ಬೆಂಗಳೂರು: ಸಿಎಂ ಸಿದ್ದರಾಮಯ್ಯ (CM Siddaramaiah) ನೇತೃತ್ವದ ಕಾಂಗ್ರೆಸ್ ಸರಕಾರ (Congress government) ರಾಜ್ಯದಲ್ಲಿ ಬಂದ ಕೂಡಲೇ ಚುನಾವಣೆ (Assembly Election) ಸಂದರ್ಭದಲ್ಲಿ ನೀಡಿದ ʼಗ್ಯಾರಂಟಿ ಯೋಜನೆʼಗಳನ್ನು (Guarantee schemes) ಜಾರಿ ಮಾಡಿತು. ಇದಕ್ಕಾಗಿ ಮುಂದೆ ಯಾವ ಬೆಲೆ ತೆರಬೇಕಾಗಲಿದೆಯೋ ಎಂಬ ಆತಂಕ ಆಗಲೇ ರಾಜ್ಯದ ಜನತೆಯನ್ನು ಕಾಡಿತ್ತು. ಅದು ಈ ನಿಜವಾಗುತ್ತಿದೆ. ಒಂದು ಕಡೆಯಿಂದ ಕೊಟ್ಟಂತೆ ನಟಿಸುತ್ತಿರುವ ಸರಕಾರ, ಇನ್ನೊಂದು ಕಡೆಯಿಂದ ಅದರ ದುಪ್ಪಟ್ಟು ಹಣ ನಮ್ಮ ಕಿಸೆಯಿಂದ ಪೀಕುತ್ತಿದೆ!
ಹೌದು, ಈ ಲೆಕ್ಕಾಚಾರ ನೋಡಿದರೆ ನೀವು ಖಂಡಿತಾ ಬಾಯಿ ಬಾಯಿ ಬಡಿದುಕೊಳ್ಳುತ್ತೀರಿ. ‘ಗ್ಯಾರಂಟಿ’ ಹೆಸರಲ್ಲಿ ನಮಗೆ ಗೊತ್ತಿಲ್ಲದಂತೆಯೇ ಜೇಬು ಖಾಲಿ ಆಗುತ್ತಿದೆ. ಇತ್ತೀಚೆಗೆ ಸರಕಾರ ಮಾಡುತ್ತಿರುವ ಬೆಲೆ ಏರಿಕೆಗಳನ್ನು, ಇಷ್ಟರಲ್ಲಿಯೇ ಮಾಡಲಿರುವ ಬೆಲೆಯೇರಿಕೆಗಳನ್ನು ಗಮನಿಸಿ ಈ ಮಾತು ಆಡಲಾಗುತ್ತಿದೆ. ಪೆಟ್ರೋಲ್, ಡೀಸೆಲ್ ಬೆಲೆ (Petrol price hike) ಏರಿಸಲಾಗಿದೆ; ಹಾಲು ದರವೂ (milk price hike) ಹೆಚ್ಚಿತು. ಮುಂದೆ ಕುಡಿಯವ ಕಾವೇರಿ ನೀರು (Kaveri Water Price hike) ಮತ್ತು ಆಲ್ಕೋಹಾಲ್ ದರಕ್ಕೂ (Liquor rates) ಸರಕಾರ ಕೈಹಾಕಲಿದೆ. ಶೀಘ್ರದಲ್ಲೇ ಟೀ- ಕಾಫಿ ರೇಟ್ ಏರಿಕೆಯೂ ಆಗಬಹುದು. ಮೆಡಿಕಲ್ ಸೀಟು ಶುಲ್ಕಗಳು ಹೆಚ್ಚಲಿವೆ, ಆಟೋ ದರ (Auto Fare) ಅಧಿಕವಾಗಲಿದೆ.
ಈಗ ಲೆಕ್ಕಾಚಾರ ತುಸು ನೋಡೋಣ. ಮೊದಲಿಗೆ ಸರಕಾರ ಏನು ಕೊಟ್ಟಿದೆ ಎಂಬ ಲೆಕ್ಕ.
