Site icon Vistara News

Chaitra Kundapura : ಚೈತ್ರಾ ವಂಚನೆ ಸಿ.ಟಿ. ರವಿಗೆ ಮೊದಲೇ ಗೊತ್ತಿತ್ತಾ? ಸೂಲಿಬೆಲೆ ಹೇಳಿದಾಗ ಪ್ರತಿಕ್ರಿಯೆ ಏನಿತ್ತು?

CT Ravi Chakravarty soolibele Chaitra

ಚಿಕ್ಕಮಗಳೂರು: ಫೈರ್‌ ಬ್ರಾಂಡ್‌ ಭಾಷಣಕಾರ್ತಿ ಚೈತ್ರಾ ಕುಂದಾಪುರ (Chaitra Kundapura) ಬೈಂದೂರು ಕ್ಷೇತ್ರದ ಬಿಜೆಪಿ ಟಿಕೆಟ್‌ (Bynduru BJP Ticket) ಕೊಡಿಸುವುದಾಗಿ ಐದು ಕೋಟಿ ರೂ. ಪಡೆದು ವಂಚಿಸಿದ ವಿಷಯ ಜುಲೈ ತಿಂಗಳಲ್ಲೇ ಆಗ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಸಿ.ಟಿ ರವಿ (BJP Leader CT Ravi) ಅವರಿಗೆ ತಿಳಿದಿತ್ತು ಎಂಬ ಅಂಶ ಬೆಳಕಿಗೆ ಬಂದಿದೆ.

ಚುನಾವಣೆ ಮುಗಿದ ಬಳಿಕ ಈ ಪ್ರಕರಣ ನಿಧಾನಕ್ಕೆ ಬೆಳಕಿಗೆ ಬಂದಿದ್ದು, ಆಗಲೇ ಅದು ಸಿ.ಟಿ. ರವಿ ಅವರ ಗಮನಕ್ಕೆ ಬಂದಿತ್ತು. ಆದರೆ, ಇಂಥ ಪ್ರಕರಣಗಳು ಮುಂದೆ ನಡೆಯಬಾರದು ಎಂಬ ಕಾರಣಕ್ಕೆ ಈ ಬಗ್ಗೆ ದೂರು ನೀಡುವಂತೆ ಗೋವಿಂದ ಪೂಜಾರಿ ಅವರಿಗೆ ತಿಳಿಸುವಂತೆ ಹೇಳಿದ್ದರು.

ವಜ್ರದೇಹಿ ಮಠದ ಸ್ವಾಮೀಜಿ ಹೇಳಿದ್ದರು…

ಗೋವಿಂದ ಪೂಜಾರಿ ಅವರಿಗೇ ಐದು ಕೋಟಿ ರೂ. ವಂಚನೆ ಮಾಡಿರುವ ಚೈತ್ರಾ ಕುಂದಾಪುರ ಅವರ ವಿರುದ್ಧ ಆದಾಯ ತೆರಿಗೆ ಇಲಾಖೆಗೆ ದೂರು ನೀಡುವ ಪತ್ರವೊಂದನ್ನು ರೆಡಿ ಮಾಡಿದ್ದರು. ಅದರಲ್ಲಿ ಮಂಗಳೂರಿನ ವಜ್ರದೇಹಿ ಮಠದ (Vajradehi Matt Swameeji) ಶ್ರೀ ರಾಜಶೇಖರಾನಂದ ಸ್ವಾಮೀಜಿ ಅವರ ಹೆಸರೂ ಉಲ್ಲೇಖವಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ವಜ್ರದೇಹಿ ಮಠದ ಸ್ವಾಮೀಜಿಗಳು, ಪ್ರಕರಣದಲ್ಲಿ ಅಭಿನವ ಹಾಲಶ್ರೀ ಸ್ವಾಮೀಜಿಗಳ ಹೆಸರು ಬಂದಿದ್ದರಿಂದ ಅವರಿಗೆ ಆಪ್ತರಾಗಿರುವ ಚಕ್ರವರ್ತಿ ಸೂಲಿಬೆಲೆಯವರಿಗೆ (Chakravarti Soolibele) ಫೋನ್‌ ಮಾಡಿ ವಿವರ ಕೇಳಿದೆ. ಆಗ ಚಕ್ರವರ್ತಿಯವರು ತಾನು ಈ ಬಗ್ಗೆ ಒಂದು ಸುತ್ತಿನ ಮಾತುಕತೆ ನಡೆಸಿದ್ದೇನೆ. ನಾನು ಇದನ್ನು ಸಿ.ಟಿ. ರವಿ ಅವರ ಗಮನಕ್ಕೂ ತಂದಿದ್ದಾಗಿ ಹೇಳಿದರು ಎಂದು ವಿವರಿಸಿದ್ದರು.

