Bharat Jodo | ಪಾದಯಾತ್ರೆಯಿಂದ ರಾಜ್ಯದಲ್ಲಿ 150 ಸೀಟು ಗೆಲ್ಲುವ ಅವಕಾಶ ಸೃಷ್ಟಿ: ಡಿಕೆಶಿ ವಿಶ್ವಾಸ - Vistara News

ಕರ್ನಾಟಕ

Bharat Jodo | ಪಾದಯಾತ್ರೆಯಿಂದ ರಾಜ್ಯದಲ್ಲಿ 150 ಸೀಟು ಗೆಲ್ಲುವ ಅವಕಾಶ ಸೃಷ್ಟಿ: ಡಿಕೆಶಿ ವಿಶ್ವಾಸ

ಭಾರತ್ ಜೋಡೋ (Bharat Jodo) ಪಾದಯಾತ್ರೆಯಿಂದಾಗಿ ರಾಜ್ಯದಲ್ಲಿ ಕಾಂಗ್ರೆಸ್ 150 ಸೀಟು ಗೆಲ್ಲುವ ಅವಕಾಶ ಸೃಷ್ಟಿಯಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಹೇಳಿದರು.

VISTARANEWS.COM


on

Bharat Jodo
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬಳ್ಳಾರಿ: ರಾಜ್ಯದಲ್ಲಿ ಕಾಂಗ್ರೆಸ್ ಕಷ್ಟದಲ್ಲಿದ್ದಾಗ ನನಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ ಕೊಟ್ಟರು. ನಾನು ನಿದ್ದೆ ಮಾಡಲಿಲ್ಲ. ನಿಮಗೂ(ಕಾರ್ಯಕರ್ತರು) ನಿದ್ದೆ ಮಾಡಲು ಬಿಡಲಿಲ್ಲ. ನನ್ನ ತಾಯಿ ಸೋನಿಯಾ ಗಾಂಧಿ ನಮ್ಮ ಜತೆ ರಾಜ್ಯದಲ್ಲಿ (Bharat Jodo) ಹೆಜ್ಜೆ ಹಾಕಿದ್ದಾರೆ. ಕುಗ್ರಾಮದಲ್ಲಿ ದಸರಾ ಆಚರಣೆ ಮಾಡಿದ್ದಾರೆ. ನಮಗೆ ದುರ್ಗಾದೇವಿ ರೀತಿಯಲ್ಲಿ ಆಶೀರ್ವಾದ ಮಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಹೇಳಿದರು.

ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಬಳ್ಳಾರಿಗೆ ತಲುಪಿದ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಸಮಾವೇಶದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್ ಅವರು, ರಾಹುಲ್ ಗಾಂಧಿ ಅವರು ನೇತೃತ್ವದಲ್ಲಿ ಈ ಪಾದಯಾತ್ರೆಯನ್ನು ಕೈಗೊಳ್ಳಲಾಗುತ್ತಿದೆ. ನೀವು ಕೂಡ ರಾಹುಲ್ ಜತೆ ಪಾದಯಾತ್ರೆ ಮಾಡುತ್ತಿದ್ದೀರಿ. ಇದರಿಂದ ರಾಜ್ಯದಲ್ಲಿ ಕಾಂಗ್ರೆಸ್ 150 ಸೀಟು ಗೆಲ್ಲುವ ಅವಕಾಶ ಸೃಷ್ಟಿಯಾಗುತ್ತಿದೆ ಎಂದು ಅವರು ವಿಶ್ಲೇಷಣೆ ಮಾಡಿದರು.

ಈ ಪಾದಯಾತ್ರೆಯನ್ನು ಕೈಗೊಂಡಿರುವುದು ಸಿದ್ದರಾಮಯ್ಯ ಅವರು ಸಿಎಂ ಆಗುವುದಕ್ಕೆ ಅಲ್ಲ, ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯಮಂತ್ರಿಯಾಗಲು ಅಲ್ಲ ಅಥವಾ ಡಿ.ಕೆ.ಶಿವಕುಮಾರ್ ಕೂಡ ಸಿಎಂ ಆಗಲ್ಲ ಅಲ್ಲ. ಇದೊಂದು ಕ್ರಾಂತಿ. ಪಾದಯಾತ್ರೆಯು ಆಂದೋಲನವಾಗಿ ಬದಲಾಗಿದೆ. ರೈತರ ಬದುಕು, ಉದ್ಯೋಗ ಸೃಷ್ಟಿ, ಜನರ ನೆಮ್ಮದಿಗಾಗಿ ಪಾದಯಾತ್ರೆ ಕೈಗೊಳ್ಳಲಾಗಿದೆ. ಇಂಥ ಕಾರ್ಯಕ್ರಮಕ್ಕೆ ಅವಕಾಶ ಸಿಕ್ಕಿರುವುದು ನನ್ನ ಭಾಗ್ಯ ಎಂದು ಡಿಕೆಶಿ ಹೇಳಿದರು.

ಇದನ್ನೂ ಓದಿ | ಭಾರತ್‌ ಜೋಡೋ | ಇಂದು ಬಳ್ಳಾರಿಗೆ ಕಾಲಿಡಲಿರುವ ರಾಹುಲ್‌

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೈಂ

Prajwal Revanna Case: ಜರ್ಮನಿಯಿಂದ ದುಬೈಗೆ ಹಾರಿದ ಪ್ರಜ್ವಲ್‌ ರೇವಣ್ಣ! ತನಿಖೆ ದಿಕ್ಕು ತಪ್ಪಿಸಿ, ದಿನ ದೂಡಲು ತಂತ್ರ?

Prajwal Revanna Case: ಲುಕ್‌ಔಟ್‌ ನೋಟಿಸ್‌ ಜಾರಿ ಮಾಡಿದ ಹಿನ್ನೆಲೆಯಲ್ಲಿ ಲೈಂಗಿಕ ಹಗರಣದ ಪ್ರಮುಖ ಆರೋಪಿ ಪ್ರಜ್ವಲ್‌ ರೇವಣ್ಣ ದುಬೈಗೆ ಹಾರಿರುವ ಶಂಕೆಯನ್ನು ಎಸ್ಐಟಿ ಅಧಿಕಾರಿಗಳು ವ್ಯಕ್ತಪಡಿಸಿದ್ದರು. ಆದರೆ, ಪ್ರಜ್ವಲ್‌ ಬುಧವಾರ (ಮೇ 1) ರಾತ್ರಿಯೇ ಜರ್ಮನಿಯಿಂದ ದುಬೈಗೆ ಬಂದಿಳಿದಿದ್ದಾರೆ. ಎಮಿರೇಟ್ಸ್‌ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದ ಪ್ರಜ್ವಲ್‌ ಅಲ್ಲದೆ, ಪ್ರಜ್ವಲ್ ಹಾಗೂ ಆಪ್ತರ ಮೊಬೈಲ್ ಲೊಕೇಶನ್‌ ಅನ್ನು ಸಹ ಎಸ್ಐಟಿ ಅಧಿಕಾರಿಗಳು ಪತ್ತೆ ಹಚ್ಚುತ್ತಲೇ ಇದ್ದಾರೆ. ಲುಕ್‌ಔಟ್‌ ನೋಟಿಸ್‌ ಜಾರಿ ಮಾಡಿದ್ದರಿಂದ ಮತ್ತಷ್ಟು ಸಮಯಾವಕಾಶವನ್ನು ಪಡೆದುಕೊಳ್ಳುವ ಸಲುವಾಗಿ ದುಬೈಗೆ ಹೋಗಿರಬಹುದು ಎಂದು ಹೇಳಲಾಗುತ್ತಿದೆ. ಹೀಗಾಗಿ ಅಲ್ಲಿಂದ ಯಾವಾಗ ಬೇಕಿದ್ದರೂ ಬೆಂಗಳೂರಿಗೆ ಬಂದಿಳಿಯಬಹುದು ಎಂದು ನಿರೀಕ್ಷಿಸಲಾಗುತ್ತಿದೆ.

VISTARANEWS.COM


on

Prajwal Revanna Case Prajwal arrives in Dubai from Germany
Koo

ಬೆಂಗಳೂರು: ಅಶ್ಲೀಲ ವಿಡಿಯೊ ಎನ್ನಲಾದ ಪೆನ್‌ಡ್ರೈವ್‌ ಪ್ರಕರಣಕ್ಕೆ (Hassan Pen Drive Case) ಸಂಬಂಧಪಟ್ಟಂತೆ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಹಾಸನ ಸಂಸದ (Hassan MP), ಮಾಜಿ ಸಚಿವ ಎಚ್.ಡಿ. ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ (Prajwal Revanna Case) ಅವರಿಗೆ ಎಸ್ಐಟಿ ಲುಕ್ ಔಟ್ ನೋಟಿಸ್‌ ನೀಡಿದ ಬೆನ್ನಲ್ಲೇ ಅವರು ಜರ್ಮನಿಯಿಂದ ದುಬೈಗೆ ಹೋಗಿದ್ದಾರೆ.

