Karkala Physical Abuse: ಹಿಂದೂ ಯುವತಿಗೆ ಮತ್ತು ಬೆರೆಸುವ ಔಷಧ ಕುಡಿಸಿ ಮುಸ್ಲಿಂ ಯುವಕನಿಂದ ಅತ್ಯಾಚಾರ, ಕಾರ್ಕಳ ಉದ್ವಿಗ್ನ - Vistara News

ಪ್ರಮುಖ ಸುದ್ದಿ

Karkala Physical Abuse: ಹಿಂದೂ ಯುವತಿಗೆ ಮತ್ತು ಬೆರೆಸುವ ಔಷಧ ಕುಡಿಸಿ ಮುಸ್ಲಿಂ ಯುವಕನಿಂದ ಅತ್ಯಾಚಾರ, ಕಾರ್ಕಳ ಉದ್ವಿಗ್ನ

Karkala Physical Abuse: ಅಲ್ತಾಫ್ & ಇಬ್ಬರ ವಿರುದ್ಧ ಕಾರಿನಲ್ಲಿ ಕರೆದೊಯ್ದು ನಿರ್ಜನ ಪ್ರದೇಶದಲ್ಲಿ ರೇಪ್ ಮಾಡಿದ ಆರೋಪ ಪ್ರಕರಣ ದಾಖಲಾಗಿದೆ. ನಿನ್ನೆ ಮಧ್ಯಾಹ್ನ ಆಕೆಯನ್ನು ಕರೆದೊಯ್ದಿದ್ದ ಅಲ್ತಾಫ್, ಮಾದಕ ಪಾನೀಯ ಕುಡಿಸಿ ಮತ್ತು ಬರಿಸಿ ಸಂಜೆಯವರೆಗೆ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾನೆ.

VISTARANEWS.COM


on

karkala physical abuse case
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಉಡುಪಿ: ಕಾರ್ಕಳದಲ್ಲಿ (Karkala news) ನಿನ್ನೆ ಸಂಜೆ ಬರ್ಬರ ಅತ್ಯಾಚಾರ (Physical Abuse) ಪ್ರಕರಣ ವರದಿಯಾಗಿದೆ. ಇನ್‌ಸ್ಟಾಗ್ರಾಂನಲ್ಲಿ (Instagram) ಸ್ನೇಹ ಬೆಳೆಸಿದ ಹಿಂದೂ ಯುವತಿಯನ್ನು (Hindu girl) ಕರೆದೊಯ್ದ ಮುಸ್ಲಿಂ ಯುವಕ, ಆಕೆಗೆ ಬಿಯರ್‌ನಲ್ಲಿ ಮತ್ತು ಬರಿಸುವ ಔಷಧ ಸೇರಿಸಿ ಕುಡಿಸಿ ಅತ್ಯಾಚಾರ ಎಸಗಿದ್ದಾನೆ. ಇದಕ್ಕೆ ಆತನ ಇಬ್ಬರು ಸ್ನೇಹಿತರು ಸಹಕರಿಸಿದ್ದು, ಸಾಮೂಹಿಕ ಅತ್ಯಾಚಾರ ನಡೆದಿದೆಯೇ ಎಂಬುದು ಇನ್ನೂ ದೃಢಪಡಬೇಕಿದೆ. ಈ ಪ್ರಕರಣದಲ್ಲಿ ಕಾರ್ಕಳ ನಗರದಲ್ಲಿ ಕೋಮು ಉದ್ವಿಗ್ನತೆಗೆ ಕಾರಣವಾಗಿದೆ.

ನಿನ್ನೆ ಸಂಜೆ ನಡೆದ ಪ್ರಕರಣ ರಾತ್ರಿಯ ಹೊತ್ತಿಗೆ ಉಲ್ಬಣಿಸಿದ್ದು, ಹಿಂದೂ ಸಂಘಟನೆಗಳ ಕಾರ್ಯಕರ್ತರು ಠಾಣೆಯ ಮುಂದೆ ಜಮಾವಣೆಗೊಂದು ಯುವಕನ ಮೇಲೆ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದರು. ಇಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕುಮಾರ್ ಈ ಕುರಿತು ಹೇಳಿಕೆ ನೀಡಿದ್ದಾರೆ.

“ಕಾರ್ಕಳ ಠಾಣೆ ವ್ಯಾಪ್ತಿಯಲ್ಲಿ ಯುವತಿಯನ್ನು ಅಪಹರಿಸಿ ಅತ್ಯಾಚಾರ ದೂರು ಬಂದಿದೆ. ಸಂತ್ರಸ್ತೆಗೆ ಆರೋಪಿ ಜೊತೆಗೆ ಮೂರು ತಿಂಗಳಿಂದ ಪರಿಚಯವಿತ್ತು. ಇನ್ಸ್ಟಾಗ್ರಾಮ್ ಮೂಲಕ ಪರಸ್ಪರ ಪರಿಚಯ ಹೊಂದಿದ್ದರು. ಶುಕ್ರವಾರ ಆರೋಪಿ ಅಲ್ತಾಫ್ ಕರೆ ಮಾಡಿ ಸಂತ್ರಸ್ತೆಗೆ ಬರಲು ಹೇಳಿದ್ದ. ಆಕೆ ಬಂದಾಗ ಅಲ್ಲಿಂದ ಅಪಹರಿಸಿದ್ದ. ಬಿಯರ್‌ನಲ್ಲಿ ಏನನ್ನೊ ಬೆರೆಸಿ ಕುಡಿಸಿ ಮತ್ತು ಬರಿಸಿ ಅತ್ಯಾಚಾರ ಮಾಡಿದ್ದಾಗಿ ಸಂತ್ರಸ್ತೆ ತಿಳಿಸಿದ್ದಾಳೆ. ಆರೋಪಿ ಅಲ್ತಾಫ್‌ನನ್ನು ಬಂಧಿಸಲಾಗಿದೆ” ಎಂದು ಅರುಣ್‌ ಕುಮಾರ್‌ ಹೇಳಿದ್ದಾರೆ.

ಆರೋಪಿಗೆ ಬಿಯರ್ ಬಾಟಲ್ ತಂದುಕೊಟ್ಟಿದ್ದ ಇಬ್ಬರು ಆರೋಪಿಗಳ ಪೈಕಿ ಸುಬೇರ್ ಎಂಬಾತನನ್ನು ಬಂಧಿಸಲಾಗಿದೆ. ಕೃತ್ಯಕ್ಕೆ ಬಳಸಿದ ವಾಹನವನ್ನು ಸೀಜ್ ಮಾಡಲಾಗಿದೆ. ಸಂತ್ರಸ್ತೆಗೆ ಮಣಿಪಾಲ ಕೆಎಂಸಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಸ್‌ಪಿ ತಿಳಿಸಿದ್ದಾರೆ. ಯುವತಿ ಜೇನು ಕೃಷಿ ಇಲಾಖೆಯಲ್ಲಿ ಕೆಲಸಕ್ಕಿದ್ದಳು. ಇನ್‌ಸ್ಟಾಗ್ರಾಂನಲ್ಲಿ ಇವರಿಗೆ ಸ್ನೇಹ ಬೆಳೆದಿತ್ತು ಎಂದು ತಿಳಿದುಬಂದಿದೆ.

