ಗೆ ಬಹಳ ಕಾಳಜಿ ವಹಿಸಿದ್ದರು ಎಂದು ತಿಳಿಸಿದರು.

ಇದನ್ನೂ ಓದಿ | ಕೇರಂ ಬೋರ್ಡ್‌ | ಗಾಂಧಿಕ್ಲಾಸಿನಲ್ಲಿ ಕುಳಿತು ಒಂದೆರಡು ನೋಟ

Exit mobile version