ಪ್ರಜ್ವಲ್‌ ರೇವಣ್ಣ ಅವರ ಡಿಪ್ಲೊಮ್ಯಾಟಿಕ್‌ ಪಾಸ್‌ಪೋರ್ಟ್‌ ಅನ್ನು ರದ್ದು ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರು ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದ ಬೆನ್ನಲ್ಲೇ ಪ್ರಜ್ವಲ್‌ ರೇವಣ್ಣ ಅಲರ್ಟ್‌ ಆಗಿದ್ದಾರೆ. ಹೀಗಾಗಿ ಒಂದು ಕಡೆ ಇರದೇ ಸ್ಥಳ ಬದಲಾವಣೆ ಮಾಡುತ್ತಿದ್ದಾರೆ.

ಆದರೆ, ಲುಕ್‌ಔಟ್‌ ನೋಟಿಸ್‌ ಜಾರಿ ಮಾಡಿದ ಹಿನ್ನೆಲೆಯಲ್ಲಿ ಲೈಂಗಿಕ ಹಗರಣದ ಪ್ರಮುಖ ಆರೋಪಿ ಪ್ರಜ್ವಲ್‌ ರೇವಣ್ಣ ದುಬೈಗೆ ಹಾರಿರುವ ಶಂಕೆಯನ್ನು ಎಸ್ಐಟಿ ಅಧಿಕಾರಿಗಳು ವ್ಯಕ್ತಪಡಿಸಿದ್ದರು. ಆದರೆ, ಪ್ರಜ್ವಲ್‌ ಬುಧವಾರ (ಮೇ 1) ರಾತ್ರಿಯೇ ಜರ್ಮನಿಯಿಂದ ದುಬೈಗೆ ಬಂದಿಳಿದಿದ್ದಾರೆ. ಎಮಿರೇಟ್ಸ್‌ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದ ಪ್ರಜ್ವಲ್‌ ಅಲ್ಲದೆ, ಪ್ರಜ್ವಲ್ ಹಾಗೂ ಆಪ್ತರ ಮೊಬೈಲ್ ಲೊಕೇಶನ್‌ ಅನ್ನು ಸಹ ಎಸ್ಐಟಿ ಅಧಿಕಾರಿಗಳು ಪತ್ತೆ ಹಚ್ಚುತ್ತಲೇ ಇದ್ದಾರೆ.

ದುಬೈಗೆ ಹೋಗಿದ್ದು ಏಕೆ?

ಎಸ್‌ಐಟಿ ಈಗಾಗಲೇ ಪ್ರಜ್ವಲ್‌ ರೇವಣ್ಣ ಅವರಿಗೆ ವಿಚಾರಣೆಗೆ ಹಾಜರಾಗಲು ನೋಟಿಸ್‌ ಜಾರಿ ಮಾಡಿದೆ. ಅಲ್ಲದೆ, ಸಮಯಾವಕಾಶ ಕೋರಿ ಪ್ರಜ್ವಲ್‌ ಸಲ್ಲಿಸಿದ್ದ ಅರ್ಜಿಯನ್ನೂ ತಿರಸ್ಕರಿಸಿದೆ. ಈಗ ಲುಕ್‌ಔಟ್‌ ನೋಟಿಸ್‌ ಜಾರಿ ಮಾಡಿದ್ದರಿಂದ ಮತ್ತಷ್ಟು ಸಮಯಾವಕಾಶವನ್ನು ಪಡೆದುಕೊಳ್ಳುವ ಸಲುವಾಗಿ ದುಬೈಗೆ ಹೋಗಿರಬಹುದು ಎಂದು ಹೇಳಲಾಗುತ್ತಿದೆ. ಹೀಗಾಗಿ ಅಲ್ಲಿಂದ ಯಾವಾಗ ಬೇಕಿದ್ದರೂ ಬೆಂಗಳೂರಿಗೆ ಬಂದಿಳಿಯಬಹುದು ಎಂದು ನಿರೀಕ್ಷಿಸಲಾಗುತ್ತಿದೆ.

ತಲೆಮರೆಸಿಕೊಂಡ ಪ್ರಜ್ವಲ್‌ ರೇವಣ್ಣಗೆ ಲುಕೌಟ್‌ ನೋಟಿಸ್‌ ಜಾರಿ, ಬಂದ ಕೂಡಲೇ ಬಂಧನ!

ಹಾಸನದ ಅಶ್ಲೀಲ ವೀಡಿಯೋ (Obscene video) ಪ್ರಕರಣ ಸಂಬಂಧ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಕರ್ನಾಟಕ ಸರ್ಕಾರದಿಂದ ಲುಕ್ಔಟ್‌ ನೋಟಿಸ್ (Lookout notice) ಜಾರಿ ಮಾಡಲಾಗಿದೆ.

ಲೈಂಗಿಕ ದೌರ್ಜನ್ಯ (Physical abuse) ಹಗರಣದಲ್ಲಿ ಎಸ್‌ಐಟಿ (SIT) A2 ಆಗಿರುವ ಪ್ರಜ್ವಲ್‌ ರೇವಣ್ಣ ಅವರನ್ನು ತನಿಖೆಗೊಳಪಡಿಸುವುದು ಅಗತ್ಯವಾಗಿದ್ದು, ಅವರನ್ನು ಜರ್ಮನಿಯಿಂದ ಕರೆತರಬೇಕಿದೆ. ವಿಮಾನ ನಿಲ್ದಾಣದ ಇಮಿಗ್ರೇಷನ್‌ ವಿಭಾಗಕ್ಕೆ ಲುಕೌಟ್‌ ನೋಟೀಸ್‌ ಸರ್ವ್‌ ಮಾಡಲಾಗಿದೆ. ಎಲ್ಲಾ ವಿಮಾನ ನಿಲ್ದಾಣಗಳ ಇಮಿಗ್ರೇಷನ್‍ಗೆ ಎಸ್‍ಐಟಿ ಅಧಿಕಾರಿಗಳು ಲುಕೌಟ್‌ ನೋಟಿಸ್ ನೀಡಿದ್ದಾರೆ ಎನ್ನಲಾಗಿದ್ದು, ಆ ಮೂಲಕ ಪ್ರಜ್ವಲ್‌ ರೇವಣ್ಣ ಕಾಣಿಸಿಕೊಂಡ ಕೂಡಲೇ ವಶಕ್ಕೆ ಪಡೆಯಲು ಸೂಚನೆ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಈ ನಡುವೆ ವಿಚಾರಣೆಗೆ ಹಾಜರಾಗಲು 7 ದಿನ ಅವಕಾಶ ನೀಡುವಂತೆ ಕೋರಿ ಪ್ರಜ್ವಲ್ ರೇವಣ್ಣ ವಿಶೇಷ ತನಿಖಾ ತಂಡಕ್ಕೆ ಮನವಿ ಮಾಡಿದ್ದಾರೆ. ಪ್ರಜ್ವಲ್ ರೇವಣ್ಣ ಪರ ವಕೀಲ ಅರುಣ್ ಜಿ. ಅವರು ಎಸ್‍ಐಟಿ ಮುಖ್ಯಸ್ಥ ರಿಗೆ ಪತ್ರ ಬರೆದು ಮನವಿ ಸಲ್ಲಿಸಿದ್ದಾರೆ. ಇದರಲ್ಲಿ ಪ್ರಜ್ವಲ್ ಅವರು ಮೇ 15ರಂದು ಭಾರತಕ್ಕೆ ವಾಪಸ್ಸು ಬರುವ ಬಗ್ಗೆ ಮಾಹಿತಿ ದೊರಕಿದೆ. ಆದರೆ ಲುಫ್ತಾನ್ಸಾ ಏರ್ಲೈನ್ಸ್‌ನಲ್ಲಿ ಜರ್ಮನಿಯ ಫ್ರಾಂಕ್‌ಫರ್ಟ್‌ನಿಂದ ಬೆಂಗಳೂರಿಗೆ ಪ್ರಜ್ವಲ್‌ ಬುಕ್‌ ಮಾಡಿದ ಟಿಕೆಟ್‌ನ ಪ್ರತಿ ಲಭ್ಯವಾಗಿದ್ದು, ಮೇ 15ರಂದು ಬುಕ್‌ ಮಾಡಿದ್ದಾರೆ.

ಏನಿದು ಲುಕ್ಔಟ್‌ ನೋಟಿಸ್?

