Site icon Vistara News

Assault Case : ಹುಡ್ಗಿ ವಿಷ್ಯಕ್ಕೆ ರೂಮ್‌ನಲ್ಲಿ ಕೂಡಿ ಹಾಕಿ ಯುವಕನಿಗೆ ರಕ್ತ ಬರುವಂತೆ ಥಳಿತ; ವಿಡಿಯೊ ವೈರಲ್‌

Assault case

ಮಂಗಳೂರು: ಯುವಕನನ್ನು ಮನೆಯಲ್ಲಿ ಕೂಡಿ ಹಾಕಿ (Assault Case) ಯದ್ವಾತದ್ವಾ ಹಲ್ಲೆ ನಡೆಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿ ಘಟನೆ ನಡೆದಿದೆ. ಯುವಕನಿಗೆ ಥಳಿಸುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬೊಳಂತೂರು ನಿವಾಸಿ ರಹೀಮ್ ಎಂಬಾತನ ಮೇಲೆ ಯುವಕರ ಗುಂಪು ಮಾರಣಾಂತಿಕ ಹಲ್ಲೆ ನಡೆದಿದೆ. ರಹೀಮ್‌ನನ್ನು ಎಲ್ಲಿ ಕರೆದುಕೊಂಡು ಹೋಗಿ ಹೊಡೆದಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ಪೊಲೀಸ್ ಮೂಲದ ಪ್ರಕಾರ ಪುತ್ತೂರು ಯುವಕರ ತಂಡದಿಂದ ಈ ಕೃತ್ಯ ನಡೆದಿದೆ. ಹುಡುಗಿ ವಿಚಾರಕ್ಕೆ ಕೂಡಿ ಹಾಕಿ ಥಳಿಸಲಾಗಿದೆ ಎನ್ನಲಾಗಿದೆ. ಈ ಬಗ್ಗೆ ಜಿಲ್ಲೆಯ ಯಾವುದೇ ಠಾಣೆಯಲ್ಲಿ ದೂರು ದಾಖಲಾಗಿಲ್ಲ. ಪ್ರಕರಣವನ್ನು ರಾಜಿ ಸಂಧಾನದ ಮೂಲಕ ಬಗೆಹರಿಸಲಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: Murder case : ಬಾಳೆತೋಟದಲ್ಲಿತ್ತು ದಲಿತ ಮಹಿಳೆ ಶವ; ಕಾಲ್ಕಿತ್ತ ಮಾಲೀಕ, ಅತ್ಯಾಚಾರ ಶಂಕೆ

ಹುಡುಗಿ ವಿಷ್ಯಕ್ಕೆ ಕಿರಿಕ್‌; ಬೆಂಗಳೂರು-ತುಮಕೂರು ಹುಡುಗರ ಮಧ್ಯೆ ಹೊಡಿಬಡಿ‌

ತುಮಕೂರು: ಹುಡುಗಿ ವಿಚಾರಕ್ಕೆ ಕಾಲೇಜು ವಿದ್ಯಾರ್ಥಿಗಳ ನಡುವೆ ಕಿರಿಕ್ (Students Fighting) ನಡೆದಿದೆ. ಯುವಕನೊಬ್ಬನಿಗೆ ಮನಬಂದಂತೆ ಹಲ್ಲೆ ನಡೆಸಿ ಪುಂಡಾಟ ಮೆರೆದಿದ್ದಾರೆ. ಹಲ್ಲೆ ನಡೆಸುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ತುಮಕೂರು ನಗರದ ವಿದ್ಯಾನಿಧಿ ಪಿಯು ಕಾಲೇಜು ಬಳಿ ಘಟನೆ ನಡೆದಿದೆ.

ಜಯವರ್ಧನ್ ಎಂಬಾತ ಹಲ್ಲೆಗೆ ಒಳಗಾದ ವಿದ್ಯಾರ್ಥಿಯಾಗಿದ್ದಾನೆ. ಮನೋಜ್ ಹಾಗೂ ಗಣೇಶ್ ಎಂಬುವವರು ಜಯವರ್ಧನ್‌ ಮೇಲೆ ಹಲ್ಲೆ ನಡೆಸಿದ್ದಾರೆ. ಜಯವರ್ಧನ್‌ ವಿದ್ಯಾನಿಧಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದರೆ, ಮನೋಜ್‌ ಬೆಂಗಳೂರಿನ ಬಿಎಂಎಸ್ ಕಾಲೇಜಿನಲ್ಲಿ ಪದವಿ ವಿದ್ಯಾರ್ಥಿಯಾಗಿದ್ದಾನೆ.

ಮನೋಜ್‌ ಕಾಲೇಜಿನಲ್ಲಿ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದ.ಆಕೆ ಜತೆಗೆ ಈ ಜಯವರ್ಧನ್ ಮಾತನಾಡಿದ ಎಂಬ ವಿಚಾರಕ್ಕೆ ಗಲಾಟೆ ನಡೆದಿದೆ. ನಮ್ಮ ಹುಡುಗಿ ಜತೆ ಯಾಕೆ ಮಾತನಾಡುತ್ಯಾ ಎಂದು ಮನೋಜ್‌ ಜಯವರ್ಧನ್‌ಗೆ ಫೋನ್‌ ಮೂಲಕ ಬೆದರಿಕೆ ಹಾಕಿದ್ದ.

ಮನೋಜ್‌ ಹಾಗೂ ಜಯವರ್ಧನ್‌

ಇದನ್ನೂ ಓದಿ: POCSO case: ಮೂಡುಬಿದಿರೆ: ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ಎಸಗಿ ಗರ್ಭಿಣಿಯಾಗಿಸಿದ ತಂದೆಯ ಬಂಧನ

ಇಷ್ಟಲ್ಲದೆ ಕಾಲೇಜು ಬಳಿ ಬಂದು ತನ್ನ ಸ್ನೇಹಿತ ಗಣೇಶ್ ಎಂಬಾತನ ಜತೆ ಸೇರಿ ಜಯವರ್ಧನ್ ಮೇಲೆ ಹಲ್ಲೆ ನಡೆಸಿದ್ದಾನೆ. ಜಯವರ್ಧನ್ ಮುಖಕ್ಕೆ ಗುದ್ದಿ ಮನಬಂದಂತೆ ಹಲ್ಲೆ ನಡೆಸಿದ್ದಾನೆ. ಹಲ್ಲೆ ಮಾಡುತ್ತಿದ್ದನ್ನು ನೋಡಿದ ಕಾಲೇಜಿನ ಬಸ್ ಚಾಲಕರು, ಕೂಡಲೇ ಹಲ್ಲೆ ನಡೆಸುತ್ತಿದ್ದ ಮನೋಜ್‌ನನ್ನು ಹಿಡಿದು ಕಾಲೇಜು ಪ್ರಾಂಶುಪಾಲರಿಗೆ ಒಪ್ಪಿಸಿದ್ದಾರೆ. ಈ ವೇಳೆ ಜತೆಗೆ ಇದ್ದ ಸ್ನೇಹಿತ ಗಣೇಶ್ ನಾಪತ್ತೆಯಾಗಿದ್ದಾನೆ.

ಘಟನೆ ಸಂಬಂಧ ಹಲ್ಲೆಗೊಳಾಗದ ಜಯವರ್ಧನ್ ಪೋಷಕರಿಂದ ಮನೋಜ್ ವಿರುದ್ಧ ದೂರು ದಾಖಲಾಗಿದೆ. ಎನ್‌ಇಪಿಎಸ್ ಠಾಣೆ ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version