Site icon Vistara News

Cyclone Mandous‌ | ಚಂಡಮಾರುತ ಎಫೆಕ್ಟ್: ಮಲೆನಾಡಾದ ಬಿಸಿಲನಾಡು ಕೊಪ್ಪಳ, ವಿಜಯನಗರ: ಎಲ್ಲೆಡೆ ಶೀತಗಾಳಿ, ಮಳೆ

Cyclone Mandous‌ rain news weather report

ಮಂಡ್ಯ/ಕೊಪ್ಪಳ/ವಿಜಯನಗರ: ಮಾಂಡೌಸ್‌ ಚಂಡಮಾರುತ ಎಫೆಕ್ಟ್‌ನಿಂದಾಗಿ (Cyclone Mandous‌) ರಾಜ್ಯಾದ್ಯಂತ ಹವಾಮಾನ ವೈಪರೀತ್ಯ ಉಂಟಾಗಿದೆ. ವಿವಿಧೆಡೆ ಜಿಟಿಜಿಟಿ ಮಳೆ ಗಟ್ಟಿಯಾಗಿ ಹಿಡಿದಿದ್ದರೆ, ಇತ್ತ ಗಡಿಭಾಗವು ಮಲೆನಾಡಿನಂತಾಗಿದೆ. ಶೀತಗಾಳಿಗೆ ಥಂಡಾ ಆಗಿರುವ ಜನರು ಭಾನುವಾರ ಹೊರಗೆ ಹೋಗದೆ ಮನೆಯೇ ಮಂತ್ರಾಲಯವಾಗಿದೆ.

ಜಿಟಿ ಜಿಟಿ ಮಳೆಗೆ ಅಂಗಡಿ ಮುಂಗಟ್ಟಿನ ಆಶ್ರಯ ಪಡೆದ ಜನತೆ

ಮಂಡ್ಯ ಜಿಲ್ಲೆಯಾದ್ಯಂತ ಬೆಳಗ್ಗೆಯಿಂದಲೇ ಬಿಟ್ಟೂಬಿಡದೆ ಜಿಟಿಜಿಟಿ ಮಳೆ ಸುರಿಯುತ್ತಿದ್ದು, ನಿರಂತರ ತುಂತುರು ಮಳೆಗೆ ಜನ ಜೀವನ ಅಸ್ತವ್ಯಸ್ತವಾಗಿದೆ. ಸೈಕ್ಲೋನ್ ಎಫೆಕ್ಟ್‌ನ ಶೀತಗಾಳಿ ಹಾಗೂ ಜಿಟಿಜಿಟಿ ಮಳೆಗೆ ಜನರು ನಲುಗಿ ಹೋಗಿದ್ದಾರೆ.

ಮಳೆಗೆ ಮನೆ ಸೇರಿದ ಜನರು

ಇತ್ತ ವಿಜಯನಗರ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ ಇದ್ದು, ಥಂಡಿ ಗಾಳಿಗೆ ಜನರು ಗಢಗಢ ನಡುಗುವಂತಾಗಿದೆ. ಜಿಲ್ಲೆಯ ಬಹುತೇಕ ತಾಲೂಕುಗಳಲ್ಲಿ ಇದೇ ವಾತಾವರಣ ಇದ್ದು, ಆಗಾಗ ಬೀಳುತ್ತಿರುವ ತುಂತುರು ಮಳೆಗೆ ಹೊರಬರಲು ಜನರು ಹಿಂದೇಟು ಹಾಕುತ್ತಿದ್ದಾರೆ.

ಬಿಸಿಲನಾಡು ಕೊಪ್ಪಳ ಮಲೆನಾಡಿನಂತೆ ಬದಲಾಗಿದೆ. ಕೊಪ್ಪಳದಲ್ಲಿ ಕೂಲ್ ಕೂಲ್ ವೆದರ್‌ಗೆ ಜನರು ಮನೆ ಸೇರಿದ್ದಾರೆ. ಬೆಳಗ್ಗೆಯಿಂದಲೂ ಮೋಡ ಕವಿದ ವಾತಾವರಣ ಇದ್ದು, ಭಾನುವಾರ ಕಾರಣ ಜನರ ಓಡಾಡ ವಿರಳವಾಗಿದೆ.