ತಲೆಮರೆಸಿಕೊಂಡಿರುವ ಅಥವಾ ಕಾನೂನು ಜಾರಿ ಸಂಸ್ಥೆಗಳಿಗೆ ಬೇಕಾಗಿರುವ ವ್ಯಕ್ತಿಯು ದೇಶವನ್ನು ತೊರೆಯಲು ಸಾಧ್ಯವಾಗದಂತೆ ಖಚಿತಪಡಿಸಿಕೊಳ್ಳಲು ಎಲ್ಒಸಿ ನೀಡಲಾಗುತ್ತದೆ. ಇದನ್ನು ಹೆಚ್ಚಾಗಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು ಮತ್ತು ಬಂದರುಗಳಲ್ಲಿನ ವಲಸೆ ತಪಾಸಣಾ ಕೇಂದ್ರಗಳಲ್ಲಿ ತಪಾಸಣೆಗೆ ಬಳಸಲಾಗುತ್ತದೆ. ಆದರೆ, ಪ್ರಜ್ವಲ್‌ ಈಗಾಗಲೇ ಜರ್ಮನಿಯಲ್ಲಿದ್ದು, ವಿಮಾನ ನಿಲ್ದಾಣದಲ್ಲಿ ಮರಳುವ ಹೊತ್ತಿಗೆ ಬಂಧಿಸಲು ಚಿಂತಿಸಲಾಗಿದೆ ಎಂಬುದು ಇದರಿಂದ ಸ್ಪಷ್ಟವಾಗಿದೆ. ಈ ಮೂಲಕ ಜೆಡಿಎಸ್‌ ಹಾಗೂ ಬಿಜೆಪಿಗೆ ಮುಜುಗರ ಸೃಷ್ಟಿಸುವ ತಂತ್ರ ಇದೆಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Prajwal Revanna Case: ಪ್ರಜ್ವಲ್‌ ಅಶ್ಲೀಲ ವಿಡಿಯೊ ಪೆನ್‌ಡ್ರೈವ್‌ ವೈರಲ್‌ ಮಾಡಿದ್ದು ಸಚಿವ ಜಮೀರ್‌ ಅಹ್ಮದ್‌ ಆಪ್ತ?

ಪ್ರಜ್ವಲ್ ರೇವಣ್ಣ ತಮ್ಮ ರಾಜತಾಂತ್ರಿಕ ಪಾಸ್‌ಪೋರ್ಟ್ ಬಳಸಿ ಏಪ್ರಿಲ್ 27-28ರಂದು ರಾತ್ರೋರಾತ್ರಿ ಬೆಂಗಳೂರಿನಿಂದ ಜರ್ಮನಿಗೆ ತೆರಳಿದ್ದಾರೆ. ಆಪಾದಿತ ಲೈಂಗಿಕ ಹಗರಣದ ತನಿಖೆಗೆ ಎಸ್‌ಐಟಿಯನ್ನು ಸ್ಥಾಪಿಸುವ ಕೆಲವೇ ಗಂಟೆಗಳ ಮೊದಲು ಅವರು ಪರಾರಿಯಾಗಿದ್ದಾರೆ. ಮೇ 1ರಂದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಜ್ವಲ್ ರೇವಣ್ಣ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದುಗೊಳಿಸಲು ಮಧ್ಯ ಪ್ರವೇಶಿಸುವಂತೆ ಕೋರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು, ಕೇಂದ್ರ ಸರ್ಕಾರದ ಕಚೇರಿಗಳನ್ನು ಬಳಸಿಕೊಂಡು ಪರಾರಿಯಾದ ಸಂಸದರನ್ನು ಭಾರತಕ್ಕೆ ಕರೆತರಲು ಖಚಿತಪಡಿಸಿಕೊಳ್ಳುವಂತೆ ಕೋರಿದ್ದರು.

ತನಿಖೆಗೆ ಅಗತ್ಯವಾದಾಗ ಪ್ರಜ್ವಲ್‌ ಭಾರತಕ್ಕೆ ಮರಳಲಿದ್ದಾನೆ ಎಂದು ಎಚ್‌ ಡಿ ರೇವಣ್ಣ ಹೇಳಿದ್ದಾರೆ. A1 ಆಗಿರುವ ರೇವಣ್ಣ ಅವರೂ ಎಸ್‌ಐಟಿ ಮುಂದೆ ತನಿಖೆಗೆ ಒಳಗಾಗಬೇಕಿದೆ. ಅವರಿಗೂ ನೋಟಿಸ್‌ ಜಾರಿ ಮಾಡಲಾಗಿದೆ. ಇಂದು ಅಥವಾ ನಾಳೆ ಅವರು ತನಿಖೆಗೆ ಹಾಜರಾಗುವ ನಿರೀಕ್ಷೆ ಇದೆ.

Continue Reading

ಮಳೆ

Karnataka Weather : ರಾಜ್ಯದಲ್ಲಿ ಮುಂದುವರಿಯಲಿದೆ ಶಾಖದ ಹೊಡೆತ

Karnataka Weather Forecast : ರಾಜ್ಯಾದ್ಯಂತ ತಾಪಮಾನ ಹಾಗೂ ಹೀಟ್‌ ವೇವ್‌ (Heat wave) ಪರಿಸ್ಥಿತಿಗಳು ಮೇಲುಗೈ ಸಾಧಿಸಿವೆ. ಈ ವಾರವೆಲ್ಲ ಇದೇ ಪರಿಸ್ಥಿತಿ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ

VISTARANEWS.COM


on

By

Karnataka Weather Forecast
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ರಾಜ್ಯದಲ್ಲಿ ಒಣ ಹವೆ (Dry Weather) ಮುಂದುವರಿಯಲಿದ್ದು, ತಾಪಮಾನ ಏರಿಕೆ ಆಗಲಿದೆ. ಶಾಖದ ಹೊಡೆತಕ್ಕೆ ಈಗಾಗಲೇ ಜನರು ತತ್ತರಿಸಿ ಹೋಗಿದ್ದಾರೆ. ಹವಾಮಾನ ಇಲಾಖೆಯು ವಿವಿಧ ಜಿಲ್ಲೆಗಳಿಗೆ ರೆಡ್‌, ಆರೆಂಜ್‌, ಯೆಲ್ಲೊ ಅಲರ್ಟ್‌ ನೀಡಿದೆ. ಇದರೊಟ್ಟಿಗೆ ಆರೋಗ್ಯ ಕಾಳಜಿ ವಹಿಸುವಂತೆ ಜನರಿಗೆ ಸಲಹೆ ಸೂಚನೆಗಳನ್ನು ನೀಡಲಾಗಿದೆ.

ಬಿಸಿಗಾಳಿ ಎಚ್ಚರಿಕೆ

ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ, ಕೊಪ್ಪಳ ಜಿಲ್ಲೆಗಳಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ ತೀವ್ರ ಬಿಸಿಗಾಳಿ ಪರಿಸ್ಥಿತಿಗಳು ಮೇಲುಗೈ ಸಾಧಿಸುವ ಸಾಧ್ಯತೆಯಿದೆ. ಬಳ್ಳಾರಿ, ಕಲಬುರಗಿ, ವಿಜಯಪುರ, ರಾಯಚೂರು, ಚಿತ್ರದುರ್ಗ, ದಾವಣಗೆರೆ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ತುಮಕೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಶಾಖದ ಅಲೆಯ ವಾತಾವರಣವು ಹೆಚ್ಚಾಗಿರುತ್ತದೆ. ಉತ್ತರ ಒಳನಾಡು ಭಾಗದಲ್ಲಿ ರಾತ್ರಿ ಹೊತ್ತು ಬೆಚ್ಚಗೆ ಇದ್ದರೆ, ಕರಾವಳಿಯ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಿಸಿ ಗಾಳಿ ಬೀಸಲಿದೆ.

ಇದನ್ನೂ ಓದಿ: Summer Tips: ಬಿಸಿಲಿನ ಆಘಾತದಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡಿ…

ರೆಡ್ ಮತ್ತು ಆರೆಂಜ್‌, ಯೆಲ್ಲೋ ಅಲರ್ಟ್ ಇರುವ ಪ್ರದೇಶಗಳಿವು

ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ, ಕೊಪ್ಪಳ ಜಿಲ್ಲೆಗಳಿಗೆ ರೆಡ್‌ ಅಲರ್ಟ್‌ ಘೋಷಿಸಲಾಗಿದೆ. ಹೀಗಾಗಿ ಈ ಸಮಯದಲ್ಲಿ ಎಲ್ಲ ವಯೋಮಾನದವರಲ್ಲೂ ಅನಾರೋಗ್ಯ ಸಮಸ್ಯೆ ಕಾಡಬಹುದು. ಶಾಖದ ಹೊಡೆತವನ್ನು ತಪ್ಪಿಸಲು ಜನರು ಕಾಳಜಿ ವಹಿಸುವುದು ಅಗತ್ಯವಿದೆ.

