Mysore Dasara: ಅ.23ರಂದು ಸಂಜೆ ದಸರಾ ಏರ್‌ ಶೋ; ಗಮನ ಸೆಳೆದ ಲೋಹದ ಹಕ್ಕಿಗಳ ರಿಹಾರ್ಸಲ್‌ - Vistara News

ಕರ್ನಾಟಕ

Mysore Dasara: ಅ.23ರಂದು ಸಂಜೆ ದಸರಾ ಏರ್‌ ಶೋ; ಗಮನ ಸೆಳೆದ ಲೋಹದ ಹಕ್ಕಿಗಳ ರಿಹಾರ್ಸಲ್‌

Mysore Dasara: ಮೈಸೂರಿನಲ್ಲಿ ಅ.23ರಂದು ದಸರಾ ಏರ್‌ ಶೋ ಹಿನ್ನೆಲೆಯಲ್ಲಿ ಭಾನುವಾರ ಭಾರತೀಯ ವಾಯು ಸೇನೆ ವಿಮಾನಗಳ ಪೂರ್ವಾಭ್ಯಾಸ ನಡೆಯಿತು.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮೈಸೂರು: ವಿಶ್ವವಿಖ್ಯಾತ ದಸರಾ ಮಹೋತ್ಸವ (Mysore Dasara) ಭಾಗವಾಗಿ ಅ.23ರಂದು ಏರ್‌ ಶೋ ಆಯೋಜಿಸಲಾಗಿದೆ. ಹೀಗಾಗಿ ನಗರದಲ್ಲಿ ಭಾನುವಾರ ಏರ್ ಶೋ ಪೂರ್ವಾಭ್ಯಾಸ (ರಿಹಾರ್ಸಲ್‌) ನಡೆಯಿತು. ಈ ವೇಳೆ ಆಗಸದಲ್ಲಿ ಬಗೆಬಗೆಯ ಲೋಹದ ಹಕ್ಕಿಗಳು ಸಾಹಸ ಪ್ರದರ್ಶನ ಮಾಡಿ ನೋಡುಗರ ಗಮನ ಸೆಳೆದವು.

ಭಾರತೀಯ ವಾಯುಪಡೆಯ ಸೂರ್ಯ ಕಿರಣ್ ಸೇರಿ ಹಲವು ಯುದ್ಧ ವಿಮಾನಗಳು ಆಕಾಶದಲ್ಲಿ ಚಮಾತ್ಕಾರ ತೋರಿಸುತ್ತಿದ್ದಂತೆ ನೆರೆದಿದ್ದ ಜನರು ಪುಳಕಿತಗೊಂಡರು. ಏರ್ ಶೋ ಪೂರ್ವಾಭ್ಯಾಸ ವೀಕ್ಷಿಸಲು ನೂರಾರು ಮಂದಿ ಆಗಮಿಸಿದ್ದರು. 2019ರಲ್ಲಿ ಮೈಸೂರಿನಲ್ಲಿ ದಸರಾ ಅಂಗವಾಗಿ ಏರ್ ಶೋ ನಡೆದಿತ್ತು. ಇದೀಗ ನಾಲ್ಕು ವರ್ಷಗಳ ಬಳಿಕ ಏರ್‌ ಶೋ ನಡೆಯುತ್ತಿರುವುದಿರಂದ ನೋಡಲು ಜನರು ಕಾತರದಿಂದ ಇದ್ದಾರೆ.

ಸೋಮವಾರ ಮಧ್ಯಾಹ್ನ 4 ಗಂಟೆಗೆ ವೈಮಾನಿಕ ಪ್ರದರ್ಶನ

ಅ. 23ರಂದು ಮಧ್ಯಾಹ್ನ 4 ಗಂಟೆಗೆ ಬನ್ನಿ ಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಏರ್‌ ಶೋಗೆ ಚಾಲನೆ ನೀಡಲಾಗುತ್ತದೆ. ಏರ್‌ ಶೋದಲ್ಲಿ ಭಾರತೀಯ ವಾಯುಸೇನೆಯ ನಾನಾ ಯುದ್ಧ ವಿಮಾನಗಳು, ಲಘು ವಿಮಾನಗಳು ಭಾಗವಹಿಲಿಸಲಿದ್ದು, ಆಗಸದಲ್ಲಿ ನಾನಾ ಸಾಹಸ ಪ್ರದರ್ಶನ ಮಾಡಲಿವೆ. ಜತೆಗೆ ವಾಯುಸೇನೆಯ ಯೋಧರು ಪ್ಯಾರಾಚೂಟ್‌ ಮೂಲಕ ಸಾಹಸ ಪ್ರದರ್ಶನ ಮಾಡಲಿದ್ದಾರೆ.

ಇದನ್ನೂ ಓದಿ | Mysore dasara : ಇದು ನಮ್ಮ ಮೈಸೂರು ದಸರೆಯ ವೈಭೋಗ; ತಿಳಿಯಿರಿ ಇದರ ಇತಿಹಾಸದ ಸೊಬಗ