ಮಾದಕ ಪದಾರ್ಥ ನೀಡಿ ಹಿಂದೂ ಯುವತಿಯ ರೇಪ್ ಎಸಗಿದ ಪ್ರಕರಣದಲ್ಲಿ ಕಾರ್ಕಳ ನಗರ ಠಾಣೆಯಲ್ಲಿ ಮೂವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಅಲ್ತಾಫ್ & ಇಬ್ಬರ ವಿರುದ್ಧ ಕಾರಿನಲ್ಲಿ ಕರೆದೊಯ್ದು ನಿರ್ಜನ ಪ್ರದೇಶದಲ್ಲಿ ರೇಪ್ ಮಾಡಿದ ಆರೋಪ ಪ್ರಕರಣ ದಾಖಲಾಗಿದೆ. ನಿನ್ನೆ ಮಧ್ಯಾಹ್ನ ಆಕೆಯನ್ನು ಕರೆದೊಯ್ದಿದ್ದ ಅಲ್ತಾಫ್, ಮಾದಕ ಪಾನೀಯ ಕುಡಿಸಿ ಮತ್ತು ಬರಿಸಿ ಸಂಜೆಯವರೆಗೆ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾನೆ.

ಆರೋಪಿ ಅಲ್ತಾಫ್ ವಿರುದ್ಧ ಹಿಂದೂ ಯುವತಿಯ ತಾಯಿಯಿಂದ ರೇಪ್ & ಕಿಡ್ನಾಪ್ ಪ್ರಕರಣ ದಾಖಲಾಗಿದೆ. ಪ್ರಮುಖ ಆರೋಪಿ ಅಲ್ತಾಫ್ ಮತ್ತು ಸಹಕರಿಸಿದ ಮತ್ತೊಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೊಬ್ಬ ಆರೋಪಿಗೆ ಬಲೆ ಬೀಸಲಾಗಿದೆ.

ಶುಕ್ರವಾರ ಮಧ್ಯಾಹ್ನ ಆಕೆಯನ್ನು ಪುಸಲಾಯಿಸಿ ಕರೆದೊಯ್ದಿದ್ದ ಆರೋಪಿ, ಸಂಜೆ ಆಕೆಯನ್ನು ಮನೆ ಸಮೀಪ ಬಿಟ್ಟು ಹೋಗಿದ್ದ. ನಿನ್ನೆ ರಾತ್ರಿ ಠಾಣೆ ಎದುರು ಜಮಾಯಿಸಿದ್ದ ಹಿಂದೂ ಕಾರ್ಯಕರ್ತರು, ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: Love Jihad: ಹಿಂದೂ ಯುವತಿಯ ಕರೆದೊಯ್ದ ಮುಸ್ಲಿಂ ಯುವಕ; ಕಾರ್ಕಳ ಪ್ರಕ್ಷುಬ್ಧ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Unified pension scheme: ಕೇಂದ್ರ ಸರ್ಕಾರದ ಯುಪಿಎಸ್ ಪಿಂಚಣಿ ಯೋಜನೆಗೆ ರಾಜ್ಯ ಸರ್ಕಾರಿ ನೌಕರರ ಸಂಘಗಳ ವಿರೋಧ

Unified pension scheme: ಕೇಂದ್ರ ಸರ್ಕಾರ ಸಚಿವ ಸಂಪುಟದಲ್ಲಿ ಯುಪಿಎಸ್ ಪಿಂಚಣಿ ಯೋಜನೆ ಜಾರಿಗೆ ಶೇಕಡ 50ರಷ್ಟು ಪಿಂಚಣಿ ನೀಡಲು ತೆಗೆದುಕೊಂಡಿರುವ ತೀರ್ಮಾನ ತೃಪ್ತಿ ತಂದಿರುವುದಿಲ್ಲ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ ಎಸ್ ಷಡಾಕ್ಷರಿ ಹೇಳಿದ್ದಾರೆ. ನಮ್ಮ ಬೇಡಿಕೆ ಹಳೆ ಪಿಂಚಣಿಯ ಮರು ಸ್ಥಾಪನೆ ಮಾತ್ರ ಎಂದು ಕರ್ನಾಟಕ ರಾಜ್ಯ ಸರ್ಕಾರಿ NPS ನೌಕರರ ಸಂಘದ ಅಧ್ಯಕ್ಷ ಶಾಂತಾರಾಮ್ ಹೇಳಿದ್ದಾರೆ.

VISTARANEWS.COM


on

unified pension scheme
Koo


ಬೆಂಗಳೂರು: ಕೇಂದ್ರ ಸರ್ಕಾರ ಪ್ರಸ್ತಾಪಿಸಿರುವ ಹೊಸ ಯುಪಿಎಸ್ ಪಿಂಚಣಿ ಯೋಜನೆ(Unified pension scheme)ಗೆ ರಾಜ್ಯ ಸರ್ಕಾರಿ ನೌಕರರ ಸಂಘ ಮತ್ತು ಕರ್ನಾಟಕ ರಾಜ್ಯ ಸರ್ಕಾರಿ NPS ನೌಕರರ ಸಂಘ(Karnataka government employees) ವಿರೋಧ ವ್ಯಕ್ತಪಡಿಸಿದೆ. ಕೇಂದ್ರ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡಿರುವ ಈ ನಿರ್ಧಾರ ತೃಪ್ತಿಕರವಲ್ಲ ಎಂದು ಈ ಸಂಘಗಳು ಅಭಿಪ್ರಾಯಪಟ್ಟಿವೆ

ಕೇಂದ್ರ ಸರ್ಕಾರ ಸಚಿವ ಸಂಪುಟದಲ್ಲಿ ಯುಪಿಎಸ್ ಪಿಂಚಣಿ ಯೋಜನೆ ಜಾರಿಗೆ ಶೇಕಡ 50ರಷ್ಟು ಪಿಂಚಣಿ ನೀಡಲು ತೆಗೆದುಕೊಂಡಿರುವ ತೀರ್ಮಾನ ತೃಪ್ತಿ ತಂದಿರುವುದಿಲ್ಲ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ ಎಸ್ ಷಡಾಕ್ಷರಿ ಹೇಳಿದ್ದಾರೆ. ಕೇಂದ್ರ ಸರ್ಕಾರ ಮತ್ತೊಮ್ಮೆ ಪುನರ್ ಪರಿಶೀಲಿಸಿ ಶೇಕಡ 100ರಷ್ಟು ಪಿಂಚಣಿ ನೀಡಲು ಆಗ್ರಹಿಸುತ್ತೇವೆ ಎಂದು ಷಡಾಕ್ಷರಿ ಹೇಳಿದ್ದಾರೆ.

ಕರ್ನಾಟಕ ರಾಜ್ಯ ಸರ್ಕಾರಿ NPS ನೌಕರರ ಸಂಘವು ಕೇಂದ್ರ ಸರ್ಕಾರ ಪ್ರಸ್ತಾಪಿಸಿರುವ ಏಕೀಕೃತ ಪಿಂಚಣಿ ವ್ಯವಸ್ಥೆಯನ್ನು ಪೂರ್ಣವಾಗಿ ವಿರೋಧಿಸುತ್ತದೆ ಎಂದು ಈ ಸಂಘದ ಅಧ್ಯಕ್ಷ ಶಾಂತಾರಾಮ್ ಅವರು ಹೇಳಿಕೆ ನೀಡಿದ್ದಾರೆ. ನಮ್ಮ ಬೇಡಿಕೆ ಹಳೆ ಪಿಂಚಣಿಯ ಮರು ಸ್ಥಾಪನೆ ಮಾತ್ರ ಎಂದು ಕರ್ನಾಟಕ ರಾಜ್ಯ ಸರ್ಕಾರಿ NPS ನೌಕರರ ಸಂಘದ ಅಧ್ಯಕ್ಷ ಶಾಂತಾರಾಮ್ ಹೇಳಿದ್ದಾರೆ.