ಕಲಬುರಗಿ, ಚಿತ್ರದುರ್ಗ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ತುಮಕೂರು ಮತ್ತು ಯಾದಗಿರಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ. ಹೀಗಾಗಿ ಈ ಪ್ರದೇಶದ ಜನರು ದೀರ್ಘಾವಧಿಯವರೆಗೆ ಸೂರ್ಯನಿಗೆ ಒಡ್ಡಿಕೊಳ್ಳುವ ಅಥವಾ ಭಾರವಾದ ಕೆಲಸವನ್ನು ಮಾಡಬಾರದು.

ಚಿತ್ರದುರ್ಗ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ತುಮಕೂರಿಗೆ ಹಳದಿ ಎಚ್ಚರಿಕೆ ನೀಡಲಾಗಿದೆ. ಮಧ್ಯಮ ತಾಪಮಾನ ಮತ್ತು ಶಾಖವನ್ನು ಸಾಮಾನ್ಯ ಜನರು ಸಹಿಸಿಕೊಳ್ಳಬಹುದು. ಆದರೆ ಶಿಶುಗಳು, ವೃದ್ಧರು, ದೀರ್ಘಕಾಲದ ಕಾಯಿಲೆ ಇರುವವರು ಆರೋಗ್ಯ ಕಾಳಜಿ ವಹಿಸುವುದು ಸೂಕ್ತ.

ಬೆಂಗಳೂರಲ್ಲಿ ತಾಪಮಾನ ಹೆಚ್ಚಳ

ಬೆಂಗಳೂರು ನಗರದಲ್ಲಿ ಮುಖ್ಯವಾಗಿ ನಿರ್ಮಲ ಆಕಾಶವಿರುತ್ತದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 39 ಮತ್ತು 24 ಡಿ.ಸೆ ಇರಲಿದೆ. ತಾಪಮಾನ ಏರಿಕೆಯು ಜನರನ್ನು ಕಂಗಾಲು ಮಾಡಿದೆ. ಇದೇ ವಾತಾವರಣವು ಈ ಪೂರ್ತಿ ಮುಂದುವರಿಯಲಿದೆ.

ಬೆಂಕಿ ಇಲ್ಲದೆ ರಣ ಬಿಸಿಲಲ್ಲೇ ಮೊಟ್ಟೆ ಬೇಯಿಸಿ ಆಮ್ಲೇಟ್ ತಿಂದ ರಾಯಚೂರು ಮಂದಿ

ರಾಯಚೂರು: ಬಿಸಿಲಿನ ತಾಪ ಸಿಕ್ಕಾಪಟ್ಟೆ ಹೆಚ್ಚಾಗುತ್ತಿದೆ. ಬಿಸಿಲು ಈಗಲೇ ಸಹಿಸುವುದಕ್ಕೆ ಅಸಾಧ್ಯವಾಗಿದೆ. ಇದು ಜಸ್ಟ್‌ ಸ್ಯಾಂಪಲ್‌ ಇನ್ನೂ ತಾಪಮಾನ (Temperature Warning ) ಹೆಚ್ಚಾಗಲಿದೆ ಎಂಬ ಮುನ್ಸೂಚನೆ ಹವಾಮಾನ ತಜ್ಞರಿಂದ ದೊರೆತಿದೆ. ಮನೆಯಲ್ಲಿ, ಆಫೀಸ್‌ನಲ್ಲಿ ಎಸಿ ಹಾಕಿಕೊಂಡು ಕುಳಿತುಕೊಳ್ಳುವವರೂ ಕೂಡ ಈ ಬಿಸಿಲಿನ ಝಳಕ್ಕೆ ತತ್ತರಿಸಿದ್ದಾರೆ. ಉರಿಯುತ್ತಿರುವ ಸೂರ್ಯನ ಶಾಖಕ್ಕೆ (Heat wave) ಸ್ವಲ್ಪ ಹೊತ್ತು ಮೈಒಡ್ಡಿದ್ರೆ ಸಾಕು ಸುಟ್ಟು ಹೋಗುವಷ್ಟು ತೀವ್ರತೆ ಇದೆ. ಸದ್ಯ ಈ ಉರಿ ಬಿಸಿಲಿನಲ್ಲೇ ರಾಯಚೂರು ಮಂದಿ ಪ್ರಯೋಗವನ್ನು ಮಾಡಿದ್ದಾರೆ. ಬೆಂಕಿ ಇಲ್ಲದೆ ಬಿಸಿಲಲ್ಲೇ ಮೊಟ್ಟೆ ಬೇಯಿಸಿ ತಿಂದಿದ್ದಾರೆ.

ಜನರು ಈಗಾಗಲೇ ಬಿಸಿಲಿನ ಶಾಖದಿಂದ ತತ್ತರಿಸಿ ಹೋಗಿದ್ದು, ಮನೆಯಿಂದ ಹೊರಗೆ ಬರಲು ಆಗದಷ್ಟು ತಾಪಮಾನ ಹೆಚ್ಚಿದೆ. ಆದರೆ ರಾಯಚೂರು ಜಿಲ್ಲೆಯ ಲಿಂಗಸಗೂರು ಪಟ್ಟಣದಲ್ಲಿ ಯುವಕರು ಪ್ರಯೋಗ ಮಾಡಿದ್ದಾರೆ. ಬಿಸಿಲಿನಿಂದಲೇ ಮೊಟ್ಟೆಯ ಆಮ್ಲೆಟ್ ಮಾಡಿದ್ದಾರೆ.

ಬಿಸಿಲು ಅದ್ಯಾವ ಪರಿ ಇದೆ ಎಂಬ ಕುತೂಹಲಕ್ಕಾಗಿ ಬೆಂಕಿ ಇಲ್ಲದೆ ಬಿಸಿಲಿನಲ್ಲಿ ಒಂದೂವರೆ ಗಂಟೆವರೆಗೆ ಕಬ್ಬಿಣದ ತವಾ ಇಟ್ಟಿದ್ದಾರೆ. ಅದು ಕಾದ ನಂತರ ಮೊಟ್ಟೆ ಒಡೆದು ಆಮ್ಲೆಟ್ ತಯಾರಿಸಿ ತಿಂದಿದ್ದಾರೆ. ರಾಯಚೂರು ಜಿಲ್ಲೆಯಾದ್ಯಂತ ಒಂದು ವಾರದಿಂದ ಪ್ರತಿ ದಿನ 44 ರಿಂದ 45 ಡಿಗ್ರಿ ಸೆಲ್ಸಿಯಸ್‍ ಗರಿಷ್ಠ ಉಷ್ಠಾಂಶ ದಾಖಲಾಗುತ್ತಿದೆ.

ಇದನ್ನೂ ಓದಿ: Yakshagana Artist: ವೇಷ ಕಳಚುತ್ತಿರುವಾಗಲೇ ಹೃದಯ ಸ್ತಬ್ಧ ; ಯಕ್ಷಗಾನ ಕಲಾವಿದ ಗಂಗಾಧರ ಪುತ್ತೂರು ಇನ್ನಿಲ್ಲ

ವಿದ್ಯುತ್‌ ಕಂಬದ ಲೈನ್‌ಗಳಲ್ಲಿ ಶಾರ್ಟ್‌ ಸರ್ಕ್ಯೂಟ್‌

ಇತ್ತ ರಾಯಚೂರಿನಲ್ಲಿ ದಿನೇದಿನೆ ಬಿಸಿಲು ಹೆಚ್ಚಳವಾಗುತ್ತಿದ್ದು, ಏರ್ ಕೂಲರ್ ಮತ್ತು ಎಸಿ ಬಳಕೆ ಅಧಿಕವಾಗಿದೆ. ರಾಯಚೂರು ನಗರದ ಗಾಂಧಿ ಚೌಕ್ ಬಳಿಯ ಖಾಸಗಿ ಆಸ್ಪತ್ರೆ ಪಕ್ಕದಲ್ಲಿ ವಿದ್ಯುತ್ ಲೋಡ್ ಹೆಚ್ಚಾಗಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿದೆ. ಕೂದಲೆಳೆ ಅಂತರದಲ್ಲಿ ಅನಾಹುತ ತಪ್ಪಿದೆ.

ವಿದ್ಯುತ್ ಕಂಬದಲ್ಲಿದ್ದ ಲೈನ್‌ಗಳಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿ ಸಿನಿಮಾ ಸ್ಟೈಲ್‌ನಲ್ಲಿ ಸ್ಪಾರ್ಕ್ ಉಂಟಾಗಿತ್ತು. ಕೆಲ ಹೊತ್ತು ಸ್ಪಾರ್ಕ್ ನೋಡಿದ ಜನರು ಗಾಬರಿ ಆದರು. ಸದರ್ ಬಜಾರ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ರಾಜಕೀಯ

Prajwal Revanna Case: ಪ್ರಜ್ವಲ್‌ ಅಶ್ಲೀಲ ವಿಡಿಯೊ ಪೆನ್‌ಡ್ರೈವ್‌ ವೈರಲ್‌ ಮಾಡಿದ್ದು ಸಚಿವ ಜಮೀರ್‌ ಅಹ್ಮದ್‌ ಆಪ್ತ?

