ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ (Karnataka Election 2023) ಸಂಬಂಧಿಸಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯನ್ನು (Congress Manifesto) ಬಿಡುಗಡೆ ಮಾಡಿದ್ದು, ಈ ಹಿಂದೆ ಘೋಷಿಸಿದ್ದ ಪಂಚ ಯೋಜನೆಗಳ ಜತೆಗೆ ಇನ್ನೂ ಹಲವು ವಿಚಾರಗಳನ್ನು ಪ್ರಸ್ತಾಪಿಸಿದೆ. ಇದರಲ್ಲಿ ಪ್ರಮುಖವಾಗಿರುವುದು ಮೀಸಲಾತಿಯನ್ನು ಶೇ. 50ರಿಂದ 75ಕ್ಕೇರಿಸುವುದು, ಬಜರಂಗ ದಳ ಸಂಘಟನೆ ನಿಷೇಧ ಪ್ರಸ್ತಾಪ, ಸರ್ಕಾರಿ ನೌಕರರಿಗೆ ಹಳೆ ಪಿಂಚಣಿ ಯೋಜನೆ ಮುಂದುವರಿಕೆ ಸೇರಿದೆ.
ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ವಲಯವಾರು ಮತ್ತು ಪ್ರದೇಶವಾರು ಭರವಸೆಗಳನ್ನು ನೀಡಿದಂತೆ ಕಾಂಗ್ರೆಸ್ ಕೂಡಾ ಇದೇ ಮಾದರಿಯಲ್ಲಿ ಭರವಸೆಗಳನ್ನು ನೀಡಲಾಗಿದೆ.
ಇಲ್ಲಿವೆ ಕಾಂಗ್ರೆಸ್‌ನ ಟಾಪ್ 25 ವಾಗ್ದಾನಗಳು
1. ಗೃಹ ಜ್ಯೋತಿ ಯೋಜನೆಯಡಿ ಮನೆಗಳಿಗೆ 200 ಯುನಿಟ್ ಉಚಿತ ವಿದ್ಯುತ್
2. ಯುವನಿಧಿ ಯೋಜನೆಯಡಿ ಡಿಪ್ಲೊಮಾ ಆದವರಿಗೆ 1500 ರೂ, ಪದವೀಧರರಿಗೆ 3000 ರೂ. ನಿರುದ್ಯೋಗ ಭತ್ಯೆ
3. ಅನ್ನ ಭಾಗ್ಯ ಯೋಜನೆಯಡಿ ಪ್ರತಿ ಕುಟುಂಬಕ್ಕೆ ಐದು ಕೆಜಿ ಅಕ್ಕಿ
4. ಗೃಹ ಲಕ್ಷ್ಮಿ ಯೋಜನೆಯಡಿ ಮನೆಯ ಯಜಮಾನಿಗೆ 2000 ರೂ.
5. ಶಕ್ತಿ ಯೋಜನೆಯಡಿ ಎಲ್ಲ ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣದ ಅವಕಾಶ.
6. 2006ರಿಂದ ನೇಮಕವಾದ, ಪಿಂಚಣಿಗೆ ಅರ್ಹತೆಯುಳ್ಳ ಎಲ್ಲ ಸರ್ಕಾರಿ ಮತ್ತು ಅನುದಾನಿತ ಉದ್ಯೋಗಿಗಳನ್ನು ಹಳೆಯ ಪಿಂಚಣಿ ಯೋಜನೆಯಡಿಯಲ್ಲಿ ತರಲು ಸಹಾನುಭೂತಿಯ ನಿರ್ಧಾರ.
7. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ 15-20 ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ನೌಕರರನ್ನು ರಾಜಸ್ಥಾನ, ಹಿಮಾಚಲ ಪ್ರದೇಶ ಮಾದರಿಯಲ್ಲಿ ಕಾಯಂ
8. ಅಂಗನವಾಡಿಯ ಕಾರ್ಯಕರ್ತೆಯರ ವೇತನ 7,500 ರೂ.ಗಳಿಂದ 10,000 ರೂ.ಗಳಿಗೆ ಏರಿಕೆ, 2 ಲಕ್ಷ ರೂ. ವಿಶ್ರಾಂತಿ ವೇತನ. ಆಶಾ ಕಾರ್ಯಕರ್ತೆಯರ ಸಂಭಾವನೆ 5,000 ರೂ.ನಿಂದ 8,000ಕ್ಕೇರಿದೆ. ಬಿಸಿಯೂಟದ ಅಡುಗೆಯವರ ವೇತನ 3,600ರಿಂದ 6,000 ರೂ.ಗಳಿಗೆ ಏರಿಕೆ.
9. ಪೊಲೀಸ್ ಇಲಾಖೆಯಲ್ಲಿ ಮಹಿಳೆಯರಿಗೆ ಶೇ. 33 ಮೀಸಲಾತಿ
10. ಧರ್ಮ ಜಾತಿಗಳ ಹೆಸರಿನಲ್ಲಿ ಸಮಾಜದಲ್ಲಿ ದ್ವೇಷ ಬಿತ್ತಿದರೆ ಬಜರಂಗ ದಳ, ಪಿಎಫ್‌ಐಗಳ ನಿಷೇಧ
11. ರೈತರಿಗೆ ನೀಡುವ ಬಡ್ಡಿ ರಹಿತ ಸಾಲದ ಮೊತ್ತವನ್ನು ಮೂರು ಲಕ್ಷದಿಂದ 10 ಲಕ್ಷ ರೂ.ಗೆ ಏರಿಸಲು ನಿರ್ಧಾರ.
