ಮೈಸೂರು: ವಿಶ್ವವಿಖ್ಯಾತ ದಸರಾ ಮಹೋತ್ಸವ (Mysore Dasara) ಭಾಗವಾಗಿ ಅ.23ರಂದು ಏರ್ ಶೋ ಆಯೋಜಿಸಲಾಗಿದೆ. ಹೀಗಾಗಿ ನಗರದಲ್ಲಿ ಭಾನುವಾರ ಏರ್ ಶೋ ಪೂರ್ವಾಭ್ಯಾಸ (ರಿಹಾರ್ಸಲ್) ನಡೆಯಿತು. ಈ ವೇಳೆ ಆಗಸದಲ್ಲಿ ಬಗೆಬಗೆಯ ಲೋಹದ ಹಕ್ಕಿಗಳು ಸಾಹಸ ಪ್ರದರ್ಶನ ಮಾಡಿ ನೋಡುಗರ ಗಮನ ಸೆಳೆದವು.
ಭಾರತೀಯ ವಾಯುಪಡೆಯ ಸೂರ್ಯ ಕಿರಣ್ ಸೇರಿ ಹಲವು ಯುದ್ಧ ವಿಮಾನಗಳು ಆಕಾಶದಲ್ಲಿ ಚಮಾತ್ಕಾರ ತೋರಿಸುತ್ತಿದ್ದಂತೆ ನೆರೆದಿದ್ದ ಜನರು ಪುಳಕಿತಗೊಂಡರು. ಏರ್ ಶೋ ಪೂರ್ವಾಭ್ಯಾಸ ವೀಕ್ಷಿಸಲು ನೂರಾರು ಮಂದಿ ಆಗಮಿಸಿದ್ದರು. 2019ರಲ್ಲಿ ಮೈಸೂರಿನಲ್ಲಿ ದಸರಾ ಅಂಗವಾಗಿ ಏರ್ ಶೋ ನಡೆದಿತ್ತು. ಇದೀಗ ನಾಲ್ಕು ವರ್ಷಗಳ ಬಳಿಕ ಏರ್ ಶೋ ನಡೆಯುತ್ತಿರುವುದಿರಂದ ನೋಡಲು ಜನರು ಕಾತರದಿಂದ ಇದ್ದಾರೆ.
ಸೋಮವಾರ ಮಧ್ಯಾಹ್ನ 4 ಗಂಟೆಗೆ ವೈಮಾನಿಕ ಪ್ರದರ್ಶನ
ಅ. 23ರಂದು ಮಧ್ಯಾಹ್ನ 4 ಗಂಟೆಗೆ ಬನ್ನಿ ಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಏರ್ ಶೋಗೆ ಚಾಲನೆ ನೀಡಲಾಗುತ್ತದೆ. ಏರ್ ಶೋದಲ್ಲಿ ಭಾರತೀಯ ವಾಯುಸೇನೆಯ ನಾನಾ ಯುದ್ಧ ವಿಮಾನಗಳು, ಲಘು ವಿಮಾನಗಳು ಭಾಗವಹಿಲಿಸಲಿದ್ದು, ಆಗಸದಲ್ಲಿ ನಾನಾ ಸಾಹಸ ಪ್ರದರ್ಶನ ಮಾಡಲಿವೆ. ಜತೆಗೆ ವಾಯುಸೇನೆಯ ಯೋಧರು ಪ್ಯಾರಾಚೂಟ್ ಮೂಲಕ ಸಾಹಸ ಪ್ರದರ್ಶನ ಮಾಡಲಿದ್ದಾರೆ.
