Site icon Vistara News

Congress Guarantee: ʼಸ್ಯಾಡಿಸ್ಟ್‌ʼ ಜನರಿಗೆ ಕಾಂಗ್ರೆಸ್ ಗ್ಯಾರಂಟಿ ಇಷ್ಟವಾಗಿಲ್ಲ, ನಿಲ್ಲಿಸೋದೇ ಒಳಿತು ಎಂದ ಲಕ್ಷ್ಮಣ್‌!

Congress Guarantee

ಮೈಸೂರು: ಗ್ಯಾರಂಟಿಗಳನ್ನು ನೀಡಿದರೂ ಲೋಕಸಭಾ ಚುನಾವಣೆಯಲ್ಲಿ (Lok Sabha Election 2024) ಕಾಂಗ್ರೆಸ್‌ಗೆ ಬೆಂಬಲ ಸೂಚಿಸದ ಹಿನ್ನೆಲೆಯಲ್ಲಿ ಮತದಾರರ ವಿರುದ್ಧ ಮೈಸೂರು-ಕೊಡಗು ಕ್ಷೇತ್ರದ ಪರಾಜಿತ ಕಾಂಗ್ರೆಸ್‌ ಅಭ್ಯರ್ಥಿ ಎಂ.ಲಕ್ಷ್ಮಣ್‌ (M. Lakshman) ಅಸಮಾಧಾನ ಹೊರಹಾಕಿದ್ದಾರೆ. ಜನರಿಗೆ ಕಾಂಗ್ರೆಸ್ ಗ್ಯಾರಂಟಿ (Congress Guarantee) ಇಷ್ಟ ಆಗಿಲ್ಲ. ಅದನ್ನು ಫಲಿತಾಂಶದ ಮೂಲಕ ತೋರಿಸಿದ್ದಾರೆ. ಬಿಜೆಪಿ ನಮ್ಮ ಗ್ಯಾರಂಟಿಗಳ ವಿರುದ್ಧ ಮಾತನಾಡುತ್ತಿತ್ತು. ಆದರೂ ಅವರನ್ನು ಜನ ಬೆಂಬಲಿಸಿದ್ದಾರೆ. ಹೀಗಾಗಿ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದೇ ಒಳಿತು ಎಂದು ಪರಾಜಿತ ಕಾಂಗ್ರೆಸ್‌ ಅಭ್ಯರ್ಥಿ ಎಂ. ಲಕ್ಷ್ಮಣ್‌ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಜನರಿಗೆ ಗ್ಯಾರಂಟಿಗಳು ಇಷ್ಟವಿಲ್ಲ ಎಂಬುವುದು ಫಲಿತಾಂಶದ ಮೂಲಕ ತೋರಿಸಿದ್ದಾರೆ. ಹೀಗಾಗಿ ನಿಲ್ಲಿಸುವುದು ಒಳಿತು. ಗ್ಯಾರಂಟಿ ಯೋಜನೆಗಳ ಬಗ್ಗೆ ಮುಖ್ಯಮಂತ್ರಿಗಳು ಮರು ಪರಿಶೀಲನೆ ಮಾಡಬೇಕು ಎಂದು ಕೋರಿದ್ದಾರೆ.

ಇದನ್ನೂ ಓದಿ | Election Results 2024: ಡಿ.ಕೆ. ಸುರೇಶ್ ಸೋಲಿಗೆ ಸಿದ್ದರಾಮಯ್ಯ ಆ್ಯಂಡ್ ಟೀಮ್ ಕಾರಣ: ಶಾಸಕ ಸುರೇಶ್ ಗೌಡ ಸ್ಫೋಟಕ ಹೇಳಿಕೆ