ಅಂತಿಮ ಘಟ್ಟದತ್ತ ಮೈಸೂರು ದಸರಾ; ಅ. 23 – 24ರ ಅರಮನೆ ಕಾರ್ಯಕ್ರಮಗಳಿವು

Mysuru Dasara in Palace

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ (Mysore Dasara) ಕಾರ್ಯಕ್ರಮವು ಕೊನೇ ಘಟ್ಟ ತಲುಪುತ್ತಿದೆ. ಆರಂಭದಿಂದ ಇಲ್ಲಿಯವರೆಗೂ ವೈಭವದಿಂದ ನಡೆಯುತ್ತಿದ್ದು, ಲಕ್ಷಾಂತರ ಜನರು ಅರಮನೆ ನಗರಿಗೆ ಭೇಟಿ ನೀಡುತ್ತಿದ್ದಾರೆ. ಇನ್ನು ವಿಜಯದಶಮಿ ಆಚರಣೆಗೆ (Vijayadashami Celebrations) ದಿನಗಣನೆ ಪ್ರಾರಂಭವಾಗಿದೆ. ಈ ನಡುವೆ ಅರಮನೆಯಲ್ಲಿಯೂ ಪದ್ಧತಿಯನುಸಾರ ಶಾಸ್ತ್ರೋಕ್ತವಾಗಿ ರಾಜಮನೆತನದವರು ದಸರಾವನ್ನು ಆಚರಿಸಿಕೊಂಡು (Dasara at Palace) ಬರುತ್ತಿದ್ದು, ಅ. 23 ಹಾಗೂ 24ರಂದು ಹಲವು ಕಾರ್ಯಕ್ರಮಗಳನ್ನು ನಡೆಸಲಿದ್ದಾರೆ.

ಪಾಡ್ಯದ ಮೊದಲ ದಿನ ಬೆಳಗ್ಗೆ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ (Yaduveer Krishnadatta Chamaraja Wadiyar) ಅವರು ಖಾಸಗಿ ದರ್ಬಾರ್‌ (Private Durbar) ಅನ್ನು ಆರಂಭಿಸಿದ್ದರು. ಬಳಿಕ ಅವರು ಪದ್ಧತಿಯಂತೆ ಪ್ರತಿ ದಿನ ಸಂಜೆ ಅರಮನೆಯ ರಾಜಮಹಲ್‌ನಲ್ಲಿ ಖಾಸಗಿ ದರ್ಬಾರ್‌ ನಡೆಸುತ್ತಾ ಬರುತ್ತಿದ್ದಾರೆ. ಇವುಗಳ ಜತೆಗೆ ಪ್ರತಿದಿನ ಅರಮನೆಯಲ್ಲಿ ಪೂಜಾ ಕೈಂಕರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಅ.23 ರಂದು ಅರಮನೆಯಲ್ಲಿ ಮಹತ್ವದ ಆಚರಣೆ ಇದೆ.

ಮಹಾರಾಜರಿಂದ ಆಯುಧ ಪೂಜೆ

ರಾಜರಿಗೆ ಅತಿ ಮುಖ್ಯವಾದದ್ದು ಆಯುಧವಾಗಿದೆ. ಈ ಹಿನ್ನೆಲೆಯಲ್ಲಿ ಅನಾದಿ ಕಾಲದಿಂದಲೂ ವಿಜಯದಶಮಿಯಂದು ಆಯುಧ ಪೂಜೆಯನ್ನು (Ayudha Puja) ಮಾಡಿ ಗೌರವ ಸಲ್ಲಿಸುವ ಪರಿಪಾಠ ನಡೆದುಕೊಂಡು ಬಂದಿದೆ. ಇನ್ನು ರಾಜ ಪರಂಪರೆ ಹೋಗಿ ಪ್ರಜಾಪ್ರಭುತ್ವ ಬಂದರೂ ಮೈಸೂರು ಅರಮನೆಯಲ್ಲಿ ರಾಜ ಪರಂಪರೆಯನ್ನು ನಡೆಸಿಕೊಂಡು ಬರಲಾಗುತ್ತಿದೆ. ಇಲ್ಲಿ ಪ್ರತಿ ವರ್ಷ ವಿಜಯದಶಮಿಯಂದು ಆಯುಧ ಪೂಜೆಯನ್ನು ಮಾಡಲಾಗುತ್ತದೆ. ಅಲ್ಲದೆ, ಅಂದು ವಿಜಯದಶಮಿ ಮೆರವಣಿಗೆಯನ್ನೂ ನಡೆಸಲಾಗುತ್ತದೆ. ಇದಾದ ನಂತರವೇ ಸರ್ಕಾರದ ವತಿಯಿಂದ ನಡೆಸಲಾಗುವ “ದಸರಾ ಮೆರವಣಿಗೆ”ಗೆ (ಜಂಬೂ ಸವಾರಿಗೆ ಚಾಲನೆ ಸಿಗಲಿದೆ.

ಇದನ್ನೂ ಓದಿ | Navaratri: ನವರಾತ್ರಿಯ 9ನೇ ದಿನ ಆಯುಧ ಪೂಜೆ ಮಾಡುವುದೇಕೆ?

