ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಚ್ಚಿ ಬೀಳಿಸುವ ವಾಮಾಚಾರ ಪ್ರಕರಣವೊಂದು (Black Magic ) ನಡೆದಿದೆ. 25 ಸತ್ತ ಆಡಿನ ತಲೆಯೊಂದಿಗೆ ವ್ಯಕ್ತಿಗಳ ಭಾವ ಚಿತ್ರ ಬಳಸಿ ಕೃಷಿ ತೋಟದ ಗೇಟ್ ಮುಂಭಾಗ ವಾಮಾಚಾರ ನಡೆಸಲಾಗಿದೆ.
ದಕ್ಷಿಣ ಕನ್ನಡದ ಬೆಳ್ತಂಗಡಿಯ ಗರ್ಡಾಡಿಯ ಬೋಳಿಯಾರ್‌ನಲ್ಲಿ ವಾಮಾಚಾರ ನಡೆಸಲಾಗಿದೆ. ಜಾಗದ ತಕರಾರು ಹಿನ್ನೆಲೆಯಲ್ಲಿ ವಾಮಾಚಾರ ನಡೆದಿರುವ ಆರೋಪ ಕೇಳಿ ಬಂದಿದೆ. ಕೃಷಿ ತೋಟ ಮುಂಭಾಗ ಸತ್ತ ಆಡಿನ ತಲೆಗಳು ಹಾಗು ವ್ಯಕ್ತಿಗಳ ಭಾವಚಿತ್ರ ಪತ್ತೆಯಾಗಿದೆ.
ಆಡಿನ ತಲೆಗೆ ಹಲವು ಜನರ ಭಾವಚಿತ್ರವನ್ನು ಮೊಳೆ ಹೊಡೆದು ಮಾಟ ಮಂತ್ರ ಮಾಡಲಾಗಿದೆ. ಸಮಾಜದ ಕೆಲ ಗಣ್ಯ ವ್ಯಕ್ತಿಗಳ ಫೋಟೋ ಕೂಡ ಬಳಕೆ ಮಾಡಲಾಗಿದೆ. ಜಾಗದ ಮಾಲೀಕರಾದ ಗೋಪು ಕುಮಾರ್ ಹಾಗು ಸುಮೇಶ್ ವಿರುದ್ಧ ವಾಮಾಚಾರ ನಡೆದಿದೆ. ಮಂಗಳೂರಿನ ರಾಜೇಶ್ ಪ್ರಭು ಎಂಬಾತನೇ ಇದನ್ನಲ್ಲೆ ಮಾಡಿಸಿದ್ದಾನೆ ಎನ್ನಲಾಗಿದೆ.
ಇದನ್ನೂ ಓದಿ: Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!
ರಾಜೇಶ್ ಪ್ರಭು ಹಾಗು ಗೋಪು ಕುಮಾರ್ ನಡುವೆ ಜಾಗದ ತಕರಾರು ಇತ್ತು. ರಾಜೇಶ್ ಪ್ರಭು ವಿರುದ್ಧ ಕಾನೂನು ಹೋರಾಟಕ್ಕೆ ಗೋಪು ಕುಮಾರ್ ಹಾಗು ಸಂಗಡಿಗರು ಮುಂದಾಗಿದ್ದರು. ಇದೆ ಕಾರಣಕ್ಕೆ ಗೋಪು ಕುಮಾರ್ ಸಹಿತ ಬೆಂಬಲಿಸಿದವರ ವಿರುದ್ಧವು ವಾಮಾಚಾರ ಪ್ರಯೋಗ ಮಾಡಲಾಗಿದೆ.
ಸ್ಥಳದಲ್ಲಿ 25 ಆಡಿನ ತಲೆಗಳು, ಮೊಟ್ಟೆ, ಮರದ ಪ್ರತಿಕೃತಿ, ಭಾವಚಿತ್ರ, ಹೂವು ಪತ್ತೆಯಾಗಿದೆ. ತೋಟದ ಬಳಿ ಆಗಮಿಸುವ ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿದೆ. ಕೃತ್ಯ ನಡೆಸಿದವರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