ಏನಿದು ಕೇಂದ್ರ ಸರ್ಕಾರದ ಯುಪಿಎಸ್ ಪಿಂಚಣಿ ಯೋಜನೆ?:

ಇದು ಸರ್ಕಾರಿ ನೌಕರರಿಗೆ ಇತ್ತೀಚಿನ ಪಿಂಚಣಿ ಯೋಜನೆಯಾಗಿದೆ. ಸರ್ಕಾರಿ ನೌಕರರಿಗೆ ನಿಶ್ಚಿತ ಪಿಂಚಣಿ ಮೊತ್ತದ ಭರವಸೆ ನೀಡುವ ಯೋಜನೆ ಇದಾಗಿದೆ. UPS ಅಡಿಯಲ್ಲಿ, ನಿಗದಿತ ಪಿಂಚಣಿಯು ಕಳೆದ 12 ತಿಂಗಳುಗಳ ಅವಧಿಯಲ್ಲಿ ಪಡೆದ ಸರಾಸರಿ ಮೂಲ ವೇತನದ 50 ಪ್ರತಿಶತದಷ್ಟಿರುತ್ತದೆ.ಇದು ಖಚಿತವಾದ ಕುಟುಂಬ ಪಿಂಚಣಿಯನ್ನು ಸಹ ಹೊಂದಿರುತ್ತದೆ, ಇದು ಉದ್ಯೋಗಿಯ ಮೂಲ ವೇತನದ 60 ಪ್ರತಿಶತವಾಗಿದೆ. ನೌಕರನ ಮರಣದ ಸಂದರ್ಭದಲ್ಲಿ ಅದನ್ನು ತಕ್ಷಣವೇ ನೀಡಲಾಗುವುದು. ಕನಿಷ್ಠ 10 ವರ್ಷಗಳ ಸೇವೆಯ ನಂತರ ನಿವೃತ್ತಿಯ ಸಂದರ್ಭದಲ್ಲಿ, UPS ತಿಂಗಳಿಗೆ 10,000 ರೂ.ಗಳ ಖಚಿತವಾದ ಕನಿಷ್ಠ ಪಿಂಚಣಿಯನ್ನು ಒದಗಿಸುತ್ತದೆ.

ಯುಪಿಎಸ್‌ಗೆ ಯಾರು ಸೇರಬಹುದು?

“ಕೇಂದ್ರ ಸರ್ಕಾರಿ ನೌಕರರು ಹೊಸ ಪಿಂಚಣಿ ಯೋಜನೆಯಲ್ಲಿ (ಎನ್‌ಪಿಎಸ್) ಉಳಿಯಲು ಅಥವಾ ಏಕೀಕೃತ ಪಿಂಚಣಿ ಯೋಜನೆಗೆ (ಯುಪಿಎಸ್) ಸೇರಲು ನಿರ್ಧರಿಸುವ ಹಕ್ಕನ್ನು ಹೊಂದಿರುತ್ತಾರೆ” ಎಂದು ವೈಷ್ಣವ್ ಹೇಳಿದರು. ಶನಿವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಕ್ಯಾಬಿನೆಟ್ ಕಾರ್ಯದರ್ಶಿ ನಿಯೋಜಿತ ಟಿ ವಿ ಸೋಮನಾಥನ್ ಅವರು, “ಇದು ಈಗಾಗಲೇ ಎನ್‌ಪಿಎಸ್ ಅಡಿಯಲ್ಲಿ 2004 ರಿಂದ ನಿವೃತ್ತರಾದ ಎಲ್ಲರಿಗೂ ಅನ್ವಯಿಸುತ್ತದೆ. ಹೊಸ ಯೋಜನೆಯು ಏಪ್ರಿಲ್ 1, 2025 ರಿಂದ ಜಾರಿಗೆ ಬರಲಿದೆಯಾದರೂ, NPS ಪ್ರಾರಂಭವಾದ ಸಮಯದಿಂದ ನಿವೃತ್ತರಾದ ಪ್ರತಿಯೊಬ್ಬರೂ ಮತ್ತು ಮಾರ್ಚ್ 31, 2025 ರವರೆಗೆ ನಿವೃತ್ತರಾದವರು ಸೇರಿದಂತೆ, UPS ನ ಈ ಎಲ್ಲಾ ಐದು ಪ್ರಯೋಜನಗಳಿಗೆ ಅರ್ಹರಾಗಿರುತ್ತಾರೆ” ಎಂದಿದ್ದಾರೆ.

ಇದನ್ನೂ ಓದಿ: NPS v/s UPS: ಏಕೀಕೃತ ಪಿಂಚಣಿ ಯೋಜನೆ ಅಂದ್ರೆ ಏನು? ಇದು NPSಗಿಂತ ಹೇಗೆ ಭಿನ್ನ? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌

Continue Reading

ದೇಶ

Sunita Williams: ಮುಂದಿನ ವರ್ಷ ಫೆಬ್ರುವರಿಯಲ್ಲಿ ಭೂಮಿಗೆ ಮರಳಲಿದ್ದಾರೆ ಸುನೀತಾ ವಿಲಿಯಮ್ಸ್;‌ ನಾಸಾ ಘೋಷಣೆ

Sunita Williams: ಮುಂದಿನ ಫೆಬ್ರವರಿಯಲ್ಲಿ ಬುಚ್ ಮತ್ತು ಸುನಿತಾ ಕ್ರ್ಯೂ -9 ರೊಂದಿಗೆ ಹಿಂತಿರುಗುತ್ತಾರೆ ಮತ್ತು ಸ್ಟಾರ್ಲೈನರ್ ಸಿಬ್ಬಂದಿಯಿಲ್ಲದೆ ಹಿಂತಿರುಗುತ್ತಾರೆ ಎಂದು ನಾಸಾ ನಿರ್ಧರಿಸಿದೆ” ಎಂದು ನಾಸಾ ನಿರ್ವಾಹಕ ಬಿಲ್ ನೆಲ್ಸನ್ ಹೇಳಿದ್ದಾರೆ. ಬೋಯಿಂಗ್ ಬಾಹ್ಯಾಕಾಶ ನೌಕೆಯ ಥ್ರಸ್ಟರ್ ಅಸಮರ್ಪಕ ಕಾರ್ಯಗಳಿಂದ ಸುನಿತಾ ವಿಲಿಯಮ್ಸ್‌ ಮತ್ತು ಬುಚ್‌ ಹಿಂತಿರುಗುವುದು ವಿಳಂಬವಾಗಿದೆ ಎಂದು ಅವರು ಹೇಳಿದರು.

