ಬೆಂಗಳೂರು: ಸಾಂಕ್ರಾಮಿಕ ಕೊರೊನಾ ಸೋಂಕು (Coronavirus) ಮತ್ತೆ ವ್ಯಾಪಿಸುತ್ತಿದ್ದು, ನೆರೆ ರಾಷ್ಟ್ರಗಳಲ್ಲಿ ಅಬ್ಬರಿಸುತ್ತಿದೆ. ಚೀನಾ, ಥೈಲ್ಯಾಂಡ್, ಯುಎಸ್ ಸೇರಿ ಹಲವು ನೆರೆ ರಾಷ್ಟ್ರಗಳಲ್ಲಿ ಪ್ರಕರಣ ಹೆಚ್ಚಾಗುತ್ತಿದೆ. ಹೀಗಾಗಿ ಬೆಂಗಳೂರು ನಗರ ಕೊರೊನಾ ಹರಡುವ ಹಾಟ್‌ಸ್ಪಾಟ್ ಆಗುವ ಮೊದಲೇ ಸೂಕ್ತ ಕ್ರಮ ಕೈಗೊಳ್ಳಲು ನಗರದ ಆಸ್ಪತ್ರೆಗಳಿಗೆ, ಸಮುದಾಯ ಆರೋಗ್ಯ ಕೇಂದ್ರಗಳಿಗೆ ಪ್ರತ್ಯೇಕ ಮಾರ್ಗಸೂಚಿಯನ್ನು ಹೊರಡಿಸಲಾಗಿದೆ.
-ಆಸ್ಪತ್ರೆಯ ಹೊರ ರೋಗಿ ವಿಭಾಗಕ್ಕೆ ಬರುವ ILI/SARI ರೋಗ ಲಕ್ಷಣಗಳಿರುವ ಎಲ್ಲರಿಗೂ ಕೋವಿಡ್-19 ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಬೇಕು.
-ಆಸ್ಪತ್ರೆಗೆ ಬರುವ 60 ವರ್ಷ ಮೇಲ್ಪಟ್ಟ ವಯೋವೃದ್ಧರಿಗೆ ಯಾವುದೇ ರೋಗ ಲಕ್ಷಣಗಳಿದ್ದರೆ ಅವರಿಗೆ ಕೋವಿಡ್ ಪರೀಕ್ಷೆಯನ್ನು ಮಾಡಿಸಬೇಕು.
-ಆಸ್ಪತ್ರೆಗೆ ಬರುವ COMORBIDITY ಇರುವಂತ ರೋಗಿಗಳಿಗೆ ಯಾವುದೇ ರೋಗ ಲಕ್ಷಣಗಳಿದ್ದರೆ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿಸಬೇಕು.
-ಮೂರನೇ ಕೋವಿಡ್ ಡೋಸನ್ನು ಪಡೆಯುವಂತೆ ಸೂಚಿಸುವುದು.
-ಕೋವಿಡ್ ಪಾಸಿಟಿವ್ ಫಲಿತಾಂಶ ಬಂದ ಮಾದರಿಗಳನ್ನು ಜೀನೋಮ್ ಸೀಕ್ವೆನ್ಸಿಂಗ್ ಕಡ್ಡಾಯವಾಗಿ ಕಳುಹಿಸಬೇಕು.
-ಸೋಂಕಿನ ಲಕ್ಷಣಗಳನ್ನು ಹೊಂದಿದವರಿಗೆ ಕಡ್ಡಾಯವಾಗಿ ಕೋವಿಡ್ ಪರೀಕ್ಷೆಗೆ ಒಳಪಡಿಸುವುದು.
-ಸೋಂಕಿತರ ಪ್ರಾಥಮಿಕ, ದ್ವಿತೀಯ ಸಂಪರ್ಕಿತರನ್ನು ಕೋವಿಡ್ ಪರೀಕ್ಷೆ ಮಾಡಬೇಕು.
ಇದನ್ನೂ ಓದಿ | Coronavirus | ಆಕ್ಸಿಜನ್, ವೆಂಟಿಲೇಟರ್ ಕಡೆ ಗಮನಹರಿಸಿ, ಕೇಂದ್ರದ ಹೊಸ ಮಾರ್ಗಸೂಚಿಯಲ್ಲಿ ಮತ್ತೇನಿದೆ?