Site icon Vistara News

CT Ravi : ಉರಿ ಗೌಡ, ದೊಡ್ಡ ನಂಜೇ ಗೌಡರು ಟಿಪ್ಪುವ‌ನ್ನು ಕೊಂದಿದ್ದಕ್ಕೆ ಐತಿಹಾಸಿಕ ದಾಖಲೆ ಇದೆ ಎಂದ ಸಿ.ಟಿ. ರವಿ

It is a matter of pride that Congress has compared me to Nanjegowda says CT Ravi Tipu Sultan updates

ಮಂಡ್ಯ: ʻʻಉರಿ ಗೌಡ, ನಂಜೇ ಗೌಡ ಟಿಪ್ಪುವನ್ನು ಕೊಂದರು ಎನ್ನುವುದಕ್ಕೆ ಐತಿಹಾಸಿಕ ದಾಖಲೆ ಇದೆʼʼ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ (CT Ravi) ಹೇಳಿದ್ದಾರೆ.

ಶ್ರೀರಂಗಪಟ್ಟಣದಲ್ಲಿ ಮಾತನಾಡಿದ ಅವರು, ʻʻಒಕ್ಕಲಿಗರು ವೀರರಾಗಿರಬಾರದಾ? ಟಿಪ್ಪುವನ್ನು ಮೈಸೂರು ಹುಲಿ ಎಂದು ಬಿಂಬಿಸಲಾಗುತ್ತಿದೆ. ಅವನೇನು ಹುಲಿ ಕೊಂದಿದ್ನಾ? ಅವನು ಒಬ್ಬ ನೌಕರನ ಮಗ ಅಷ್ಟೆʼʼ ಎಂದು ಹೇಳಿದ ಅವರು, ಉರಿ ಗೌಡ ದೊಡ್ಡ ನಂಜೇ ಗೌಡರು ಟಿಪ್ಪುವ‌ನ್ನು ಕೊಂದರು ಎಂಬುದಕ್ಕೆ ಐತಿಹಾಸಿಕ ದಾಖಲೆ ಇವೆ. ಅದು ಹೊರಗೆ ಬರಲಿ ಎಂದು ಹೇಳಿದರು.

ʻʻಶ್ರೀರಂಗಪಟ್ಟಣದಲ್ಲಿರುವ ಜಾಮಿಯಾ ಮಸೀದಿ ಹಿಂದೆ ಅದು ಮೂಡಲಬಾಗಿಲ ದೇವಾಲಯ ಆಗಿತ್ತು. ಮಸೀದಿ ಇರೋ ಜಾಗದಲ್ಲಿ ಹಿಂದೂ ದೇವಾಲಯದ ಕುರುಹು ಇದೆ ಎಂದಾದರೆ ಉರಿ ಗೌಡ, ದೊಡ್ಡ ನಂಜೇಗೌಡರು ಟಿಪ್ಪುವನ್ನ ಕೊಂದರು ಎಂಬುದು ಸತ್ಯವಾಗುತ್ತದೆ. ಜಾಮೀಯಾ ಮಸೀದಿ ಬಳಿ ಪರಿಶೀಲನೆ ನಡೆಸಲಿ. ಅಲ್ಲಿ ಕುರುಹುಗಳಿದ್ದರೆ ಒಪ್ಪಿಕೊಳ್ಳಲಿʼʼ ಎಂದು ಸಿ.ಟಿ. ರವಿ ಹೇಳಿದರು.