ಅ. 23-24ರ ಖಾಸಗಿ ದಸರಾ ವೇಳಾಪಟ್ಟಿ ಇಂತಿದೆ

  • ಅ.23ರಂದು ಸೋಮವಾರ ದುರ್ಗಾಷ್ಠಮಿ ಆಚರಣೆ.
  • ಬೆ. 5.30ಕ್ಕೆ ಚಂಡಿ‌ಹೋಮದೊಂದಿಗೆ ಪೂಜೆ ಆರಂಭ
  • ಬೆ.5.30ಕ್ಕೆ ಆನೆಬಾಗಿಲಿಗೆ ಪಟ್ಟದಆನೆ, ಪಟ್ಟದಕುದುರೆ, ಪಟ್ಟದ ಹಸು ಆಗಮನ
  • ಬೆ.6.05 ರಿಂದ 06.15ಕ್ಕೆ ಅರಮನೆ ಕೋಡಿ‌ ಸೋಮೇಶ್ವರ ದೇಗುಲಕ್ಕೆ ಖಾಸಾ ಆಯುಧಗಳ ರವಾನೆ
  • ಬೆ.07.15ಕ್ಕೆ ಖಾಸಾ ಆಯುಧಗಳು ಕೋಡಿ ಸೋಮೇಶ್ವರ ದೇಗುಲದಿಂದ ಅರಮನೆಗೆ ವಾಪಸ್‌
  • ಬಳಿಕ ಕಲ್ಯಾಣ ಮಂಟಪಕ್ಕೆ ಆಯುಧಗಳ ಆಗಮನ
  • ಬೆ.9.30ಕ್ಕೆ ಚಂಡಿ ಹೋಮ ಪೂರ್ಣಾಹುತಿ
  • ಬೆ.11.45ಕ್ಕೆ ಕಲ್ಯಾಣ ಮಂಟಪಕ್ಕೆ ಪಟ್ಟದಾನೆ, ಪಟ್ಟದಕುದುರೆ, ಪಟ್ಟದ ಆನೆ, ಪಟ್ಟದ ಹಸು ಆಗಮನ
  • ಮ.12.20 ಆಯುಧ‌ಪೂಜೆ ಆರಂಭ 12.45ರವರೆಗೆ ಆಯುಧ ಪೂಜೆ, ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಂದ ಆಯುಧಗಳಿಗೆ ಪೂಜೆ
  • ಅರಮನೆ ಕಲ್ಯಾಣ ಮಂಟಪದಲ್ಲಿ ನಡೆಯಲಿರುವ ಪೂಜೆ
  • ಸಂಜೆ ಯದುವೀರ್ ಅವರಿಂದ ಖಾಸಗಿ ದರ್ಬಾರ್, ಖಾಸಗಿ ದರ್ಬಾರ್ ನಂತರ ಸಿಂಹಾಸನ ವಿಸರ್ಜನೆ

ಅ.24 ವಿಜಯದಶಮಿ ಆಚರಣೆ

  • ಬೆ. 9.45ಕ್ಕೆ ಆನೆ ಬಾಗಿಲಿಗೆ ಪಟ್ಟದ ಆನೆ ಪಟ್ಟದ ಕುದುರೆ ಪಟ್ಟದ ಆನೆ ಪಟ್ಟದ ಹಸು ಆಗಮನ
  • ಕಲ್ಯಾಣ ಮಂಟಪದಲ್ಲಿ ಖಾಸ ಆಯುಧಗಳಿಗೆ ಉತ್ತರ ಪೂಜೆ
  • ಬೆ.11 ರಿಂದ 11.40 ವಿಜಯದಶಮಿ ಮೆರವಣಿಗೆ
  • ಅರಮನೆ ಆನೆ ಬಾಗಿಲಿನಿಂದ ಅರಮನೆ ಭುವನೇಶ್ವರಿ ದೇಗುಲದವರೆಗೂ ಮೆರವಣಿಗೆ
  • ಭುವನೇಶ್ವರಿ ದೇಗುಲದಲ್ಲಿ ಶಮಿ ಪೂಜೆ, ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ರಿಂದ ಪೂಜೆ
  • ಪೂಜೆ ಮಗಿಸಿ ಅರಮನೆಗೆ ವಾಪಸ್‌ ತೆರಳಿ ಕಂಕಣ‌ ವಿಸರ್ಜನೆ
ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬೆಂಗಳೂರು

English Alphabet: ಇಂಗ್ಲಿಷ್‌ನಲ್ಲಿ ಹೊಸ ಅಕ್ಷರ ವಿನ್ಯಾಸಕ್ಕಾಗಿ ಫ್ರಾನ್ಸ್‌ ವಿದ್ಯಾರ್ಥಿಗಳ ಪ್ರಯತ್ನ

English Alphabet: ಬೆಂಗಳೂರಿನ ಲಿಸಾ ಸ್ಕೂಲ್‌ ಆಫ್‌ ಡಿಸೈನಿಂಗ್‌ನಲ್ಲಿ ಗುರುವಾರ ಮುದ್ರಣಕಲೆ ಮತ್ತು ಉತ್ಪನ್ನ ವಿನ್ಯಾಸದ ಕುರಿತು ಒಂದು ದಿನದ ಕಾರ್ಯಗಾರ ಏರ್ಪಡಿಸಲಾಗಿತ್ತು. ಈ ವೇಳೆ ಬೆಂಗಳೂರು ಹಾಗೂ ಪ್ರಾನ್ಸ್‌ ವಿದ್ಯಾರ್ಥಿಗಳು, ಇಂಗ್ಲಿಷ್‌ ವರ್ಣಮಾಲೆಯ 27ನೇ ಅಕ್ಷರ ವಿನ್ಯಾಸಗೊಳಿಸುವ ಪ್ರಯತ್ನ ಮಾಡಿದ್ದಾರೆ.

VISTARANEWS.COM


on

English Alphabet
Koo

ಬೆಂಗಳೂರು: ಇಂಗ್ಲಿಷ್‌ ವರ್ಣಮಾಲೆಯಲ್ಲಿ (English Alphabet) 26 ಅಕ್ಷರಗಳಿರುವುದು ಗೊತ್ತಿರುವ ಸಂಗತಿ. ಆದರೆ, ನಗರದ ಲಿಸಾ ಸ್ಕೂಲ್‌ ಆಫ್‌ ಡಿಸೈನಿಂಗ್‌ (LISAA School of Design) ವಿದ್ಯಾರ್ಥಿಗಳು, 27ನೇ ಅಕ್ಷರ ವಿನ್ಯಾಸಗೊಳಿಸುವ ಸವಾಲು ಕೈಗೆತ್ತಿಕೊಂಡಿದ್ದು, ಆ ಮೂಲಕ ಇಂಗ್ಲಿಷ್‌ ಮತ್ತು ಫ್ರೆಂಚ್‌ ಭಾಷೆಯ ನಡುವಿನ ಅಂತರವನ್ನು ಕಡಿಮೆ ಮಾಡುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.

ನಗರದ ಲಿಸಾ ಸ್ಕೂಲ್‌ ಆಫ್‌ ಡಿಸೈನಿಂಗ್‌ನಲ್ಲಿ ಗುರುವಾರ ಮುದ್ರಣಕಲೆ ಮತ್ತು ಉತ್ಪನ್ನ ವಿನ್ಯಾಸದ ಕುರಿತು ಒಂದು ದಿನದ ಕಾರ್ಯಗಾರವನ್ನು ಏರ್ಪಡಿಸಲಾಗಿತ್ತು. ಇದರಲ್ಲಿ ಬೆಂಗಳೂರಿನ ಲಿಸಾ ಸ್ಕೂಲ್‌ ಆಫ್‌ ಡಿಸೈನ್‌ ಮತ್ತು ಫ್ರಾನ್ಸ್‌ನ ಸ್ಟ್ರಾಸ್‌ಬರ್ಗ್‌ ಲಿಸಾ ಸ್ಕೂಲ್‌ ಆಫ್‌ ಡಿಸೈನ್‌ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕಾರ್ಯಾಗಾರದ ಮುಖ್ಯ ಉದ್ದೇಶ ಹೊಸ ಅಕ್ಷರವನ್ನು ವಿನ್ಯಾಸಗೊಳಿಸುವುದಾಗಿತ್ತು.

ಈ ಕುರಿತು ಬೆಂಗಳೂರಿನ ಲಿಸಾ ಸ್ಕೂಲ್‌ ಆಫ್‌ ಡಿಸೈನ್‌ ಸಂಸ್ಥಾಪಕರು ಮತ್ತು ನಿರ್ದೇಶಕಿ ಅವಿ ಕೆಸ್ವಾನಿ ಅವರು ಮಾತನಾಡಿ, “ಭಾಷೆಯೊಂದು ಸಂವಹನ ಕ್ರಿಯೆಗೆ ನೆರವಾಗುವ ಮಾಧ್ಯಮ. ಅದರಂತೆ ಎಲ್ಲಾ ಅಕ್ಷರಗಳಿಗೂ ಅದರದ್ದೇ ಆದ ಸಾಂಸ್ಕೃತಿಕ ಹಿನ್ನೆಲೆ ಇರುತ್ತದೆ. ನಾವು ವಿನ್ಯಾಸಕಾರರು ಈ ಮೂಲಕ ಹೊಸ ಯೋಚನೆಗಳನ್ನು ಹೊರತರಲು ವೇದಿಕೆಗಳನ್ನು ಸೃಷ್ಟಿಸುವ ಪ್ರಯತ್ನ ಮಾಡುತ್ತೇವೆ. ನಮ್ಮ ಉದ್ದೇಶ ಈ ಕಾರ್ಯಾಗಾರದ ಮೂಲಕ ವಿದ್ಯಾರ್ಥಿಗಳಿಗೆ ಹೊಸ ಸವಾಲೊಂದನ್ನು ನೀಡುವುದಾಗಿದೆ. ಮೂಲತಃ ಫ್ರೆಂಚ್‌ ಸ್ಕೂಲ್‌ ಆಫ್‌ ಡಿಸೈನ್‌ ಆಗಿರುವುದರಿಂದ ಇಂಗ್ಲಿಷ್‌ ಮಾತನಾಡುವವರು ಕೆಲ ಫ್ರೆಂಚ್‌ ಉಚ್ಚಾರಣೆ ಮಾಡಲು ಕಷ್ಟಪಡುವುದನ್ನು ಗಮನಿಸಿದ್ದೇವೆ. ಈ ಹಿನ್ನೆಲೆಯಲ್ಲಿ 27ನೇ ಅಕ್ಷರವನ್ನು ವಿನ್ಯಾಸಗೊಳಿಸುವ ಮೂಲಕ ಫ್ರೆಂಚ್‌ ಮತ್ತು ಇಂಗ್ಲಿಷ್‌ ಭಾಷೆಗೆ ಸೇತುವೆ ಕಲ್ಪಿಸುವುದಾಗಿದೆ” ಎಂದು ಹೇಳಿದರು.

ಇದನ್ನೂ ಓದಿ | ರಾಜಮಾರ್ಗ ಅಂಕಣ: ಕಣ್ಣಿಲ್ಲದೆ ಉದ್ಯಮ ಸಾಮ್ರಾಜ್ಯವನ್ನು ಕಟ್ಟಿದ ಶ್ರೀಕಾಂತ್ ಬೊಳ್ಳಾ

ಫ್ರಾನ್ಸ್‌ನ ವಿದ್ಯಾರ್ಥಿಗಳಿಗೆ ಕಾರ್ಯಾಗಾರದ ಜೊತೆಗೆ ಶೈಕ್ಷಣಿಕ ಪ್ರವಾಸವನ್ನು ಆಯೋಜಿಸಿದ್ದು, ಈ ಮೂಲಕ ನಾಡಿನ ಶ್ರೀಮಂತ ಸಂಸ್ಕೃತಿ ಮತ್ತು ವಾಸ್ತುಶಿಲ್ಪದ ವೈಭವವನ್ನು ಪರಿಚಯಿಸುವ ನಿಟ್ಟಿನಲ್ಲಿ ಚನ್ನಪಟ್ಟಣದ ಕರಕುಶಲ ಕೇಂದ್ರ ಮತ್ತು ಮೈಸೂರಿನ ಅರಮನೆಯ ಪರಿಚಯ ಮಾಡಿಸಿಕೊಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

Continue Reading

ಹಾಸನ

Prajwal Revanna Case‌: ಗನ್‌ ಪಾಯಿಂಟ್‌ನಲ್ಲಿ ಜೆಡಿಎಸ್‌ ನಾಯಕಿ ಮೇಲೆ ಪ್ರಜ್ವಲ್‌ರಿಂದ ರೇಪ್‌? ಎಫ್‌ಐಆರ್‌ನಲ್ಲಿದೆ ಇಂಚಿಂಚು ಡಿಟೇಲ್ಸ್!