ಇದನ್ನೂ ಓದಿ : Chaitra Kundapura : ಅಬ್ಬಬ್ಬಾ… ಗೋವಿಂದ ಪೂಜಾರಿಯೇ ವಂಚಕ ಎಂದು ಬಿಂಬಿಸಲು ಕ್ರಿಮಿನಲ್‌ ಐಡಿಯಾ; ITಗೆ ದೂರು

ಚಿಕ್ಕಮಗಳೂರಿನಲ್ಲಿ ದೃಢೀಕರಿಸಿದ ಸಿ.ಟಿ. ರವಿ

ಈ ಪ್ರಕರಣವನ್ನು ಜುಲೈ ತಿಂಗಳಲ್ಲೇ ಚಕ್ರವರ್ತಿ ಸೂಲಿಬೆಲೆಯವರು ತಮ್ಮ ಗಮನಕ್ಕೆ ತಂದಿದ್ದರು ಎಂಬುದನ್ನು ಸ್ವತಃ ಸಿ.ಟಿ. ರವಿ ಅವರು ಸ್ಪಷ್ಟಪಡಿಸಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾಜಿ ಸಚಿವ ಸಿಟಿ ರವಿ ಹೇಳಿಕೆ ನೀಡಿ, ʻʻನನಗೆ ಚೈತ್ರಾ ಕುಂದಾಪುರ ಪ್ರಕರಣ ಗೊತ್ತಿರಲಿಲ್ಲ. ಈ ವಿಚಾರ ನನ್ನ ಗಮನಕ್ಕೆ ತಂದಿದ್ದು ಚಕ್ರವರ್ತಿ ಸೂಲಿಬೆಲೆ. ಚೈತ್ರಾ ಕುಂದಾಪುರ ಉದ್ಯಮಿ ಗೋವಿಂದ್ ಬಾಬು ಪೂಜಾರಿಗೆ ಟಿಕೆಟ್ ಕೊಡಿಸುತ್ತೇನೆ ಎಂದು ಮೋಸ ಮಾಡಿದ್ದಾರೆಂದು ತಿಳಿಸಿದ್ದರು. ಆ ಸಮಯದಲ್ಲಿ ನಮ್ಮ ಪಕ್ಷದಲ್ಲಿ ಆ ರೀತಿಯ ಪದ್ಧತಿ ಇಲ್ಲ ಎಂದು ಹೇಳಿದ್ದೆ. ಹಣಕ್ಕಾಗಿ ಟಿಕೆಟ್ ಮಾರಿಕೊಳ್ಳುವ ಪದ್ಧತಿ ನಮ್ಮಲ್ಲಿ ಇಲ್ಲ. ಹಣಕ್ಕಾಗಿ ಪಕ್ಷದಲ್ಲಿ ಟಿಕೆಟ್ ಕೊಡುವುದಿಲ್ಲ. ಯಾರೇ ಇದ್ದರೂ ಪ್ರಕರಣ ಹೊರಗೆ ಬರಲಿ. ಒಂದು ಪ್ರಕರಣವನ್ನು ಮುಚ್ಚಿಟ್ಟರೆ ಇಂತಹ ಹಲವು ಪ್ರಕರಣಗಳು ಮತ್ತೆ ಆಗುತ್ತವೆ. ಹೀಗೆ ಮೋಸ ಮಾಡಿ ಟಿಕೆಟ್ ದಕ್ಕಿಸಿಕೊಂಡರೆ ಮತ್ತೆ ಹತ್ತು ಜನರಿಗೆ ಮೋಸ ಮಾಡುವ ಸ್ವಭಾವ ಬರುತ್ತದೆ. ಇಂಥ ಪ್ರಕರಣ ಹೊರಗೆ ಬಂದರೆ ಉಳಿದವರಿಗೆ ಪಾಠ ಆಗುತ್ತದೆ ಎಂಬ ಕಾರಣಕ್ಕಾಗಿ ದೂರು ಕೊಡಲು ಹೇಳಿದ್ದೆʼʼ ಎಂದು ಸಿ.ಟಿ. ರವಿ ಹೇಳಿದರು.