ಬಿಸಿಲನಾಡು ಕೊಪ್ಪಳದಲ್ಲಿ ಮೋಡ ಕವಿದ ವಾತಾವರಣ

ಹವಾಮಾನ ಬದಲಾವಣೆ ಶುರುವಾಯ್ತು ತಲೆನೋವು, ನೆಗಡಿ,ಕೆಮ್ಮು
ಮನೆಯಿಂದ ಹೊರಬಂದರೆ ಸಾಕು ರಭಸವಾಗಿ ಬೀಸುವ ಗಾಳಿ, ಜತೆಗೆ ಎಡಬಿಡದೆ ಸುರಿಯುವ ಮಳೆಯಿಂದಾಗಿ ಆರೋಗ್ಯದಲ್ಲಿ ಏರುಪೇರು ಆಗುವುದು ಸಹಜ. ಹೀಗೆ ದಿಢೀರ್‌ ಹವಾಮಾನ ಬದಲಾವಣೆಯಿಂದ ಸಣ್ಣ ನೆಗಡಿಯಿಂದ ಶುರುವಾಗಿ ಕೆಮ್ಮು, ತಲೆನೋವು ಬಳಿಕ ವೈರಲ್ ಫೀವರ್ ಹೆಚ್ಚಾಗುತ್ತಿದೆ.

ಇದರ ಜತೆಗೆ ಸೈನಸ್ ಸಮಸ್ಯೆ ಇರುವವರಿಗೆ ಮೂಗು ಕಟ್ಟುವಿಕೆ, ಅರ್ಧ ತಲೆನೋವು, ಶೀತದಿಂದ ಕಿವಿನೋವು, ಗಂಟಲು ನೋವು ಕಾಡುತ್ತದೆ. ಈ ಸಮಯದಲ್ಲಿ ತಲೆಕೂದಲು ಉದುರುವುದು ಹಾಗೂ ತ್ವಚೆಯ ಚರ್ಮ ಬಿರುಕು ಬಿಡುವ ಸಾಧ್ಯತೆಯು ಇರಲಿದೆ.ಹೀಗಾಗಿ ವೈದ್ಯರು ಸಲಹೆ ನೀಡುವ ಪ್ರಕಾರ ಚಳಿಗಾಲದಲ್ಲಿ ಹೆಚ್ಚು ಕಾಯಿಸಿದ ಬಿಸಿನೀರು ಕುಡಿಯುವುದು. ತಾಜಾ ಆಹಾರದ ಸೇವನೆಯಿಂದ ರೋಗಗಳಿಂದ ದೂರ ಉಳಿಯಬಹುದು. ಜೇನುತುಪ್ಪು ಸೇವಿಸುವುದರಿಂದ ದೇಹದ ಉಷ್ಣತೆ ಕಾಪಾಡುತ್ತದೆ. ಆದಷ್ಟು ಈ ಸಮಯದಲ್ಲಿ ಫ್ರಿಜ್‌ನಲ್ಲಿ ಶೇಖರಿಸಿದ ಆಹಾರವನ್ನು ತಿನ್ನಬಾರದು. ಮಸಾಲ ಪದಾರ್ಥಗಳು, ಕರಿದ ತಿನಿಸುಗಳನ್ನು ಸೇವಿಸುವುದನ್ನು ಕಂಟ್ರೋಲ್ ಮಾಡಿದರೆ ನಿಮ್ಮ ಆರೋಗ್ಯ ನಿಮ್ಮ ಕೈನಲ್ಲಿ ಇರುತ್ತದೆ. ಅದಷ್ಟು ಬೆಚ್ಚನೆಯ ಉಡುಪು ಧರಿಸಿ, ಮೈಕೈ ಬೆಚ್ಚಗಿಟ್ಟುಕೊಳ್ಳಿ.

ಇದನ್ನೂ ಓದಿ | Cyclone Mandous‌ | ರಾಜ್ಯದಲ್ಲಿ ಮಾಂಡೌಸ್ ಚಂಡಮಾರುತ ಎಫೆಕ್ಟ್, ಬೆಂಗಳೂರಿನಲ್ಲಿ ಮಲೆನಾಡಿನ ವಾತಾವರಣ

Exit mobile version