Prajwal Revanna Case‌: ಜೆಡಿಎಸ್‌ ನಾಯಕಿ ತಮ್ಮ ಮೇಲೆ ಯಾವಾಗ ಅತ್ಯಾಚಾರ ನಡೆದಿದೆ ಎಂಬ ಸಂಗತಿಯನ್ನೂ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ. 2021ರಲ್ಲಿ ಬಿಸಿಎಂ ಹಾಸ್ಟೆಲ್ ವಿಚಾರದ ಬಗ್ಗೆ ಸಂಸದ ಪ್ರಜ್ವಲ್‌ ರೇವಣ್ಣ ಅವರ ಬಳಿ ಮಾತನಾಡಲು ಹೋದಾಗ ತಮ್ಮ ಮೇಲೆರಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ವೇಳೆ ತಾವು ನಿರಾಕರಣೆ ಮಾಡಿದಾಗ ಗನ್‌ ಹಿಡಿದು ಹೆದರಿಸಿ ಬಲಾತ್ಕಾರ ಮಾಡಿದ್ದಾರೆ ಎಂದು ಮಹಿಳೆ ಆರೋಪ ಮಾಡಿದ್ದಾರೆ. ಹಾಸನದಲ್ಲಿರುವ ಸಂಸದರ ಬಂಗಲೆಯ ಮಹಡಿ ರೂಮ್‌ನಲ್ಲೇ ರೇಪ್ ಮಾಡಲಾಗಿದೆ ಎಂದು ಮಹಿಳೆ ಆರೋಪ ಮಾಡಿದ್ದಾರೆ.

VISTARANEWS.COM


on

Prajwal Revanna Case I was raped at gunpoint JDS women leader files complaint against Prajwal
Koo

ಬೆಂಗಳೂರು: ಹಾಸನ ಸಂಸದ (Hassan MP), ಮಾಜಿ ಸಚಿವ ಎಚ್.ಡಿ. ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ (Prajwal Revanna Case) ಅಶ್ಲೀಲ ವಿಡಿಯೊ ಎನ್ನಲಾದ ಪೆನ್‌ಡ್ರೈವ್‌ ಪ್ರಕರಣಕ್ಕೆ (Hassan Pen Drive Case) ಸಂಬಂಧಪಟ್ಟಂತೆ ದಾಖಲಾಗಿರುವ ರೇಪ್ ಕೇಸ್‌ಗೆ ಹೊಸ ಟ್ವಿಸ್ಟ್ ಸಿಕ್ಕಿದೆ. ಈ ಕೇಸ್‌ನಲ್ಲಿ ಪ್ರಜ್ವಲ್‌ ರೇವಣ್ಣ ನೇರವಾಗಿ ಸಿಕ್ಕಿಹಾಕಿಕೊಂಡಿದ್ದಾರೆ ಎನ್ನಲಾಗಿದೆ. ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಕೊಟ್ಟ ದೂರಿನಲ್ಲಿ ಭಯಾನಕ ಸತ್ಯಗಳು ಹೊರಬಂದಿದ್ದು, ಗನ್‌ ಪಾಯಿಂಟ್‌ನಲ್ಲಿ ಜೆಡಿಎಸ್‌ ನಾಯಕಿ ಮೇಲೆಯೇ ಪ್ರಜ್ವಲ್ ಅತ್ಯಾಚಾರ ಮಾಡಿದ್ದಾರೆ ಎಂಬ ಆರೋಪ ಈಗ ಕೇಳಿಬಂದಿದೆ.

ಪ್ರಜ್ವಲ್ ರೇವಣ್ಣ ವಿರುದ್ಧ ಈಗ ಜೆಡಿಎಸ್‌ ನಾಯಕಿ, ಸಂತ್ರಸ್ತೆ ದೂರಿನಲ್ಲಿ ತನಗಾದ ಅನ್ಯಾಯವನ್ನು ಹಾಗೂ ಅತ್ಯಾಚಾರದ ಸಂಗತಿಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದು, ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.

2021ರಲ್ಲಿ ಬಿಸಿಎಂ ಹಾಸ್ಟೆಲ್ ವಿಚಾರದ ಮಾತಿಗೆ ಹೋದಾಗ ರೇಪ್‌?

ಜೆಡಿಎಸ್‌ ನಾಯಕಿ ತಮ್ಮ ಮೇಲೆ ಯಾವಾಗ ಅತ್ಯಾಚಾರ ನಡೆದಿದೆ ಎಂಬ ಸಂಗತಿಯನ್ನೂ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ. 2021ರಲ್ಲಿ ಬಿಸಿಎಂ ಹಾಸ್ಟೆಲ್ ವಿಚಾರದ ಬಗ್ಗೆ ಸಂಸದ ಪ್ರಜ್ವಲ್‌ ರೇವಣ್ಣ ಅವರ ಬಳಿ ಮಾತನಾಡಲು ಹೋದಾಗ ತಮ್ಮ ಮೇಲೆರಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ವೇಳೆ ತಾವು ನಿರಾಕರಣೆ ಮಾಡಿದಾಗ ಗನ್‌ ಹಿಡಿದು ಹೆದರಿಸಿ ಬಲಾತ್ಕಾರ ಮಾಡಿದ್ದಾರೆ ಎಂದು ಮಹಿಳೆ ಆರೋಪ ಮಾಡಿದ್ದಾರೆ. ಹಾಸನದಲ್ಲಿರುವ ಸಂಸದರ ಬಂಗಲೆಯ ಮಹಡಿ ರೂಮ್‌ನಲ್ಲೇ ರೇಪ್ ಮಾಡಲಾಗಿದೆ ಎಂದು ಮಹಿಳೆ ಆರೋಪ ಮಾಡಿದ್ದಾರೆ.

