ಮಂಡ್ಯ: ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್ ವೇ (Bangalore- Mysore Expressway)ನಲ್ಲಿ ಸ್ಪೀಡ್ ಕಂಟ್ರೋಲರ್ (Speed Controller) ಅಗತ್ಯ. ಇಲ್ಲವಾದರೆ ಅಪಾಯವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಹೇಳಿದರು. ಮುಖ್ಯಮಂತ್ರಿಯಾದ ಬಳಿಕ ಇದೇ ಮೊದಲ ಬಾರಿಗೆ ಎಕ್ಸ್‌ಪ್ರೆಸ್ ವೇ ಪರಿಶೀಲನೆ ನಡೆಸಿದ ಅವರು, ಹೆದ್ದಾರಿಯಲ್ಲಿ ಸ್ಪೀಡ್ ಕಂಟ್ರೋಲ್ ಹಾಕಿದ್ದರಿಂದ ಅಪಘಾತ ಪ್ರಮಾಣ ಕಡಿಮೆಯಾಗಿದೆ ಎಂದರು.
ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್ ವೇ ಸಾವಿನ ಹೆದ್ದಾರಿಯಾಗುತ್ತಿದೆ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವೇಗ ನಿಯಂತ್ರಣಕ್ಕೆ ಮುಂದಾಗಿತ್ತು. ಹೆದ್ದಾರಿಯಲ್ಲಿ ಅಲ್ಲಲ್ಲಿ ವೇಗ ನಿಯಂತ್ರಣ ನಿಗಾ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಅದರ ಒಂದು ಪ್ರಾತ್ಯಕ್ಷಿಕೆಯನ್ನು ಮಂಡ್ಯದ ಬಳಿ ಹೆದ್ದಾರಿಯಲ್ಲಿ ಏರ್ಪಡಿಸಲಾಗಿತ್ತು. ಮಂಡ್ಯ ತಾಲೂಕಿನ ಉಮ್ಮಡಹಳ್ಳಿ ಬಳಿ ಸಿಎಂ ಅವರು ಹೆದ್ದಾರಿ ವೀಕ್ಷಣೆ ಮಾಡಬೇಕಿತ್ತು. ಆದರೆ ಅವರು ಮಂಡ್ಯದ ಭಾಗದಿಂದಲೇ ಲ್ಯಾಪ್‌ಟಾಪ್‌ನಲ್ಲೇ ವೇಗದ ಮಿತಿ ಗುರ್ತಿಸಲು ಅಳವಡಿಸಲಾಗಿರೊ ಅತ್ಯಾಧುನಿಕ ಕ್ಯಾಮೆರಾಗಳ ಕಾರ್ಯ ನಿರ್ವಹಣೆ ಬಗೆಗೆ ಮಾಹಿತಿ ಪಡೆದರು.
ಈಗ ಅಪಘಾತ ಕಡಿಮೆಯಾಗಿದೆ
ವೇಗ ನಿಯಂತ್ರಕಗಳ ತಾಂತ್ರಿಕ ವಿವರವನ್ನು ಲ್ಯಾಪ್ ಟಾಪ್ ಮೂಲಕವೇ ಪಡೆದುಕೊಂಡ ಸಿಎಂ ಸಿದ್ದರಾಮಯ್ಯ ಅವರು, ʻʻರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ವೀಡ್ ಕಂಟ್ರೋಲ್ ಇರಲಿಲ್ಲ. ಅಪಘಾತಗಳು ಕೂಡ ಜಾಸ್ತಿ ಆಗುತ್ತಿತ್ತು. ಜೂನ್ ತಿಂಗಳಲ್ಲಿ 20 ಅಪಘಾತ ಆಗಿತ್ತು. ವೇಗ ನಿಯಂತ್ರಕ ಅಳವಡಿಸಿದ್ದರಿಂದ ಜುಲೈ ತಿಂಗಳಲ್ಲಿ ಇದು ಐದಕ್ಕೆ ಇಳಿದಿದೆʼʼ ಎಂದು ಹೇಳಿದು.
ʻʻಹತ್ತು ಕಿಲೋಮೀಟರ್ ಅಂತರದಲ್ಲಿ ವೇಗ ನಿಯಂತ್ರಣ ನಿಗಾ ವ್ಯವಸ್ಥೆ ಮಾಡಿದರೆ ಅನುಕೂಲ ಆಗಲಿದೆ. ಈಗಾಗಲೇ ನಮ್ಮ ಅಧಿಕಾರಿಗಳು ಸಭೆ ಮಾಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಅಧಿಕಾರಿಗಳ ಜೊತೆ ಸಭೆ ಮಾಡಿದ್ದಾರೆ. 150 ಕೋಟಿ ರೂ ವೆಚ್ಚದಲ್ಲಿ ಅಡಿಷನ್ ವರ್ಕ್ ಮಾಡಲು ಮುಂದಾಗಿದ್ದಾರೆ. ನವೆಂಬರ್ ಆದ ನಂತರ ಕೆಲಸ ಆರಂಭವಾಗುತ್ತದೆ” ಎಂದರು.