ಗ್ಯಾರಂಟಿ ಯೋಜನೆಗಳು
ಗೃಹಲಕ್ಷ್ಮೀ – 2,000 ರೂ.
ಯುವನಿಧಿ – ಡಿಪ್ಲೊಮಾ 1500/- ಪದವೀಧರರಿಗೆ 3000/-
ಶಕ್ತಿಯೋಜನೆ – ಮಹಿಳೆಯರಿಗೆ ಸರ್ಕಾರಿ ಬಸ್ನಲ್ಲಿ ಉಚಿತ ಪ್ರಯಾಣ
ಅನ್ನಭಾಗ್ಯ – 5ಕೆಜಿ ಅಕ್ಕಿ & 170 ರೂಪಾಯಿ
ಗೃಹಜ್ಯೋತಿ – 200 ಯೂನಿಟ್ವರೆಗೆ ಉಚಿತ ವಿದ್ಯುತ್
ಇನ್ನು ಬೆಲೆ ಏರಿಕೆಗಳು
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ
ಪೆಟ್ರೋಲ್ – 3 ರೂಪಾಯಿ ಏರಿಕೆ
ಡೀಸೆಲ್ – 3.50 ರೂ. ಏರಿಕೆ
ಪೆಟ್ರೋಲ್ ಸದ್ಯದ ದರ – 103 ರೂ.
ಡೀಸೆಲ್ ಸದ್ಯದ ದರ – 89.20 ರೂ.
1 ದ್ವಿಚಕ್ರ ವಾಹನ – ದಿನಕ್ಕೆ 1 ಲೀಟರ್ ಬಳಕೆ
ತಿಂಗಳಿಗೆ ಬಳಕೆ ಸರಾಸರಿ ಹೆಚ್ಚಳ 30 ಲೀಟರ್ – ತಿಂಗಳಿಗೆ 100 ರೂ. ಹೆಚ್ಚಳ
ಹಾಲಿನ ದರ ಹೆಚ್ಚಳ
ಹಾಲಿನ ದರ – ವರ್ಷದಲ್ಲಿ 2 ಬಾರಿ ಏರಿಕೆ
ಮೊದಲು ಲೀಟರ್ಗೆ ಹೆಚ್ಚಾಗಿದ್ದು – 3 ರೂಪಾಯಿ
ಇದೀಗ ಲೀಟರ್ಗೆ ಹೆಚ್ಚಾಗಿದ್ದು – 2 ರೂಪಾಯಿ
ಲೀಟರ್ ಹಾಲಿನ ಸದ್ಯದ ದರ – 44 ರೂ. (ನೀಲಿ ಪ್ಯಾಕೆಟ್)
1 ಕುಟುಂಬದಿಂದ ಹಾಲು ಬಳಕೆ – 1 ಲೀಟರ್
ತಿಂಗಳಿಗೆ ಕುಟುಂಬದಿಂದ ಬಳಕೆ – 30 ಲೀಟರ್
ಹಾಲಿನ ದರ ಹೆಚ್ಚಳದಿಂದ ಹೊರೆ – 150 ರೂ.