ಗಂಡನ ಬಗ್ಗೆ ಬೆದರಿಸಿ ಬಲಾತ್ಕಾರ

ದೈಹಿಕ ಸಂಪರ್ಕ ಬೆಳೆಸಲು ಪ್ರಜ್ವಲ್‌ ಮುಂದಾಗುತ್ತಿದ್ದಂತೆ ನಾನು ನಿರಾಕರಣೆ ಮಾಡಿದೆ. ಆಗ “ನಿನ್ನ ಗಂಡನನ್ನು ನಾನು ಬಿಡಲ್ಲ” ಎಂದು ಹೆದರಿಸಿ ದೌರ್ಜನ್ಯ ನಡೆಸಿದರು ಎಂದು ಎಸ್‌ಐಟಿಗೆ ಸಂತ್ರಸ್ತೆ ನೀಡಿದ್ದ ದೂರು ಆಧಾರದಲ್ಲಿ ಸಿಐಡಿ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಐಪಿಸಿ ಸೆಕ್ಷನ್‌ 376 (2) (ಎನ್‌) ಹಾಗೂ ಐಟಿ ಆ್ಯಕ್ಟ್‌ನಲ್ಲಿ ಎಫ್ಐಆರ್ ಅನ್ನು ದಾಖಲು ಮಾಡಲಾಗಿದೆ. ಹೇಗೆಲ್ಲ ದೌರ್ಜನ್ಯ, ದಬ್ಬಾಳಿಕೆ, ಬೆದರಿಕೆ ಹಾಕಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: Prajwal Revanna Case: ರೇವಣ್ಣ ಮೇಲಿನ ಮತ್ತೊಂದು ಕೇಸ್‌ ಎಸ್‌ಐಟಿಗೆ ವರ್ಗ; ಭವಾನಿಗೂ ನೋಟಿಸ್‌!

ರೇಪ್‌ ಮತ್ತು ಚಿತ್ರೀಕರಣ ಆರೋಪ

ತಮ್ಮ ಮೇಲೆ ಬಲಾತ್ಕಾರ ಮಾಡಿದ್ದಲ್ಲದೆ, ಅದನ್ನು ಚಿತ್ರೀಕರಣ ಮಾಡಿಕೊಂಡಿದ್ದಾರೆ. ಈ ವಿಚಾರದ ಬಗ್ಗೆ ಬಾಯಿ ಬಿಟ್ಟರೆ ಸೋಷಿಯಲ್‌ ಮೀಡಿಯಾದಲ್ಲಿ ನಿನ್ನ ವಿಡಿಯೊವನ್ನು ಬಿಡುತ್ತೇನೆ ಎಂಧು ಬೆದರಿಕೆ ಒಡ್ಡಿದ್ದಾರೆ. ನಾನು ಕರೆದಾಗೆಲ್ಲ ನೀನು ಬರಬೇಕು. ಇಲ್ಲದಿದ್ದರೆ ನನ್ನ ಬಳಿ ಇರುವ ವಿಡಿಯೊವನ್ನು ಹರಿಬಿಡುತ್ತೇನೆ ಎಂದು ಬೆದರಿಸಿ ಕಳುಹಿಸಿದ್ದಾರೆ. ಇಷ್ಟೇ ಅಲ್ಲದೆ, ಪದೇ ಪದೆ ವಿಡಿಯೊ ಕಾಲ್‌ ಮಾಡಿ ಬೆತ್ತಲೆಯಾಗು ತಾನು ನೋಡಬೇಕು ಎಂದು ಕಿರುಕುಳ ಕೊಟ್ಟು ನಗ್ನತೆಯನ್ನು ನೋಡುತ್ತಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ‌ಅಲ್ಲದೆ, ಪದೇ ಪದೆ ತಮಗೆ ಬ್ಲ್ಯಾಕ್‌ಮೇಲ್‌ ಮಾಡಿ ಬಲಾತ್ಕಾರ ಮಾಡುತ್ತಿದ್ದರು ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Continue Reading

ಮಳೆ

Bengaluru Rains : ಬೆಂಗಳೂರಲ್ಲಿ ಶುರುವಾಯ್ತು ಮಳೆಗಾಲ; ಕವಿದ ಕಾರ್ಮೋಡ, ಭಯಂಕರ ವರ್ಷಧಾರೆ

Bengaluru Rains : ಮಳೆಯಿಲ್ಲದೆ ಸೊರಗಿದ್ದ ಬೆಂಗಳೂರಿಗರಿಗೆ ವರುಣ ಅಂತೂ ಪ್ರವೇಶಿಸಿದ್ದಾನೆ. ನಿನ್ನೆ ಸಂಜೆ ಗುರುವಾರದಿಂದ ಬೆಂಗಳೂರಿನ ಬಹುತೇಕ ಕಡೆಗಳಲ್ಲಿ ಮಳೆಯಾಗಿದ್ದು, ಶುಕ್ರವಾರ ಮಧ್ಯಾಹ್ನವೇ ಕಾರ್ಮೋಡ (Karnataka weather Forecast) ಕವಿದಿತ್ತು. ನೋಡನೋಡುತ್ತಿದ್ದಂತೆ ವರ್ಷಧಾರೆಗೆ ಸಿಟಿ ಜನರು ಖುಷ್‌ ಆದರು..