VISTARANEWS.COM


on

Sunita Williams
Koo

ವಾಷಿಂಗ್ಟನ್: ಭಾರತ ಮೂಲದ ವಿಶ್ವವಿಖ್ಯಾತ ಗಗನಯಾತ್ರಿ ಸುನೀತಾ ವಿಲಿಯಮ್ಸ್‌ (Sunita Williams) ಅವರು ಮೂರನೇ ಬಾರಿಗೆ ಬಾಹ್ಯಾಕಾಶ ಯಾನ ಕೈಗೊಳ್ಳುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಆದರೆ, ಸುನೀತಾ ವಿಲಿಯಮ್ಸ್‌ ಹಾಗೂ ಮತ್ತೊಬ್ಬ ಗಗನಯಾತ್ರಿ ಬುಚ್ ವಿಲ್ಮೋರ್ (Butch Wilmore) ತಾಂತ್ರಿಕ ದೋಷದಿಂದಾಗಿ ಬಾಹ್ಯಕಾಶದಲ್ಲೇ ಸಿಲುಕಿರುವ ವಿಚಾರ ಎಲ್ಲರಿಗೂ ತಿಳಿದೇ ಇದೆ. ಇದೀಗ ಅವರು ವಾಪಾಸಾಗುವ ಬಗ್ಗೆ ಅಮೆರಿಕಸ ಬಾಹ್ಯಾಕಾಶ ಸಂಸ್ಥೆ(NASA) ಮಹತ್ವದ ಸುದ್ದಿಯೊಂದನ್ನು ಹೊರಹಾಕಿದೆ. ಈ ಇಬ್ಬರು ಗಗನಯಾತ್ರಿಗಳು ಮುಂದಿನ ವರ್ಷ ಭೂಮಿಗೆ ಮರಳಲಿದ್ದಾರೆ ಎಂದು ನಾಸಾ ಹೇಳಿದೆ.

ಮುಂದಿನ ಫೆಬ್ರವರಿಯಲ್ಲಿ ಬುಚ್ ಮತ್ತು ಸುನಿತಾ ಕ್ರ್ಯೂ -9 ರೊಂದಿಗೆ ಹಿಂತಿರುಗುತ್ತಾರೆ ಮತ್ತು ಸ್ಟಾರ್ಲೈನರ್ ಸಿಬ್ಬಂದಿಯಿಲ್ಲದೆ ಹಿಂತಿರುಗುತ್ತಾರೆ ಎಂದು ನಾಸಾ ನಿರ್ವಾಹಕ ಬಿಲ್ ನೆಲ್ಸನ್ ಹೇಳಿದ್ದಾರೆ. ಬೋಯಿಂಗ್ ಬಾಹ್ಯಾಕಾಶ ನೌಕೆಯ ಥ್ರಸ್ಟರ್ ಅಸಮರ್ಪಕ ಕಾರ್ಯಗಳಿಂದ ಸುನಿತಾ ವಿಲಿಯಮ್ಸ್‌ ಮತ್ತು ಬುಚ್‌ ಹಿಂತಿರುಗುವುದು ವಿಳಂಬವಾಗಿದೆ ಎಂದು ಅವರು ಹೇಳಿದರು.

ಬುಚ್ ವಿಲ್ಮೋರ್ ಮತ್ತು ಸುನೀತಾ ವಿಲಿಯಮ್ಸ್ ಅವರು ಬೋಯಿಂಗ್‌ ಸಂಸ್ಥೆಯ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯ ಮೊದಲ ಮಾನವ ಸಹಿತ ಬಾಹ್ಯಾಕಾಶ ಯಾನವನ್ನು ಜೂನ್‌ 5ರಂದು ಆರಂಭಿಸಿದ್ದರು. ಜೂನ್‌ 6ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ಸ್ಟೇಷನ್‌ ತಲುಪಿದ್ದ ಅವರು ಒಂದು ವಾರ ಸಂಶೋಧನೆ ನಡೆಸಿ ವಾಪಸಾಗಬೇಕಿತ್ತು. ಆದರೆ, ತಾಂತ್ರಿಕ ಕಾರಣದಿಂದ ಅವರು ಅಲ್ಲಿಯೇ ಸಿಲುಕಿದ್ದಾರೆ. ಇವರು ಯಾವಾಗ ಬರುತ್ತಾರೆ ಎಂಬುದರ ಕುರಿತು ನಾಸಾ ಈಗ ಮಾಹಿತಿ ನೀಡಿದೆ.

“ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಸಿಲುಕಿರುವ ಸುನೀತಾ ವಿಲಿಯಮ್ಸ್‌ ಅವರು 2025ರ ಫೆಬ್ರವರಿಯಲ್ಲಿ ವಾಪಸಾಗಲಿದ್ದಾರೆ. ಇವರು ಬೋಯಿಂಗ್‌ ಸ್ಟಾರ್‌ಲೈನರ್‌ ಬದಲು ಸ್ಪೇಸ್‌ಎಕ್ಸ್‌ನ ಕ್ರ್ಯೂ ಡ್ರ್ಯಾಗನ್‌ನಲ್ಲಿ ವಾಪಸಾಗಲಿದ್ದಾರೆ. ಸ್ಟಾರ್‌ಲೈನರ್‌ನಲ್ಲಿ ಹಲವು ತಾಂತ್ರಿಕ ದೋಷಗಳು ಉಂಟಾಗಿರುವ ಕಾರಣ ಕ್ರ್ಯೂ ಡ್ರ್ಯಾಗನ್‌ನಲ್ಲಿ ಕರೆದುಕೊಂಡು ಬರಲು ತೀರ್ಮಾನಿಸಲಾಗಿದೆ” ಎಂಬುದಾಗಿ ನಾಸಾ ತಿಳಿಸಿದೆ.

ಸುನೀತಾ ವಿಲಿಯಮ್ಸ್‌ ಹಿನ್ನೆಲೆ

ಭಾರತದ ಮೂಲದ ಡಾ. ದೀಪಕ್‌ ಪಾಂಡ್ಯಾ ಮತ್ತು ಬೋನಿ ಪಾಂಡ್ಯ ಪುತ್ರಿಯಾಗಿರುವ 59 ವರ್ಷದ ಸುನೀತಾ, ಬಾಹ್ಯಾಕಾಶಕ್ಕೆ ಹೋದ ಮೊದಲ ಮಹಿಳಾ ಗಗನಯಾತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರು ಮೊದಲ ಬಾರಿಗೆ 2006ರಲ್ಲಿ ಯಶಸ್ವಿ ಗಗನಯಾತ್ರೆ ಕೈಗೊಂಡಿದ್ದರು. ಇದಾದ ಬಳಿಕ 2012ರಲ್ಲಿ ಮತ್ತೆ ಗಗನಯಾತ್ರೆ ಕೈಗೊಂಡಿದ್ದರು. ಅವರು ಬಾಹ್ಯಾಕಾಶದಲ್ಲಿ ಬರೋಬ್ಬರಿ 322 ದಿನಗಳನ್ನು ಕಳೆದಿದ್ದಾರೆ. ಸುನೀತಾ ವಿಲಿಯಮ್ಸ್ ಅತೀ ಹೆಚ್ಚು ಬಾರಿ ಬಾಹ್ಯಾಕಾಶಕ್ಕೆ ಹಾರಿದ ಹಾಗೂ ಬಾಹ್ಯಾಕಾಶದಲ್ಲಿ ಅಧ್ಯಯನ ನಡೆಸಿದ ಮಹಿಳಾ ಗಗನ ಯಾತ್ರಿ ಎಂದೂ ಗುರುತಿಸಲ್ಪಡುತ್ತಿದ್ದಾರೆ.

ಇದುವರೆಗೆ ಸುನೀತಾ ವಿಲಿಯಮ್ಸ್ ಗರಿಷ್ಠ ಬಾಹ್ಯಾಕಾಶ ಪ್ರಯಾಣ ಮಾಡಿದ್ದಾರೆ. ಮಹತ್ವದ ಅಧ್ಯಯನಕ್ಕಾಗಿ ಮಂಗಳವಾರ ಮೂರನೇ ಬಾರಿ ಬಾಹ್ಯಾಕಾಶಕ್ಕೆ ಹಾರಲಿದ್ದ ಸುನೀತಾ ವಿಲಿಯಮ್ಸ್ ಎಲ್ಲ ತಯಾರಿ ಮಾಡಿಕೊಂಡಿದ್ದರು. ʼʼಕೊಂಚ ನರ್ವಸ್ ಆಗಿದ್ದೇನೆ. ಆದರೆ ಮತ್ತೆ ತವರಿಗೆ ಮರಳು ಅನುಭವವಾಗುತ್ತಿದೆ. ಬಾಹ್ಯಕಾಶವೇ ನನಗೆ ತವರಾಗಿದೆʼʼ ಎಂದು ಸುನೀತಾ ವಿಲಿಯಮ್ಸ್ ಹೇಳಿದ್ದರು.

