congress-manifesto: TOP 25 Assurances for voters by congress Congress Manifesto : ಸಪ್ತ ಭಾಗ್ಯ, ಮೀಸಲಾತಿ ಏರಿಕೆ, ಬಜರಂಗದಳ ನಿಷೇಧ; ಕಾಂಗ್ರೆಸ್‌ನ TOP 25 ಭರವಸೆಗಳು Vistara News
Connect with us

ಕರ್ನಾಟಕ

Congress Manifesto : ಸಪ್ತ ಭಾಗ್ಯ, ಮೀಸಲಾತಿ ಏರಿಕೆ, ಬಜರಂಗದಳ ನಿಷೇಧ; ಕಾಂಗ್ರೆಸ್‌ನ TOP 25 ಭರವಸೆಗಳು

Karnataka Election 2023 : ಕಾಂಗ್ರೆಸ್‌ ತನ್ನ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿನ ಪ್ರಮುಖ 25 ಭರವಸೆಗಳು ಇಲ್ಲಿವೆ.

VISTARANEWS.COM


on

congress manifesto TOP 25 Assurances for voters by congress
Koo

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ (Karnataka Election 2023) ಸಂಬಂಧಿಸಿ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯನ್ನು (Congress Manifesto) ಬಿಡುಗಡೆ ಮಾಡಿದ್ದು, ಈ ಹಿಂದೆ ಘೋಷಿಸಿದ್ದ ಪಂಚ ಯೋಜನೆಗಳ ಜತೆಗೆ ಇನ್ನೂ ಹಲವು ವಿಚಾರಗಳನ್ನು ಪ್ರಸ್ತಾಪಿಸಿದೆ. ಇದರಲ್ಲಿ ಪ್ರಮುಖವಾಗಿರುವುದು ಮೀಸಲಾತಿಯನ್ನು ಶೇ. 50ರಿಂದ 75ಕ್ಕೇರಿಸುವುದು, ಬಜರಂಗ ದಳ ಸಂಘಟನೆ ನಿಷೇಧ ಪ್ರಸ್ತಾಪ, ಸರ್ಕಾರಿ ನೌಕರರಿಗೆ ಹಳೆ ಪಿಂಚಣಿ ಯೋಜನೆ ಮುಂದುವರಿಕೆ ಸೇರಿದೆ.

ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ವಲಯವಾರು ಮತ್ತು ಪ್ರದೇಶವಾರು ಭರವಸೆಗಳನ್ನು ನೀಡಿದಂತೆ ಕಾಂಗ್ರೆಸ್‌ ಕೂಡಾ ಇದೇ ಮಾದರಿಯಲ್ಲಿ ಭರವಸೆಗಳನ್ನು ನೀಡಲಾಗಿದೆ.

ಇಲ್ಲಿವೆ ಕಾಂಗ್ರೆಸ್‌ನ ಟಾಪ್‌ 25 ವಾಗ್ದಾನಗಳು

1. ಗೃಹ ಜ್ಯೋತಿ ಯೋಜನೆಯಡಿ ಮನೆಗಳಿಗೆ 200 ಯುನಿಟ್‌ ಉಚಿತ ವಿದ್ಯುತ್‌
2. ಯುವನಿಧಿ ಯೋಜನೆಯಡಿ ಡಿಪ್ಲೊಮಾ ಆದವರಿಗೆ 1500 ರೂ, ಪದವೀಧರರಿಗೆ 3000 ರೂ. ನಿರುದ್ಯೋಗ ಭತ್ಯೆ
3. ಅನ್ನ ಭಾಗ್ಯ ಯೋಜನೆಯಡಿ ಪ್ರತಿ ಕುಟುಂಬಕ್ಕೆ ಐದು ಕೆಜಿ ಅಕ್ಕಿ
4. ಗೃಹ ಲಕ್ಷ್ಮಿ ಯೋಜನೆಯಡಿ ಮನೆಯ ಯಜಮಾನಿಗೆ 2000 ರೂ.
5. ಶಕ್ತಿ ಯೋಜನೆಯಡಿ ಎಲ್ಲ ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣದ ಅವಕಾಶ.

6. 2006ರಿಂದ ನೇಮಕವಾದ, ಪಿಂಚಣಿಗೆ ಅರ್ಹತೆಯುಳ್ಳ ಎಲ್ಲ ಸರ್ಕಾರಿ ಮತ್ತು ಅನುದಾನಿತ ಉದ್ಯೋಗಿಗಳನ್ನು ಹಳೆಯ ಪಿಂಚಣಿ ಯೋಜನೆಯಡಿಯಲ್ಲಿ ತರಲು ಸಹಾನುಭೂತಿಯ ನಿರ್ಧಾರ.
7. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ 15-20 ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ನೌಕರರನ್ನು ರಾಜಸ್ಥಾನ, ಹಿಮಾಚಲ ಪ್ರದೇಶ ಮಾದರಿಯಲ್ಲಿ ಕಾಯಂ
8. ಅಂಗನವಾಡಿಯ ಕಾರ್ಯಕರ್ತೆಯರ ವೇತನ 7,500 ರೂ.ಗಳಿಂದ 10,000 ರೂ.ಗಳಿಗೆ ಏರಿಕೆ, 2 ಲಕ್ಷ ರೂ. ವಿಶ್ರಾಂತಿ ವೇತನ. ಆಶಾ ಕಾರ್ಯಕರ್ತೆಯರ ಸಂಭಾವನೆ 5,000 ರೂ.ನಿಂದ 8,000ಕ್ಕೇರಿದೆ. ಬಿಸಿಯೂಟದ ಅಡುಗೆಯವರ ವೇತನ 3,600ರಿಂದ 6,000 ರೂ.ಗಳಿಗೆ ಏರಿಕೆ.
9. ಪೊಲೀಸ್‌ ಇಲಾಖೆಯಲ್ಲಿ ಮಹಿಳೆಯರಿಗೆ ಶೇ. 33 ಮೀಸಲಾತಿ
10. ಧರ್ಮ ಜಾತಿಗಳ ಹೆಸರಿನಲ್ಲಿ ಸಮಾಜದಲ್ಲಿ ದ್ವೇಷ ಬಿತ್ತಿದರೆ ಬಜರಂಗ ದಳ, ಪಿಎಫ್‌ಐಗಳ ನಿಷೇಧ

ಪ್ರಣಾಳಿಕೆ ಬಿಡುಗಡೆಗೆ ಮುನ್ನ ಪೂಜೆ

11. ರೈತರಿಗೆ ನೀಡುವ ಬಡ್ಡಿ ರಹಿತ ಸಾಲದ ಮೊತ್ತವನ್ನು ಮೂರು ಲಕ್ಷದಿಂದ 10 ಲಕ್ಷ ರೂ.ಗೆ ಏರಿಸಲು ನಿರ್ಧಾರ.
12. ಬಿಜೆಪಿ ಜಾರಿಗೊಳಿಸಿದ್ದ ಕೃಷಿ ಕಾಯಿದೆ, ಎಪಿಎಂಸಿ ತಿದ್ದುಪಡಿ ಕಾಯಿದೆಗಳ ರದ್ದು.
13. ಉತ್ತಮ ತಳಿಯ ಹಸು/ ಎಮ್ಮೆಗಳ ಖರೀದಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ.
14. ಕ್ಷೀರಧಾರೆ ಯೋಜನೆಯಡಿ ಒಂದು ಲೀಟರ್‌ ಹಾಲಿನ ಪ್ರೋತ್ಸಾಹ ಧನವನ್ನು ರೂ. 5ರಿಂದ ಏಳು ರೂ.ಗಳಿಗೆ ಏರಿಕೆ
15. ಮೀನುಗಾರ ಮಹಿಳೆಯರಿಗೆ 3 ಲಕ್ಷ ರೂ.ವರೆಗೆ ಹಣಕಾಸು ನೆರವು, ನಾಡದೋಣಿ ಮೀನುಗಾರರಿಗೆ 10 ಸಾವಿರ ರೂ. ಸಹಾಯಧನ

16. ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಚಿನ್ನ ಮತ್ತು ವಜ್ರದ ಪಾರ್ಕ್‌ ಸ್ಥಾಪನೆ
17. 20ಕ್ಕಿಂತ ಹೆಚ್ಚು ನೌಕರರು ಇರುವ ಹೋಟೆಲ್‌ಗಳಿಗೆ ಉದ್ಯಮದ ಸ್ಥಾನಮಾನ
18. ಅವೈಜ್ಞಾನಿಕ ರಾಷ್ಟ್ರೀಯ ಶಿಕ್ಷಣ ನೀತಿ ರದ್ದು ಮಾಡಿ ಕರ್ನಾಟಕ ಶಿಕ್ಷಣ ನೀತಿಯ ಅನುಷ್ಠಾನ
19. ಮುಂದಿನ ಐದು ವರ್ಷದಲ್ಲಿ ಎಲ್ಲ ಎಸ್‌ಸಿ/ಎಸ್‌ಟಿ ಕುಟುಂಬಗಳಿಗೆ ಮನೆ
20. ಒಕ್ಕಲಿಗ, ಲಿಂಗಾಯತ ಸಮುದಾಯಗಳ ಮೀಸಲಾತಿ ಹೆಚ್ಚಳಕ್ಕಾಗಿ ಮೀಸಲಾತಿ ಪ್ರಮಾಣ ಶೇ. 50ರಿಂದ 75ಕ್ಕೇರಿಕೆ. ಅಲ್ಪಸಂಖ್ಯಾತರಿಗಾಗಿ ಇದ್ದ ಶೇ. 4 ಮೀಸಲಾತಿ ಮರುಸ್ಥಾಪನೆ

21. ಎಲ್ಲ 25 ಪೌರ ಕಾರ್ಮಿಕರ ಸೇವೆ ಕಾಯಂ ಮತ್ತು ಸರ್ಕಾರಿ ಸೌಲಭ್ಯಗಳ ವಿಸ್ತರಣೆ, ಪ್ರತಿ 10 ಲಕ್ಷ ರೂ. ವಿಮಾ ಯೋಜನೆ.
22. ಬೀದಿ ಬದಿ ವ್ಯಾಪಾರಿಗಳಿಗೆ ಒಂದು ಬಾರಿಯ ಸಹಾಯಧನವಾಗಿ 20,000 ರೂ. ಕೊಡುಗೆ
23. 60 ವರ್ಷ ಮೀರಿದ ಎಲ್ಲ ಅರ್ಚಕರಿಗೆ ತಿಂಗಳಿಗೆ 5 ಸಾವಿರ ರೂ. ಸಹಾಯಧನ
24. ಗ್ರಾಮೀಣ ಭಾಗದ ಮಹಿಳಾ ಸ್ವಸಹಾಯ ಸಂಘಗಳಿಗೆ ಮೂರು ಲಕ್ಷ ರೂವರೆಗೆ ಬಡ್ಡಿ ರಹಿತ ಸಾಲ
25. ಎಲ್ಲ ಕುರಿ ಮತ್ತು ಮೇಕೆ ಸಾಗಾಣಿಕೆದಾರರ ರೂ. 1 ಲಕ್ಷ ರೂ.ವರೆಗಿನ ಸಾಲ ಮನ್ನಾ

ಇದನ್ನೂ ಓದಿ : Congress Manifesto : ದ್ವೇಷ ಬಿತ್ತಿದರೆ ಬಜರಂಗ ದಳ ನಿಷೇಧ; ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಎಚ್ಚರಿಕೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News Special Face Book ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
ವೈವಿಧ್ಯಮಯ ಸುದ್ದಿಗಳಿಗಾಗಿ Vistara News Twitter ಪೇಜ್ ಫಾಲೋ ಮಾಡಿ

ಕರ್ನಾಟಕ

ವಿಸ್ತಾರ TOP 10 NEWS: ಸಿದ್ದರಾಮಯ್ಯ ಸಂಪುಟ ಭರ್ತಿಯಿಂದ, ಉದ್ಘಾಟನೆಗೆ ಸಜ್ಜಾದ ಸಂಸತ್‌ ಭವನದವರೆಗಿನ ಪ್ರಮುಖ ಸುದ್ದಿಗಳಿವು

ದೇಶ, ವಿದೇಶ, ರಾಜ್ಯದಲ್ಲಿ ದಿನಪೂರ್ತಿ ನಡೆದ ಘಟನಾವಳಿಗಳಲ್ಲಿ ಆಯ್ದ ಪ್ರಮುಖ ಸುದ್ದಿಗಳು ವಿಸ್ತಾರ TOP 10 NEWS ನಲ್ಲಿ.

VISTARANEWS.COM


on

Edited by

to new parliament inauguration and more news
Koo

1. Karnataka Cabinet expansion : 24 ನೂತನ ಸಚಿವರ ಸೇರ್ಪಡೆ: ಭರ್ತಿ ಸಂಪುಟದೊಂದಿಗೆ ಅಗ್ನಿ ಪರೀಕ್ಷೆಗಿಳಿದ ಸಿದ್ದರಾಮಯ್ಯ!
ಸರಳ ಬಹುಮತದೊಂದಿಗೆ ಗದ್ದುಗೆ ಏರಿರುವ, ಕಾಂಗ್ರೆಸ್‌ ಸರ್ಕಾರದ ಚುಕ್ಕಾಣಿ ಹಿಡಿದಿರುವ ಸಿಎಂ ಸಿದ್ದರಾಮಯ್ಯ, ಪೂರ್ಣ ಸಂಪುಟವನ್ನು ಭರ್ತಿ ಮಾಡುವ ಮೂಲಕ ಹೊಸ ಪರೀಕ್ಷೆಗೆ ಒಡ್ಡಿಕೊಂಡಿದ್ದಾರೆ. ಇದೀಗ 24 ಸಚಿವರ ಪ್ರಮಾಣದೊಂದಿಗೆ 34 ಸ್ಥಾನ ಭರ್ತಿಯಾಗಿದೆ. 2003ರಲ್ಲಿ ನಡೆದ ಸಂವಿಧಾನ ತಿದ್ದುಪಡಿ ನಂತರದಲ್ಲಿ ಕರ್ನಾಟಕಕ್ಕೆ 34 ಸಚಿವರನ್ನಷ್ಟೆ ನೇಮಿಸುವ ಅಧಿಕಾರವಿದೆ. ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ಜತೆಗೆ 8 ಸಚಿವರು ಈ ಮೊದಲು ಪ್ರಮಾಣವಚನ ಸ್ವೀಕರಿಸಿದ್ದರು. ಹೊಸ ಸಚಿವರ ಸೇರ್ಪಡೆ ಬೆನ್ನಲ್ಲೇ, ಸ್ಥಾನ ಸಿಗದವರ ಅಸಮಾಧಾನ ಹೊಗೆಯಾಡಲು ಆರಂಭಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: Karnataka Cabinet: ಕಾಂಗ್ರೆಸ್‌ನಲ್ಲಿ ಮತ್ತೆ ಶುರುವಾಯಿತು ಮೂಲ-ವಲಸಿಗ ಜಗಳ: ಸಿಎಂ ವಿರುದ್ಧ ಹರಿಪ್ರಸಾದ್‌ ಪ್ರಹಾರ

