ಮೈಸೂರು: ಮೈಸೂರಿನ ಮನೆಯೊಂದರಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಿಸಿ (Cylinder blast) ೧೦ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರ ಪೈಕಿ ನಾಲ್ವರಿಗೆ ತೀವ್ರ ಸುಟ್ಟ ಗಾಯಗಳಾಗಿವೆ.
ಮೈಸೂರಿನ ಬನ್ನಿಮಂಟಪದ ಅಗ್ನಿಶಾಮಕ ವಸತಿ ಗೃಹದಲ್ಲಿ ಘಟನೆ ನಡೆದಿದೆ. ಒಂದು ಮನೆಯಲ್ಲಿ ಸಿಲಿಂಡರ್ ಸಿಡಿದು ಮನೆಯ ವಸ್ತುಗಳೆಲ್ಲ ಸುಟ್ಟು ಹೋಗಿದ್ದರೆ, ಅಕ್ಕ ಪಕ್ಕದ ಮನೆಗಳಿಗೂ ಬೆಂಕಿ ತಗುಲಿ ಅನಾಹುತ ವಿಸ್ತರಿಸಿದೆ. ಒಂದು ಮನೆಯ ನಾಲ್ವರು ಮತ್ತು ಅಕ್ಕಪಕ್ಕದ ಮನೆಯ ಆರು ಮಂದಿಗೆ ಬೆಂಕಿಯ ಗಾಯಗಳಾಗಿವೆ.
ಗಾಯಳುಗಳನ್ನು ಸಮೀಪದ ಸೆಂಟ್ ಜೋಸೆಫ್ ಆಸ್ಪತ್ರೆಗೆ ದಾಖಲು ಮಾಡಿದ್ದು, ನಾಲ್ವರ ಸ್ಥಿತಿ ಸ್ವಲ್ಪ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಮೈಸೂರಿನ ಎನ್ ಆರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದು ಪ್ರಕರಣ ದಾಖಲಾಗಿದೆ.
ಸಿಲಿಂಡರ್ ಸ್ಫೋಟಗೊಂಡ ಮನೆಯ ವಸ್ತುಗಳೆಲ್ಲ ಸುಟ್ಟು ಕರಕಲಾಗಿ ಹೋಗಿವೆ. ಅಡುಗೆ ಮನೆಯ ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಸ್ಫೋಟದ ತೀವ್ರತೆಗೆ ಗೋಡೆಗಳು ಬಿರುಕುಬಿಟ್ಟಿವೆ. ಕಿಟಕಿ ಗ್ರಿಲ್‌ಗಳು ಕೂಡಾ ಸುಟ್ಟು ಹೋಗಿವೆ. ಅಕ್ಕಪಕ್ಕದ ಮನೆಗಳಲ್ಲೂ ಅನಾಹುತ ನಡೆದಿದೆ.
ಇದನ್ನೂ ಓದಿ | Cracker danger | ಪಟಾಕಿ ಕಿಡಿ ಬಿದ್ದು ಗ್ಯಾಸ್ ಸಿಲಿಂಡರ್ ಸ್ಫೋಟ, ಧಗಧಗನೆ ಹೊತ್ತಿ ಉರಿದ ಅಂಗಡಿ, ಮನೆ