Site icon Vistara News

ಖ್ಯಾತ ಉದ್ಯಮಿ ಅಣ್ಣಪ್ಪ ಪೈ ನಿಧನ

annappa pai

ಮಂಗಳೂರು: ಮಂಗಳೂರು ಕೆನರಾ ಹೈಸ್ಕೂಲ್ ‌ಅಸೋಸಿಯೇಶನ್ ಅಧ್ಯಕ್ಷರು ಹಾಗೂ ಖ್ಯಾತ ಉದ್ಯಮಿ ಅಣ್ಣಪ್ಪ ಪೈ (74) ಅವರು ಬೆಂಗಳೂರಿನಲ್ಲಿ ಅನಾರೋಗ್ಯದಿಂದ ಬುಧವಾರ ನಿಧನರಾದರು.

ಸಾಹುಕಾರ್ ಬಾಬಾ ಪೈ ಮನೆತನದವರಾದ ಅಣ್ಣಪ್ಪ ಪೈಯವರು ರಾಘವೇಂದ್ರ ರಂಗ ಪೈ ಅವರ ಪುತ್ರ. ಜಿಲ್ಲಾ ಸಣ್ಣ ಕೈಗಾರಿಕಾ ಅಸೋಸಿಯೇಶನ್ ಅಧ್ಯಕ್ಷರಾಗಿ, ರೋಟರಿ ಕ್ಲಬ್ ಅಧ್ಯಕ್ಷರಾಗಿ, ಮಾರ್ಡನ್ ಕಿಚನ್ & ಪ್ರೆಸ್ಟೋ ಬ್ರಾಂಡಿನ ಉತ್ಪನ್ನಗಳ ಯಶಸ್ಸಿನ ಹಿಂದಿನ ಪ್ರೇರಣಾ ಶಕ್ತಿಯಾಗಿ, ಮೆ. ರಾಘವೇಂದ್ರ ರಂಗ ಪೈ ( ಆರ್.ಆರ್.ಪೈ) ಪಾಲುದಾರರಾಗಿ, ಏಸ್ ಫುಡ್ಸ್ ಪ್ರೈ ಲಿ. ಆಡಳಿತ ನಿರ್ದೇಶಕರಾಗಿದ್ದರು. ಯುವ ಉದ್ಯಮಿಗಳಿಗೆ ಸ್ಫೂರ್ತಿಯಾಗಿಯೂ ಇದ್ದರು. ಪರೋಪಕಾರಿಯಾಗಿ, ಸಮಾಜದ ಸೇವಾ ಚಟುವಟಿಕೆಗಳಲ್ಲಿ ತೊಡಗಿ ಜನಪರ ಕಾಳಜಿಯನ್ನು ಹೊಂದಿದ್ದರು.

ಅಣ್ಣಪ್ಪ ಪೈ ಅವರು ಪತ್ನಿ, ಇಬ್ಬರು ಪುತ್ರರಾದ ಒರೆಕಲ್ ಕಂಪೆನಿಯ ಅರವಿಂದ ಪೈ, ಡೆಲಿವರಿ ಲಾಜಿಸ್ಟಿಕ್ ನಿರ್ದೇಶಕ ಅಜಿತ್ ಪೈ ಅವರನ್ನು ಅಗಲಿದ್ದಾರೆ. ಗುರುವಾರ(ಜೂನ್‌ 30) ಮಧ್ಯಾಹ್ನ ಮಂಗಳೂರಿನಲ್ಲಿರುವ ಅವರ ಸ್ವಗೃಹದಲ್ಲಿ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ಓದಿ | ಉದ್ಯಮ ವಲಯದ ವರಿಷ್ಠ, ಭಾರತೀಯ ಉಕ್ಕು ಪ್ರಾಧಿಕಾರದ ಮಾಜಿ ಅಧ್ಯಕ್ಷ ವಿ. ಕೃಷ್ಣಮೂರ್ತಿ ನಿಧನ

Exit mobile version