Site icon Vistara News

Damaged Saree: ಯುಗಾದಿ ಹಬ್ಬಕ್ಕೆ ಗಾಂಧಿನಗರದಲ್ಲಿ ಹರಿದ ಸೀರೆ ಕೊಟ್ಟರಾ ದಿನೇಶ್‌ ಗುಂಡೂರಾವ್‌? ಸೀರೆ ನೀಡಿ ಮಹಿಳೆಯರ ಕಿಡಿ

Did Dinesh Gundu Rao distribute damaged sarees in Gandhinagar for Ugadi festival?

Did Dinesh Gundu Rao distribute damaged sarees in Gandhinagar for Ugadi festival?

ಬೆಂಗಳೂರು: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ (Karnataka Election 2023) ಸಮೀಪಿಸುತ್ತಿದ್ದು ರಾಜಕೀಯ ಪಕ್ಷಗಳ ನಾಯಕರು ತಮ್ಮ ತಮ್ಮ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಹಬ್ಬ-ಹರಿದಿನಗಳು ಇದ್ದರೆ ಕ್ಷೇತ್ರದ ಮತದಾರರನ್ನು ಸೆಳೆಯಲು ಸೀರೆ ಹಂಚುವುದು, ದಿನಸಿ ಸಾಮಾನು ನೀಡುವುದು ಮಾಮೂಲಿ ಆಗಿದೆ. ಇದೇ ರೀತಿಯಲ್ಲಿ ಕಾಂಗ್ರೆಸ್‌ ಹಿರಿಯ ನಾಯಕ ದಿನೇಶ್‌ ಗುಂಡೂರಾವ್‌ ಅವರು ಯುಗಾದಿ ಹಬ್ಬಕ್ಕೆ ನೀಡಿದ್ದ ಸೀರೆ ಬಗ್ಗೆ ಈಗ ನಾರಿಯರು ಮುನಿಸಿಕೊಂಡಿದ್ದಾರೆ. ಡ್ಯಾಮೇಜ್‌ (Damaged Saree) ಸೀರೆ ಕೊಟ್ಟಿದ್ದೀರಿ ಎಂದು ಆಕ್ರೋಶವನ್ನು ಹೊರಹಾಕಿದ್ದಾರೆ.

ಡ್ಯಾಮೇಜ್‌ ಸೀರೆಗಳನ್ನು ವಾಪಸ್‌ ನೀಡಿ ಆಕ್ರೋಶ ಹೊರಹಾಕಿದ ಮಹಿಳೆಯರು

ಕಾಂಗ್ರೆಸ್‌ ನಾಯಕ ದಿನೇಶ್ ಗುಂಡೂರಾವ್ ಹೆಸರಿನಲ್ಲಿ ಗಾಂಧಿನಗರದ ಕ್ಷೇತ್ರದಲ್ಲಿ ಮಹಿಳೆಯರಿಗೆ ಸೀರೆಯನ್ನು ಹಂಚಿಕೆ ಮಾಡಲಾಗಿತ್ತು. ಆದರೆ ಹರಿದ ಸೀರೆಗಳನ್ನು ಕೊಟ್ಟಿದ್ದಾರೆ ಎಂದು ಮಹಿಳೆಯರು ಕಿಡಿಕಾರಿದ್ದಾರೆ. ಈ ಕ್ಷೇತ್ರದ ಎಲ್ಲ ಮಹಿಳೆಯರು ಸೇರಿ ಹರಿದ ಸೀರೆ ಕೊಟ್ಟಿದ್ದ ಕಾಂಗ್ರೆಸ್‌ ಕಾರ್ಯಕರ್ತರಿಗೆ ವಾಪಸ್ ನೀಡಿ ಆಕ್ರೋಶ ಹೊರಹಾಕಿದ್ದಾರೆ.

ಡ್ಯಾಮೇಜ್‌ ಸೀರೆಗಳು

ಚುನಾವಣೆ ಸಮಯದಲ್ಲಿ ರಾಜಕೀಯ ನಾಯಕರು ಸೀರೆ, ಕುಕ್ಕರ್, ಮೂಗುತಿ ಹಂಚುವುದು ಹೊಸದಲ್ಲ. ಸೀರೆ ಆಸೆಗೆ ಬಿದ್ದ ಮಹಿಳೆಯರು ಆಸೆ ಪಟ್ಟು ಮುಗಿಬಿದ್ದು ಸೀರೆ ಪಡೆದುಕೊಂಡಿದ್ದರು. ಆದರೆ, ಇದೇ ಜನರ ಆಸೆಗೆ ಕಾಂಗ್ರೆಸ್ ನಾಯಕ ಹಾಗೂ ಶಾಸಕರಾಗಿರುವ ದಿನೇಶ್ ಗುಂಡೂರಾವ್ ಹಬ್ಬಕ್ಕೆ ಹರಕಲು ಸೀರೆ ಹಂಚಿ ಜನರ ಆಕ್ರೋಶಕ್ಕೆ ತುತ್ತಾಗಿದ್ದಾರೆ.

ಇದನ್ನೂ ಓದಿ: Indira Canteen: ಬಿಬಿಎಂಪಿ vs ಗುತ್ತಿಗೆ ಸಂಸ್ಥೆ ಬಿಲ್‌ ಬಡಿದಾಟ; ಇಂದಿರಾ ಕ್ಯಾಂಟೀನ್‌ಲ್ಲಿನ್ನು ಸಿಗಲ್ಲ ಊಟ?

ಸೀರೆ ಡ್ಯಾಮೇಜ್‌ ಆಗಿದೆಯೋ ಇಲ್ಲವೋ ಎಂದು ಪರೀಕ್ಷಿಸಿ ಮಹಿಳೆಯರು ಸೀರೆಗಳನ್ನು ಕಾರ್ಯಕರ್ತರಿಗೆ ವಾಪಸ್ ನೀಡಿ ಛೀಮಾರಿ ಹಾಕಿದ್ದಾರೆ. ಹಂಚುವ ನೂರು ಇನ್ನೂರು ರೂಪಾಯಿ ಸೀರೆಗಳನ್ನು ನೆಟ್ಟಗೆ ಹಂಚಲು ಆಗದೆ ಹರಕಲು ಸೀರೆ ಕೊಟ್ಟರೆ ಯಾರು ತೆಗೆದುಕೊಳ್ಳುತ್ತಾರೆ ಎಂದು ಕಟುವಾಗಿ ನುಡಿದಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version