ಶೇ.70 ರಷ್ಟು ಮೇಲ್ವರ್ಗದವರು ಈ ಯೋಜನೆಗಳ ಫಲಾನುಭವಿಗಳಾಗಿದ್ದಾರೆ. ಆದರೆ, ಅದನ್ನು ಜನರು ತಿರಸ್ಕಾರ ಮಾಡಿದ್ದಾರೆ. ಬೆಂಜ್ ಕಾರ್ ಹೊಂದಿರುವವನು, 25 ಸಾವಿರ ರೂ. ಸಂಬಳ ಪಡೆಯುವ ವ್ಯಕ್ತಿಗೆ ಪುಕ್ಕಟೆ ಕರೆಂಟ್ ಕೊಟ್ಟರೆ ಹೇಗೆ? ಈಗಲೂ ಗ್ಯಾರಂಟಿ ಹಣದಿಂದಲೇ ಜೀವನ ನಡೆಸುವ ಜನ ಇದ್ದಾರೆ. ಅಂತಹವರನ್ನು ನೋಡಿ ಗ್ಯಾರಂಟಿ ಮರು ಪರಿಶೀಲಿಸುವ ಮಾಡುವ ಅಗತ್ಯ ಇದೆ ಎಂದು ಹೇಳಿದ್ದಾರೆ.

ಗ್ಯಾರಂಟಿ ಅನುಕೂಲ ಪಡೆದು ವೋಟ್‌ ಹಾಕದವರಿಗೆ ಉದಾಹರಣೆ ನೀಡುತ್ತಾ, ಹುಣಸೂರಿನ ಹಲವು ಹಳ್ಳಿಗಳಲ್ಲಿ ಕೇವಲ ಒಂದೇ ಸಮುದಾಯದವರು ಇದ್ದಾರೆ. ಅಲ್ಲಿ ಬಿಜೆಪಿಗೆ 600ಕ್ಕೂ ಹೆಚ್ಚು ಮತ ನೀಡಿದ್ದಾರೆ. ನನಗೆ ಕೇವಲ ಮೂರು, ಏಳು ಮತಗಳನ್ನು ನೀಡಿದ್ದಾರೆ. ಒಕ್ಕಲಿಗರು ನನಗೆ ಮತ ಹಾಕಿಲ್ಲ ಎಂದು ಅಸಮಾಧಾನ ಹೊರ ಹಾಕಿದ್ದಾರೆ.

