Site icon Vistara News

Mysore Dasara : ಮೈಸೂರು ದಸರಾ ಏರ್ ಶೋ; ಸಿಎಂ ಫುಲ್ ಖುಷ್

Mysore Dasara Air Show

ಮೈಸೂರು: ಮೈಸೂರು ದಸರಾ (Mysore Dasara) ಏರ್ ಶೋ (Air Show) ವೀಕ್ಷಿಸಿ ಸಿಎಂ ಸಿದ್ದರಾಮಯ್ಯ (CM Siddaramaiah) ಫುಲ್ ಖುಷ್ ಆಗಿದ್ದಾರೆ. ಅವರ ಜತೆ ಕುಟುಂಬದವರೂ ಪಾಲ್ಗೊಂಡು ವೀಕ್ಷಿಸಿದರು.

ಏರ್‌ ಶೋ ವೀಕ್ಷಣೆ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಏರ್ ಶೋ ಬಹಳ ಚೆನ್ನಾಗಿತ್ತು. ಕಳೆದ ಬಾರಿ ದೆಹಲಿಗೆ ಹೋದಾಗ ರಕ್ಷಣಾ ಸಚಿವರನ್ನು ಭೇಟಿಯಾಗಿ ಏರ್ ಶೋ ಆಯೋಜನೆ ಬಗ್ಗೆ ಮಾತನಾಡಿದ್ದೆ. ಅವರು ಕೂಡ ಕೂಡಲೇ ಸ್ಪಂದಿಸಿದ್ದರು. ತಕ್ಷಣ ವಾಯುಪಡೆಗೆ ಸೂಚನೆ ನೀಡಿದ್ದರು. ಅದರಂತೆ ಇಂದು ಆಯೋಜನೆ ಆಗಿದೆ. ಏರ್ ಶೋ ಕೂಡ ಚೆನ್ನಾಗಿ ಆಗಿದೆ. ಜನ ಕೂಡ ಸಂತಸ ಪಟ್ಟಿದ್ದಾರೆ. ನಾಡಿನ ಜನತೆಗೆ ವಿಜಯದಶಮಿ, ಆಯುಧ ಪೂಜೆಯ ಶುಭಾಶಯಗಳು ಎಂದು ಹೇಳಿದರು. ಸೊಸೆ ಸ್ಮಿತಾ ರಾಕೇಶ್, ಮೊಮ್ಮಗಳು ಕೂಡ ಏರ್ ಶೋದಲ್ಲಿ ಭಾಗಿಯಾಗಿದ್ದರು.

Mysuru Dasara Torch Light Parade Rehearsal 2023

ಇದನ್ನೂ ಓದಿ: CM Siddaramaiah : ಹಿಂದಿನ ಸರ್ಕಾರದವರು ಏನೂ ಅಭಿವೃದ್ಧಿ ಮಾಡಿಲ್ಲ; ಅವರ ಮನೆ ಹಾಳಾಗ ಎಂದ ಸಿದ್ದರಾಮಯ್ಯ

ಪಂಜಿನ ಕವಾಯತು ಅಂತಿಮ ಸುತ್ತಿನ ತಾಲೀಮು

ಇದೇ ವೇಳೆ ಮಂಗಳವಾರ ಬನ್ನಿ ಮಂಟಪದಲ್ಲಿ ರಾತ್ರಿ 7.30ಕ್ಕೆ ನಡೆಯಲಿರುವ ಪಂಜಿನ ಕವಾಯತು (Torch Light Parade Rehearsal 2023) ಸಂಬಂಧ ಅಂತಿಮ ಸುತ್ತಿನ ತಾಲೀಮು ನಡೆಸಲಾಯಿತು. ತಾಲೀಮು ವೀಕ್ಷಣೆಗೆ ಭಾರಿ ಸಂಖ್ಯೆಯಲ್ಲಿ ಸಾರ್ವಜನಿಕರು ಸೇರಿದ್ದರು.

Mysuru Dasara Torch Light Parade Rehearsal 2023

ಕೆಲವೇ ನಿಮಿಷಗಳಲ್ಲಿ ಟಾರ್ಚ್‌ಲೈಟ್ ಪರೇಡ್ ರಿಹರ್ಸಲ್ ಅನ್ನು ಪ್ರಾರಂಭ ಮಾಡಲಾಗಿದೆ. ಸಿಎಆರ್, ಡಿಎಆರ್, ಕಮಾಂಡೋ ಪೊಲೀಸ್, ಪೊಲೀಸ್ ಬ್ಯಾಂಡ್, ಅಶ್ವಾರೋಹಿ ದಳ ಸೇರಿದಂತೆ ಪೊಲೀಸ್ ಪಡೆಗಳಿಂದ ಆಕರ್ಷಕ ಪಥಸಂಚಲನ ನಡೆಸಲಾಗಿದೆ.

