Site icon Vistara News

CT Ravi : ಸಿ.ಟಿ. ರವಿ ಶಾರಿಕ್‌ನನ್ನೂ ಮೀರಿಸಿದ ರಾಜಕೀಯ ಉಗ್ರ: ಸಚಿನ್‌ ಮೀಗಾ

CT Ravi and Sachin meega

ಬೆಂಗಳೂರು/ಚಿಕ್ಕಮಗಳೂರು: ರಾಜಕಾರಣದಲ್ಲಿ ಮಾಸ್ಟರ್ ಮೈಂಡ್ ಉಗ್ರ ಯಾರಾದರೂ ಇದ್ದರೆ ಅದು ಮಾಜಿ ಸಚಿವ ಸಿ.ಟಿ. ರವಿ (Former Minister CT Ravi). ಅವರು ಕುಕ್ಕರ್ ಬಾಂಬ್ ಬ್ಲಾಸ್ಟ್ ಶಂಕಿತ ಉಗ್ರ ಶಾರಿಕ್‌ಗಿಂತ (Suspected terrorist Shariq) ಒಂದು ಕೈ ಮೇಲಿದ್ದಾರೆ. ಅವರು ತಮ್ಮ ರಾಜಕೀಯ ಜೀವನದಲ್ಲಿ ಹಲವರನ್ನು ಬಲಿ ಕೊಟ್ಟಿದ್ದಾರೆ. ಹೀಗಾಗಿ ಅವರನ್ನು ಗಡಿಪಾರು ಮಾಡಬೇಕು ಎಂದು ಕರ್ನಾಟಕ ಕಿಸಾನ್ ಘಟಕದ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಮೀಗಾ (Karnataka Congress Kisan Cell president Sachin Meega‌) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಗೋರಿ, ದರ್ಗಾಗಳನ್ನು ಸಂಚಿನಲ್ಲಿ ದ್ವಂಸ ಮಾಡಿಸಿದ್ದರೆ ಅದಕ್ಕೆ ಸಿ.ಟಿ. ರವಿ ಅವರೇ ಕಾರಣ. ಬಜರಂಗದಳದಲ್ಲಿ ಈ ಹಿಂದೆ ಅಮಾಯಕ ಮಹೇಂದ್ರ ಕುಮಾರ್ ಅವರನ್ನು ಬಳಸಿಕೊಂಡು ಗೋರಿ, ದರ್ಗಾ, ದೇವಸ್ಥಾನಗಳನ್ನು ದ್ವಂಸ ಮಾಡಿದ್ದಾರೆ. ಸಿ.ಟಿ. ರವಿ ಪದೇ ಪದೆ ತಮ್ಮ ನಾಲಿಗೆಯನ್ನು ಹರಿಬಿಡುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ (CM Siddaramaiah) ಅವರನ್ನು ಸಿದ್ರಾಮುಲ್ಲಾ ಖಾನ್ ಎಂದೆಲ್ಲ ಹೇಳಿದ್ದಾರೆ. ಈಗ ಮತ್ತೆ ಡಿಸಿಎಂ ಡಿ.ಕೆ. ಶಿವಕುಮಾರ್‌ (DCM DK Shivakumar) ಅವರ ಹೆಸರಿಗೆ ಕೊತ್ವಾಲ್ ಹೆಸರನ್ನು ಸೇರಿಸಿದ್ದಾರೆ ಎಂದು ಸಚಿನ್‌ ಮೀಗಾ ಹೇಳಿದರು.

ಇದನ್ನೂ ಓದಿ: Karnataka Politics : ಬಿಜೆಪಿ ವರ್ಸಸ್‌ ಕಾಂಗ್ರೆಸ್‌; ಕರ್ನಾಟಕದಲ್ಲಿ ಆಪರೇಷನ್ ಪಾಲಿಟಿಕ್ಸ್!

ಸಿ.ಟಿ. ರವಿಯನ್ನು ಚಿಕ್ಕಮಗಳೂರು ಜನ ಮನೆಗೆ ಕಳಿಸಿದ್ದಾರೆ. ಇಂಥ ವಿಕೃತ ಹೇಳಿಕೆಗಳಿಂದ ಸಿ.ಟಿ. ರವಿ ಖುಷಿಪಡುತ್ತಾರೆ. ಉಗ್ರ ಸಿ.ಟಿ. ರವಿಯನ್ನು ಗಡಿಪಾರು ಮಾಡಬೇಕು ಎಂದು ಸಚಿನ್‌ ಮೀಗಾ ಆಗ್ರಹಿಸಿದ್ದಾರೆ.

ಕಾಂಗ್ರೆಸ್‌ ಮೇಲೆ ವಾಗ್ದಾಳಿ ನಡೆಸಿದ್ದ ಸಿ.ಟಿ. ರವಿ

ಮಾಜಿ ಸಚಿವ ಸಿ.ಟಿ. ರವಿ ಅವರು ಶನಿವಾರ (ಆಗಸ್ಟ್‌ 13) ವಿಡಿಯೊ ಹೇಳಿಕೆ ಬಿಡುಗಡೆ ಮಾಡಿ ಕಾಂಗ್ರೆಸ್‌ ಹಾಗೂ ಆ ಪಕ್ಷದ ಶಾಸಕರು, ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಡಿ.ಕೆ. ಶಿವಕುಮಾರ್‌ ಮೇಲೆಯೂ ಆಕ್ರೋಶವನ್ನು ಹೊರಹಾಕಿದ್ದರು.