Prajwal Revanna Case: ಹಾಸನ ಜಿಲ್ಲೆ ಬೇಲೂರು ತಾಲೂಕಿನ ನವೀನ್ ಗೌಡ ವಿರುದ್ಧ ಎಫ್‌ಐಆರ್ ದಾಖಲಾಗುತ್ತಲೇ ಈಗ ಜಮೀರ್‌ ಜತೆಗಿರುವ ಫೋಟೊಗಳು ಸೋಷಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಆಗಿವೆ. ಜಮೀರ್ ಅಹಮದ್ ಜತೆ ಹಲವು ಫೋಟೊ ತೆಗೆಸಿಕೊಂಡಿರುವ ನವೀನ್ ಗೌಡ ಮೇಲೆ ಪ್ರಜ್ವಲ್ ರೇವಣ್ಣ ಅವರಿಗೆ ಸಂಬಂಧಿಸಿದ್ದು ಎಂಬ ವಿಡಿಯೊವುಳ್ಳ ಪೆನ್‌ ಡ್ರೈವ್‌ ಹರಿಬಿಟ್ಟ ಆರೋಪದಲ್ಲಿ ಹಾಸನದ ಸೈಬರ್ ಕ್ರೈಮ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

VISTARANEWS.COM


on

Prajwal Revanna Case Minister Zameer Ahmed close aide makes Prajwal obscene video pen drive viral
Koo

ಹಾಸನ: ಹಾಸನ ಸಂಸದ (Hassan MP), ಮಾಜಿ ಸಚಿವ ಎಚ್.ಡಿ. ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ (Prajwal Revanna Case) ಅಶ್ಲೀಲ ವಿಡಿಯೊ ಎನ್ನಲಾದ ಪೆನ್‌ಡ್ರೈವ್‌ ಪ್ರಕರಣಕ್ಕೆ (Hassan Pen Drive Case) ಸಂಬಂಧಪಟ್ಟಂತೆ ಮತ್ತೊಂದು ಸ್ಫೋಟಕ ಸಂಗತಿ ಹೊರಬಿದ್ದಿದೆ. ಪೆನ್ ಡ್ರೈವ್‌ನಲ್ಲಿದ್ದ ಅಶ್ಲೀಲ ವಿಡಿಯೊಗಳನ್ನು ವೈರಲ್ ಮಾಡಿದ್ದು ಪ್ರಭಾವಿ ಕಾಂಗ್ರೆಸ್ ಸಚಿವರ ಆಪ್ತನೇ ಎಂಬ ಶಂಕೆ ಹುಟ್ಟಿಕೊಂಡಿದೆ. ವಿಡಿಯೊ ವೈರಲ್ ಮಾಡಿದ್ದ ನವೀನ್ ಗೌಡ ಪ್ರಭಾವಿ ಸಚಿವ ಜಮೀರ್ ಅಹ್ಮದ್‌ ಖಾನ್ ಆಪ್ತ ಎಂದು ಹೇಳಲಾಗುತ್ತಿದೆ.

ಈ ನಡುವೆ ಈ ಜಮೀರ್‌ ಜತೆಗೆ ನವೀನ್‌ ಗೌಡ ಇರುವ ಫೋಟೊಗಳು ವೈರಲ್‌ ಆಗಿವೆ. ಹಾಸನ ಜಿಲ್ಲೆ ಬೇಲೂರು ತಾಲೂಕಿನ ನವೀನ್ ಗೌಡ ವಿರುದ್ಧ ಎಫ್‌ಐಆರ್ ದಾಖಲಾಗಿರುವ ಬೆನ್ನಲ್ಲೇ ಜಮೀರ್‌ ಜತೆಗಿರುವ ಫೋಟೊಗಳು ಸೋಷಿಯಲ್‌ ಮೀಡಿಯಾಗಳಲ್ಲಿ ಕಾಣಿಸಿಕೊಳ್ಳಲಾರಂಭಿಸಿವೆ.

Prajwal Revanna Case Minister Zameer Ahmed close aide makes Prajwal obscene video pen drive viral

ಜಮೀರ್ ಅಹಮದ್ ಜತೆ ಹಲವು ಫೋಟೊ ತೆಗೆಸಿಕೊಂಡಿರುವ ನವೀನ್ ಗೌಡ ಮೇಲೆ ಪ್ರಜ್ವಲ್ ರೇವಣ್ಣ ಅವರಿಗೆ ಸಂಬಂಧಿಸಿದ್ದು ಎಂಬ ವಿಡಿಯೊವುಳ್ಳ ಪೆನ್‌ ಡ್ರೈವ್‌ ಹರಿಬಿಟ್ಟ ಆರೋಪದಲ್ಲಿ ಹಾಸನದ ಸೈಬರ್ ಕ್ರೈಮ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಸಂಸದ ಪ್ರಜ್ವಲ್ ಅವರ ಚುನಾವಣಾ ಏಜೆಂಟ್ ಈ ಬಗ್ಗೆ ದೂರು ನೀಡಿದ್ದರು. ಹೀಗಾಗಿ ಏಪ್ರಿಲ್ 23ರಂದು ಪ್ರಕರಣವನ್ನು ದಾಖಲು ಮಾಡಿಕೊಳ್ಳಲಾಗಿತ್ತು.

ಆದರೆ, ಈಗ ಸಚಿವ ಜಮೀರ್‌ ಜತೆಗೆ ನವೀನ್‌ ಆತ್ಮೀಯವಾಗಿರುವ ಫೋಟೊಗಳು ವೈರಲ್‌ ಆಗಿದ್ದು, ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ. ಹಾಗಾದರೆ, ಇದನ್ನು ಚುನಾವಣೆ ಸಮಯದಲ್ಲಿ ಬೇಕೆಂದೇ ಮಾಡಲಾಗಿದೆಯೇ? ಅಥವಾ ಇನ್ಯಾವುದೋ ದುರುದ್ದೇಶದಿಂದ ಮಾಡಲಾಗಿದೆಯೇ? ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ

Prajwal Revanna Case Minister Zameer Ahmed close aide makes Prajwal obscene video pen drive viral

ಪ್ರಜ್ವಲ್‌ ಅರೆಸ್ಟ್‌ ಆದಲ್ಲಿ ಎಸ್‌ಐಟಿ ಕೇಳುವ ಪ್ರಶ್ನೆಗಳಿವು! ರೇವಣ್ಣಗೂ ತಟ್ಟುವ ಬಿಸಿ

ಪ್ರಜ್ವಲ್‌ ಎಸ್ಐಟಿ ಅಧಿಕಾರಿಗಳ ಮುಂದೆ ಹಾಜರಾದಲ್ಲಿ ಇಲ್ಲವೇ ಅವರನ್ನು ಬಂಧಿಸಿ ಕರೆತಂದಲ್ಲಿ ಅವರಿಗೆ ಸರಣಿ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಈಗಾಗಲೇ ಹಲವು ಪ್ರಶ್ನೆಗಳನ್ನು ಎಸ್‌ಐಟಿ ಸಿದ್ಧಪಡಿಸಿಟ್ಟುಕೊಂಡಿದೆ ಎನ್ನಲಾಗಿದೆ. ಪ್ರಕರಣ ಸಂಬಂಧ ಸಣ್ಣ ಸಣ್ಣ ಪ್ರಶ್ನೆಗಳನ್ನೂ ಕೇಳಿ ಪ್ರಜ್ವಲ್‌ ಹೇಳಿಕೆಯನ್ನು ದಾಖಲು ಮಾಡಿಕೊಳ್ಳಲಾಗುತ್ತದೆ. ಪ್ರಜ್ವಲ್‌ ಅವರ ವಯಸ್ಸಿನಿಂದ ಹಿಡಿದು ಹಲವು ಪ್ರಶ್ನೆಗಳನ್ನು ಕೇಳಲಿದ್ದಾರೆ. ಆರೋಪಗಳ ಬಗ್ಗೆ ಏನು ಹೇಳುತ್ತೀರಿ? ನೀವೇ ರೆಕಾರ್ಡ್‌ ಮಾಡಿಕೊಂಡಿದ್ದೀರಿ ಎಂಬ ಆರೋಪ ಇದೆ. ರೆಕಾರ್ಡ್‌ಗೆ ಯಾವ ಸಾಧನವನ್ನು ಬಳಸಿಕೊಂಡಿದ್ದೀರಿ. ಡಿಯೋ ಇಟ್ಕೊಂಡು ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದಿರಾ? ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಅದೇ ರೀತಿ ಪ್ರಜ್ವಲ್‌ ರೇವಣ್ಣ ಅವರ ತಂದೆ ಎಚ್.ಡಿ. ರೇವಣ್ಣ ಅವರಿಗೂ ಹಲವು ಪ್ರಶ್ನೆಗಳನ್ನು ಕೇಳಲು ಎಸ್‌ಐಟಿ ರೆಡಿಯಾಗಿದೆ. ನಿಮ್ಮ ಪುತ್ರನ ಮೇಲೆ ಆರೋಪಿವಿರುವುದು ಗಮನಕ್ಕೆ ಬಂದಿತ್ತಾ? ನಿಮ್ಮ ಗಮನಕ್ಕೆ ಬಂದಿದ್ರೆ ಅದರ ಬಗ್ಗೆ ಪ್ರಜ್ವಲ್‌‌ ಜತೆ ಚರ್ಚಿಸಿದ್ದಿರಾ? ಒಂದು ವೇಳೆ ಚರ್ಚೆ ಮಾಡಿದರೆ ನಿಮ್ಮ ಪುತ್ರ ಏನು ಹೇಳಿದ್ದರು? ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಲಾಗುತ್ತದೆ ಎಂದು ಹೇಳಲಾಗಿದೆ.