2. Karnataka Cabinet: ಸಂಪುಟದಲ್ಲಿ ಸೋತರೂ ಖಾತೆಯಲ್ಲಿ ಗೆದ್ದ ಡಿ.ಕೆ. ಶಿವಕುಮಾರ್‌: ಇಲ್ಲಿದೆ ಎಲ್ಲ ಸಚಿವರ ಖಾತೆಗಳ ಪಟ್ಟಿ
ಸಂಪುಟ ರಚನೆ ವೇಳೆಯಲ್ಲಿ ತಮ್ಮ ಆಪ್ತರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೇರಿಸಿಕೊಳ್ಳುವಲ್ಲಿ ಹಾಗೂ ಸ್ವತಃ ಸಿಎಂ ಸ್ಥಾನ ಪಡೆಯುವಲ್ಲಿ ಹಿನ್ನಡೆ ಅನುಭವಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್‌ ಇದೀಗ ಖಾತೆ ಹಂಚಿಕೆ ವೇಳೆಗೆ ತಮ್ಮ ಕೈ ಮೇಲಾಗಿಸಿಕೊಂಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

3. Karnataka Cabinet expansion: ಮೊದಲ, 2ನೇ ಬಾರಿಗೇ ಸಚಿವಗಿರಿ ಪಡೆದ ಬೆಳಗಾವಿ ಶಾಸಕಿಯರಿವರು!
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವ ಸಂಪುಟ ವಿಸ್ತರಣೆ ಮಾಡಿದ್ದು, ಬೆಳಗಾವಿಯಿಂದ ಮಹಿಳಾ ಕೋಟಾದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್‌ ಅವರು ಸಚಿವರಾಗಿದ್ದಾರೆ. ಇವರು ಎರಡನೇ ಬಾರಿಗೆ ಆಯ್ಕೆಯಾದರೂ ಮಂತ್ರಿಗಿರಿಯ ಅದೃಷ್ಟ ಒಲಿದಿದೆ. ಇದೇ ರೀತಿ ಈ ಹಿಂದೆ ಇನ್ನೂ ಇಬ್ಬರು ಶಾಸಕಿಯರಿಗೆ ಮೊದಲ ಇಲ್ಲವೇ ಎರಡನೇ ಬಾರಿಗೆ ಮಂತ್ರಿ ಪಟ್ಟ ಸಿಕ್ಕಿದೆ. ಅವರ ಬಗ್ಗೆ ವಿವರವನ್ನು ನೋಡೋಣ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