ತರಕಾರಿ ದರ ಏರಿಕೆ
ಹಣ್ಣು, ತರಕಾರಿ, ಸೊಪ್ಪು ಬೆಲೆ ನಿರಂತರ ಏರಿಕೆ
ಹಣ್ಣು, ತರಕಾರಿ ಏರಿಕೆಯಿಂದ ಹೆಚ್ಚುವರಿ ಹೊರೆ
ಟ್ರಾನ್ಸ್ಪೋರ್ಟ್ ಚಾರ್ಜಸ್ ಸೇರಿ ವಿವಿಧ ಚಾರ್ಜಸ್
ಪ್ರತಿ ತಿಂಗಳಿಗೆ ಜನರಿಗೆ ಅಂದಾಜು 500 ರೂ. ಹೊರೆ
ದಿನಸಿ ವಸ್ತುಗಳ ಬೆಲೆ ಏರಿಕೆ
ದಿನಸಿ ವಸ್ತುಗಳು, ದಿನಬಳಕೆ ವಸ್ತುಗಳ ಬೆಲೆ ಏರಿಕೆ
ಅಕ್ಕಿ, ಬೇಳೆ, ಡಿಟರ್ಜೆಂಟ್ ಸೇರಿ ವಸ್ತುಗಳ ಬೆಲೆ ಗಗನಕ್ಕೆ
ದಿನಸಿ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರಿಗೆ ಹೊರೆ
ತಿಂಗಳಿಗೆ ಅಂದಾಜು 700 ರೂಪಾಯಿಯಷ್ಟು ಜನರಿಗೆ ಹೊರೆ
ಮಾಂಸಪ್ರಿಯರಿಗೂ ಶಾಕ್
ರಾಜ್ಯದಲ್ಲಿ ಮಾಂಸದ ಬೆಲೆಯಲ್ಲೂ ಹೆಚ್ಚಳ
ಮಾಂಸದ ಬೆಲೆ ಹೆಚ್ಚಳದಿಂದ ಹೆಚ್ಚುವರಿ ಹೊರೆ
ಜನರಿಗೆ ತಿಂಗಳಿಗೆ ಅಂದಾಜು 300 ರೂಪಾಯಿ ಹೆಚ್ಚಳ
ಮದ್ಯಪ್ರಿಯರಿಗೆ ಬಿಗ್ ಶಾಕ್
2023ರ ಜುಲೈನಲ್ಲಿ ಬಿಯರ್ 10%, ಮದ್ಯ 20% ಏರಿಕೆ
3 ತಿಂಗಳ ಹಿಂದೆ ಬಿಯರ್ 10%, ಮದ್ಯ 25% ದರ ಹೆಚ್ಚಳ
ಜುಲೈ 1ರಿಂದ ಮತ್ತೆ ಅಬಕಾರಿ ದರ ಹೆಚ್ಚಳಕ್ಕೆ ನಿರ್ಧಾರ?
ವಾಣಿಜ್ಯ ವಿದ್ಯುತ್ ಬಳಕೆದಾರರಿಗೆ ಶಾಕ್!?
ಉಚಿತ ವಿದ್ಯುತ್ ಮಧ್ಯೆಯೂ ವಾಣಿಜ್ಯ ಬಳಕೆ ವಿದ್ಯುತ್ ದರ ಏರಿಕೆ
ಕೈಗಾರಿಕೆ ಸೇರಿ ವಾಣಿಜ್ಯ ಬಳಕೆಯ ವಿದ್ಯುತ್ ದರ ಹೆಚ್ಚಳ
ವಿದ್ಯುತ್ ದರ ಹೆಚ್ಚಳದಿಂದ ವಸ್ತುಗಳ ಮೇಲೆ ಪರಿಣಾಮ
ಅಂದಾಜು 300 ರೂಪಾಯಿಯಷ್ಟು ಹೊರೆ ಬೀಳುವ ಸಾಧ್ಯತೆ
ಬಸ್ ಪ್ರಯಾಣಿಕರಿಗೆ ಬಿಗ್ ಶಾಕ್?
ಉಚಿತ ಪ್ರಯಾಣದ ನಡುವೆ ಬಸ್ ಟಿಕೆಟ್ ದರ ಏರಿಕೆ ಚಿಂತನೆ
ಗಂಡಸರ ಪ್ರಯಾಣದ ದರ ಹೆಚ್ಚಿಸಲು ಸರ್ಕಾರದ ಚಿಂತನೆ
ಶೀಘ್ರದಲ್ಲೇ ಸರ್ಕಾರಿ ಬಸ್‌ಗಳ ಪ್ರಯಾಣದ ದರ ಏರಿಕೆ ಸಾಧ್ಯತೆ
ಖಾಸಗಿ ಬಸ್‌ಗಳ ದರವೂ ದುಬಾರಿಯಾಗುವ ಸಾಧ್ಯತೆ
ಟಿಕೆಟ್ ದರ ಏರಿಕೆಯಿಂದ ಪ್ರತಿ ಕುಟುಂಬಕ್ಕೂ ಹೆಚ್ಚುವರಿ ಹೊರೆ
1 ಕುಟುಂಬಕ್ಕೆ ಅಂದಾಜು 200 ರೂಪಾಯಿಯಷ್ಟು ಹೆಚ್ಚು ಹೊರೆ
ಜನರಿಗೆ ಜಲ‘ಶಾಕ್’!
