Site icon Vistara News

Forced conversion | ಮಂಗಳೂರಿನಲ್ಲಿ ಇಸ್ಲಾಂಗೆ ಹಿಂದೂ ಯುವತಿಯ ಬಲವಂತದ ಮತಾಂತರ ಆರೋಪ, ಕೇಸ್‌ ದಾಖಲು

mangalore conversion

ಮಂಗಳೂರು: ಮಂಗಳೂರಿನಲ್ಲಿ ಹಣ ಮತ್ತು ಕೆಲಸದ ಆಮಿಷ ಒಡ್ಡಿ, ಹಿಂದೂ ಯುವತಿಯನ್ನು ಇಸ್ಲಾಂಗೆ ಬಲವಂತವಾಗಿ ಮತಾಂತರಿಸಿದ (Forced conversion) ಪ್ರಕರಣ ವರದಿಯಾಗಿದೆ.

ಮಂಗಳೂರಿನ ವೈದ್ಯೆ ಹಾಗೂ ಮುಸ್ಲಿಂ ಯುವಕರ ವಿರುದ್ಧ, ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಿಂದೂ ಯುವತಿಯನ್ನು ಇಸ್ಲಾಮ್ ಗೆ ಮತಾಂತರ ನಡೆಸಿ ಆಯೇಷಾ ಎಂದು ಹೆಸರು ಬದಲಿಸಿದ ಬಗ್ಗೆ ದೂರು ದಾಖಲಿಸಲಾಗಿದೆ.

ದೂರು ದಾಖಲಿಸಿದ ಹಿಂದೂ ಯುವತಿ: ಇಸ್ಲಾಮ್ ಗೆ ಮತಾಂತರ ಮಾಡಿ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ಶಿವಾನಿ ಎಂಬ ಯುವತಿಯಿಂದ ದೂರು ದಾಖಲಿಸಿದ್ದಾರೆ. ಕುಲಶೇಖರದ ಮೊಬೈಲ್ ಅಂಗಡಿಯ ಖಲೀಲ್ ಹಾಗೂ ಭದ್ರಾವತಿಯ ಇಮಾಮ್ ವಿರುದ್ದವೂ ಆರೋಪಿಸಲಾಗಿದೆ.

ಮಂಗಳೂರಿನ ಹೆರಿಗೆ ವೈದ್ಯೆ ಡಾ.ಜಮೀಲಾ ವಿರುದ್ದ ಮತಾಂತರ ಆರೋಪ ಮಾಡಲಾಗಿದೆ. ಕುರಾನ್ ಓದಲು ಹೇಳಿ ನಮಾಜ್ ಮಾಡಿಸಿ ಬಲವಂತದ ಮತಾಂತರ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಡಾ.ಜಮೀಲಾ, ಖಲೀಲ್ ಮತ್ತು ಇಮಾಮ್ ವಿರುದ್ದ ಪೊಲೀಸರು ಐಪಿಸಿ 354, 354(ಎ), 506 ಹಾಗೂ ಮತಾಂತರ ನಿಷೇಧ ಕಾಯ್ದೆಯಡಿ ಎಫ್ಐಆರ್ ದಾಖಲಿಸಿದ್ದಾರೆ. ಹಣ ಮತ್ತು ಕೆಲಸದ ಆಮಿಷ ಒಡ್ಡಿ ಮತಾಂತರ ‌ಮಾಡಲಾಗಿದೆ ಎಂದು ಯುವತಿ ಆರೋಪಿಸಿದ್ದಾರೆ.

Exit mobile version