ಇದನ್ನೂ ಓದಿ: Sunita Williams: 2025ರವರೆಗೂ ಬಾಹ್ಯಾಕಾಶದಲ್ಲೇ ಇರಲಿದ್ದಾರೆ ಸುನೀತಾ ವಿಲಿಯಮ್ಸ್‌; ನಾಸಾ ಘೋಷಣೆ

Continue Reading

ಭವಿಷ್ಯ

Dina Bhavishya : ಈ ರಾಶಿಯವರ ಬಹು ದಿನಗಳ ಕನಸು ನನಸು; ಕುಟುಂಬದ ಆಪ್ತರಿಂದ ಶುಭ ಸುದ್ದಿ

Dina Bhavishya: ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷದ ಸಪ್ತಮಿ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

By

Dina Bhavishya
Koo

ಚಂದ್ರನು ವೃಷಭ ರಾಶಿಯಿಂದ ಭಾನುವಾರ ರಾತ್ರಿ 11:04ಕ್ಕೆ ಮಿಥುನ ರಾಶಿಯನ್ನು ಪ್ರವೇಶಿಸುತ್ತಾನೆ. ಇದರಿಂದಾಗಿ ವೃಷಭ, ಕಟಕ, ಸಿಂಹ, ವೃಶ್ಚಿಕ, ಧನಸ್ಸು, ಮೀನ ರಾಶಿಯವರಿಗೆ ಚಂದ್ರನ ಬಲ ದೊರೆಯಲಿದೆ. ಇಂದಿನ ದಿನ ಭವಿಷ್ಯವನ್ನು (Dina Bhavishya) ನೋಡುವುದಾದರೆ, ಮೇಷ ರಾಶಿಯವರು ಮಕ್ಕಳ ಆರೋಗ್ಯದ ಬಗೆಗೆ ಕಾಳಜಿ ವಹಿಸಿ. ದಿನದ ಮಟ್ಟಿಗೆ ಖರ್ಚು ಇರಲಿದೆ. ಪ್ರಯಾಣ ಮಾಡುವ ಸಾಧ್ಯತೆ ಇದೆ. ಬಹಳ ದಿನಗಳ ಕನಸು ನನಸಾಗುವ ಕಾಲ ಕೂಡಿ ಬರಲಿದೆ. ಸಿಂಹ ರಾಶಿಯವರು ಮಾನಸಿಕ ಒತ್ತಡದಿಂದ ಹೊರಬರಲು ವ್ಯಸನಗಳ ಮೊರೆ ಹೋಗುವುದು ಬೇಡ. ಬದಲಾಗಿ ಕ್ಷೇತ್ರ ದರ್ಶನ, ಆಧ್ಯಾತ್ಮಿಕ ವ್ಯಕ್ತಿಗಳ ಮಾರ್ಗದರ್ಶನ ಪಡೆಯುವುದು ಸೂಕ್ತ. ಆರೋಗ್ಯ ಮಧ್ಯಮವಾಗಿರಲಿದೆ. ವ್ಯಾಪಾರ ವ್ಯವಹಾರ ಹಾಗೂ ಹಣಕಾಸು ವ್ಯವಹಾರದಲ್ಲಿ ಪ್ರಗತಿ ಇರಲಿದೆ. ಉದ್ಯೋಗಿಗಳಿಗೆ ಬಿಡುವಿಲ್ಲದ ಕಾರ್ಯ ಚಟುವಟಿಕೆಯ ಮಧ್ಯೆಯೂ ಯಶಸ್ಸು ಸಿಗಲಿದೆ. ಇದೂ ಸೇರಿದಂತೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (25-08-2024)

ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷ.
ತಿಥಿ: ಸಪ್ತಮಿ 27:38 ವಾರ: ಭಾನುವಾರ
ನಕ್ಷತ್ರ: ಭರಣಿ 16:44 ಯೋಗ: ಧ್ರುವ 24:27
ಕರಣ: ವಿಷ್ಟಿ (ಭದ್ರ) 16:30 ಅಮೃತಕಾಲ: ಮಧ್ಯಾಹ್ನ 12:13 ರಿಂದ 01:44
ದಿನದ ವಿಶೇಷ: ಬಾಗೇವಾಡಿ ಜಾತ್ರೆ ತಲಕಾಡು ಬಾಲಕೃಷ್ಣಾನಂದ ವರ್ಧಂತಿ

ಸೂರ್ಯೋದಯ : 06:08   ಸೂರ್ಯಾಸ್ತ : 06:35

ರಾಹುಕಾಲ: ಸಂಜೆ 05:01 ರಿಂದ 06:35
ಗುಳಿಕಕಾಲ: ಮಧ್ಯಾಹ್ನ 03:28
ರಿಂದ 05:01
ಯಮಗಂಡಕಾಲ: ಮಧ್ಯಾಹ್ನ 12:22 ರಿಂದ 01:55

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

Horoscope Today

ಮೇಷ: ಮಕ್ಕಳ ಆರೋಗ್ಯದ ಬಗೆಗೆ ಕಾಳಜಿ ವಹಿಸಿ. ದಿನದ ಮಟ್ಟಿಗೆ ಖರ್ಚು ಇರಲಿದೆ. ಪ್ರಯಾಣ ಮಾಡುವ ಸಾಧ್ಯತೆ ಇದೆ. ಬಹಳ ದಿನಗಳ ಕನಸು ನನಸಾಗುವ ಕಾಲ ಕೂಡಿ ಬರಲಿದೆ. ಉದ್ಯೋಗಿಗಳಿಗೆ ಶುಭ ಫಲ. ಅದೃಷ್ಟ ಸಂಖ್ಯೆ: 2

Horoscope Today

ವೃಷಭ: ಹಾಸ್ಯದ ಮನೋವೃತ್ತಿ ಇತರರನ್ನು ಆಕರ್ಷಿಸುತ್ತದೆ. ಸ್ನೇಹಿತರೊಂದಿಗೆ ಸಮಯ ಹಂಚಿಕೊಳ್ಳುವ ಸಾಧ್ಯತೆ ಇದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 1

Horoscope Today

ಮಿಥುನ: ಆರೋಗ್ಯದ ಕುರಿತಾಗಿ ಕಾಳಜಿ ವಹಿಸಿ. ಆರ್ಥಿಕ ಪ್ರಗತಿ ಸಾಧಾರಣವಾಗಿರಲಿದೆ. ಸ್ನೇಹಿತರು, ಆಪ್ತ ಸಂಬಂಧಿಕರಿಂದ ಮಾರ್ಗದರ್ಶನ, ಉಡುಗೊರೆ ಸಿಗುವ ಸಾಧ್ಯತೆ ಇದೆ. ನಿಮ್ಮ ಪ್ರೀತಿ ಪಾತ್ರರೊಂದಿಗೆ ಸೌಜನ್ಯದಿಂದ ವರ್ತಿಸಿ, ಯಾವುದೇ ಆತುರದ ಮಾತುಗಳನ್ನಾಡುವುದು ಬೇಡ. ಕೌಟುಂಬಿಕವಾಗಿ ಸಾಧಾರಣ ಫಲ. ಅದೃಷ್ಟ ಸಂಖ್ಯೆ: 8