ರಾಜ್ಯದ ಹಲವು ಕಡೆ ಕುಡಿಯುವ ನೀರಿನ ಸಮಸ್ಯೆ
ಹೆಚ್ಚು ಟ್ಯಾಂಕರ್ ನೀರು ಅವಲಂಬಿಸಿರುವ ಜನರು
ಟ್ಯಾಂಕರ್ ಮೂಲಕ ನೀರು ತರಿಸಿಕೊಳ್ತಿರುವ ಜನರು
ಒಂದು ಟ್ಯಾಂಕರ್ ನೀರಿನ ಬೆಲೆ ಸುಮಾರು ₹2000
ತಿಂಗಳಿಗೆ 1 ಕುಟುಂಬಕ್ಕೆ ಅಂದಾಜು ಹೊರೆ
ಹಾಲು 30 ಲೀಟರ್ ಬಳಕೆ – 150 ರೂ.
ಪೆಟ್ರೋಲ್, ಡೀಸೆಲ್ 30 ಲೀ. – 90 ರೂ.
ತರಕಾರಿ – 500 ರೂಪಾಯಿ
ಮದ್ಯ – 500 ರೂಪಾಯಿ
ವಿದ್ಯುತ್ ವಾಣಿಜ್ಯ ಬಳಕೆ – 300 ರೂ.
ಬಸ್ ಟಿಕೆಟ್ ದರ – 200 ರೂ.
ದಿನಸಿ – 700 ರೂ.
ಮಾಂಸ – 300 ರೂ.
ಟ್ಯಾಂಕರ್ ನೀರು – 2,000 ರೂ.
ಒಟ್ಟು ಅಂದಾಜು ಹೊರೆ – 4740
ವರ್ಷಕ್ಕೆ ಎಷ್ಟು ಹೊರೆ?
ಪ್ರತಿ 1 ಕುಟುಂಬಕ್ಕೆ ತಿಂಗಳಿಗೆ 4740 ರೂ. ಅಧಿಕ ಹೊರೆ
ಪ್ರತಿ 1 ಕುಟುಂಬಕ್ಕೆ ವರ್ಷಕ್ಕೆ 56,880 ರೂ. ಅಧಿಕ ಹೊರೆ
ವರ್ಷಕ್ಕೆ ಎಷ್ಟು ಹೆಚ್ಚುವರಿ ಹೊರೆ?
ಕುಟುಂಬಕ್ಕೆ ಸರ್ಕಾರ ಕೊಡೋದು ವರ್ಷಕ್ಕೆ 24 ಸಾವಿರಕ್ಕೂ ಹೆಚ್ಚು
ಆದರೆ ಪ್ರತಿ 1 ಕುಟುಂಬಕ್ಕೆ ವರ್ಷಕ್ಕೆ 56,880 ರೂ. ಹೊರೆ
ಸರ್ಕಾರ ಕೊಟ್ಟ 24 ಸಾವಿರ ಬಿಟ್ಟರೆ 32,880 ರೂ. ಹೆಚ್ಚುವರಿ ಹೊರೆ
ಪ್ರತಿ 1 ಕುಟುಂಬಕ್ಕೆ ತಿಂಗಳಿಗೆ 4740 ರೂ. ಅಧಿಕ ಹೊರೆ
ಸರ್ಕಾರ ಕೊಡುವ 2 ಸಾವಿರ ಹೊರತುಪಡಿಸಿದರೆ 2740 ರೂ. ಹೆಚ್ಚುವರಿ ಹೊರೆ
ಇದನ್ನೂ ಓದಿ: CM Siddaramaiah: ತೈಲ, ಹಾಲು ಆಯ್ತು; ಮುಂದಿನ ಸರದಿಯಲ್ಲಿ ನೀರು, ಆಟೋ, ಬಸ್ ಟಿಕೆಟ್ ದರ ಏರಿಕೆ ಗ್ಯಾರಂಟಿ