ʻʻನಾವು ಬಾಬರಿ ಮಸೀದಿ ಹಾಗೂ ದತ್ತ ಪೀಠದ ವಿಚಾರದಲ್ಲಿ ನಡೆದುಕೊಂಡ ರೀತಿಯಲ್ಲೇ ಜಾಮೀಯ ಮಸೀದಿಯಲ್ಲಿ ದೇವಾಲಯ ಪುನರುತ್ಥಾನ ಮಾಡಲು ಒಂದು ಕಡೆ ಕೋರ್ಟ್ ಮತ್ತೊಂದು ಕಡೆ ಜನಾಂದೋಲನ ರೂಪಿಸುತ್ತಿದ್ದೇವೆ. ಅದನ್ನ ಕೇವಲ ಬಲಪ್ರದರ್ಶನದಿಂದ ಮಾಡೋದಾದ್ರೆ ಅದು ಜಾಸ್ತಿ ಸಮಯ ತೆಗೆದುಕೊಳ್ಳುವುದಿಲ್ಲʼʼ ಎಂದು ಸಿ.ಟಿ ರವಿ ನುಡಿದರು.

ʻʻಬಿಜೆಪಿಯ ವಿಜಯ ಯಾತ್ರೆಯಲ್ಲಿ ನಾವು ನಮ್ಮ ಡಬಲ್ ಸರ್ಕಾರದ ಯೋಜನೆಗಳನ್ನು ಜನರ ಮುಂದಿಡೋ ಯತ್ನ ಮಾಡ್ತಿದ್ದೀವಿ. ಕಾಂಗ್ರೆಸ್‌ನವರು ಜನರಿಗೆ ಗ್ಯಾರಂಟಿ ಕಾರ್ಡ್ ಕೊಡ್ತಿಲ್ಲ. ಬದಲಾಗಿ ಸುಳ್ಳಿನ ಕಾರ್ಡ್ ಕೊಡ್ತಿದೆ. ಯಾಕಂದ್ರೆ ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳನ್ನು ನೋಡಿದರೆ ಗೊತ್ತಾಗುತ್ತದೆʼʼ ಎಂದು ಹೇಳಿದ ಸಿ.ಟಿ. ರವಿ ಅವರು, ಅವರ ಗ್ಯಾರಂಟಿ ಕಾರ್ಡ್‌ ಏನಂದ್ರೆ, ಅವರದು ಕುಕ್ಕರ್ ಬ್ಲಾಸ್ಟ್ ಪರವಾಗಿ ನಿಲ್ಲುವ ಗ್ಯಾರಂಟಿ. ಹಿಂದೂ ಕಾರ್ಯಕರ್ತರ ಹತ್ಯೆಯಾಗೋದು ಗ್ಯಾರಂಟಿʼʼ ಎಂದು ಲೇವಡಿ ಮಾಡಿದರು.

ʻʻಮಂಡ್ಯದಲ್ಲಿ ರಾಜಕೀಯ ಬದಲಾವಣೆ ಗಾಳಿ ಬೀಸುತ್ತದೆ. ನಾಲ್ಕರಿಂದ ಐದು ಸೀಟ್‌ಗಳಲ್ಲಿ ನಾವು ಗೆಲ್ಲಲಿದ್ದೇವೆ.
ಮಂಡ್ಯದ ಹೆಸರು ಹೇಳಿಕೊಂಡು ರಾಜಕಾರಣ ಮಾಡಿದವರು ಅವರ ಕುಟುಂಬವನ್ನು ಬೆಳೆಸಿಕೊಂಡರು. ಮೈಷುಗರ್ ಸಕ್ಕರೆ ಕಾರ್ಖಾನೆ ಪುನಶ್ವೇತನ ಆಗಿಯೇ ಆಗುತ್ತದೆʼʼ ಎಂದು ಹೇಳಿದರು.

ಇದನ್ನೂ ಓದಿ : Lokayukta Raid : ಕಾಂಗ್ರೆಸ್‌ ಸರ್ಕಾರ ಇದ್ದಿದ್ರೆ ಈ ತರ ರೇಡ್‌ ಆಗ್ತಾನೇ ಇರ್ಲಿಲ್ಲ ಎಂದ ಬಿಜೆಪಿ ನಾಯಕ ಸಿ.ಟಿ. ರವಿ

Exit mobile version