4. Karnataka Cabinet expansion: ಸಂಪುಟದಲ್ಲಿನ್ನು ಸೀಟಿಲ್ಲ; ನಾಯಕರ, ಬೆಂಬಲಿಗರ ಆಕ್ರೋಶಕ್ಕೆ ಬೆಲೆ ಇಲ್ಲ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟ ವಿಸ್ತರಣೆ (Karnataka Cabinet expansion) ಆಗಿದ್ದು, ಶನಿವಾರ (ಮೇ 27) 24 ಮಂದಿ ಸೇರ್ಪಡೆಯಾಗುವ ಮೂಲಕ ಎಲ್ಲ 34 ಸ್ಥಾನಗಳೂ ಭರ್ತಿಯಾಗಿವೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಪಕ್ಷದಲ್ಲಿ ನಿಷ್ಠೆಯಿಂದ ದುಡಿದ ಹಿರಿಯ ನಾಯಕರು ಸೇರಿದಂತೆ ಹಲವು ಕಾರಣಗಳಿಂದ ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದವರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೆ, ರಾಜಭವನದ ಮುಂದೆ ಹಲವು ರಾಜಕೀಯ ನಾಯಕರ ಬೆಂಬಲಿಗರು ಪ್ರತಿಭಟನೆಯನ್ನೂ ನಡೆಸಿದ್ದಾರೆ. ಎಂ ಕೃಷ್ಣಪ್ಪ ಹಾಗೂ ಪ್ರಿಯಾ ಕೃಷ್ಣ ಅವರ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ, ಸದ್ಯಕ್ಕಂತೂ ಯಾರಿಗೂ ಸ್ಥಾನ ಸಿಗುವುದಿಲ್ಲ ಎಂಬುದು ಪಕ್ಕಾ ಆಗಿದ್ದು, ಇವರನ್ನು ಸಮಾಧಾನ ಪಡಿಸುವ ಪ್ರಯತ್ನಗಳೂ ಕಾಣುತ್ತಿಲ್ಲ ಎಂದೂ ಹೇಳಲಾಗುತ್ತಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. ಹಳೇ ಬೇರು, ಹೊಸ ಚಿಗುರು: ಮೊದಲಿನ ಸಂಸತ್‌, ನೂತನ ಸಂಸತ್‌ ಭವನದ ನಡುವಿನ ವ್ಯತ್ಯಾಸ ಹೀಗಿದೆ ನೋಡಿ
ನೂತನ ಹಾಗೂ ಭವ್ಯ ಸಂಸತ್‌ ಭವನದ ಉದ್ಘಾಟನೆಗೆ ಕ್ಷಣಗಣನೆ (May 28) ಆರಂಭವಾಗಿದೆ. ಪ್ರತಿಪಕ್ಷಗಳ ಬಹಿಷ್ಕಾರದ ಮಧ್ಯೆಯೂ ಅದ್ಧೂರಿಯಾಗಿ ನೂತನ ಸಂಸತ್‌ ಭವನದ ಉದ್ಘಾಟನೆಗೆ ಕೇಂದ್ರ ಸರ್ಕಾರ ಸಿದ್ಧವಾಗಿದೆ. ಇದರ ಮಧ್ಯೆಯೇ, ಹಳೆಯ ಹಾಗೂ ನೂತನ ಸಂಸತ್‌ ಭವನದ ನಡುವಿನ ವ್ಯತ್ಯಾಸ, ತಂತ್ರಜ್ಞಾನದ ಅಳವಡಿಕೆ, ವಿನ್ಯಾಸ ಸೇರಿ ಹಲವು ದಿಸೆಯಲ್ಲಿ ಹೋಲಿಕೆ ಮಾಡಿ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಮೊದಲಿನ ಹಾಗೂ ನೂತನ ಸಂಸತ್‌ ಭವನಗಳ ನಡುವಿನ ವ್ಯತ್ಯಾಸವನ್ನು ಚಿತ್ರಗಳಲ್ಲಿ ನೋಡಿ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. Praveen Nettaru: ಹೊಸ ಸರ್ಕಾರ ಅಸ್ತಿತ್ವದ ಬೆನ್ನಲ್ಲೇ ಪ್ರವೀಣ್‌ ನೆಟ್ಟಾರ್ ಪತ್ನಿ ಕೆಲಸಕ್ಕೆ ಕೊಕ್
ಹೊಸ ಸರ್ಕಾರ ರಚನೆಯಾದ ಬೆನ್ನಲ್ಲೇ ಪ್ರವೀಣ್ ನೆಟ್ಟಾರ್ (Praveen Nettaru) ಪತ್ನಿ ನೂತನ ಕುಮಾರಿಯನ್ನು ಕೆಲಸದಿಂದ ವಜಾ ಮಾಡಲಾಗಿದೆ. ದುಷ್ಕರ್ಮಿಗಳಿಂದ ಕೊಲೆಯಾದ ಬಿಜೆಪಿ ಯುವ ಮೋರ್ಚಾ (BJP Yuva Morcha) ಪದಾಧಿಕಾರಿ ದಕ್ಷಿಣ ಕನ್ನಡದ ಸುಳ್ಯ ತಾಲೂಕಿನ ಬೆಳ್ಳಾರೆಯ ಪ್ರವೀಣ್‌ ನೆಟ್ಟಾರು ಅವರ ಪತ್ನಿಗೆ ಬಿಜೆಪಿ ಸರ್ಕಾರವು ಮಾನವೀಯತೆ ಆಧಾರದ ಮೇಲೆ ಉದ್ಯೋಗ ನೀಡಿ ಆದೇಶ ಹೊರಡಿಸಿತ್ತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. NITI Aayog Meeting: ನೀತಿ ಆಯೋಗದ ಸಭೆಗೆ ಸಿದ್ದು ಸೇರಿ 10 ಸಿಎಂಗಳು ಗೈರು; ರಾಜ್ಯಗಳಿಗೆ ನಷ್ಟವೇನು?
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನೀತಿ ಆಯೋಗದ ಎಂಟನೇ ಗವರ್ನಿಂಗ್‌ ಸಮಿತಿ ಸಭೆ (Governing Council Meeting) ನಡೆದಿದ್ದು, ಮಹತ್ವದ ವಿಚಾರಗಳನ್ನು ಚರ್ಚಿಸಲಾಗಿದೆ. ಆದರೆ, ಕೇಂದ್ರ ಸರ್ಕಾರದ ವಿರುದ್ಧದ ಆಕ್ರೋಶ, ಮುನಿಸಿನಿಂದಾಗಿ 10 ರಾಜ್ಯಗಳ ಮುಖ್ಯಮಂತ್ರಿಗಳು ಸಭೆಗೆ ಗೈರಾಗಿದ್ದಾರೆ. ಆದರೆ, ಅಭಿವೃದ್ಧಿ ದೃಷ್ಟಿಯಿಂದ ಮಹತ್ವ ಪಡೆದಿರುವ ಸಭೆಗೆ ಸಿಎಂಗಳು ಗೈರಾಗಿರುವುದು ಆಯಾ ರಾಜ್ಯಗಳಿಗೇ ನಷ್ಟ ಎಂದು ವಿಶ್ಲೇಷಿಸಲಾಗುತ್ತಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. IPL 2023 : ಫೈನಲ್​ ಪಂದ್ಯದಲ್ಲಿ ಸೃಷ್ಟಿಯಾಗಲಿರುವ ಕೆಲವು ದಾಖಲೆಗಳ ವಿವರ ಹೀಗಿದೆ ನೋಡಿ
70 ಲೀಗ್ ಪಂದ್ಯಗಳು ಮತ್ತು ಮೂರು ಪ್ಲೇಆಫ್ ಮುಖಾಮುಖಿಗಳ ನಂತರ ಎಲ್ಲರ ಗಮನ ಇಂಡಿಯನ್ ಪ್ರೀಮಿಯರ್ ಲೀಗ್​​ನ (IPL 2023) ಮೆಗಾ ಫೈನಲ್​ ಕಡೆಗೆ ನೆಟ್ಟಿದೆ. ಅಹಮದಾಬಾದ್​​ನ ನರೇಂದ್ರ ಮೋದಿ ಸ್ಟೇಡಿಯಮ್​ನಲ್ಲಿ ಭಾನುವಾರ (ಮೇ 28ರಂದು) ಫೈನಲ್ ಹಣಾಹಣಿ ನಡೆಯಲಿದೆ. ನಾಲ್ಕು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ. ಈ ಪಂದ್ಯದ ವೇಳೆ ಕೆಲವು ಆಟಗಾರರ ವೈಯಕ್ತಿಕ ದಾಖಲೆಗಳನ್ನು ಹಾಗೂ ಮೈಲುಗಲ್ಲುಗಳನ್ನು ಸೃಷ್ಟಿಸಲಿದ್ದಾರೆ. ಅವುಗಳು ಇಂತಿವೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. Weather Report: ಈ ವಾರ ಕರಾವಳಿಯಲ್ಲಿ ಮಳೆ ಅಬ್ಬರ; ಉಳಿದೆಡೆ ಬಿಸಿಲಿಗೆ ಜನ ತತ್ತರ
ರಾಜ್ಯಾದ್ಯಂತ ಮಳೆ ತೀವ್ರತೆ ಕಡಿಮೆ ಆಗಿದ್ದು, ಇನ್ನೊಂದು ವಾರ ತಾಪಮಾನದಲ್ಲಿ (Heat wave) ಏರಿಳಿತ ಆಗಲಿದೆ. ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗುವ (Rain News) ಸಾಧ್ಯತೆ ಇದೆಯಾದರೂ ಹಲವು ಕಡೆ ಬಿಸಿಲು ಝಳಪಿಸಲಿದ್ದು, ನಾಗರಿಕರು ಮತ್ತಷ್ಟು ಹೈರಾಣಾಗಬಹುದು ಎಂದು ಹವಾಮಾನ ಇಲಾಖೆ (Weather report) ಮುನ್ಸೂಚನೆಯನ್ನು ನೀಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. 96 ಸಾವಿರ ರೂ.ಮೌಲ್ಯದ ಮೊಬೈಲ್​ಗಾಗಿ 21 ಲಕ್ಷ ಲೀಟರ್​ ನೀರು ಖಾಲಿ ಮಾಡಿಸಿದ ಸರ್ಕಾರಿ ಅಧಿಕಾರಿ
ಈಗಿನ ಕಾಲದಲ್ಲಿ ಮನುಷ್ಯನಿಗೆ ಮೊಬೈಲ್​​ನಷ್ಟು ‘ಅಮೂಲ್ಯ’ ವಸ್ತು ಇನ್ನೊಂದು ಇರಲಿಕ್ಕೆ ಇಲ್ಲ ಬಿಡಿ !. ಏನಿರತ್ತದೆಯೋ ಬಿಡುತ್ತದೆಯೋ ಕೈಯಲ್ಲಿ ಮೊಬೈಲ್​ ಅಂತೂ ಇರಲೇಬೇಕು. ಅದು ಕಳೆದು ಹೋದರೆ, ಕೆಟ್ಟು ಹೋದರೆ ಆಗುವ ಚಡಪಡಿಕೆ ಅಷ್ಟಿಷ್ಟಲ್ಲ. ಒಟ್ನಲ್ಲಿ ಮೊಬೈಲ್​ ಅನ್ನೋದು ಜೀವನದ ಬೇಸಿಕ್ ಅವಶ್ಯಕತೆ ಎಂಬಂತಾಗಿದೆ. ಅಂಥ ಅಮೂಲ್ಯವಾದ ಮೊಬೈಲ್​​ನ್ನು ಕಳೆದುಕೊಂಡ ಛತ್ತೀಸ್​ಗಢ ಸರ್ಕಾರಿ ಆಸ್ಪತ್ರೆ ಅಧಿಕಾರಿಯೊಬ್ಬ, ಜಲಾಶಯದಲ್ಲಿದ್ದ 21 ಲಕ್ಷ ಲೀಟರ್​ ನೀರನ್ನು ಖಾಲಿ ಮಾಡಿಸಿ (Drains 21 Lakh Litres Water), ಈಗ ಅಮಾನತುಗೊಂಡಿದ್ದಾರೆ ! ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

Continue Reading

ಕರ್ನಾಟಕ

Koratagere News: ಕೊರಟಗೆರೆಯ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಕಾವೇರಿ 2.0 ತಂತ್ರಾಂಶ ಉದ್ಘಾಟನೆ

Koratagere News: ಕಾವೇರಿ ತಂತ್ರಾಂಶ 2.0 ಅಳವಡಿಕೆಯಿಂದ ಯಾವುದೇ ಆಸ್ತಿಯನ್ನು ಖರೀದಿಸುವುದಕ್ಕಿಂತ ಮೊದಲೇ ಆಸ್ತಿಯ ಮೇಲೆ ಇರುವ ಋಣಭಾರ ಹಾಗೂ ನೋಂದಣಿಯಾಗಿರುವ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಬಹುದಾಗಿದೆ. ಈ ಬಗ್ಗೆ ತುಮಕೂರು ಜಿಲ್ಲಾ ಉಪ ನೋಂದಣಾಧಿಕಾರಿ ಬಿ.ಎನ್.ಶಶಿಕಲಾ ಮಾಹಿತಿ ನೀಡಿದ್ದಾರೆ.