Horoscope Today

ಕಟಕ: ನ್ಯಾಯಾಲಯದಲ್ಲಿರುವ ವ್ಯಾಜ್ಯ ಪ್ರಕರಣಗಳು ನಿಮಗೆ ವಿಜಯವನ್ನು ತಂದುಕೊಡಲಿದೆ. ಒತ್ತಡದ ಹೊರತಾಗಿಯೂ ಆರೋಗ್ಯ ಪರಿಪೂರ್ಣವಾಗಿರಲಿದೆ. ಸಂಗಾತಿಯ ಮನಸ್ಸಿನ ಭಾವನೆಗಳನ್ನು ಅರ್ಥ ಮಾಡಿಕೊಳ್ಳವಿರಿ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 3

Horoscope Today

ಸಿಂಹ: ಮಾನಸಿಕ ಒತ್ತಡದಿಂದ ಹೊರಬರಲು ವ್ಯಸನಗಳ ಮೊರೆ ಹೋಗುವುದು ಬೇಡ. ಬದಲಾಗಿ ಕ್ಷೇತ್ರ ದರ್ಶನ, ಆಧ್ಯಾತ್ಮಿಕ ವ್ಯಕ್ತಿಗಳ ಮಾರ್ಗದರ್ಶನ ಪಡೆಯುವುದು ಸೂಕ್ತ. ಆರೋಗ್ಯ ಮಧ್ಯಮವಾಗಿರಲಿದೆ. ವ್ಯಾಪಾರ ವ್ಯವಹಾರ ಹಾಗೂ ಹಣಕಾಸು ವ್ಯವಹಾರದಲ್ಲಿ ಪ್ರಗತಿ ಇರಲಿದೆ. ಉದ್ಯೋಗಿಗಳಿಗೆ ಬಿಡುವಿಲ್ಲದ ಕಾರ್ಯ ಚಟುವಟಿಕೆಯ ಮಧ್ಯೆಯೂ ಯಶಸ್ಸು ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 1

Horoscope Today

ಕನ್ಯಾ: ಭೂ ಸಂಬಂಧಿ, ಹಣಕಾಸು ಹೂಡಿಕೆ ವ್ಯವಹಾರದಲ್ಲಿ ಪ್ರಗತಿ ಲಾಭವಾಗಲಿದೆ. ಸಂಗಾತಿಯೊಂದಿಗೆ ಮುಖ್ಯ ವಿಷಯಗಳ ಕುರಿತು ಚರ್ಚೆ ಮಾಡುವಿರಿ. ಉದ್ಯೋಗಿಗಳಿಗೆ ಶುಭ ಫಲ. ಆರೋಗ್ಯ ಪರಿಪೂರ್ಣವಾಗಿರಲಿದೆ. ಪ್ರಯಾಣ ಮಾಡುವ ಸಾಧ್ಯತೆ ಇದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 8

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

Horoscope Today

ತುಲಾ: ಹಿರಿಯರ ಮಾರ್ಗದರ್ಶನ ಸಿಗಲಿದೆ. ಹೂಡಿಕೆ ವ್ಯವಹಾರದಲ್ಲಿ ತೊಡಗುವುದು ಬೇಡ. ಕುಟುಂಬದಲ್ಲಿ ಅನೇಕ ಬದಲಾವಣೆಗಳನ್ನು ಕಾಣುವ ಸಾಧ್ಯತೆ ಇದೆ. ಕುಟುಂಬದ ಆಪ್ತರೊಂದಿಗೆ ಗೌಪ್ಯ ವಿಷಯಗಳನ್ನು ಹಂಚಿಕೊಳ್ಳುವ ಮುನ್ನ ಎಚ್ಚರಿಕೆ ಇರಲಿ. ನಿಮದಲ್ಲದ ಕುರಿತು ಅನಗತ್ಯವಾಗಿ ಚರ್ಚೆ ಮಾಡಿ, ಕುಟುಂಬದ ಸ್ವಾಸ್ಥ್ಯ ಕೆಡಿಸಿಕೊಳ್ಳುವುದು ಬೇಡ. ಆರೋಗ್ಯ ಮಧ್ಯಮವಾಗಿರಲಿದೆ. ಕೌಟುಂಬಿಕವಾಗಿ ಸಾಧಾರಣ ಫಲ. ಅದೃಷ್ಟ ಸಂಖ್ಯೆ: 2

Horoscope Today

ವೃಶ್ಚಿಕ: ನಕಾರಾತ್ಮಕ ಆಲೋಚನೆಗಳು ನಿಮ್ಮನ್ನು ಘಾಸಿ ಮಾಡುವ ಸಾಧ್ಯತೆ ಇದೆ. ಆಲಸ್ಯತನದಿಂದ ಕಾರ್ಯ ಮುಂದುಡುವುದು ಬೇಡ. ಅಮೂಲ್ಯ ವಸ್ತುಗಳ ಕುರಿತಾಗಿ ಜಾಗೃತೆ ಇರಲಿ. ಸ್ನೇಹಿತರೊಂದಿಗೆ ಕಾಲ ಕಳೆಯುವ ಸಾಧ್ಯತೆ ಇದೆ. ಆರೋಗ್ಯದ ಕುರಿತು ಕಾಳಜಿ ವಹಿಸುವುದು ಅಗತ್ಯ. ಕೌಟುಂಬಿಕವಾಗಿ ಸಾಧಾರಣ ಫಲ. ಅದೃಷ್ಟ ಸಂಖ್ಯೆ: 4

Horoscope Today

ಧನಸ್ಸು: ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಅತಿಯಾದ ಒತ್ತಡ ಉಂಟು ಮಾಡುವ ವಿಚಾರಗಳಿಂದ ದೂರ ಇರಿ. ಕುಟುಂಬದ ಆಪ್ತರಿಂದ ಶುಭ ಸುದ್ದಿ ಸಿಗುವ ಸಾಧ್ಯತೆ ಇದೆ. ಕುಟುಂಬದ ಸದಸ್ಯರ ವರ್ತನೆ ಮುಜುಗರ ಉಂಟು ಮಾಡುವ ಸಾಧ್ಯತೆ ಇದೆ. ಆರೋಗ್ಯದ ವ್ಯತ್ಯಾಸದಿಂದ ದಿನದ ಮಟ್ಟಿಗೆ ಖರ್ಚು ಮಾಡುವ ಸಾಧ್ಯತೆ ಇದೆ. ಕೌಟುಂಬಿಕವಾಗಿ ಸಾಧಾರಣ ಫಲ. ಅದೃಷ್ಟ ಸಂಖ್ಯೆ: 1

Horoscope Today

ಮಕರ: ಹಾಸ್ಯ ಪ್ರವೃತ್ತಿಯಿಂದ ಬರುವ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ. ಹಣಕಾಸು ವ್ಯವಹಾರದಲ್ಲಿ ಪ್ರಗತಿ ಇರಲಿದೆ. ಕುಟುಂಬದವರು ನಿಮ್ಮ ಬಗೆಗೆ ಹೆಚ್ಚು ಕಾಳಜಿ ವಹಿಸುವರು. ಆರೋಗ್ಯ‌ ಪರಿಪೂರ್ಣವಾಗಿರಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 1