ಇದನ್ನೂ ಓದಿ | Mysore dasara : ಇದು ನಮ್ಮ ಮೈಸೂರು ದಸರೆಯ ವೈಭೋಗ; ತಿಳಿಯಿರಿ ಇದರ ಇತಿಹಾಸದ ಸೊಬಗ
ಅಂತಿಮ ಘಟ್ಟದತ್ತ ಮೈಸೂರು ದಸರಾ; ಅ. 23 – 24ರ ಅರಮನೆ ಕಾರ್ಯಕ್ರಮಗಳಿವು
ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ (Mysore Dasara) ಕಾರ್ಯಕ್ರಮವು ಕೊನೇ ಘಟ್ಟ ತಲುಪುತ್ತಿದೆ. ಆರಂಭದಿಂದ ಇಲ್ಲಿಯವರೆಗೂ ವೈಭವದಿಂದ ನಡೆಯುತ್ತಿದ್ದು, ಲಕ್ಷಾಂತರ ಜನರು ಅರಮನೆ ನಗರಿಗೆ ಭೇಟಿ ನೀಡುತ್ತಿದ್ದಾರೆ. ಇನ್ನು ವಿಜಯದಶಮಿ ಆಚರಣೆಗೆ (Vijayadashami Celebrations) ದಿನಗಣನೆ ಪ್ರಾರಂಭವಾಗಿದೆ. ಈ ನಡುವೆ ಅರಮನೆಯಲ್ಲಿಯೂ ಪದ್ಧತಿಯನುಸಾರ ಶಾಸ್ತ್ರೋಕ್ತವಾಗಿ ರಾಜಮನೆತನದವರು ದಸರಾವನ್ನು ಆಚರಿಸಿಕೊಂಡು (Dasara at Palace) ಬರುತ್ತಿದ್ದು, ಅ. 23 ಹಾಗೂ 24ರಂದು ಹಲವು ಕಾರ್ಯಕ್ರಮಗಳನ್ನು ನಡೆಸಲಿದ್ದಾರೆ.
ಪಾಡ್ಯದ ಮೊದಲ ದಿನ ಬೆಳಗ್ಗೆ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ (Yaduveer Krishnadatta Chamaraja Wadiyar) ಅವರು ಖಾಸಗಿ ದರ್ಬಾರ್ (Private Durbar) ಅನ್ನು ಆರಂಭಿಸಿದ್ದರು. ಬಳಿಕ ಅವರು ಪದ್ಧತಿಯಂತೆ ಪ್ರತಿ ದಿನ ಸಂಜೆ ಅರಮನೆಯ ರಾಜಮಹಲ್‌ನಲ್ಲಿ ಖಾಸಗಿ ದರ್ಬಾರ್ ನಡೆಸುತ್ತಾ ಬರುತ್ತಿದ್ದಾರೆ. ಇವುಗಳ ಜತೆಗೆ ಪ್ರತಿದಿನ ಅರಮನೆಯಲ್ಲಿ ಪೂಜಾ ಕೈಂಕರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಅ.23 ರಂದು ಅರಮನೆಯಲ್ಲಿ ಮಹತ್ವದ ಆಚರಣೆ ಇದೆ.
ಮಹಾರಾಜರಿಂದ ಆಯುಧ ಪೂಜೆ
ರಾಜರಿಗೆ ಅತಿ ಮುಖ್ಯವಾದದ್ದು ಆಯುಧವಾಗಿದೆ. ಈ ಹಿನ್ನೆಲೆಯಲ್ಲಿ ಅನಾದಿ ಕಾಲದಿಂದಲೂ ವಿಜಯದಶಮಿಯಂದು ಆಯುಧ ಪೂಜೆಯನ್ನು (Ayudha Puja) ಮಾಡಿ ಗೌರವ ಸಲ್ಲಿಸುವ ಪರಿಪಾಠ ನಡೆದುಕೊಂಡು ಬಂದಿದೆ. ಇನ್ನು ರಾಜ ಪರಂಪರೆ ಹೋಗಿ ಪ್ರಜಾಪ್ರಭುತ್ವ ಬಂದರೂ ಮೈಸೂರು ಅರಮನೆಯಲ್ಲಿ ರಾಜ ಪರಂಪರೆಯನ್ನು ನಡೆಸಿಕೊಂಡು ಬರಲಾಗುತ್ತಿದೆ. ಇಲ್ಲಿ ಪ್ರತಿ ವರ್ಷ ವಿಜಯದಶಮಿಯಂದು ಆಯುಧ ಪೂಜೆಯನ್ನು ಮಾಡಲಾಗುತ್ತದೆ. ಅಲ್ಲದೆ, ಅಂದು ವಿಜಯದಶಮಿ ಮೆರವಣಿಗೆಯನ್ನೂ ನಡೆಸಲಾಗುತ್ತದೆ. ಇದಾದ ನಂತರವೇ ಸರ್ಕಾರದ ವತಿಯಿಂದ ನಡೆಸಲಾಗುವ “ದಸರಾ ಮೆರವಣಿಗೆ”ಗೆ (ಜಂಬೂ ಸವಾರಿಗೆ ಚಾಲನೆ ಸಿಗಲಿದೆ.