ಪ್ರಜ್ವಲ್ ರೇವಣ್ಣಗೆ SIT ಕೇಳುವ ಸಂಭಾವ್ಯ ಪ್ರಶ್ನೆಗಳು

1- ಪ್ರಜ್ವಲ್ ಅವರೇ ನಿಮಗೆ ವಯಸ್ಸು ಎಷ್ಟು?
2- ನೀವು ಏನು ಓದಿದ್ದೀರಿ? ಎಲ್ಲಿ ಓದಿದ್ದು?
3- ಎಲೆಕ್ಷನ್ ಮುಗಿದ ತಕ್ಷಣ ತಾವು ಎಲ್ಲಿಗೆ ಹೋದಿರಿ?
4- ನೀವು ಹೆಚ್ಚಾಗಿ ವಾಸವಿರೋದು ಹಾಸನವಾ? ದೆಹಲಿಯಾ? ಅಥವಾ ಬೆಂಗಳೂರಲ್ಲೋ?
5- ನಿಮ್ಮ ಮೇಲೆ ಕೇಳಿ ಬಂದಿರುವ ಆರೋಪಗಳ ಬಗ್ಗೆ ಏನಂತೀರಿ?
6- ಅಸಲಿಗೆ ಅವು ನಿಮ್ಮ ವಿಡಿಯೊಗಳಾ?
7- ವಿಡಿಯೋದಲ್ಲಿರುವ ಧ್ವನಿ ನಿಮ್ಮದಲ್ಲವೇ?
8- ನಿಮ್ಮಿಂದಲೇ ರೆಕಾರ್ಡ್‌ ಎನ್ನಲಾಗುತ್ತಿದೆ, ಹೌದೇ?
9- ರೆಕಾರ್ಡ್ ಮಾಡಲು ಬಳಸಿದ ಸಾಧನ ಯಾವುದು?
10- ನೀವೇ ರೆಕಾರ್ಡ್ ಮಾಡಿದ್ದಂತೆ. ಯಾಕೆ ಮಾಡಿದಿರಿ?
11 – ವಿಡಿಯೋ ಇಟ್ಕೊಂಡು ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದಿರಾ?
12- ನಿಮ್ಮ ಮೋಜಿಗೆ ವಿಡಿಯೊಗಳನ್ನು ಮಾಡಿಕೊಳ್ಳುತ್ತಿದ್ದಿರಾ?
13- ರೆಕಾರ್ಡ್ ಮಾಡುವುದು ತಪ್ಪು ಎಂದು ನಿಮಗೆ ಗೊತ್ತಿಲ್ವೆ?
14- ದೃಶ್ಯಗಳಲ್ಲಿ ಇರುವ ಮಹಿಳೆಯರು ನಿಮಗೆ ಪರಿಚಯವೇ?
15- ಆ ಮಹಿಳೆಯರನ್ನು ನೀವು ಎಲ್ಲಿ ಭೇಟಿ ಮಾಡಿದಿರಿ?
16- ದೈಹಿಕ ಸಂಪರ್ಕ ಬೆಳೆಸಲು ಏನಾದರೂ ಆಮಿಷ ಒಡ್ಡಿದ್ರಾ?
17 – ಅದು ಅತ್ಯಾಚಾರಕ್ಕೆ ಸಮ ಎಂದು ಗೊತ್ತಿದೆಯೇ?
18- ಪ್ರಮೋಷನ್, ಕೆಲಸದ ನೆಪದಲ್ಲಿ ದೈಹಿಕ ಸಂಪರ್ಕ ಮಾಡಿದಿರಾ?
19- ನಿಮಗೇನಾದರೂ ಮಾನಸಿಕ ಸಮಸ್ಯೆ ಇದೆಯಾ?
20- ನೀವು ದೌರ್ಜನ್ಯ ನಡೆಸುತ್ತಿರುವಂತಿದೆ, ಏನಂತೀರಿ?
21- ನೋಟಿಸ್ ಕೊಟ್ಟರೂ 7 ದಿನ ಟೈಮ್ ಯಾಕೆ ಕೇಳಿದಿರಿ?
22- ನೀವು ದೃಶ್ಯ ಶೂಟ್ ಮಾಡಲು ಬಳಸಿದ ಸಾಧನ ಎಲ್ಲಿದೆ?
23- ಬೇರೆ ಯಾರ ಬಳಿಯಾದರೂ ವಿಡಿಯೊ ಶೇರ್ ಮಾಡಿದಿರಾ?
24- ಖಾಸಗಿ ದೃಶ್ಯಗಳು ಹೇಗೆ ಹೊರಗೆ ಬಂದವು ಹೇಳಬಹುದಾ?
25- ನಿಮಗೆ ಕಾರ್ತಿಕ್ ಎಂಬ ವ್ಯಕ್ತಿ ಗೊತ್ತಾ?
26 – ನಿಮಗೂ ಕಾರ್ತಿಕ್‌ಗೂ ಸ್ನೇಹವಿತ್ತಾ?
27 – ನಿಮ್ಮ ವಿರುದ್ಧ ಸುದ್ದಿ ಪ್ರಸಾರವಾಗದಂತೆ ತಡೆ ತಂದಿದ್ದಿರಿ ಯಾಕೆ?
28 – ನಿಮ್ಮ ಮೇಲಿನ ಪಿತೂರಿ ಅಂತಾದರೆ ನೀವ್ಯಾಕೆ ದೂರು ನೀಡಲಿಲ್ಲ?
29 – ನಿಮ್ಮ ವಿರುದ್ಧ ಆರೋಪ ಬಂದ ಕೂಡಲೇ ಯಾಕೆ ದೇಶ ಬಿಟ್ಟು ಹೋದಿರಿ?
30 – ಮನೆಯಲ್ಲಿ ಯಾರ ಬಳಿಯಾದರೂ ಈ ವಿಷಯಗಳನ್ನು ಹೇಳಿಕೊಳ್ಳುತ್ತಿದ್ದಿರಾ?
31 – ಕೆಲಸದಾಕೆಯ ಆರೋಪದ ಬಗ್ಗೆ ಏನಂತೀರಿ?
32 – ಪ್ರಜ್ವಲ್ ನೀವು ತನಿಖೆಗೆ ಸಹಕರಿಸಬೇಕು
33 – ತನಿಖೆ ಪೂರ್ಣವಾಗುವವರೆಗೂ ದೇಶ ಬಿಟ್ಟು ಹೋಗಬೇಡಿ

ಎಂಬಿತ್ಯಾದಿ ಪ್ರಶ್ನೆಗಳನ್ನು ಎಸ್‌ಐಟಿ ಕೇಳಲಿದೆ. ಒಂದು ವೇಳೆ ಇವುಗಳಿಗೆ ಆರೋಪಿ ಪ್ರಜ್ವಲ್‌ ಸ್ಪಂದಿಸದೆ ಸಮರ್ಪಕ ಉತ್ತರ ನೀಡಿದ್ದರೆ ಮುಂದಿನ ಕ್ರಮದ ಬಗ್ಗೆ ಎಸ್‌ಐಟಿ ಚಿಂತನೆ ನಡೆಸಲಿದೆ ಎನ್ನಲಾಗಿದೆ.

ಇದನ್ನೂ ಓದಿ: Prajwal Revanna Case: SIT ಮುಂದೆ ಹಾಜರಾಗಲು ವಿನಾಯಿತಿ ಕೋರಿ ಸಲ್ಲಿಸಿದ್ದ ಅರ್ಜಿ ತಿರಸ್ಕಾರ? ತನಿಖೆಗೆ ಆತುರ ಏಕೆ?