Horoscope Today

ಕುಂಭ: ಕೋಪದಿಂದ ಅಪಾಯ ತಂದುಕೊಳ್ಳುವುದು ಬೇಡ. ಅತಿಯಾದ ಉತ್ಸಾಹದ ಭರದಲ್ಲಿ ಅತಿರೇಕದ ಮಾತುಗಳನ್ನಾಡುವುದು ಸರಿಯಲ್ಲ, ಅಪಾಯ ತಂದಿತು ಎಚ್ಚರಿಕೆ. ಉದ್ಯೋಗದ ಸ್ಥಳದಲ್ಲಿ ಕಿರಿಕಿರಿ ಉಂಟು ಮಾಡುವ ಸಾಧ್ಯತೆ ಇದೆ. ಸಂಗಾತಿಯ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸ ಆಗುವ ಸಾಧ್ಯತೆ ಇದೆ. ಕೌಟುಂಬಿಕವಾಗಿ ಸಾಧಾರಣ ಫಲ. ಅದೃಷ್ಟ ಸಂಖ್ಯೆ: 7

Horoscope Today

ಮೀನ: ಆಹಾರ ಕ್ರಮದ ವ್ಯತ್ಯಾಸದಿಂದ ಆರೋಗ್ಯ ಹದಗೆಡುವ ಸಾಧ್ಯತೆ ಇದೆ. ಸಂಗಾತಿಯ ಮಾತುಗಳು ಹಿತವೇನಿಸಿದರೂ ಅವರ ಮಾತುಗಳಿಗೆ ಮನ್ನಣೆ ಸಿಗುವುದಿಲ್ಲ. ಆರೋಗ್ಯ ಹಾಗೂ ಹಣಕಾಸಿನ ವಿಷಯದಲ್ಲಿ ಸಾಮಾನ್ಯವಾಗಿರಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 5

Horoscope Today

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

Continue Reading

ದೇಶ

Rahul Gandhi: ಮಿಸ್‌ ಇಂಡಿಯಾ ಪಟ್ಟಿಯಲ್ಲಿ ದಲಿತ, ಬುಡಕಟ್ಟು, ಒಬಿಸಿ ಮಹಿಳೆಯರು ಇಲ್ಲವೇ ಇಲ್ಲ-ರಾಹುಲ್‌ ಗಾಂಧಿ ಹೊಸ ಆರೋಪ

Rahul Gandhi: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಸಂವಿಧಾನ ಸಮ್ಮಾನ್ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಮಿಸ್ ಇಂಡಿಯಾ ಪಟ್ಟಿಯಲ್ಲಿ ದಲಿತ ಅಥವಾ ಬುಡಕಟ್ಟು ಮಹಿಳೆ ಇರಬಹುದೇ ಎಂದು ನೋಡಲು ನಾನು ಪರಿಶೀಲಿಸಿದೆ. ಆದರೆ ಅಲ್ಲಿ ದಲಿತ, ಬುಡಕಟ್ಟು ಅಥವಾ ಒಬಿಸಿ ಮಹಿಳೆ ಇರಲಿಲ್ಲ. ಮಾಧ್ಯಮಗಳು ನೃತ್ಯ, ಸಂಗೀತ, ಕ್ರಿಕೆಟ್, ಬಾಲಿವುಡ್ ಬಗ್ಗೆ ಮಾತನಾಡುತ್ತವೆ. ರೈತರು ಮತ್ತು ಕಾರ್ಮಿಕರ ಬಗ್ಗೆ ಮಾತನಾಡುವವರೇ ಇಲ್ಲ ಎಂದು ಕಿಡಿ ಕಾರಿದರು.

VISTARANEWS.COM


on

Rahul Gandhi
Koo

ನವದೆಹಲಿ: ಸದಾ ಪ್ರಧಾನಿ ನರೇಂದ್ರ ಮೋದಿ(PM Narendra Modi) ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಒಂದಿಲ್ಲೊಂದು ಆರೋಪ ಮಾಡುತ್ತಾ ಕೆಂಡ ಕಾರುವ ವಿಪಕ್ಷ ನಾಯಕರ ರಾಹುಲ್‌ ಗಾಂಧಿ(Rahul Gandhi) ಇದೀಗ ಹೊಸ ಆರೋಪದೊಂದಿಗೆ ವಾಗ್ದಾಳಿ ನಡೆಸಿದ್ದಾರೆ. ಮಿಸ್‌ ಇಂಡಿಯಾ ಸ್ಪರ್ಧೆ(Miss India) ವಿಜೇತರ ಪಟ್ಟಿಯಲ್ಲಿ ಇದುವರೆಗೆ ದಲಿತ, ಬುಡಕಟ್ಟು ಅಥವಾ ಒಬಿಸಿ ಸಮುದಾಯಕ್ಕೆ ಸೇರಿದ ಯಾವುದೇ ಮಹಿಳೆಯ ಹೆಸರು ಬಂದೇ ಇಲ್ಲ ಎಂದು ಹೇಳಿದ್ದಾರೆ.

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಸಂವಿಧಾನ ಸಮ್ಮಾನ್ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಮಿಸ್ ಇಂಡಿಯಾ ಪಟ್ಟಿಯಲ್ಲಿ ದಲಿತ ಅಥವಾ ಬುಡಕಟ್ಟು ಮಹಿಳೆ ಇರಬಹುದೇ ಎಂದು ನೋಡಲು ನಾನು ಪರಿಶೀಲಿಸಿದೆ. ಆದರೆ ಅಲ್ಲಿ ದಲಿತ, ಬುಡಕಟ್ಟು ಅಥವಾ ಒಬಿಸಿ ಮಹಿಳೆ ಇರಲಿಲ್ಲ. ಮಾಧ್ಯಮಗಳು ನೃತ್ಯ, ಸಂಗೀತ, ಕ್ರಿಕೆಟ್, ಬಾಲಿವುಡ್ ಬಗ್ಗೆ ಮಾತನಾಡುತ್ತವೆ. ರೈತರು ಮತ್ತು ಕಾರ್ಮಿಕರ ಬಗ್ಗೆ ಮಾತನಾಡುವವರೇ ಇಲ್ಲ ಎಂದು ಕಿಡಿ ಕಾರಿದರು.

ಇದೇ ವೇಳೆ ಅವರು ರಾಷ್ಟ್ರವ್ಯಾಪಿ ಜಾತಿ ಗಣತಿಯನ್ನು ನಡೆಸುವ ಮಹತ್ವವನ್ನು ಪುನರುಚ್ಚರಿಸಿದರು, ಇದು ಕೇವಲ ಜನಗಣತಿಯಾಗಿರುವುದಿಲ್ಲ ಆದರೆ ಪರಿಣಾಮಕಾರಿ ನೀತಿ ನಿರೂಪಣೆಗೆ ಅಡಿಪಾಯವಾಗಿದೆ ಎಂದು ಹೇಳಿದರು.
ಅಗತ್ಯವಿರುವ ಕೌಶಲ್ಯ, ಪ್ರತಿಭೆ ಮತ್ತು ಜ್ಞಾನವನ್ನು ಹೊಂದಿದ್ದರೂ ಜನಸಂಖ್ಯೆಯ 90 ಪ್ರತಿಶತದಷ್ಟು ಜನರು ವ್ಯವಸ್ಥೆಯೊಂದಿಗೆ ಸಂಪರ್ಕ ಹೊಂದಿಲ್ಲ ಎಂದು ಹೇಳಿದರು.