VISTARANEWS.COM


on

Edited by

Cauvery 20 software launched at Koratagere
ಕೊರಟಗೆರೆಯ ಉಪ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಛೇರಿಯ ಆವರಣದಲ್ಲಿ ಕಾವೇರಿ 2.0 ತಂತ್ರಾಂಶವನ್ನು ತುಮಕೂರು ಜಿಲ್ಲಾ ಉಪನೊಂದಣಾಧಿಕಾರಿ ಬಿ.ಎನ್.ಶಶಿಕಲಾ, ನೋಂದಾಣಿಯಾದ ಗ್ರಾಹಕರಿಗೆ ಪತ್ರ ನೀಡುವ ಮೂಲಕ ಉದ್ಘಾಟಿಸಿದರು.
Koo

ಕೊರಟಗೆರೆ: ಸಾರ್ವಜನಿಕರು ತಮ್ಮ ಆಸ್ತಿಯ ನೋಂದಣಿಗಾಗಿ (Property registration) ಕಚೇರಿಗೆ ಅಲೆದಾಡುವುದನ್ನು ತಪ್ಪಿಸುವ ಹಾಗೂ ಶೀಘ್ರ ನೋಂದಣಿಯಾಗುವ ಸಲುವಾಗಿ ಸರ್ಕಾರ ಕಾವೇರಿ 2.0 (Cauvery 2.0) ನೂತನ ತಂತ್ರಾಂಶವನ್ನು ಇಲಾಖೆಯಲ್ಲಿ ಪರಿಚಯಿಸಲಾಗಿದೆ ಎಂದು ತುಮಕೂರು ಜಿಲ್ಲಾ ಉಪ ನೋಂದಣಾಧಿಕಾರಿ ಬಿ.ಎನ್. ಶಶಿಕಲಾ ತಿಳಿಸಿದರು.

ಕೊರಟಗೆರೆಯ ಉಪ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಚೇರಿಯ ಆವರಣದಲ್ಲಿ ಕಾವೇರಿ 2.0 ತಂತ್ರಾಂಶವನ್ನು ನೋಂದಣಿಯಾದ ಗ್ರಾಹಕರಿಗೆ ಪತ್ರ ನೀಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿ, ಕಾವೇರಿ ತಂತ್ರಾಂಶ 2.0 ಅಳವಡಿಕೆಯಿಂದ ಯಾವುದೇ ಆಸ್ತಿಯನ್ನು ಖರೀದಿಸುವುದಕ್ಕಿಂತ ಮೊದಲೇ ಆಸ್ತಿಯ ಮೇಲೆ ಇರುವ ಋಣಭಾರ ಹಾಗೂ ನೋಂದಣಿಯಾಗಿರುವ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದಾಗಿದೆ. ಜತೆಗೆ ಈ ತಂತ್ರಾಂಶದಿಂದ ಆಸ್ತಿ ನೋಂದಣಿಯನ್ನು ತ್ವರಿತಗತಿಯಲ್ಲಿ ಮಾಡಬಹುದಾಗಿದೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: Simple One: ಒಂದು ಚಾರ್ಜ್​​ಗೆ 212 ಕಿ.ಮೀ ಓಡುವ ಸ್ಕೂಟರ್​ ಬಿಡುಗಡೆ; ಇದರ ಬೆಲೆ ಎಷ್ಟು ಗೊತ್ತೇ?

ಈ ತಂತ್ರಾಂಶದ ಮೂಲಕ ಸಾರ್ವಜನಿಕರು ತಮ್ಮ ಆಸ್ತಿಯ ವಿವರ ಮತ್ತು ಮೂಲ ದಾಖಲೆಗಳನ್ನು ಆನ್‌ಲೈನ್ ಮೂಲಕ ನೇರವಾಗಿ ಉಪ ನೋಂದಣಾಧಿಕಾರಿಗೆ ಕಳುಹಿಸಬಹುದು, ಅಧಿಕಾರಿಗಳು ಪರಿಶೀಲಿಸಿದ ನಂತರ ನೋಂದಣಿಗೆ ತಗಲುವ ವೆಚ್ಚವನ್ನು ಖಜಾನೆಗೆ ಆನ್‌ಲೈನ್ ಮೂಲಕ ಪಾವತಿಸಿ ನಮಗೆ ಬೇಕಾದ ದಿನಾಂಕ ಮತ್ತು ಸಮಯವನ್ನು ನಿಗದಿಪಡಿಸಿಕೊಳ್ಳಲು ಅವಕಾಶವಿದೆ. ನಿಗದಿಪಡಿಸಿಕೊಂಡ ದಿನದಂದು ಕೆಲವೇ ನಿಮಿಷದಲ್ಲಿ ಭಾವಚಿತ್ರ, ಸಹಿ ಹಾಗೂ ಹೆಬ್ಬೆಟ್ಟು ಗುರುತು ತೆಗೆದುಕೊಂಡು ನೋಂದಣಿ ಮಾಡಿಕೊಡಲಾಗುವುದು. ಈ ತಂತ್ರಾಂಶದಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದರು.

ಕೊರಟಗೆರೆ ತಾಲೂಕು ಹಿರಿಯ ಉಪನೊಂದಣಾಧಿಕಾರಿ ಗಿರೀಶ್ ಮಾತನಾಡಿ, ಕಾವೇರಿ 2.0 ತಂತ್ರಾಂಶವು ಜನಸ್ನೇಹಿಯಾಗಿ ಕೆಲಸ ಮಾಡುತ್ತದೆ, ಸಾರ್ವಜನಿಕರೇ ತಮ್ಮ ಆಸ್ತಿಯ ದಸ್ತುವೇಜುಗಳನ್ನು ನೇರವಾಗಿ ದಾಖಲಿಸುವುದರಿಂದ ಲೋಪಗಳು ಕಡಿಮೆಯಾಗುತ್ತದೆ, ಈ ತಂತ್ರಾಂಶ ಆಳವಡಿಸುವುದರೊಂದಿಗೆ ಕಛೇರಿಯಲ್ಲಿ ಮೂಲಭೂತ ಸೌಕರ್ಯಗಳು ಅಳವಡಿಸುವ ಕ್ರಮ ಕೈಗೊಳ್ಳಲಾಗಿದೆ, ಹೊಸ ತಂತ್ರಾಂಶದ ಮೂಲಕ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಲು ಇಲಾಖೆ ಮುಂದಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: UPSC Prelims 2023: ನಾಳೆ ಯುಪಿಎಸ್‌ಸಿ ಪ್ರಿಲಿಮ್ಸ್‌; ಈ ಬಾರಿಯೂ ಕನ್ನಡದಲ್ಲಿ ನಡೆಯೋಲ್ಲ ಪರೀಕ್ಷೆ

ಕಾರ್ಯಕ್ರಮದಲ್ಲಿ ಮಧುಗಿರಿ ಉಪ ನೋಂದಣಾಧಿಕಾರಿ ಸತೀಶ್, ಶಿರಾ ಉಪ ನೋಂದಣಾಧಿಕಾರಿ ಶಂಕರ್, ದ್ವಿತೀಯ ದರ್ಜೆ ಸಹಾಯಕ ಹೀತೇಶ್, ಎಂಜಿನಿಯರ್ ಸಂಪತ್, ಪ್ರದೀಪ್, ಅಸಿಸ್ಟಂಟ್ ಮ್ಯಾನೇಜರ್ ಲೋಕೇಶ್, ಕಂಪ್ಯೂಟರ್ ಆಪರೇಟರ್‌ಗಳಾದ ಎಚ್.ಡಿ.ಚಂದ್ರಶೇಖರ್, ಎಚ್.ಎನ್.ಮುದ್ದಕುಮಾರ್, ಟಿ.ಎನ್.ರೂಪ ಹಾಗೂ ಪತ್ರ ಬರಹಗಾರರಾದ ಸತೀಶ್, ಪಾರ್ಥಸಾರಥಿ, ಶಂಕರ್ ಸೇರಿದಂತೆ ಸಿಬ್ಬಂದಿ, ಇತರರು ಪಾಲ್ಗೊಂಡಿದ್ದರು.

