ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯ ಕಾಂಗ್ರೆಸ್ ಸ್ಪರ್ಧಿಗಳ ಮೊದಲ ಪಟ್ಟಿ ಪ್ರಕಟವಾಗಿದ್ದು, ಸಿದ್ದರಾಮಯ್ಯ ಅವರು ವರುಣಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.
ಈ ಪಟ್ಟಿಯಲ್ಲಿ ಕೋಲಾರ ಹಾಗೂ ಬಾದಾಮಿ ಕ್ಷೇತ್ರಗಳ ಸ್ಪರ್ಧಿಗಳ ಹೆಸರು ಇನ್ನೂ ಪ್ರಕಟಿಸಿಲ್ಲ. ಹೀಗಾಗಿ ಈ ಎರಡರಲ್ಲಿ ಒಂದು ಕಡೆಯಿಂದ ಸಿದ್ದರಾಮಯ್ಯನವರು ಸ್ಪರ್ಧಿಸುವ ಸಾಧ್ಯತೆ ದಟ್ಟವಾಗಿದೆ.
124 ಕ್ಷೇತ್ರಗಳಿಗೆ ಸ್ಪರ್ಧಿಗಳ ಹೆಸರು ಅಂತಿಮಗೊಳಿಸಲಾಗಿದೆ. ಈ ನಡುವೆ ಮುನಿಯಪ್ಪ ಅವರು ದೇವನಹಳ್ಳಿ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು, ಅವರು ರಾಜ್ಯ ರಾಜಕಾರಣಕ್ಕೆ ಮರಳಿದ್ದಾರೆ. ಮುನಿಯಪ್ಪ ದೇವನಹಳ್ಳಿಯಿಂದ ನಿಲ್ಲಲಿದ್ದಾರೆ ಎಂದು ವಿಸ್ತಾರ ನ್ಯೂಸ್ ನಾಲ್ಕು ತಿಂಗಳ ಹಿಂದೆಯೇ ವರದಿ ಮಾಡಿತ್ತು.
ಇನ್ನುಳಿದಂತೆ ಡಿ.ಕೆ ಶಿವಕುಮಾರ್ ಕನಕಪುರದಲ್ಲಿ, ಜಿ.ಪರಮೇಶ್ವರ್ ಕೊರಟಗೆರೆಯಲ್ಲಿ, ಪುಟ್ಟಣ್ಣ ರಾಜಾಜಿನಗರದಲ್ಲಿ, ದಿನೇಶ್ ಗುಂಡೂರಾವ್ ಗಾಂಧಿನಗರದಲ್ಲಿ, ಕೃಷ್ಣಬೈರೇಗೌಡ ಬ್ಯಾಟರಾಯನಪುರದಲ್ಲಿ, ಸತೀಶ ಜಾರಕಿಹೊಳಿ ಯಮಕನಮರಡಿಯಲ್ಲಿ, ಎಂ.ಬಿ ಪಾಟೀಲ್ ಬಬಲೇಶ್ವರದಲ್ಲಿ ಸ್ಪರ್ಧೆಗೆ ಅವಕಾಶ ಪಡೆದಿದ್ದಾರೆ.
ಮೊದಲ ಹಂತದ ಪಟ್ಟಿಯಲ್ಲಿ ನಂಜನಗೂಡು ಟಿಕೆಟ್ ಕ್ಲಿಯರ್ ಮಾಡಲಾಗಿದ್ದು, ದಿವಂಗತ ಧ್ರುವನಾರಾಯಣ ಅವರ ಪುತ್ರ ದರ್ಶನ್ ಅವರಿಗೆ ನೀಡಲಾಗಿದೆ. ಅನುಕಂಪದ ಅಲೆಯ ಮೇಲೆ ಗೆಲ್ಲಬಹುದು ಎಂಬ ಲೆಕ್ಕಾಚಾರವಿದೆ.
ಕಾಂಗ್ರೆಸ್ ಪೂರ್ಣ ಪಟ್ಟಿ ಇಲ್ಲಿದೆ:
ಇದನ್ನೂ ಓದಿ: Karnataka Elections : ವರುಣಾದಿಂದಲೇ ಸಿದ್ದರಾಮಯ್ಯ ಸ್ಪರ್ಧೆ, ಬಾದಾಮಿಯಿಂದಲೂ ಟಿಕೆಟ್ ಕೋರಿಕೆ?