ಇನ್ನೂ ಕೆಲವು ಬದಲಾವಣೆ ಆಗಬೇಕು ಎಂದ ಸಿಎಂʻ
ʻʻಹೆದ್ದಾರಿ ಅವೈಜ್ಞಾನಿಕವಾಗಿದೆ ಎಂದು ಹೇಳುವ ಹಾಗಿಲ್ಲ. ಕೆಲವು ಸೌಲಭ್ಯಗಳು ಆಗಬೇಕು. ಈಗಾಗಲೇ ಸೂಚನೆ ಕೊಟ್ಟಿದ್ದೇವೆ. ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ನಿರ್ಮಾಣ ಮಾಡಿದ್ದಾರೆ. ನಾವು ಸುರಕ್ಷತೆ ಕಾಪಾಡಲು ಏನೇನು ಮಾಡಬೇಕೋ ಅದನ್ನು ಮಾಡುತ್ತೇವೆ. ಸರ್ವಿಸ್ ರೋಡ್‌ಗಳನ್ನು ಏನೇನು ಮಾಡಬೇಕೋ ಮಾಡುತ್ತೇವೆʼʼ ಎಂದು ಸಿದ್ದರಾಮಯ್ಯ ಹೇಳಿದರು.
ಕೃಷಿ ಸಚಿವ ಚಲುವರಾಯ ಸ್ವಾಮಿ ಅವರು ಸಿಎಂ ಸಿದ್ದರಾಮಯ್ಯ ಅವರ ಜತೆಗಿದ್ದು ಮಾಹಿತಿಯನ್ನು ನೀಡಿದರು.
Express Wayನಲ್ಲಿ ಕಳೆದುಹೋದ ಜೀವಗಳು 158!
ರಾಮನಗರ ಜಿಲ್ಲೆಯಲ್ಲಿ 55 ಕಿಮೀ, ಮಂಡ್ಯದಲ್ಲಿ 58 ಕಿಮೀ ಹಾಗೂ ಮೈಸೂರಿನಲ್ಲಿ 5 ಕಿಮೀ ಸೇರಿ ಒಟ್ಟು 118 ಕಿಮೀ ದೂರದ ದಶಪಥ ಇದಾಗಿದೆ. ಈ ಮೂರೂ ಜಿಲ್ಲೆಗಳ ವ್ಯಾಪ್ತಿಯಲ್ಲಿ ಕಳೆದ 9 ತಿಂಗಳಲ್ಲಿ (2022ರ ಸೆಪ್ಟೆಂಬರ್ ನಿಂದ 2023 ರ ಜೂನ್ ವರೆಗೆ) 595 ಅಪಘಾತಗಳು ಸಂಭವಿಸಿವೆ. 158 ಜನ ಜೀವ ಕಳೆದುಕೊಂಡಿದ್ದಾರೆ.
ಕೇವಲ ಮಂಡ್ಯ ಜಿಲ್ಲೆಯ ವ್ಯಾಪ್ತಿಯಲ್ಲಿ ಜನವರಿಯಿಂದ ಇಲ್ಲಿಯವರೆಗೆ 55 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 52 ಮಂದಿ ತೀವ್ರ ಗಾಯಗೊಂಡಿದ್ದಾರೆ. ಇದೇ ಅವಧಿಯಲ್ಲಿ ಹೊಸ ಬೈಪಾಸ್ ನಲ್ಲಿ 269 ಅಪಘಾತಗಳು ಸಂಭವಿಸಿ 92 ಜನ ಪ್ರಾಣ ಕಳೆದುಕೊಂಡಿದ್ದಾರೆ.
ಇದನ್ನೂ ಓದಿ : CM Siddaramaiah : ಗ್ಯಾರಂಟಿ ಮೂಲಕ ಆಮಿಷ ಆರೋಪ; ಸಿಎಂ ಸಿದ್ದರಾಮಯ್ಯಗೆ ಹೈಕೋರ್ಟ್ ನೋಟಿಸ್
ಮಂಡ್ಯ: ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್ ವೇ (Bangalore- Mysore Expressway)ನಲ್ಲಿ ಸ್ಪೀಡ್ ಕಂಟ್ರೋಲರ್ (Speed Controller) ಅಗತ್ಯ. ಇಲ್ಲವಾದರೆ ಅಪಾಯವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಹೇಳಿದರು. ಮುಖ್ಯಮಂತ್ರಿಯಾದ ಬಳಿಕ ಇದೇ ಮೊದಲ ಬಾರಿಗೆ ಎಕ್ಸ್‌ಪ್ರೆಸ್ ವೇ ಪರಿಶೀಲನೆ ನಡೆಸಿದ ಅವರು, ಹೆದ್ದಾರಿಯಲ್ಲಿ ಸ್ಪೀಡ್ ಕಂಟ್ರೋಲ್ ಹಾಕಿದ್ದರಿಂದ ಅಪಘಾತ ಪ್ರಮಾಣ ಕಡಿಮೆಯಾಗಿದೆ ಎಂದರು.