Continue Reading

ಕರ್ನಾಟಕ

Bahuroopi Prakashana: ಸರ್ಕಾರ ಪುಸ್ತಕೋದ್ಯಮ ಬೆಂಬಲಿಸಲಿ: ಪೊನ್ ವಾಸುದೇವನ್

Bahuroopi Prakashana: ಬೆಂಗಳೂರಿನಲ್ಲಿ ‘ಬಹುರೂಪಿ’ ಪ್ರಕಾಶನದಿಂದ ಹಮ್ಮಿಕೊಂಡಿದ್ದ ಸಂವಾದದಲ್ಲಿ ತಮಿಳಿನ ಹೆಸರಾಂತ ಸಾಹಿತಿ, ಪ್ರಕಾಶಕ ಪೊನ್ ವಾಸುದೇವನ್ ಭಾಗವಹಿಸಿದ್ದರು.

VISTARANEWS.COM


on

Edited by

Bahuroopi Prakashana Programme
Koo

ಬೆಂಗಳೂರು: ಪುಸ್ತಕೋದ್ಯಮಕ್ಕೆ ತಮಿಳುನಾಡು ಸರ್ಕಾರ ನೀಡುತ್ತಿರುವ ಪ್ರೋತ್ಸಾಹ ಮಾದರಿಯಾಗಿದ್ದು, ಕರ್ನಾಟಕದಲ್ಲಿಯೂ ಪುಸ್ತಕೋದ್ಯಮವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕ್ರಮ ವಹಿಸಬೇಕು ಎಂದು ತಮಿಳಿನ ಹೆಸರಾಂತ ಸಾಹಿತಿ, ಪ್ರಕಾಶಕ ಪೊನ್ ವಾಸುದೇವನ್ ಅಭಿಪ್ರಾಯಪಟ್ಟರು.

‘ಬಹುರೂಪಿ’ ಪ್ರಕಾಶನದಿಂದ (Bahuroopi Prakashana) ನಗರದಲ್ಲಿ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪುಸ್ತಕೋದ್ಯಮ ಇಂದು ಆತಂಕವನ್ನು ಎದುರಿಸುತ್ತಿದೆ. ನಾಳಿನ ಪೀಳಿಗೆಗೆ ಓದುವ ಸಂಸ್ಕೃತಿಯನ್ನು ಉಳಿಸಬೇಕಾದರೆ ಸರ್ಕಾರ ಪ್ರಕಾಶನ ರಂಗಕ್ಕೆ ಬೆನ್ನೆಲುಬಾಗಿ ನಿಲ್ಲಬೇಕಾದ ಅವಶ್ಯಕತೆ ಇದೆ ಎಂದರು.

Bahuroopi Prakashana Dialogue

ಡಿಎಂಕೆ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಜಿಲ್ಲಾ ಮಟ್ಟದಲ್ಲಿ ನಡೆಸುತ್ತಿರುವ ಪುಸ್ತಕ ಮೇಳಗಳು ಹಾಗೂ ಕೈಗೆತ್ತಿಕೊಂಡಿರುವ ಹಲವು ರೀತಿಯ ಸಗಟು ಖರೀದಿ ಯೋಜನೆಗಳು ಪುಸ್ತಕೋದ್ಯಮ ಉಸಿರಾಡುವಂತೆ ಮಾಡಿದೆ. ಓದುವ ಸಂಸ್ಕೃತಿಯನ್ನು ಯಾವೆಲ್ಲ ರಾಜ್ಯಗಳು ರಕ್ಷಿಸಿವೆಯೋ ಅಲ್ಲೆಲ್ಲ ಪುಸ್ತಕ ಉದ್ಯಮ ಸಂಪನ್ನವಾಗಿದೆ. ಹಾಗಾಗಿ ಓದುವ ಸಂಸ್ಕೃತಿಯನ್ನು ರಕ್ಷಿಸುವ ಕಡೆಗೆ ಗಮನ ಕೊಡಬೇಕಾದ ಹೊಣೆ ಎಲ್ಲರದ್ದು ಎಂದು ತಿಳಿಸಿದರು.

ಇದನ್ನೂ ಓದಿ | ವಿಸ್ತಾರ ಯುಗಾದಿ ಕಥಾ ಸ್ಪರ್ಧೆ ಬಹುಮಾನ: ಚಂದ್ರಶೇಖರ್‌ ಡಿ.ಆರ್‌ ಪ್ರಥಮ, ದಾದಾಪೀರ್‌ ಜೈಮನ್‌ ದ್ವಿತೀಯ, ಪೂರ್ಣಿಮಾ ಮಾಳಗಿಮನಿ ತೃತೀಯ

ಕಾರ್ಯಕ್ರಮದಲ್ಲಿ ಅನುವಾದಕ್ಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿರುವ ಕೆ.ನಲ್ಲತಂಬಿ ಅವರನ್ನು ‘ಬಹುರೂಪಿ’ ಸನ್ಮಾನಿಸಿತು. ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅವರು, ಪುಸ್ತಕ ಎನ್ನುವುದು ಅರಿವಿನ ಭಾಗ. ನಮ್ಮ ಜ್ಞಾನ ವೃದ್ಧಿಗೆ ಪುಸ್ತಕ ಓದುವ ಹವ್ಯಾಸ ಎಲ್ಲೆಡೆಯೂ ಪಸರಿಸಬೇಕಿದೆ. ಸಾಹಿತ್ಯದ ಸಹವಾಸ ನನ್ನ ವ್ಯಕ್ತಿತ್ವವನ್ನು ರೂಪಿಸಿದೆ ಎಂದು ತಿಳಿಸಿದರು.

Bahuroopi Prakashana Dialogue in Bangalore

ಸಂವಾದದಲ್ಲಿ ಬಹುರೂಪಿಯ ಸಂಸ್ಥಾಪಕ ಜಿ.ಎನ್. ಮೋಹನ್, ಶ್ರೀಜಾ ವಿ.ಎನ್, ಕಲಾವಿದರಾದ ಗುಜ್ಜಾರ್, ಆರ್. ಸೂರಿ, ಸಾಹಿತಿ ರಂಜನಿ ಪ್ರಭು, ಸಂಸ್ಕೃತಿ ಚಿಂತಕ ಜಿ.ಎನ್. ನಾಗರಾಜ್ ಭಾಗಿಯಾಗಿದ್ದರು.