VISTARANEWS.COM


on

By

Bengaluru Rains
Koo

ಬೆಂಗಳೂರು: ಬಿಸಿಲ ಬೇಗೆಯಿಂದ ತತ್ತರಿಸಿದ್ದ ಬೆಂಗಳೂರು ಜನರಿಗೆ ಶುಕ್ರವಾರದಂದು ಮಳೆಯು (Bengaluru Rains) ಧರೆಗಿಳಿದು ಬಂದಿತ್ತು. ಶುಕ್ರವಾರ ಬೆಳಗ್ಗೆ ರಣ ಬಿಸಿಲು, ಧಗೆಯಿಂದ ಜನರು ಕಂಗಲಾಗಿದ್ದರು. ಮಧ್ಯಾಹ್ನದ ಊಟ ಮುಗಿಸಿ ಹೊರಗೆ ಬಂದವರಿಗೆ ಕಾರ್ಮೋಡ ಕವಿದಿತ್ತು. ನೋಡನೋಡುತ್ತಿದ್ದ ಗುಡುಗು, ಸಿಡಿಲು ಸಹಿತ ಭರ್ಜರಿ ಮಳೆ ಸುರಿದಿದೆ.

ಶಿವಾಜಿನಗರ, ಮಲ್ಲೇಶ್ವರಂ, ವಿಧಾನಸೌಧ, ರಾಜಾಜಿನಗರ, ರೇಸ್ ಕೋರ್ಸ್, ಮೆಜೆಸ್ಟಿಕ್, ಮಹಾರಾಣಿ ಕಾಲೇಜು, ಸಿಐಡಿ ಆಫೀಸ್, ಪ್ಯಾಲೇಸ್ ರಸ್ತೆಯಲ್ಲಿ ಗುಡುಗು ಸಹಿತ ಮಳೆಯಾಗುತ್ತಿದೆ. ಮಧ್ಯಾಹ್ನ ಮೂರು ಗಂಟೆ ಸಮಯವು ರಾತ್ರಿಯಂತೆ ಕತ್ತಲೆ ಆವರಿಸಿತ್ತು. ದಿಢೀರ್ ಮಳೆಗೆ ದ್ವಿಚಕ್ರ ವಾಹನ ಸವಾರರು ಸೇತುವೆ ಕೆಳಗೆ ಹಾಗೂ ಬಸ್‌ ನಿಲ್ದಾಣದಲ್ಲಿ ಆಶ್ರಯ ಪಡೆದರು.

ಆಲಿಕಲ್ಲು ಸಹಿತ ಮಳೆಯಾರ್ಭಟ

ಇನ್ನೂ ರಾಜ್ಯ ಗಡಿ ಡೆಂಕಣಿಕೋಟೆ ಭಾಗದಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದೆ. ತಮಿಳುನಾಡಿನ ಡೆಂಕಣಿಕೋಟೆ, ಹೊಸೂರು, ಸೂಲಗಿರಿ ಭಾಗದಲ್ಲಿ ಧಾರಾಕಾರ ಮಳೆ ಆಗುತ್ತಿದೆ. ಆನೇಕಲ್, ಎಲೆಕ್ಟ್ರಾನಿಕ್ ಸಿಟಿ, ಚಂದಾಪುರ, ಅತ್ತಿಬೆಲೆ, ಹೆಬ್ಬಗೋಡಿ ಸೇರಿದಂತೆ ಜೋರು ಮಳೆಯಾಗುತ್ತಿದೆ.

Bengaluru rains

ಬ್ಯಾರಿಕೇಟ್‌ ಹಾಕಿ ಅಂಡರ್‌ಪಾಸ್‌ ಕ್ಲೋಸ್‌

ಅರ್ಧ ಗಂಟೆಗೂ ಹೆಚ್ಚು ಸಮಯ ಸುರಿದ ಮಳೆಯಿಂದಾಗಿ ಬೆಂಗಳೂರಿನ ರಸ್ತೆಗಳು ನದಿಯಂತಾಗಿತ್ತು. ವಿಧಾನಸೌಧ ಪಕ್ಕದಲ್ಲಿರುವ ಎಂ.ಎಸ್ ಬಿಲ್ಡಿಂಗ್ ಸುತ್ತಮುತ್ತಲಿನ ರಸ್ತೆಯಲ್ಲಿ ನೀರು ಹರಿಯುತ್ತಿದೆ. ಎಂಎಸ್‌ ಬಿಲ್ಡಿಂಗ್‌ ಸಮೀಪವೇ ಇರುವ ಅಂಡರ್ ಪಾಸ್‌ಗಳಿಗೆ ಬ್ಯಾರಿಕೇಟ್ ಹಾಕಿ ಕ್ಲೋಸ್ ಮಾಡಲಾಗಿದೆ.