ಎಚ್‌‌‌‌.ಡಿ.ರೇವಣ್ಣಗೆ SIT ಕೇಳುವ ಸಂಭಾವ್ಯ ಪ್ರಶ್ನೆಗಳು!

1) ನಿಮ್ಮ ಹೆಸರೇನು..? ಏನು ಕೆಲಸ ಮಾಡಿಕೊಂಡಿದ್ದೀರಿ..?
2) ಯಾವ ವಿಳಾಸದಲ್ಲಿ ವಾಸವಾಗಿದ್ದೀರಾ? ಎಷ್ಟು ವರ್ಷ..?
3) ನಿಮ್ಮ ಮೇಲೆ ಸಂತ್ರಸ್ತೆ ನೀಡಿದ ದೂರಿನ ಬಗ್ಗೆ ಮಾಹಿತಿ ಇದೆಯಾ?
4) ದೂರು ನೀಡಿರುವ ಮಹಿಳೆ ಪರಿಚಯಸ್ಥರಾ? ಸಂಬಂಧಿನಾ?
5) ಎಷ್ಟು ವರ್ಷಗಳಿಂದ ನಿಮ್ಮ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದಾರೆ..?
6) ದೂರಿನಲ್ಲಿ ಉಲ್ಲೇಖಿಸಿದಂತೆ ಲೈಂಗಿಕ ದೌರ್ಜನ್ಯ ಎಸಗಿದ್ದೀರಾ?
7) ನಿಮ್ಮ ಪುತ್ರನ ಮೇಲೂ ಆರೋಪಿವಿದೆ ಗಮನಕ್ಕೆ ಬಂದಿತ್ತಾ..?
8) ನಿಮ್ಮ ಗಮನಕ್ಕೆ ಬಂದಿದ್ದರೆ ಅದರ ಬಗ್ಗೆ ಪ್ರಜ್ವಲ್‌‌ ಜತೆ ಚರ್ಚಿಸಿದ್ದಿರಾ?
9) ಒಂದು ವೇಳೆ ಚರ್ಚೆ ಮಾಡಿದ್ದರೆ ನಿಮ್ಮ ಪುತ್ರ ಏನು ಹೇಳಿದ್ದರು?
10) ನಿಮ್ಮ ಪುತ್ರನ ಕಾರು ಚಾಲಕ ಕಾರ್ತಿಕ್ ಎಷ್ಟು ವರ್ಷಗಳಿಂದ ಕೆಲಸ ಮಾಡುತ್ತಿದ್ದ ?
11) ನಿಮ್ಮ ಡ್ರೈವರ್ ಕಾರ್ತಿಕ್ ಜತೆ ಏನಾದರೂ ಗಲಾಟೆ ಆಗಿತ್ತಾ?
12) ವಿಡಿಯೊ ನಾನೇ ಕೊಟ್ಟಿದ್ದು ಎಂದು ಕಾರ್ತಿಕ್ ಹೇಳಿಕೆ ನೀಡಿದ್ದಾರಲ್ವಾ, ಇದು ಸತ್ಯನಾ?
13) ಪೆನ್‌ಡ್ರೈವ್‌ನಲ್ಲಿರೋ ವಿಡಿಯೊ ಪ್ರಜ್ವಲ್ ರೇವಣ್ಣನವರೆದ್ದೇನಾ..?
14) ಇಲ್ಲ ಅಂದಾದರೆ ಕೋರ್ಟ್‌ನಲ್ಲಿ ಸ್ಟೇ ತಂದಿದ್ದು ಯಾಕೆ?
15) ಮನೆ ಕೆಲಸದವಳು ಮಾಡುವ ಆರೋಪಕ್ಕೆ ನಿಮ್ಮ ಪ್ರತಿಕ್ರಿಯೆ ಏನು?

Continue Reading

ಬೆಂಗಳೂರು

Assault Case : ವಿವಾಹಿತೆ ಹಿಂದೆ ಬಿದ್ದ ಪಾಗಲ್‌ ಪ್ರೇಮಿ; ಮದುವೆ ನಿರಾಕರಿಸಿದ್ದಕ್ಕೆ ಮನೆಗೆ ಇಟ್ಟ ಬೆಂಕಿ

Assault Case : ಮದುವೆಗೆ ಒಲ್ಲೆ ಎಂದಿದ್ದಕ್ಕೆ ಪಾಗಲ್‌ ಪ್ರೇಮಿಯೊಬ್ಬ ವಿವಾಹಿತ ಮಹಿಳೆಯ ಮನೆಗೆ ಬೆಂಕಿ ಹಚ್ಚಿದ್ದಾನೆ. ಪ್ರಕರಣ ಸಂಬಂಧ ಪೊಲೀಸರು ಆರೋಪಿಯನ್ನು ಬಂಧಿಸಿ, ತನಿಖೆಯನ್ನು ಮುಂದುವರಿಸಿದ್ದಾರೆ.

VISTARANEWS.COM


on

By

assault case in Bengaluru
Koo

ಬೆಂಗಳೂರು: ವಿವಾಹಿತ ಮಹಿಳೆಯ (Assault Case) ಹಿಂದೆ ಬಿದ್ದ ಪಾಗಲ್‌ ಪ್ರೇಮಿಯೊಬ್ಬ, ಮದುವೆ ಆಗುವಂತೆ ಪೀಡಿಸುತ್ತಿದ್ದ. ಮದುವೆಗೆ ಮಹಿಳೆ ನಿರಾಕರಿಸಿದ್ದಕ್ಕೆ ಆಕೆ ಮನೆಗೆ ಬೆಂಕಿ ಇಟ್ಟಿದ್ದಾನೆ. ಬೆಂಗಳೂರಿನ ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಸಾರಾಯಿಪಾಳ್ಯದಲ್ಲಿ ಘಟನೆ ನಡೆದಿದೆ.

ಅರ್ಬಾಜ್ ಎಂಬಾತನಿಂದ ಈ ಕೃತ್ಯ ನಡೆದಿದೆ. ಮಹಿಳೆಗೆ ದೂರದ ಸಂಬಂಧಿಯಾಗಿದ್ದ ಅರ್ಬಾಜ್, ಇತ್ತೀಚೆಗೆ ತನ್ನ ವಾರಸೆ ಬದಲಾಯಿಸಿಕೊಂಡಿದ್ದ. ಮಹಿಳೆಗೆ ಮದುವೆ ಆಗಿದ್ದರೂ, ತನ್ನನ್ನು ಮದುವೆ ಆಗು ಎಂದು ಪೀಡಿಸುತ್ತಿದ್ದ. ಇದರಿಂದ ಬೇಸತ್ತ ಮಹಿಳೆ ಮನೆಯವರಿಗೆ ವಿಚಾರ ತಿಳಿಸಿದ್ದಳು. ಹೀಗಾಗಿ 2 ಕುಟುಂಬದ ಹಿರಿಯರು ಅರ್ಬಾಜ್‌ಗೆ ಬುದ್ಧಿವಾದ ಹೇಳಿದ್ದರು.

ಆದರೂ ಮಹಿಳೆಗೆ ಆಗಾಗ ಫೋನ್‌ ಮಾಡಿ ಗಲಾಟೆ ಮಾಡುತ್ತಿದ್ದ. ಹೀಗಿರುವಾಗ ಗುರುವಾರ ಮುಂಜಾನೆ 4 ಗಂಟೆ ಸುಮಾರಿಗೆ ಮಹಿಳೆ ಮನೆ ಬಳಿ ಬಂದವನೇ ಬೆಂಕಿ ಇಟ್ಟಿದ್ದಾನೆ. ಅದೃಷ್ಟವಶಾತ್‌ ಆ ಸಮಯದಲ್ಲಿ ಮನೆಯಲ್ಲಿ ಯಾರು ಇರಲಿಲ್ಲ. ಬೆಂಕಿ ಬಿದ್ದಿದ್ದರಿಂದ ಮನೆಯಲ್ಲಿದ್ದ ಬಟ್ಟೆಗಳು, ಟಿವಿ, ಫ್ರಿಡ್ಜ್ ಬೆಂಕಿಗಾಹುತಿ ಆಗಿವೆ.

ಸದ್ಯ ಈ ಬಗ್ಗೆ ಸಂಪಿಗೆಹಳ್ಳಿ ಪೊಲೀಸ್ ಠಾಣೆಗೆ ಸಂತ್ರಸ್ತೆ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಅರ್ಬಾಜ್‌ನನ್ನು ಬಂಧಿಸಿದ್ದಾರೆ. ಈ ಸಂಬಂಧ ತನಿಖೆಯನ್ನು ಮುಂದುವರಿಸಿದ್ದಾರೆ.

