Site icon Vistara News

Bharat Jodo | ಪಾದಯಾತ್ರೆಯಿಂದ ರಾಜ್ಯದಲ್ಲಿ 150 ಸೀಟು ಗೆಲ್ಲುವ ಅವಕಾಶ ಸೃಷ್ಟಿ: ಡಿಕೆಶಿ ವಿಶ್ವಾಸ

Bharat Jodo

ಬಳ್ಳಾರಿ: ರಾಜ್ಯದಲ್ಲಿ ಕಾಂಗ್ರೆಸ್ ಕಷ್ಟದಲ್ಲಿದ್ದಾಗ ನನಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ ಕೊಟ್ಟರು. ನಾನು ನಿದ್ದೆ ಮಾಡಲಿಲ್ಲ. ನಿಮಗೂ(ಕಾರ್ಯಕರ್ತರು) ನಿದ್ದೆ ಮಾಡಲು ಬಿಡಲಿಲ್ಲ. ನನ್ನ ತಾಯಿ ಸೋನಿಯಾ ಗಾಂಧಿ ನಮ್ಮ ಜತೆ ರಾಜ್ಯದಲ್ಲಿ (Bharat Jodo) ಹೆಜ್ಜೆ ಹಾಕಿದ್ದಾರೆ. ಕುಗ್ರಾಮದಲ್ಲಿ ದಸರಾ ಆಚರಣೆ ಮಾಡಿದ್ದಾರೆ. ನಮಗೆ ದುರ್ಗಾದೇವಿ ರೀತಿಯಲ್ಲಿ ಆಶೀರ್ವಾದ ಮಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಹೇಳಿದರು.

ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಬಳ್ಳಾರಿಗೆ ತಲುಪಿದ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಸಮಾವೇಶದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್ ಅವರು, ರಾಹುಲ್ ಗಾಂಧಿ ಅವರು ನೇತೃತ್ವದಲ್ಲಿ ಈ ಪಾದಯಾತ್ರೆಯನ್ನು ಕೈಗೊಳ್ಳಲಾಗುತ್ತಿದೆ. ನೀವು ಕೂಡ ರಾಹುಲ್ ಜತೆ ಪಾದಯಾತ್ರೆ ಮಾಡುತ್ತಿದ್ದೀರಿ. ಇದರಿಂದ ರಾಜ್ಯದಲ್ಲಿ ಕಾಂಗ್ರೆಸ್ 150 ಸೀಟು ಗೆಲ್ಲುವ ಅವಕಾಶ ಸೃಷ್ಟಿಯಾಗುತ್ತಿದೆ ಎಂದು ಅವರು ವಿಶ್ಲೇಷಣೆ ಮಾಡಿದರು.

ಈ ಪಾದಯಾತ್ರೆಯನ್ನು ಕೈಗೊಂಡಿರುವುದು ಸಿದ್ದರಾಮಯ್ಯ ಅವರು ಸಿಎಂ ಆಗುವುದಕ್ಕೆ ಅಲ್ಲ, ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯಮಂತ್ರಿಯಾಗಲು ಅಲ್ಲ ಅಥವಾ ಡಿ.ಕೆ.ಶಿವಕುಮಾರ್ ಕೂಡ ಸಿಎಂ ಆಗಲ್ಲ ಅಲ್ಲ. ಇದೊಂದು ಕ್ರಾಂತಿ. ಪಾದಯಾತ್ರೆಯು ಆಂದೋಲನವಾಗಿ ಬದಲಾಗಿದೆ. ರೈತರ ಬದುಕು, ಉದ್ಯೋಗ ಸೃಷ್ಟಿ, ಜನರ ನೆಮ್ಮದಿಗಾಗಿ ಪಾದಯಾತ್ರೆ ಕೈಗೊಳ್ಳಲಾಗಿದೆ. ಇಂಥ ಕಾರ್ಯಕ್ರಮಕ್ಕೆ ಅವಕಾಶ ಸಿಕ್ಕಿರುವುದು ನನ್ನ ಭಾಗ್ಯ ಎಂದು ಡಿಕೆಶಿ ಹೇಳಿದರು.

ಇದನ್ನೂ ಓದಿ | ಭಾರತ್‌ ಜೋಡೋ | ಇಂದು ಬಳ್ಳಾರಿಗೆ ಕಾಲಿಡಲಿರುವ ರಾಹುಲ್‌

Exit mobile version