ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಗಾಗ ನೈತಿಕ ಪೊಲೀಸ್‌ಗಿರಿ (Moral Policing) ಪ್ರಕರಣಗಳು ಕೇಳಿಬರುತ್ತಲೇ ಇದ್ದು, ಈಗ ಪುತ್ತೂರಿನಲ್ಲಿ ಮತ್ತೆ ಹಿಂದು ಕಾರ್ಯಕರ್ತರಿಂದ ನೈತಿಕ ಪೊಲೀಸ್‌ಗಿರಿ ಯತ್ನ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಭಿನ್ನ ಕೋಮಿನ ಯುವಕ-ಯುವತಿ ಕೆಫೆಗೆ ಬಂದಿದ್ದಕ್ಕೆ ಹಿಂದು ಸಂಘಟನೆಯ ಯುವಕರು ಆಕ್ಷೇಪ ವ್ಯಕ್ತಪಡಿಸಿದ್ದು, ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ದ.ಕ ಜಿಲ್ಲೆಯ ಪುತ್ತೂರು ನಗರದ ಬಸ್ ನಿಲ್ದಾಣದ ಬಳಿ ಈ ಪ್ರಕರಣ ನಡೆದಿದ್ದು, ಹಿಂದು ಯುವತಿಯೊಬ್ಬಳು ಕ್ರಿಶ್ಚಿಯನ್ ಯುವತಿಯರ ಸಹಿತ ಇಬ್ಬರು ಮುಸ್ಲಿಂ ಯುವಕರ ಜತೆಗೆ ಕೆಫೆಗೆ ಬಂದಿದ್ದಾಳೆ. ಈ ವೇಳೆ ಎಲ್ಲರೂ ಕುಳಿತುಕೊಂಡು ಮಾತನಾಡಿಕೊಳ್ಳುತ್ತಿದ್ದರು. ಜ್ಯೂಸ್ ಕುಡಿಯಲು ಎಲ್ಲರೂ ಕೆಫೆಗೆ ಬಂದಿದ್ದಾರೆ ಎಂದು ಹೇಳಲಾಗಿದೆ. ಆದರೆ, ಈ ವೇಳೆ ಕೆಫೆ ಮುಂಭಾಗ ಸೇರಿದ ಹಿಂದು ಕಾರ್ಯಕರ್ತರು ಗಲಾಟೆ ಮಾಡಿದ್ದಾರೆ.
ಬಳಿಕ ಹಿಂದು ಕಾರ್ಯಕರ್ತರು ಪುತ್ತೂರು ನಗರ ಠಾಣೆಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಪುತ್ತೂರು ನಗರ ಠಾಣೆ ಎಸ್‌ಐ ಶ್ರೀಕಾಂತ್ ರಾಥೋಡ್ ಸ್ಥಳಕ್ಕಾಗಮಿಸಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ಅಲ್ಲದೆ, ಪರಿಸ್ಥಿತಿ ತೀರಾ ಗಂಭೀರವಾಗಬಾರದು ಎಂಬ ನಿಟ್ಟಿನಲ್ಲಿ ಭಿನ್ನ ಕೋಮಿನ ಜೋಡಿಗಳನ್ನು ವಿಚಾರಣೆ ನಡೆಸಿ ಅವರ ಪೋಷಕರಿಗೆ ಮಾಹಿತಿ ಮುಟ್ಟಿಸಿದ್ದಾರೆ.
ಇದನ್ನೂ ಓದಿ | Politics | ಕರ್ನಾಟಕ ಬಿಜೆಪಿ ಅಧ್ಯಕ್ಷರ ಆಯ್ಕೆ ದಾರಿಯಲ್ಲಿ ದಕ್ಷಿಣ ಕನ್ನಡ ಸಂಕಟ!