ಮೂರು ಕಲಾ ತಂಡಗಳಿಂದ ನಾಡಿನ ಹಿರಿಮೆ ಗರಿಮೆಯ ನೃತ್ಯ ರೂಪಕ ಪ್ರದರ್ಶನವನ್ನು ಮಾಡಲಾಗಿದೆ. ಅಶ್ವರೋಹಿ ಪಡೆ ಪೊಲೀಸರು ಟೆಂಟ್ ಪೆಗ್ಗಿಂಗ್ ಮಾಡಿದರೆ, ಶ್ವೇತಶ್ವ ತಂಡದಿಂದ ಬೈಕ್ ಸಾಹಸ ನಡೆಯಿತು. ಅಂತಿಮವಾಗಿ ಪೊಲೀಸ್ ಪ್ರಶಿಕ್ಷಣಾರ್ಥಿಗಳಿಂದ ಆಕರ್ಷಕ ಪಂಜಿನ ಕವಾಯತು ನಡೆಯಿತು. ಪಂಜು ಹಿಡಿದು ಚಿತ್ತಾಕರ್ಷಕ ಆಕೃತಿಗಳನ್ನು ಪ್ರೊಬೆಷನರಿ ಪೊಲೀಸರು ಮೂಡಿಸಿದರು.

ರಸ್ತೆಯ ಇಕ್ಕೆಲಗಳಲ್ಲಿ ಬ್ಯಾರಿಕೇಡ್ ಅಳವಡಿಕೆ

ರಾಜಪಥದಲ್ಲಿ ಬ್ಯಾರಿಕೇಡ್ ಕೋಟೆಯನ್ನೇ ಸೃಷ್ಟಿ ಮಾಡಲಾಗಿದೆ. ರಸ್ತೆಯ ಇಕ್ಕೆಲಗಳಲ್ಲಿ ಬ್ಯಾರಿಕೇಡ್ ಅಳವಡಿಕೆ ಮಾಡಲಾಗಿದೆ. ಕಬ್ಬಿಣದ ಜಾಲರಿಗಳನ್ನು ಪೊಲೀಸರು ಕಟ್ಟಿಸಿದ್ದಾರೆ. ಅಂಬಾರಿಗೆ ನೀರಿ‌ನ ಬಾಟಲಿ, ಮೊಬೈಲ್ ಸೇರಿದಂತೆ ಯಾವುದೇ ವಸ್ತುಗಳು ಬೀಳದಂತೆ ಕ್ರಮ ವಹಿಸಲಾಗಿದೆ. ಆಲ್ಬರ್ಟ್ ವಿಕ್ಟರ್ ರಸ್ತೆ, ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಾಗಿದೆ.

ಕಟ್ಟಡ ಹತ್ತುವಂತೆ ಇಲ್ಲ, ಮರ ಏರುವಂತೆಯೂ ಇಲ್ಲ

ಈ ಬಾರಿ ಜಂಬೂ ಸವಾರಿ ವೀಕ್ಷಣೆ ಸಂಬಂಧ ಕೆಲವು ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ವಹಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದ್ದು, ಕಟ್ಟೆಚ್ಚರ ವಹಿಸಲಾಗಿದೆ. ಅದರಂತೆ ಜಂಬೂ ಸವಾರಿಯನ್ನು ವೀಕ್ಷಿಸಲು ಯಾರೂ ಸಹ ಕಟ್ಟಡಗಳನ್ನು ಹತ್ತುವಂತೆ ಇಲ್ಲ, ಮರವನ್ನೂ ಏರುವಂತೆ ಇಲ್ಲ ಎಂದು ಆದೇಶಿಸಲಾಗಿದೆ.

ಇದನ್ನೂ ಓದಿ: Mysore Dasara : ಪತಿ ಯದುವೀರ್‌ ಪೂಜಾ ಕಾರ್ಯವನ್ನು ಅರಮನೆ ಬಾಲ್ಕನಿಯಿಂದ ವಿಡಿಯೊ ಮಾಡಿದ ತ್ರಿಷಿಕಾ!

ಪಾರಂಪರಿಕ ಕಟ್ಟಡಗಳ ಮೇಲೆ ಹತ್ತದಂತೆ ನಿರ್ಬಂಧ ಹೇರಲಾಗಿದೆ. ದೇವರಾಜ ಮಾರುಕಟ್ಟೆ ಸೇರಿದಂತೆ ಪಾರಂಪರಿಕ ಕಟ್ಟಡಗಳ ಮೇಲೆ ಹತ್ತದಂತೆ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಆದೇಶ ಹೊರಡಿಸಿದ್ದಾರೆ. ಇನ್ನು ಶಿಥಿಲಾವಸ್ಥೆಯ ಕಟ್ಟಡಗಳ ಮೇಲೆ ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಿ ಸೂಚನೆ ನೀಡಲಾಗಿದೆ.

Exit mobile version