ಇದನ್ನೂ ಓದಿ: Crime News : 6 ವರ್ಷದ ಬಾಲಕಿಯ ಅಪಹರಿಸಲು ಯತ್ನಿಸಿದ ದುಷ್ಟ; ಹಿಟ್‌ ಆ್ಯಂಡ್‌ ರನ್‌ ಮಾಡಿ ಚಾಲಕರಿಬ್ಬರು ಎಸ್ಕೇಪ್‌

Self Harming : ಕಲಬುರಗಿಯಲ್ಲಿ ಜಾತಿ ನಿಂದನೆ ಕೇಸ್‌ಗೆ ಹೆದರಿ ಯುವಕ ಆತ್ಮಹತ್ಯೆ

ಕಲಬುರಗಿ: ಜಾತಿ ನಿಂದನೆ ಕೇಸ್ (Case of casteist slurs) ದಾಖಲಿಸಿದಕ್ಕೆ ಹೆದರಿದ ಯುವಕ ಆತ್ಮಹತ್ಯೆ (Self Harming) ಮಾಡಿಕೊಂಡ ಘಟನೆ ಕಲಬುರಗಿ ಜಿಲ್ಲೆಯ (Kalaburagi News) ಕಮಲಾಪುರ ತಾಲ್ಲೂಕಿನ ಲಾಡಮುಗಳಿ ಗ್ರಾಮದಲ್ಲಿ ನಡೆದಿದೆ. ನಿಖಿಲ್ ಪೂಜಾರಿ (23) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟವರು.

ನಾಲ್ಕು ದಿನದ ಹಿಂದೆ ಲಾಡಮುಗುಳಿ ಗ್ರಾಮದಲ್ಲಿ ಜಾತ್ರೆ ವೇಳೆ ಗಲಾಟೆ ನಡೆದಿತ್ತು. ಈ ವೇಳೆ ಕ್ಷುಲ್ಲಕ‌ ವಿಚಾರಕ್ಕೆ ಎರಡು ಸಮುದಾಯದ ಯುವಕರ ನಡುವೆ ಗಲಾಟೆ ನಡೆದಿತ್ತು. ಗಲಾಟೆಯ ಬಳಿಕ ಊರವರ ಸಮ್ಮುಖದಲ್ಲಿ ರಾಜಿ ಸಂಧಾನ ಕೂಡ ನಡೆದಿತ್ತು. ಬಳಿಕ ಇನ್ನೊಂದು ಸಮುದಾಯ ಯುವಕರು ನಿಖಿಲ್ ಪೂಜಾರಿ ಸೇರಿ ಹಲವರ ವಿರುದ್ಧ ದೂರು ನೀಡಿದ್ದರು.

ನರೋಣಾ ಪೊಲೀಸ್ ಠಾಣೆಯಲ್ಲಿ ನಿಖಿಲ್ ಸೇರಿ ಹಲವರ ವಿರುದ್ಧ ಜಾತಿ ನಿಂದನೆ ಕೇಸ್ ದಾಖಲಾಗಿತ್ತು. ಇದರಿಂದ ಹೆದರಿದ ನಿಖಿಲ್‌ ಲಾಡಮುಗಳಿ ಗ್ರಾಮದ ಹೊರವಲಯದ ಜಮೀನಿನಲ್ಲಿ ಮರಕ್ಕೆ ನೇಣಿಗೆ ಶರಣಾಗಿದ್ದಾನೆ.

Self Harming in kalaburagi

ಇನ್ನೂ ಯುವಕನ ಕುಟುಂಬಸ್ಥರು ಹಾಗೂ ಸಮುದಾಯದವರು ನ್ಯಾಯಕ್ಕಾಗಿ ಕಲಬುರಗಿಗೆ ಶವ ತರಲು ಮುಂದಾದರು. ಮಿಲಿಟರಿಯವರು ನಡುರಸ್ತೆಯಲ್ಲಿ ತಡೆದ ಹಿನ್ನೆಲೆಯಲ್ಲಿ ಲಾಡ ಮುಗಳಿ ಗ್ರಾಮದ ಹೊರವಲಯದಿಂದ ಮೃತದೇಹವನ್ನು ಹೊತ್ತಿಕೊಂಡು ಬರುತ್ತಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Viral News
ವೈರಲ್ ನ್ಯೂಸ್8 mins ago

Viral News: ದೂರದ ಇಂಗ್ಲೆಂಡ್‌ನಲ್ಲಿಯೂ ಕೇರಳ ಕಲರವ; ನೆಟ್ಟಿಗರ ಗಮನ ಸೆಳೆದ ವಿಡಿಯೊ ಇಲ್ಲಿದೆ

Prajwal Revanna Case Prajwal arrives in Dubai from Germany
ಕ್ರೈಂ10 mins ago

Prajwal Revanna Case: ಜರ್ಮನಿಯಿಂದ ದುಬೈಗೆ ಹಾರಿದ ಪ್ರಜ್ವಲ್‌ ರೇವಣ್ಣ! ತನಿಖೆ ದಿಕ್ಕು ತಪ್ಪಿಸಿ, ದಿನ ದೂಡಲು ತಂತ್ರ?

Karnataka Weather Forecast
ಮಳೆ19 mins ago

Karnataka Weather : ರಾಜ್ಯದಲ್ಲಿ ಮುಂದುವರಿಯಲಿದೆ ಶಾಖದ ಹೊಡೆತ

Chandrayaan 3
ದೇಶ31 mins ago

Chandrayaan 3: ಇತಿಹಾಸ ಸೃಷ್ಟಿಸಿ ಚಂದ್ರನ ಮಡಿಲಲ್ಲಿ ಮಲಗಿದ ವಿಕ್ರಮ್‌ ಲ್ಯಾಂಡರ್‌, ಪ್ರಜ್ಞಾನ್‌ ರೋವರ್; ಇಲ್ಲಿವೆ Photos

Amitabh Bachchan vanity van ambition was to pee by Vidhu Vinod Chopra
ಬಾಲಿವುಡ್31 mins ago

Amitabh Bachchan: ಅಮಿತಾಭ್‌ ಬಚ್ಚನ್‌ ವ್ಯಾನ್‌ನಲ್ಲಿ ಸುಸ್ಸು ಮಾಡೋದೇ ನನ್ನ ಗುರಿ ಎಂದ ಖ್ಯಾತ ನಿರ್ದೇಶಕ!

Prajwal Revanna Case Minister Zameer Ahmed close aide makes Prajwal obscene video pen drive viral
ರಾಜಕೀಯ36 mins ago

Prajwal Revanna Case: ಪ್ರಜ್ವಲ್‌ ಅಶ್ಲೀಲ ವಿಡಿಯೊ ಪೆನ್‌ಡ್ರೈವ್‌ ವೈರಲ್‌ ಮಾಡಿದ್ದು ಸಚಿವ ಜಮೀರ್‌ ಅಹ್ಮದ್‌ ಆಪ್ತ?

T20 World Cup
ಕ್ರೀಡೆ41 mins ago

T20 World Cup: ರೋಹಿತ್​, ಅಗರ್ಕರ್​ ಜಂಟಿ ಸುದ್ದಿಗೋಷ್ಠಿಗೆ ಕ್ಷಣಗಣನೆ

Deepak Chahar
ಪ್ರಮುಖ ಸುದ್ದಿ42 mins ago

Deepak Chahar : ಸಹೋದರನನ್ನು ಗೇಲಿ ಮಾಡಿದವರಿಗೆ ತಿರುಗೇಟು ಕೊಟ್ಟ ದೀಪಕ್ ಚಾಹರ್​ ಸಹೋದರಿ!

Viral video
ವೈರಲ್ ನ್ಯೂಸ್45 mins ago

Viral Video:ಶಾಕಿಂಗ್‌ ವಿಡಿಯೋ! ಮಗನನ್ನು ಟ್ರೆಡ್‌ಮಿಲ್‌ನಲ್ಲಿ ಓಡಿಸಿ ಪ್ರಾಣವನ್ನೇ ತೆಗೆದ ಪಾಪಿ ತಂದೆ

assault case in Bengaluru
ಬೆಂಗಳೂರು53 mins ago

Assault Case : ವಿವಾಹಿತೆ ಹಿಂದೆ ಬಿದ್ದ ಪಾಗಲ್‌ ಪ್ರೇಮಿ; ಮದುವೆ ನಿರಾಕರಿಸಿದ್ದಕ್ಕೆ ಮನೆಗೆ ಇಟ್ಟ ಬೆಂಕಿ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ12 hours ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ2 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20243 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20243 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Vote Jihad
Lok Sabha Election 20244 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20244 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20244 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20244 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest4 days ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

ಟ್ರೆಂಡಿಂಗ್‌