ಇದನ್ನೂ ಓದಿ | Navaratri: ನವರಾತ್ರಿಯ 9ನೇ ದಿನ ಆಯುಧ ಪೂಜೆ ಮಾಡುವುದೇಕೆ?
ಅ. 23-24ರ ಖಾಸಗಿ ದಸರಾ ವೇಳಾಪಟ್ಟಿ ಇಂತಿದೆ
- ಅ.23ರಂದು ಸೋಮವಾರ ದುರ್ಗಾಷ್ಠಮಿ ಆಚರಣೆ.
- ಬೆ. 5.30ಕ್ಕೆ ಚಂಡಿಹೋಮದೊಂದಿಗೆ ಪೂಜೆ ಆರಂಭ
- ಬೆ.5.30ಕ್ಕೆ ಆನೆಬಾಗಿಲಿಗೆ ಪಟ್ಟದಆನೆ, ಪಟ್ಟದಕುದುರೆ, ಪಟ್ಟದ ಹಸು ಆಗಮನ
- ಬೆ.6.05 ರಿಂದ 06.15ಕ್ಕೆ ಅರಮನೆ ಕೋಡಿ ಸೋಮೇಶ್ವರ ದೇಗುಲಕ್ಕೆ ಖಾಸಾ ಆಯುಧಗಳ ರವಾನೆ
- ಬೆ.07.15ಕ್ಕೆ ಖಾಸಾ ಆಯುಧಗಳು ಕೋಡಿ ಸೋಮೇಶ್ವರ ದೇಗುಲದಿಂದ ಅರಮನೆಗೆ ವಾಪಸ್
- ಬಳಿಕ ಕಲ್ಯಾಣ ಮಂಟಪಕ್ಕೆ ಆಯುಧಗಳ ಆಗಮನ
- ಬೆ.9.30ಕ್ಕೆ ಚಂಡಿ ಹೋಮ ಪೂರ್ಣಾಹುತಿ
- ಬೆ.11.45ಕ್ಕೆ ಕಲ್ಯಾಣ ಮಂಟಪಕ್ಕೆ ಪಟ್ಟದಾನೆ, ಪಟ್ಟದಕುದುರೆ, ಪಟ್ಟದ ಆನೆ, ಪಟ್ಟದ ಹಸು ಆಗಮನ
- ಮ.12.20 ಆಯುಧಪೂಜೆ ಆರಂಭ 12.45ರವರೆಗೆ ಆಯುಧ ಪೂಜೆ, ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಂದ ಆಯುಧಗಳಿಗೆ ಪೂಜೆ
- ಅರಮನೆ ಕಲ್ಯಾಣ ಮಂಟಪದಲ್ಲಿ ನಡೆಯಲಿರುವ ಪೂಜೆ
- ಸಂಜೆ ಯದುವೀರ್ ಅವರಿಂದ ಖಾಸಗಿ ದರ್ಬಾರ್, ಖಾಸಗಿ ದರ್ಬಾರ್ ನಂತರ ಸಿಂಹಾಸನ ವಿಸರ್ಜನೆ
ಅ.24 ವಿಜಯದಶಮಿ ಆಚರಣೆ
- ಬೆ. 9.45ಕ್ಕೆ ಆನೆ ಬಾಗಿಲಿಗೆ ಪಟ್ಟದ ಆನೆ ಪಟ್ಟದ ಕುದುರೆ ಪಟ್ಟದ ಆನೆ ಪಟ್ಟದ ಹಸು ಆಗಮನ
- ಕಲ್ಯಾಣ ಮಂಟಪದಲ್ಲಿ ಖಾಸ ಆಯುಧಗಳಿಗೆ ಉತ್ತರ ಪೂಜೆ
- ಬೆ.11 ರಿಂದ 11.40 ವಿಜಯದಶಮಿ ಮೆರವಣಿಗೆ
- ಅರಮನೆ ಆನೆ ಬಾಗಿಲಿನಿಂದ ಅರಮನೆ ಭುವನೇಶ್ವರಿ ದೇಗುಲದವರೆಗೂ ಮೆರವಣಿಗೆ
- ಭುವನೇಶ್ವರಿ ದೇಗುಲದಲ್ಲಿ ಶಮಿ ಪೂಜೆ, ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ರಿಂದ ಪೂಜೆ
- ಪೂಜೆ ಮಗಿಸಿ ಅರಮನೆಗೆ ವಾಪಸ್ ತೆರಳಿ ಕಂಕಣ ವಿಸರ್ಜನೆ