ಜಾತಿ ಗಣತಿ ನಡೆಸುವುದರ ಹೊರತಾಗಿ ಯಾವುದೇ ಪ್ರಯೋಜನಗಳಿಲ್ಲದ ಶೇಕಡಾ 90 ರಷ್ಟು ಜನಸಂಖ್ಯೆಯ ನಡುವೆ ಸಂಪತ್ತು ಹೇಗೆ ಹಂಚಿಕೆಯಾಗುತ್ತಿದೆ ಎಂಬುದನ್ನು ಗಮನಿಸುವುದು ಮುಖ್ಯ. ಶೇ.90ರಷ್ಟು ಜನರು ವ್ಯವಸ್ಥೆಯ ಭಾಗವಾಗಿಲ್ಲ, ಅವರಿಗೆ ಅಗತ್ಯವಿರುವ ಕೌಶಲ್ಯ, ಪ್ರತಿಭೆ ಮತ್ತು ಜ್ಞಾನವಿದೆ, ಆದರೆ ಅವರು ವ್ಯವಸ್ಥೆಯೊಂದಿಗೆ ಸಂಪರ್ಕ ಹೊಂದಿಲ್ಲ, ಅದಕ್ಕಾಗಿಯೇ ನಾವು ಜಾತಿ ಗಣತಿಗೆ ಒತ್ತಾಯಿಸುತ್ತೇವೆ ಎಂದರು.

ನಮಗೆ ವಿವಿಧ ಸಮುದಾಯಗಳ ಪಟ್ಟಿ ಬೇಕು, ನಮಗೆ ಜಾತಿ ಗಣತಿ ಕೇವಲ ಜನಗಣತಿಯಲ್ಲ, ನೀತಿ ನಿರೂಪಣೆಗೆ ಅಡಿಪಾಯವಾಗಿದೆ. ಕೇವಲ ಜಾತಿ ಗಣತಿ ನಡೆಸುವುದು ಸಾಕಾಗುವುದಿಲ್ಲ, ಸಂಪತ್ತು ಹೇಗೆ ಹಂಚಿಕೆಯಾಗುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಸಹ ಮುಖ್ಯವಾಗಿದೆ. ಒಬಿಸಿಗಳು, ದಲಿತರು ಮತ್ತು ಅಧಿಕಾರಶಾಹಿ, ನ್ಯಾಯಾಂಗ ಮತ್ತು ಮಾಧ್ಯಮಗಳಲ್ಲಿ ಕಾರ್ಮಿಕರ ಭಾಗವಹಿಸುವಿಕೆ ಎಷ್ಟು ಎಂಬುದನ್ನು ಕಂಡುಹಿಡಿಯುವುದು ಸಹ ಮುಖ್ಯವಾಗಿದೆ ಎಂದರು.

ಇದನ್ನೂ ಓದಿ: Muda Scam: ದೆಹಲಿಯಲ್ಲಿ ರಾಹುಲ್‌ ಗಾಂಧಿಯನ್ನು ಭೇಟಿಯಾದ ಸಿಎಂ ಸಿದ್ದರಾಮಯ್ಯ; ಕಾನೂನು ಹೋರಾಟದ ಬಗ್ಗೆ ಚರ್ಚೆ

Continue Reading
Advertisement
unified pension scheme
ಪ್ರಮುಖ ಸುದ್ದಿ2 hours ago

Unified pension scheme: ಕೇಂದ್ರ ಸರ್ಕಾರದ ಯುಪಿಎಸ್ ಪಿಂಚಣಿ ಯೋಜನೆಗೆ ರಾಜ್ಯ ಸರ್ಕಾರಿ ನೌಕರರ ಸಂಘಗಳ ವಿರೋಧ

Sunita Williams
ದೇಶ2 hours ago

Sunita Williams: ಮುಂದಿನ ವರ್ಷ ಫೆಬ್ರುವರಿಯಲ್ಲಿ ಭೂಮಿಗೆ ಮರಳಲಿದ್ದಾರೆ ಸುನೀತಾ ವಿಲಿಯಮ್ಸ್;‌ ನಾಸಾ ಘೋಷಣೆ

karnataka weather forecast
ಮಳೆ2 hours ago

Karnataka Weather : ಬೆಂಗಳೂರು ಸೇರಿದಂತೆ ಉಡುಪಿ, ಉತ್ತರ ಕನ್ನಡದಲ್ಲಿಂದು ಭಾರಿ ಮಳೆ ಎಚ್ಚರ

Dina Bhavishya
ಭವಿಷ್ಯ3 hours ago

Dina Bhavishya : ಈ ರಾಶಿಯವರ ಬಹು ದಿನಗಳ ಕನಸು ನನಸು; ಕುಟುಂಬದ ಆಪ್ತರಿಂದ ಶುಭ ಸುದ್ದಿ

Rahul Gandhi
ದೇಶ8 hours ago

Rahul Gandhi: ಮಿಸ್‌ ಇಂಡಿಯಾ ಪಟ್ಟಿಯಲ್ಲಿ ದಲಿತ, ಬುಡಕಟ್ಟು, ಒಬಿಸಿ ಮಹಿಳೆಯರು ಇಲ್ಲವೇ ಇಲ್ಲ-ರಾಹುಲ್‌ ಗಾಂಧಿ ಹೊಸ ಆರೋಪ

Sudha Murthy
ಬೆಂಗಳೂರು9 hours ago

Sudha Murthy: ವೈದ್ಯಕೀಯ ಸೇವೆಯಲ್ಲಿ ಬದ್ಧತೆ, ನೈತಿಕತೆ ಇಂದಿನ ಅಗತ್ಯ: ಸುಧಾಮೂರ್ತಿ

Unified Pension scheme
ಪ್ರಮುಖ ಸುದ್ದಿ9 hours ago

Unified Pension scheme: ಏಕೀಕೃತ ಪಿಂಚಣಿ ಯೋಜನೆ ಸರ್ಕಾರಿ ನೌಕರರಿಗೆ ಕೇಂದ್ರ ನೀಡುತ್ತಿರುವ ಆರ್ಥಿಕ ಭದ್ರತೆ- ಪ್ರಧಾನಿ ನರೇಂದ್ರ ಮೋದಿ

Amit Shah
ದೇಶ10 hours ago

Amit Shah: 2026ರ ವೇಳೆಗೆ ನಕ್ಸಲಿಸಂ ಸಂಪೂರ್ಣ ನಿರ್ಣಾಮ; ಬಿಗ್‌ ಟಾರ್ಗೆಟ್‌ ಫಿಕ್ಸ್‌ ಮಾಡಿದ ಕೇಂದ್ರ

Vijayanagara News
ವಿಜಯನಗರ10 hours ago

Vijayanagara News: ಮೀನುಗಾರರಿಗೆ ರಾಜ್ಯ‌ ಸರ್ಕಾರದಿಂದ ನಾನಾ ಸೌಕರ್ಯ; ಸಚಿವ ಮಂಕಾಳ ವೈದ್ಯ

NPS v/s UPS
ದೇಶ11 hours ago

NPS v/s UPS: ಏಕೀಕೃತ ಪಿಂಚಣಿ ಯೋಜನೆ ಅಂದ್ರೆ ಏನು? ಇದು NPSಗಿಂತ ಹೇಗೆ ಭಿನ್ನ? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌

Kannada Serials
ಕಿರುತೆರೆ11 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ12 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

ಮಳೆ17 hours ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 weeks ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 weeks ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 weeks ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು3 weeks ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ3 weeks ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ3 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ3 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ3 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ3 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

ಟ್ರೆಂಡಿಂಗ್‌