Continue Reading

ಕರ್ನಾಟಕ

Education Department: ಶಿಥಿಲ ಶಾಲಾ ಕೊಠಡಿಗಳ ಬಳಕೆ ಬೇಡ: ಶಿಕ್ಷಣ ಇಲಾಖೆ ಸುತ್ತೋಲೆ

Education Department: ಮೇ 29ರಿಂದ ರಾಜ್ಯದಲ್ಲಿ ಶಾಲೆಗಳು ಆರಂಭವಾಗುತ್ತಿವೆ. ಆದರೆ, ಎಲ್ಲೆಡೆ ಭಾರಿ ಮಳೆಯಾಗುತ್ತಿರುವುದರಿಂದ ಮುನ್ನೆಚ್ಚರಿಕೆಯಾಗಿ ಶಿಥಿಲಾವಸ್ಥೆಯ ಶಾಲಾ ಕೊಠಡಿಗಳನ್ನು ಬಳಸದಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ತಿಳಿಸಿದೆ.

VISTARANEWS.COM


on

Edited by

Dilapidated school room
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ರಾಜ್ಯದಲ್ಲಿ‌ ಕೆಲವು ದಿನಗಳಿಂದ ಭಾರಿ ಮಳೆಯಾಗುತ್ತಿದೆ. ಅಲ್ಲಲ್ಲಿ‌ ಮನೆಗಳು ಬಿದ್ದಿರುವ ಉದಾಹರಣೆಗಳು ಇವೆ. ಈ ನಡುವೆ ಮೇ 29ರಿಂದ ಶಾಲೆಗಳು ಆರಂಭವಾಗುತ್ತಿವೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಶಿಥಿಲಾವಸ್ಥೆಯ ಶಾಲಾ ಕೊಠಡಿಗಳನ್ನು ಬಳಸಬಾರದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ (Education Department) ಸುತ್ತೋಲೆ ಹೊರಡಿಸಿದೆ.

ಮಕ್ಕಳ ಬೇಸಿಗೆ ರಜೆ ಮುಗಿದಿದ್ದು, 2023-24ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗಲು ಎರಡೇ ದಿನ ಬಾಕಿ ಇದೆ.‌ ಆದರೆ, ರಾಜ್ಯದೆಲ್ಲೆಡೆ ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಶಿಥಿಲಾವಸ್ಥೆ ಶಾಲಾ ಕೊಠಡಿಗಳು ಕುಸಿದು ಅಪಾಯ ಸಂಭವಿಸುವ ಸಾಧ್ಯತೆಗಳಿವೆ. ಹೀಗಾಗಿ ಮುಂಜಾಗ್ರತೆ ಕ್ರಮವಾಗಿ ಶಿಥಿಲ ಕೊಠಡಿಗಳನ್ನು ಬಳಸಬಾರದು. ಅಗತ್ಯ ಮುಂಜಾಗ್ರತೆ ಕ್ರಮಗಳೊಂದಿಗೆ ಶಾಲಾರಂಭಕ್ಕೆ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಮುಖ್ಯ ಶಿಕ್ಷಕರಿಗೆ ಶಿಕ್ಷಣ ಇಲಾಖೆಯಿಂದ ಸುತ್ತೋಲೆ‌ ಹೊರಡಿಸಲಾಗಿದೆ.

ದುರಸ್ತಿಗೆ ಕ್ರಮ ಕೈಗೊಳ್ಳಬೇಕು

ಮಳೆಯಿಂದ ಶಾಲೆಯ ಕೊಠಡಿಗಳು, ಶೌಚಾಲಯ, ಕಾಂಪೌಂಡ್ ಶಿಥಿಲಗೊಂಡಲ್ಲಿ ಅವುಗಳನ್ನು ಬಳಸದಂತೆ ಸೂಚಿಸಲಾಗಿದೆ. ಇನ್ನು ಮಳೆಯಿಂದ ಪ್ರವಾಹ ಉಂಟಾಗಿ ಶಾಲೆಗಳಿಗೆ ಬಂದು ಹೋಗಲು ಸಮಸ್ಯೆ, ಶಾಲಾ ಕೊಠಡಿಗಳು ಜಲಾವೃತವಾಗಿ ಒಳಗೆ ನೀರು ಸಂಗ್ರಹವಾಗಿದ್ದರೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ, ಜಿಲ್ಲಾ ಉಪನಿರ್ದೇಶಕರು, ಸ್ಥಳೀಯ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತಂದು ಮುಖ್ಯ ಶಿಕ್ಷಕರು ಕೊಠಡಿಗಳ ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಶಿಕ್ಷಣ ಇಲಾಖೆ ಆಯುಕ್ತ ಆರ್.ವಿಶಾಲ್ ತಿಳಿಸಿದ್ದಾರೆ.

ಇದನ್ನೂ ಓದಿ: UPSC Prelims 2023: ಮೇ 28ರಂದು ಬೆಂಗಳೂರಿನಲ್ಲಿ ಬೆಳಗ್ಗೆ 6ರಿಂದಲೇ ಮೆಟ್ರೋ ಸಂಚಾರ ಆರಂಭ

ಇ‌ನ್ನು ಬಿಸಿಯೂಟದಲ್ಲಿ ಸಿಹಿ ಉಪಾಹಾರ ವಿತರಿಸಬೇಕು. ಜೂನ್ 1 ರಿಂದ ತರಗತಿಗಳನ್ನು ಆರಂಭಿಸಬೇಕು.‌ ಮಳೆಯಿಂದಾಗಿ ಹಳ್ಳ, ಕೊಳ್ಳ, ನದಿಗಳು ತುಂಬಿದ್ದು, ರಸ್ತೆಗಳು ಹಾಳಾಗಿ ಮಕ್ಕಳು ಶಾಲೆಗೆ ಬರಲು ತೊಂದರೆಯಾಗಿದ್ದರೆ ಅಧಿಕಾರಿಗಳ ಗಮನಕ್ಕೆ ತಂದು ಶಾಲೆಗೆ ರಜೆ ಘೋಷಿಸಬೇಕು ಎಂದು ಸೂಚಿಸಲಾಗಿದೆ.

Continue Reading
Advertisement
to new parliament inauguration and more news
ಕರ್ನಾಟಕ4 mins ago

ವಿಸ್ತಾರ TOP 10 NEWS: ಸಿದ್ದರಾಮಯ್ಯ ಸಂಪುಟ ಭರ್ತಿಯಿಂದ, ಉದ್ಘಾಟನೆಗೆ ಸಜ್ಜಾದ ಸಂಸತ್‌ ಭವನದವರೆಗಿನ ಪ್ರಮುಖ ಸುದ್ದಿಗಳಿವು

Virat kohli and wife anushka Sharma
ಕ್ರಿಕೆಟ್24 mins ago

Virat Kohli : ಕಾರ್ಯಕ್ರಮದ ವೇದಿಕೆಯಲ್ಲೇ ಪತ್ನಿ ಅನುಷ್ಕಾ ಜತೆ ವಾಗ್ವಾದ ನಡೆಸಿದ ವಿರಾಟ್​ ಕೊಹ್ಲಿ!

Cauvery 2.0 software launched at Koratagere
ಕರ್ನಾಟಕ27 mins ago

Koratagere News: ಕೊರಟಗೆರೆಯ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಕಾವೇರಿ 2.0 ತಂತ್ರಾಂಶ ಉದ್ಘಾಟನೆ

Bahuroopi Prakashana Programme
ಕರ್ನಾಟಕ34 mins ago

Bahuroopi Prakashana: ಸರ್ಕಾರ ಪುಸ್ತಕೋದ್ಯಮ ಬೆಂಬಲಿಸಲಿ: ಪೊನ್ ವಾಸುದೇವನ್

Dilapidated school room
ಕರ್ನಾಟಕ36 mins ago

Education Department: ಶಿಥಿಲ ಶಾಲಾ ಕೊಠಡಿಗಳ ಬಳಕೆ ಬೇಡ: ಶಿಕ್ಷಣ ಇಲಾಖೆ ಸುತ್ತೋಲೆ

BBMP school
ಕರ್ನಾಟಕ42 mins ago

Bbmp Teachers: ಜೂನ್‌ 1ರಿಂದ ಬಿಬಿಎಂಪಿ ಶಾಲೆಗಳಲ್ಲಿ ಶಿಕ್ಷಕರು ಗೈರು; ಮಕ್ಕಳ ಗತಿಯೇನು?

