ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯ ಮೊಬೈಲ್ ನಂಬರ್‌ಅನ್ನೇ ಹ್ಯಾಕ್ ಮಾಡಿ ವಂಚನೆ ಮಾಡಲು ಯತ್ನಿಸಲಾಗಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಜಿಲ್ಲಾಧಿಕಾರಿ ಡಾ. ಕೆ.ವಿ.ರಾಜೇಂದ್ರ ಅವರು, ನನ್ನ ಹೆಸರು ಅಥವಾ ಮೊಬೈಲ್ ನಂಬರ್‌ನಿಂದ ಯಾವುದೇ ರೀತಿಯಲ್ಲಿ ಧನಸಹಾಯಕ್ಕೆ ಸಂದೇಶ ಬಂದರೆ ಯಾವುದೇ ಕಾರಣಕ್ಕೂ ಹಣ ವರ್ಗಾಯಿಸಬಾರದು ಎಂದು ಮನವಿ ಮಾಡಿದ್ದಾರೆ.
ಸಾರ್ವಜನಿಕರಿಗೆ 8590710748 ನಂಬರ್‌ನಿಂದ ಹಣ ಸಹಾಯಕ್ಕೆ ಮನವಿ ಬಂದಲ್ಲಿ ಬ್ಲಾಕ್ ಮಾಡಬೇಕು. ಮೊಬೈಲ್ ನಂಬರ್ ಹ್ಯಾಕ್ ಮಾಡಿ ಕೆಲ ವಂಚಕರು ಮೋಸ ಮಾಡಲು ಯತ್ನಿಸಿದ್ದಾರೆ ಎಂದು ಡಿಸಿ ತಿಳಿಸಿದ್ದಾರೆ. ವಂಚಕರು ಡಿಸಿ ಡಾ.ರಾಜೇಂದ್ರ ಅವರ ಫೋಟೊ ಹಾಗೂ ವಾಟ್ಸ್ಆ್ಯಪ್ ನಂಬರ್ ಬಳಸಿ ಮೋಸ ಮಾಡಲು ಯತ್ನಿಸಿದ್ದು, ಈ ಬಗ್ಗೆ ಮಂಗಳೂರು ಸೈಬರ್ ಕ್ರೈಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ | ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿ: ರಸ್ತೆಗೆ ಸಂಪೂರ್ಣ ಅಡ್ಡಲಾಗಿ ಮಲಗಿತು; ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು