Site icon Vistara News

ಖತರ್ನಾಕ್‌ ರೌಡಿಗಳ ಹೆಡೆಮುರಿ ಕಟ್ಟಿದ ಖಾಕಿ: ಹಲವು ವರ್ಷಗಳ ಗ್ಯಾಂಗ್‌ ವಾರ್‌ಗೆ ಬ್ರೇಕ್

ರೌಡಿ ಗ್ಯಾಂಗ್‌

ಮಂಗಳೂರು: ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಲು ಹೋಗಿ ಖತರ್ನಾಕ್‌ ರೌಡಿಗಳು ಪೊಲೀಸರ ಗುಂಡೇಟು ತಿಂದು ಆಸ್ಪತ್ರೆ ಸೇರಿದ್ದಾರೆ. ವಾರದ ಹಿಂದೆ ನಡೆದ ರೌಡಿ ಶೀಟರ್‌ ರಾಘವೇಂದ್ರ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಿಂದ ಈ ಹಲ್ಲೆ ನಡೆದಿದೆ. ಕೊಲೆ ನಡೆಸಿ ತಲೆ ಮರೆಸಿಕೊಂಡಿದ್ದ ರೌಡಿಗಳಾದ ಮನೋಜ್‌ ಹಾಗೂ ಅರ್ಜುನ್‌  ಶುಕ್ರವಾರ (ಜೂನ್‌ 10) ಪೊಲೀಸರ ಬಲೆಗೆ ಬಿದ್ದಿದ್ದರು. ಬಹಳಷ್ಟು ವರ್ಷಗಳಿಂದ ಕೊಲೆ ಸೇರಿದಂತೆ ಹಲವಾರು ಪ್ರಕರಣಗಳಲ್ಲಿ ಇವರಿಬ್ಬರೂ ಪ್ರಮುಖ ಆರೋಪಿಯಾಗಿದ್ದರು.

ಹಿಂದೆ ಸುರತ್ಕಲ್‌ ವ್ಯಾಪ್ತಿಯಲ್ಲಿ ಪೊಲೀಸರಿಗೆ ತಲೆನೋವಾಗಿದ್ದ ರೌಡಿ ಗ್ಯಾಂಗ್‌ಗೆ ಸದ್ಯಕ್ಕೆ ಇವರೇ ಲೀಡರ್ಸ್‌ ಕೂಡಾ ಆಗಿದ್ದರು. ಗ್ಯಾಂಗ್‌ನಲ್ಲಿಯೇ ಉಂಟಾದ ಭಿನ್ನಾಭಿಪ್ರಾಯಕ್ಕೆ ಈಗಾಗಲೇ ಮೂರು ಪ್ರತಿಕಾರದ ಕೊಲೆಗಳು ನಡೆದಿವೆ. ವಾರದ ಹಿಂದೆ ರೌಡಿ ಶೀಟರ್‌ ರಾಘವೇಂದ್ರ ಕೊಲೆಯನ್ನು ಇವರೇ ಮಾಡಿದ್ದಾರೆ ಎನ್ನುವುದು ಕನ್‌ಫರ್ಮ್‌ ಆದ ಬಳಿಕ ಸಿಸಿಬಿ ಪೊಲೀಸರು ಇಬ್ಬರನ್ನೂ ಶುಕ್ರವಾರ ಅರೆಸ್ಟ್‌ ಮಾಡಿದ್ದರು.

ಇದನ್ನೂ ಓದಿ | ಎಸ್ಕೇಪ್‌ಗೆ ಯತ್ನ, ರಾಜಾ ಕೊಲೆ ಆರೋಪಿಗಳ ಮೇಲೆ ಮಂಗಳೂರು ಪೊಲೀಸರ ಫೈರಿಂಗ್

ಮಹೇಶ್ ಪ್ರಸಾದ್ ,ಸಿಸಿಬಿ ಇನ್ಸ್‌ಪೆಕ್ಟರ್

ಶನಿವಾರ (ಜೂನ್‌ 11)  ಕೊಲೆ ನಡೆದ ಸ್ಥಳದ ಮಹಜರು ನಡೆಸಲು ಇಬ್ಬರನ್ನೂ ಕರೆದುಕೊಂಡು ಹೊರಟ ಸಿಸಿಬಿ ಪೊಲೀಸರ ಮೇಲೆ  ಇಬ್ಬರೂ ದಾಳಿ ನಡೆಸಿದ್ದಾರೆ. ಪೊಲೀಸ್‌ ಜೀಪ್‌ ಜಖಂಗೊಳಿಸಿ ಬಾಟ್ಲಿಯಿಂದ ಪೊಲೀಸ್‌ ಸಿಬ್ಬಂದಿ ಮೇಲೆ ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಸಿಸಿಬಿ ಇನ್‌ಸ್ಪೆಕ್ಟರ್‌ ಮಹೇಶ್‌ ಪ್ರಸಾದ್‌ ಆರೋಪಿಗಳ ಕಾಲಿಗೆ ಗುಂಡು ಹಾರಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸ್‌ ಆಯುಕ್ತ ಶಿವಕುಮಾರ್‌ ಮಾತನಾಡಿ, ಹನ್ನೆರಡು ವರ್ಷಗಳಿಂದ ಸುರತ್ಕಲ್‌ ವ್ಯಾಪ್ತಿಯಲ್ಲಿ ಎರಡು ರೌಡಿ ಗ್ಯಾಂಗ್‌ಗಳ ನಡುವೆ ಪ್ರತೀಕಾರದ ಕೊಲೆಗಳು ನಡೆಯುತ್ತಾ ಬಂದಿದೆ. ಹೊಸದಾಗಿ ಗ್ಯಾಂಗ್‌ಗೆ ಸೇರ್ಪಡೆಯಾಗುವ ಯುವಕರಿಂದಾಗಿ ಈ ಗ್ಯಾಂಗ್‌ಗಳಲ್ಲಿ ಹಲವಾರು ಯುವಕರು ಸಕ್ರಿಯವಾಗಿದ್ದಾರೆ. ಹಲವರ ಮೇಲೆ ಪಣಂಬೂರು , ಮುಲ್ಕಿ , ಸುರತ್ಕಲ್‌ ಪೊಲೀಸ್‌ ಠಾಣೆಯಲ್ಲಿ ರೌಡಿ ಶೀಟ್‌ ಕೂಡಾ ಓಪನ್‌ ಆಗಿದೆ ಎಂದರು.

ಜೈಲಿಗೆ ಹೋಗಿ ಬಂದ್ರೆ ಕ್ರೆಡಿಟ್‌ ಅಂತೆ

ಜೈಲಿಗೆ ಹೋಗಿ ಬಂದಾಗಲೂ ಅದೊಂದು ಕ್ರೆಡಿಟ್‌ ಎನ್ನುವ ರೀತಿಯಲ್ಲಿ ಮತ್ತಷ್ಟು ಅಪರಾದಗಳಲ್ಲಿ ಇವರುಗಳು ತೊಡಗಿಸಿಕೊಳ್ಳುತ್ತಿದ್ದರು. ಆದರೆ ಶುಕ್ರವಾರ ಬೆಳಗ್ಗೆ ಪೊಲೀಸರ ಮೇಲೆಯೇ ತಮ್ಮ ಖದರ್‌ ತೋರಿಸಲು ಹೋಗಿ ಯಡವಟ್ಟು ಮಾಡಿಕೊಂಡಿದ್ದಾರೆ. ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದ ರೌಡಿಗಳ ಕಾಲಿಗೆ ಸಿಸಿಬಿ ಇನ್‌ಸ್ಪೆಕ್ಟರ್‌ ಮಹೇಶ್‌ ಪ್ರಸಾದ್‌ ಗುಂಡು ಹಾರಿಸಿ ತಕ್ಕ ಪಾಠ ಕಲಿಸಿದ್ದಾರೆ.

ಪೊಲೀಸ್‌ ಆಯುಕ್ತ ಶಿಕುಮಾರ್‌

ಮಂಗಳೂರಿನಲ್ಲಿ ಈ ಹಿಂದೆ ಇದ್ದ ದೊಡ್ಡ ದೊಡ್ಡ ರೌಡಿ ಗ್ಯಾಂಗ್‌ಗಳು ಪೊಲೀಸರ ಕಟ್ಟು ನಿಟ್ಟಿನ ಕಾರ್ಯಾಚರಣೆಯಿಂದ ಈಗ ಹೇಳಲು ಹೆಸರಿಲ್ಲದಂತೆ ಆಗಿವೆ. ಆದರೆ ಮಂಗಳೂರು ಹೊರವಲಯದಲ್ಲಿ ಅಲ್ಲೊಂದು ಇಲ್ಲೊಂದು ಸಣ್ಣ ಗ್ಯಾಂಗ್‌ ವಾರ್‌ಗಳು ನಡೆಯುತ್ತ ಇದ್ದವು. ಹೊಸ ತಲೆಮಾರಿನ ಯುವಕರ ಗ್ಯಾಂಗ್‌ ಕಟ್ಟಿ ಗ್ಯಾಂಗ್‌ ಲೀಡರ್‌ ಆಗಲು ಹೊರಟ ಮನೋಜ್‌ ಹಾಗೂ ಅರ್ಜನ್‌ ಅವರ ಹೆಡೆಮುರಿ ಕಟ್ಟಿರೋದು ಉಳಿದ ರೌಡಿಗಳ ಎದೆಯಲ್ಲಿ ನಡುಕ ಹುಟ್ಟಿಸಿರೋದಂತು ಸುಳ್ಳಲ್ಲ.

ಇದನ್ನೂ ಓದಿ | ಪೊಲೀಸರ ಮೇಲೆ ಹಲ್ಲೆಗೆ ಮುಂದಾದ ರೌಡಿ ಕಾಲಿಗೆ ಗುಂಡೇಟು

Exit mobile version