12. ಬಿಜೆಪಿ ಜಾರಿಗೊಳಿಸಿದ್ದ ಕೃಷಿ ಕಾಯಿದೆ, ಎಪಿಎಂಸಿ ತಿದ್ದುಪಡಿ ಕಾಯಿದೆಗಳ ರದ್ದು.
13. ಉತ್ತಮ ತಳಿಯ ಹಸು/ ಎಮ್ಮೆಗಳ ಖರೀದಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ.
14. ಕ್ಷೀರಧಾರೆ ಯೋಜನೆಯಡಿ ಒಂದು ಲೀಟರ್ ಹಾಲಿನ ಪ್ರೋತ್ಸಾಹ ಧನವನ್ನು ರೂ. 5ರಿಂದ ಏಳು ರೂ.ಗಳಿಗೆ ಏರಿಕೆ
15. ಮೀನುಗಾರ ಮಹಿಳೆಯರಿಗೆ 3 ಲಕ್ಷ ರೂ.ವರೆಗೆ ಹಣಕಾಸು ನೆರವು, ನಾಡದೋಣಿ ಮೀನುಗಾರರಿಗೆ 10 ಸಾವಿರ ರೂ. ಸಹಾಯಧನ
16. ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಚಿನ್ನ ಮತ್ತು ವಜ್ರದ ಪಾರ್ಕ್ ಸ್ಥಾಪನೆ
17. 20ಕ್ಕಿಂತ ಹೆಚ್ಚು ನೌಕರರು ಇರುವ ಹೋಟೆಲ್‌ಗಳಿಗೆ ಉದ್ಯಮದ ಸ್ಥಾನಮಾನ
18. ಅವೈಜ್ಞಾನಿಕ ರಾಷ್ಟ್ರೀಯ ಶಿಕ್ಷಣ ನೀತಿ ರದ್ದು ಮಾಡಿ ಕರ್ನಾಟಕ ಶಿಕ್ಷಣ ನೀತಿಯ ಅನುಷ್ಠಾನ
19. ಮುಂದಿನ ಐದು ವರ್ಷದಲ್ಲಿ ಎಲ್ಲ ಎಸ್‌ಸಿ/ಎಸ್‌ಟಿ ಕುಟುಂಬಗಳಿಗೆ ಮನೆ
20. ಒಕ್ಕಲಿಗ, ಲಿಂಗಾಯತ ಸಮುದಾಯಗಳ ಮೀಸಲಾತಿ ಹೆಚ್ಚಳಕ್ಕಾಗಿ ಮೀಸಲಾತಿ ಪ್ರಮಾಣ ಶೇ. 50ರಿಂದ 75ಕ್ಕೇರಿಕೆ. ಅಲ್ಪಸಂಖ್ಯಾತರಿಗಾಗಿ ಇದ್ದ ಶೇ. 4 ಮೀಸಲಾತಿ ಮರುಸ್ಥಾಪನೆ
21. ಎಲ್ಲ 25 ಪೌರ ಕಾರ್ಮಿಕರ ಸೇವೆ ಕಾಯಂ ಮತ್ತು ಸರ್ಕಾರಿ ಸೌಲಭ್ಯಗಳ ವಿಸ್ತರಣೆ, ಪ್ರತಿ 10 ಲಕ್ಷ ರೂ. ವಿಮಾ ಯೋಜನೆ.
22. ಬೀದಿ ಬದಿ ವ್ಯಾಪಾರಿಗಳಿಗೆ ಒಂದು ಬಾರಿಯ ಸಹಾಯಧನವಾಗಿ 20,000 ರೂ. ಕೊಡುಗೆ
23. 60 ವರ್ಷ ಮೀರಿದ ಎಲ್ಲ ಅರ್ಚಕರಿಗೆ ತಿಂಗಳಿಗೆ 5 ಸಾವಿರ ರೂ. ಸಹಾಯಧನ
24. ಗ್ರಾಮೀಣ ಭಾಗದ ಮಹಿಳಾ ಸ್ವಸಹಾಯ ಸಂಘಗಳಿಗೆ ಮೂರು ಲಕ್ಷ ರೂವರೆಗೆ ಬಡ್ಡಿ ರಹಿತ ಸಾಲ
25. ಎಲ್ಲ ಕುರಿ ಮತ್ತು ಮೇಕೆ ಸಾಗಾಣಿಕೆದಾರರ ರೂ. 1 ಲಕ್ಷ ರೂ.ವರೆಗಿನ ಸಾಲ ಮನ್ನಾ
ಇದನ್ನೂ ಓದಿ : Congress Manifesto : ದ್ವೇಷ ಬಿತ್ತಿದರೆ ಬಜರಂಗ ದಳ ನಿಷೇಧ; ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಎಚ್ಚರಿಕೆ