Foundation laying programme of new parliament building
ಕರ್ನಾಟಕ53 mins ago

New Parliament Building : ನೂತನ ಸಂಸತ್‌ ಭವನ ಉದ್ಘಾಟನೆಗೆ ಶೃಂಗೇರಿ ಪುರೋಹಿತರು

Laxmi Hebbalkar Shashikala jolle and leelavati r prasad
ಕರ್ನಾಟಕ1 hour ago

Karnataka Cabinet expansion: ಮೊದಲ, 2ನೇ ಬಾರಿಗೇ ಸಚಿವಗಿರಿ ಪಡೆದ ಬೆಳಗಾವಿ ಶಾಸಕಿಯರಿವರು!

New Parliament Building
ದೇಶ1 hour ago

ಹಳೇ ಬೇರು, ಹೊಸ ಚಿಗುರು: ಮೊದಲಿನ ಸಂಸತ್‌, ನೂತನ ಸಂಸತ್‌ ಭವನದ ನಡುವಿನ ವ್ಯತ್ಯಾಸ ಹೀಗಿದೆ ನೋಡಿ

Darbar Film
South Cinema1 hour ago

V Manohar: 23 ವರ್ಷಗಳ ನಂತರ ಡೈರೆಕ್ಟರ್ ಕ್ಯಾಪ್ ತೊಟ್ಟ ವಿ.ಮನೋಹರ್

7th Pay Commission
ನೌಕರರ ಕಾರ್ನರ್7 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

DCC Bank Recruitment 2023
ಉದ್ಯೋಗ4 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Sphoorti Salu
ಸುವಚನ16 hours ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Govt employees ssociation
ಕರ್ನಾಟಕ4 months ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

Village Accountant Recruitment
ಉದ್ಯೋಗ3 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Entitled leave for employees involved in strike Order from Govt
ನೌಕರರ ಕಾರ್ನರ್3 months ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ5 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

7th Pay Commission
ಕರ್ನಾಟಕ7 months ago

7th Pay Commission | 7 ವೇತನ ಆಯೋಗ ರಚನೆಯ ಘೋಷಣೆ; ಹರ್ಷ ವ್ಯಕ್ತಪಡಿಸುತ್ತಿರುವ ಸರ್ಕಾರಿ ನೌಕರರು

Teacher Transfer
ನೌಕರರ ಕಾರ್ನರ್7 months ago

ಸೇವಾ ನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ; ಸದ್ಯವೇ ಸರ್ಕಾರದಿಂದ ಗುಡ್‌ ನ್ಯೂಸ್‌?

smartphone
ವಾಣಿಜ್ಯ2 months ago

Mobile export : ಭಾರತದಿಂದ 2022-23ರಲ್ಲಿ 85,000 ಕೋಟಿ ರೂ. ಮೊಬೈಲ್‌ ಫೋನ್‌ ರಫ್ತು

Laxmi Hebbalkar oath taking as a minister
ಕರ್ನಾಟಕ3 hours ago

Laxmi Hebbalkar: ಸಚಿವೆಯಾಗುವುದರ ಜತೆಗೆ ಅಜ್ಜಿಯೂ ಆದ ಲಕ್ಷ್ಮಿ ಹೆಬ್ಬಾಳ್ಕರ್‌; ಒಂದೇ ದಿನ 2 ಸಿಹಿ ಸುದ್ದಿ!

HD Kumaraswamy in JDS Meeting
ಕರ್ನಾಟಕ1 day ago

H.D. Kumaraswamy: ಜೆಡಿಎಸ್‌ ವಿಸರ್ಜನೆ ಹೇಳಿಕೆಗೆ ಬದ್ಧ ಎಂದ ಎಚ್‌.ಡಿ. ಕುಮಾರಸ್ವಾಮಿ!

induction stoves
ಕರ್ನಾಟಕ1 day ago

Congress Guarantee: ಬಿಪಿಎಲ್ ಕಾರ್ಡ್‌ಗೆ ಮುಗಿಬಿದ್ದ ಜನ; ಇಂಡಕ್ಷನ್‌ ಸ್ಟವ್‌ಗೆ ಹೆಚ್ಚಿದ ಬೇಡಿಕೆ

Viral Video, Teacher and Principal are quarrel in front of School children
ದೇಶ1 day ago

Viral Video: ಶಾಲಾ ಮಕ್ಕಳ ಎದುರೇ ಹೊಡೆದಾಡಿಕೊಂಡ ಪ್ರಿನ್ಸಿಪಾಲ್, ಟೀಚರ್! ಇಲ್ಲಿದೆ ನೋಡಿ ವಿಡಿಯೋ

Horoscope Today
ಪ್ರಮುಖ ಸುದ್ದಿ2 days ago

Horoscope Today : ಮಕರ ರಾಶಿಯವರಿಗೆ ಕೌಟುಂಬಿಕವಾಗಿ ಶುಭ ಫಲ; ಇಂದಿನ ಭವಿಷ್ಯ ಇಲ್ಲಿದೆ

HD Kumaraswamy said he will take up the issue of congress guarantee
ಕರ್ನಾಟಕ2 days ago

Congress Guarantee: ನಾವು ಕಡುಬು ತಿನ್ನೋಕ ರಾಜಕಾರಣ ಮಾಡ್ತಿರೋದು?: ಎಚ್‌.ಡಿ. ಕುಮಾರಸ್ವಾಮಿ ಆಕ್ರೋಶ

Beware if the Congress Guarantee card is conditioned and Pratap Simha says he will fight from June 1
ಕರ್ನಾಟಕ2 days ago

Congress Guarantee: ಗ್ಯಾರಂಟಿ ಕಾರ್ಡ್‌ಗೆ ಕಂಡೀಷನ್ ಹಾಕಿದ್ರೆ ಹುಷಾರ್‌; ಜೂನ್‌ 1ರಿಂದ ಹೋರಾಟವೆಂದ ಪ್ರತಾಪ್‌ ಸಿಂಹ

Electricity bill man hit bescom staff
ಕರ್ನಾಟಕ3 days ago

Electricity Bill: ಕರೆಂಟ್‌ ಬಿಲ್‌ ಕಿರಿಕ್‌; ಬಾಕಿ ಬಿಲ್‌ ಕಟ್ಟು ಎಂದಿದ್ದಕ್ಕೆ ಚಪ್ಪಲಿಯಿಂದಲೇ ಹೊಡೆದವ ಅರೆಸ್ಟ್‌

karnataka politics it takes time to implement guarantee schemes says minister priyank kharge
ಕರ್ನಾಟಕ3 days ago

Saffronisation issue : ಬಿಜೆಪಿಯವರಿಗೆ ತೊಂದರೆ ಇದ್ರೆ ಪಾಕಿಸ್ತಾನಕ್ಕೆ ಹೋಗಲಿ; ಪ್ರಿಯಾಂಕ್‌ ಖರ್ಗೆ ವಿವಾದಿತ ಹೇಳಿಕೆ

horoscope today
ಪ್ರಮುಖ ಸುದ್ದಿ4 days ago

Horoscope Today : ಪಂಚಮಿಯ ದಿನ ಪಂಚ ರಾಶಿಯವರಿಗೆ ಶುಭ ಫಲ; ಇಲ್ಲಿದೆ ಇಂದಿನ ದಿನ ಭವಿಷ್ಯ

ಟ್ರೆಂಡಿಂಗ್‌

error: Content is protected !!