ಇದನ್ನೂ ಓದಿ: Chaitra Kundapura : ಚೈತ್ರಾ ಕುಂದಾಪುರ ವಂಚನೆ ಕೇಸಿನಲ್ಲಿ ವಜ್ರದೇಹಿ ಸ್ವಾಮೀಜಿ ಹೆಸರು; ಹಾಗಿದ್ದರೆ ಅವರ ಪಾತ್ರವೇನು?

ʻʻನಾನು ಚಕ್ರವರ್ತಿಯವರಿಗೆ ಒಂದು ವಿಷಯ ತಿಳಿಸಿದೆ, ಗೋವಿಂದ ಪೂಜಾರಿಯವರಿಗೆ ಹೇಳಿ, ನೀವು ಹಣಕ್ಕಾಗಿ ಟಿಕೆಟ್ ಕೊಡ್ತಾರೆ ಅಂತಾ ಭಾವಿಸಿದ್ದು ತಪ್ಪು. ನಿಮಗೆ ಯಾರು ಮೋಸ ಮಾಡಿದ್ದಾರೆ ನೀವು ಮೋಸ ಹೋಗಿದ್ದೀರಿ. ನೀವು ಹೇಳ್ತಾ ಇರೋ ವ್ಯಕ್ತಿಗಳು ಇಲ್ಲ. ಹೀಗಾಗಿ ಕಾನೂನು ರೀತಿ ಕ್ರಮ ಕೈಗೊಳ್ಳಿ ಎಂದು ತಿಳಿಸಿ ಎಂದು ಚಕ್ರವರ್ತಿ ಸೂಲಿಬೆಲೆಯವ್ರಿಗೆ ಹೇಳಿದ್ದೆʼʼ ಎಂದು ಅವರು ಸ್ಪಷ್ಟಪಡಿಸಿದರು.

ʻʻಚುನಾವಣೆ ಮುಗಿದ ಮೇಲೆ ಚಕ್ರವರ್ತಿಯವರು ಫೋನ್‌ನಲ್ಲಿ ಮಾತನಾಡಿದರು. ಚಕ್ರವರ್ತಿ, ನಿಮಗೆ ಗೊತ್ತಿತ್ತಾ ಹಣ ಕೋಡೋದು ಅಂದೆ ಗೊತ್ತಿಲ್ಲ ಅಂದ್ರು. ಹಾಗಿದ್ದರೆ ದೂರು ಕೊಡಲಿ. ಮೋಸ ಮಾಡುವವರಿಗೆ ಪಾಠ ಆಗಬೇಕು ಎಂದು ಸ್ಪಷ್ಟವಾಗಿ ಹೇಳಿದ್ದೇನೆʼʼ ಎಂದರು ಸಿ.ಟಿ. ರವಿ.

Exit mobile version