ಕಾಂಗ್ರೆಸ್ಸಿನ ಬಹುತೇಕ ಶಾಸಕರು ಒಂದೇ ದಿನ ವಸೂಲಿಗೆ ಹೊರಟಿದ್ದಾರೆ. ನಾವು ಅಷ್ಟು ಖರ್ಚು ಮಾಡಿದ್ದೇವೆ ಅಂತ ಬಹಿರಂಗವಾಗಿ ಹೇಳುತ್ತಿದ್ದಾರೆ. ದಾನ-ಧರ್ಮಕ್ಕೆ ರಾಜಕಾರಣ ಮಾಡ್ತೀನಾ, ನಾನು ಧರ್ಮರಾಯನಾ? ಎಂದು ಕೇಳುತ್ತಿದ್ದಾರೆ. ಖರ್ಚು ಮಾಡಿರೋದು ವಸೂಲಿ ಆಗಬೇಕು. ಹೆಂಡತಿ, ಮಕ್ಕಳನ್ನು ಬೀದಿಗೆ ನಿಲ್ಲಿಸಲು ಆಗುತ್ತದೆಯೇ? ಎಂದು ಆ ಪಕ್ಷದ ಶಾಸಕರೇ ಕೇಳುತ್ತಿದ್ದಾರೆ ಎಂಬುದಾಗಿ ಮಾಜಿ ಶಾಸಕ ಸಿ.ಟಿ.ರವಿ ಹೇಳಿದ್ದರು.

ಸಚಿನ್‌ ಮೀಗಾ ಅವರ ಸಂಪೂರ್ಣ ಮಾತು ಇಲ್ಲಿದೆ

ಕರಪ್ಷನ್-ಕಾಂಗ್ರೆಸ್ (Corruption and Congress) ಒಂದೇ ನಾಣ್ಯದ ಎರಡು ಮುಖಗಳು. ದೇಶ-ರಾಜ್ಯದ ಹಗರಣಗಳನ್ನು ಪಟ್ಟಿ ಮಾಡಿದರೆ ಶೇ.90 ಕಾಂಗ್ರೆಸ್ ಅವಧಿಯಲ್ಲಿ ಆಗಿದೆ. 90% ಅಪರಾಧಿ ಸ್ಥಾನದಲ್ಲಿ ಇರೋರು ಕಾಂಗ್ರೆಸ್ ಸಚಿವರು, ಆ ಕಾಲದ ಅಧಿಕಾರಿಗಳು. ಭ್ರಷ್ಟಾಚಾರದ ಬೀಜ ಬಿತ್ತಿದ್ದೇ ಕಾಂಗ್ರೆಸ್ ಪಕ್ಷ. ಭ್ರಷ್ಟಾಚಾರದಿಂದ ಕಾಂಗ್ರೆಸ್ ವಿಮುಖವಾಗಿದೆ ಅನ್ನೋದನ್ನು ಯಾರೂ ನಂಬಲ್ಲ. ಭ್ರಷ್ಟಾಚಾರದ ಮತ್ತೊಂದು ಮುಖವೇ ಕಾಂಗ್ರೆಸ್ ಆಗಿದೆ. ಅವರು ಯಾವುದೇ ಪ್ರಾಮಾಣಿಕತೆಯ ಸೋಗು ಹಾಕಿದರೂ ಭ್ರಷ್ಟಾಚಾರದ ವಾಸನೆ ಇರುತ್ತದೆ. 40%, 15% ಆಗಿದೆ ಅಂದ್ರೆ ಕಡಿಮೆ ಆಯ್ತು ಅಂತ ಒಪ್ಪಿಕೊಂಡಂತೆ ಎಂದು ಸಿಎಂ ಹೇಳಿಕೆ ಗಮನಿಸಿದ್ದೇನೆ. ಅದಲ್ಲ, ನೀವು ಕೇಳುತ್ತಿರುವ 15% ಹಳೆಯದ್ದಕ್ಕೆ, ಹೊಸದು 50% ದಾಟಬಹುದು ಎಂದು ಸಿ.ಟಿ.ರವಿ ತಿವಿದಿದ್ದರು.

ಕೊತ್ವಾಲ್‌ ಬಗ್ಗೆ ಸಿ.ಟಿ. ರವಿ ಹೇಳಿದ್ದೇನು? ಇಲ್ಲಿದೆ ವಿಡಿಯೊ

ಇದನ್ನೂ ಓದಿ: Independence Day 2023 : ವಿಶ್ವ ಗುರು ಆಗುವತ್ತ ಹೆಜ್ಜೆ ಇಡುತ್ತಿದೆ ಅಜೇಯ ಭಾರತ: ಚಕ್ರವರ್ತಿ ಸೂಲಿಬೆಲೆ

ಈಗ ಸಿ.ಟಿ. ರವಿ ಅವರ ಮೇಲೆ ವಾಗ್ದಾಳಿ ನಡೆಸುವ ಭರದಲ್ಲಿ ಸಚಿನ್‌ ಮೀಗಾ ಅವರು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.

Exit mobile version