ಮತದಾರರು ‌ʼಸ್ಯಾಡಿಸ್ಟ್ʼ ಎಂದು ಟೀಕೆ

ಮತದಾರರನ್ನು ಸ್ಯಾಡಿಸ್ಟ್ ಎಂದು ಕರೆದಿರುವ ಎಂ.ಲಕ್ಷ್ಮಣ್, ನನ್ನನ್ನು ಸೋಲಿಸಿ ಬೇಜಾರಿಲ್ಲ. ಆದರೆ ಸಿದ್ದರಾಮಯ್ಯ ಏನು ತಪ್ಪು ಮಾಡಿದ್ದಾರೆ. ತವರು ಜಿಲ್ಲೆಯಲ್ಲೇ ಎಷ್ಟು ಬಾರಿ ಅಪಮಾನ ಮಾಡುತ್ತೀರಿ? ಇಷ್ಟರ ಮಟ್ಟಿಗೆ ಸ್ಯಾಡಿಸ್ಟಿಕ್ ನೇಚರ್ ಇದ್ದರೆ ಹೇಗೆ? ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದರು. ಐದು ರೂಪಾಯಿ ಕೊಟ್ಟಿದ್ರಾ? ಆದರೆ ಸಿದ್ದರಾಮಯ್ಯ ಎಷ್ಟು ಕೆಲಸ ಮಾಡಿದ್ದಾರೆ. ಜಯದೇವ ಆಸ್ಪತ್ರೆ ಸೇರಿ ಮೈಸೂರಿಗೆ ಎಷ್ಟು ಕೊಡುಗೆ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಅವರಂಥ ಕ್ಲೀನ್ ಇಮೇಜ್ ಇರುವ ಸಿಎಂ ದೇಶದಲ್ಲಿ ಬೇರೆ ಎಲ್ಲಾದರೂ ಇದ್ದಾರಾ? ಸಾಹೇಬರು ಯಾವುದನ್ನೂ ಹೇಳಿಕೊಳ್ಳೋದಿಲ್ಲ. ಆದರೆ ಮೈಸೂರಿನ ಜನ ಸಿದ್ದರಾಮಯ್ಯ ಅವರಿಗೆ ಎಷ್ಟೋ ಬಾರಿ ನೋವು ಕೊಡ್ತೀರಿ? ಎಂದು ಮತದಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಅಭ್ಯರ್ಥಿ ಯದುವೀರ್ ಜನರನ್ನು ಎಷ್ಟರ ಮಟ್ಟಿಗೆ ಅರಮನೆಗೆ ಬಿಟ್ಟುಕೊಳ್ಳುತ್ತಾರೋ, ಇಲ್ಲವೋ ಗೊತ್ತಿಲ್ಲ.
ನಾಳೆಯಿಂದಲೇ ನಾನು ಜನರ ಸಮಸ್ಯೆ ಪರಿಹರಿಸಲು ಮುಂದಾಗುತ್ತೇನೆ. ನನಗೆ ಮತ ಕೊಟ್ಟವರು, ಕೊಡದೇ ಇರುವವರು ಎಲ್ಲರೂ ನನ್ನ ಸಂಪರ್ಕ ಮಾಡಬಹುದು. ನಾಳೆಯೇ ನನ್ನ ಕಚೇರಿ ಸಹ ತೆರೆಯುತ್ತೇನೆ. ಆ ಕಚೇರಿಗೆ ಎಲ್ಲರಿಗೂ ಮುಕ್ತ ಅವಕಾಶ ಇದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | Kangana Ranaut: ಕಾರಣ ಇದ್ದರೆ ಕೊಲೆ, ಅತ್ಯಾಚಾರ ಮಾಡಬಹುದೆ? ; ವಿರೋಧಿಗಳ ವಿರುದ್ಧ ಗುಡುಗಿದ ಕಂಗನಾ

ಕಾಂಗ್ರೆಸ್ ಯಾವತ್ತೂ ಜಾತಿ ರಾಜಕಾರಣ ಮಾಡಿಲ್ಲ

ಕಾಂಗ್ರೆಸ್ ಯಾವತ್ತೂ ಜಾತಿ ರಾಜಕಾರಣ ಮಾಡಿಲ್ಲ. ಆದರೂ ಚುನಾವಣೆ ವೇಳೆ ನನ್ನನ್ನು ಒಕ್ಕಲಿಗನೇ ಅಲ್ಲ ಅಂದು ಪ್ರಚಾರ ಮಾಡಿದರು. ಹಳೇ ಮೈಸೂರು ಭಾಗದಲ್ಲಿ 8 ಜನ ಒಕ್ಕಲಿಗರಿಗೆ ಕಾಂಗ್ರೆಸ್ ಟಿಕೆಟ್ ನೀಡಿತು. ಒಬ್ಬ ಒಕ್ಕಲಿಗನನ್ನು ನೀವು ಆಯ್ಕೆ ಮಾಡಿಕೊಳ್ಳಲಿಲ್ಲ? ಮೈಸೂರಿನಲ್ಲಿ ಹಲವು ವರ್ಷಗಳ ನಂತರ ಒಕ್ಕಲಿಗೆ ಸಮುದಾಯಕ್ಕೆ ಟಿಕೆಟ್ ನೀಡಿದ್ದರು. ಈ ಅವಕಾಶವನ್ನೂ ನೀವು ಕೈ ಚೆಲ್ಲಿದ್ದೀರಿ ಎಂದು ಸಮುದಾಯದ ವಿರುದ್ಧ ಬೇಸರ ಹೊರಹಾಕಿದ್ದಾರೆ.

Exit mobile version