ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದಲ್ಲಿ ಟೆಂಡರ್ ಅಕ್ರಮ (Tender Scam) ನಡೆಯುತ್ತಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಆಧಾರವಿಲ್ಲದೆ ಕಾಂಗ್ರೆಸ್ ಆರೋಪ ಮಾಡುತ್ತಿದೆ. ಆಧಾರವಿಟ್ಟುಕೊಂಡು ಆರೋಪ ಮಾಡಬೇಕು ಎಂದಿದ್ದಾರೆ.
ಹಾಗಿದ್ರೆ ಅವರು ವಿಧಾನಸೌಧದಲ್ಲಿ ಯಾಕೆ ಮಾತನಾಡಲಿಲ್ಲ? ಹೊರಗಡೆ ಹೋಗಿ ಆರೋಪ ಮಾಡ್ತಿದ್ದಾರೆ ಅಷ್ಟೇ. ವಿಧಾನಸೌಧದಕ್ಕಿಂತ ಜಾಗ ಬೇಕಾ ಅವರಿಗೆ? ಅವರ ಬಳಿ ಯಾವುದೇ ಆಧಾರವಿಲ್ಲ. ಸುಮ್ಮನೆ ಗಾಳಿಯಲ್ಲಿ ಗುಂಡು ಹೊಡೆಯೋದಲ್ಲ, ದಾಖಲೆ ಇಟ್ಟುಕೊಂಡು ದೂರು ನೀಡಲಿ. ಎಸಿಬಿಗಾದ್ರು ಅಥವಾ ಲೋಕಾಯುಕ್ತಕ್ಕಾದ್ರೂ ಹೋಗಿ ದೂರು ನೀಡಲಿ ಎಂದರು.
ಜಲಸಂಪನ್ಮೂಲ ಇಲಾಖೆಯಲ್ಲಿ ಅಕ್ರಮದ ಕುರಿತು ಗೂಳಿಹಟ್ಟಿ ಶೇಖರ್ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿ.ಟಿ. ರವಿ, ಗೂಳಿಹಟ್ಟಿ ಶೇಖರ್ ಬಳಿ ದಾಖಲೆ ಇದ್ದರೆ ಅವರು ದೂರು ಕೊಡಬಹುದು. ಯಾಕೆ ಗಾಳಿಯಲ್ಲಿ ಗುಂಡು ಹಾರಿಸಬೇಕು..? ಯಾರನ್ನೂ ಕಟ್ಟಿ ಹಾಕಿಲ್ಲ ದಾಖಲೆ ಇದ್ರೆ ಹೋಗಿ ಕೊಡಲಿ. ಯಾರು ತಪ್ಪು ಮಾಡಿದ್ರೆ ಅವರಿಗೆ ಶಿಕ್ಷೆಯಾಗಲಿ. ಉಪ್ಪು ತಿಂದವ ನೀರು ಕುಡಿಯುತ್ತಾನೆ. ಗೂಳಿಹಟ್ಟಿ ವಿರುದ್ಧ ಕ್ರಮ ಕೈಗೊಳ್ಳುತ್ತೀರಾ ಎನ್ನುವ ಪ್ರಶ್ನೆಗೆ ಉತ್ತರಿಸಿ, ಗೂಳಿಹಟ್ಟಿ ಬಗ್ಗೆ ರಾಜ್ಯ ಬಿಜೆಪಿ ಘಟಕ ಏನು ಯೋಚನೆ ಮಾಡಬೇಕು ಅದನ್ನು ಮಾಡುತ್ತದೆ. ನೀವು ಎಲ್ಲಿಂದ ಮುಂದಕ್ಕೆ ಹೋದ್ರಿ, ಅವರ ಹತ್ತಿರ ಅಧಾರವಿದ್ದರೆ ಖಂಡಿತ ವಿಧಾನಸಭೆಯಲ್ಲಿ ದಾಖಲೆ ಕೊಡಲಿ ಎಂದು ಹೇಳಿದರು.
ಅವರ ಹೇಳಿಕೆಯನ್ನ ನಾನು ಗಮನಸಿದ್ದೇನೆ. 22 ಸಾವಿರ ಕೋಟಿ ನೀರಾವರಿ ಟೆಂಡರ್ ಅಕ್ರಮ ನಡೆದಿದೆ ಎಂದು ಹೇಳಿದ್ದಾರೆ. ಅವರು ಸ್ವತಂತ್ರ ಇದ್ದಾರೆ, ವಿಧಾನಸಭೆಯೂ ನಡೆಯುತ್ತಿದೆ. ವಿಧಾನಸಭೆಯಲ್ಲಿ ದಾಖಲೆ ಕೊಟ್ಟು ತನಿಖೆಗೆ ಆಗ್ರಹಿಸಬಹುದು ಎಂದರು.
ಇದನ್ನೂ ಓದಿ: Tender Scam: ಕಾಂಗ್ರೆಸ್ ಕಾಲದ ಟೆಂಡರ್ ಅಕ್ರಮಗಳಿಗೆ ಉತ್ತರ ಕೊಡಲಿ: ಟೆಂಡರ್ ಆರೋಪಕ್ಕೆ ಸಿಎಂ ಬೊಮ್ಮಾಯಿ ಉತ್ತರ