ಧರೆಗೆ ಬಿದ್ದ ಮರಗಳು

ಮಳೆಯಿಂದ ಬೆಂಗಳೂರು ನಗರದಲ್ಲಿ ಮೂರು ಕಡೆ ಬೃಹತ್ ಗಾತ್ರದ ಮರ ಧರೆಗೆ ಬಿದ್ದಿದೆ. ಕೆ.ಆರ್.ಪುರಂನ ಕಸ್ತೂರಿ ನಗರ, ಆರ್‌ಟಿ ನಗರದಲ್ಲಿ ಮಳೆಗೆ ಮರ ಬಿದ್ದಿದೆ. ಇನ್ನೂ ನಾರಾಯಣಪುರದಲ್ಲಿ ಮರ ಬಿದ್ದು, ಕಾರು, ಬೈಕ್ ಜಖಂಗೊಂಡಿದೆ. ಸದ್ಯ ರಸ್ತೆಗೆ ಬಿದ್ದಿದ ಮರವನ್ನು ಬಿಬಿಎಂಪಿ ಸಿಬ್ಬಂದಿ ತೆರವು ಮಾಡಿದ್ದಾರೆ. ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್ ನಿಲ್ದಾಣದ ಎಟಿಎಂ (ATM) ಕೊಠಡಿಗೆ ನೀರು ನುಗ್ಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಉದ್ಯೋಗ

Job Alert: 76 ಮೋಟಾರ್ ವೆಹಿಕಲ್ ಇನ್ಸ್​ಪೆಕ್ಟರ್ ಹುದ್ದೆಗಳಿಗೆ ಇಂದೇ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ

Job Alert: ರ್ನಾಟಕ ಲೋಕಸೇವಾ ಆಯೋಗ ಖಾಲಿ ಇರುವ ಒಟ್ಟು 76 ಮೋಟಾರ್ ವೆಹಿಕಲ್ ಇನ್ಸ್​ಪೆಕ್ಟರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತರು ಮೇ 2ರಿಂದ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ಕೊನೆಯ ದಿನಾಂಕ ಜೂನ್‌ 1. ಉಳಿಕೆ ಮೂಲ ವೃಂದದಲ್ಲಿ 70 ಮತ್ತು ಹೈದರಾಬಾದ್‌ ಕರ್ನಾಟಕ ವೃಂದದಲ್ಲಿ 6 ಹುದ್ದೆಗಳಿವೆ. ಕೆಪಿಎಸ್‌ಸಿಯ ಅಧಿಕೃತ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು ಅಂಗೀಕೃತ ಮಂಡಳಿ, ವಿಶ್ವವಿದ್ಯಾನಿಲಯದಿಂದ ಎಸ್ಸೆಸ್ಸೆಲ್ಸಿ, ಡಿಪ್ಲೋಮಾ, ಆಟೋ ಮೊಬೈಲ್/ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಬಿ.ಟೆಕ್‌ ಪಡೆದುಕೊಂಡಿರಬೇಕು. ಜತೆಗೆ ಲೈಸನ್ಸ್‌ ಹೊಂದಿರಬೇಕು.

VISTARANEWS.COM


on

Job Alert
Koo

ಬೆಂಗಳೂರು: ಸರ್ಕಾರಿ ಉದ್ಯೋಗ ಹುಡುಕುವವರಿಗೆ ಇಲ್ಲಿದೆ ಗುಡ್‌ನ್ಯೂಸ್‌. ಕರ್ನಾಟಕ ಲೋಕಸೇವಾ ಆಯೋಗ (Karnataka Public Service Commission) ಖಾಲಿ ಇರುವ ಒಟ್ಟು 76 ಮೋಟಾರ್ ವೆಹಿಕಲ್ ಇನ್ಸ್​ಪೆಕ್ಟರ್ (Motor Vehicle Inspector)​ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ (KPSC Recruitment 2024). ಈ ಹಿಂದೆ ಅರ್ಜಿ ಸಲ್ಲಿಕೆಗೆ ಮೇ 21 ಕೊನೆಯ ದಿನಾಂಕ ಎಂದು ಅಧಿಸೂಚನೆ ಹೊರಡಿಸಲಾಗಿತ್ತು. ಇದೀಗ ಅರ್ಜಿ ಸಲ್ಲಿಕೆಯ ದಿನಾಂಕವನ್ನು ವಿಸ್ತರಿಸಿ ಕರ್ನಾಟಕ ಲೋಕಸೇವಾ ಆಯೋಗ ಪ್ರಕಟಣೆ ಹೊರಡಿಸಿದೆ. ಆಸಕ್ತರು ಮೇ 2ರಿಂದ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ಕೊನೆಯ ದಿನಾಂಕ ಜೂನ್‌ 1 (Job Alert).

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ

ಉಳಿಕೆ ಮೂಲ ವೃಂದದಲ್ಲಿ 70 ಮತ್ತು ಹೈದರಾಬಾದ್‌ ಕರ್ನಾಟಕ ವೃಂದದಲ್ಲಿ 6 ಹುದ್ದೆಗಳಿವೆ. ಕೆಪಿಎಸ್‌ಸಿಯ ಅಧಿಕೃತ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು ಅಂಗೀಕೃತ ಮಂಡಳಿ, ವಿಶ್ವವಿದ್ಯಾನಿಲಯದಿಂದ ಎಸ್ಸೆಸ್ಸೆಲ್ಸಿ, ಡಿಪ್ಲೋಮಾ, ಆಟೋ ಮೊಬೈಲ್/ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಬಿ.ಟೆಕ್‌ ಪಡೆದುಕೊಂಡಿರಬೇಕು. ಜತೆಗೆ ಲೈಸನ್ಸ್‌ ಹೊಂದಿರಬೇಕು.

ವಯೋಮಿತಿ ಮತ್ತು ಅರ್ಜಿ ಅರ್ಜಿ ಶುಲ್ಕ

ಅರ್ಜಿ ಸಲ್ಲಿಸುವವರ ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 35 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಲಿಕೆ ಲಭ್ಯ. ಎಸ್‌ಸಿ / ಎಸ್‌ಟಿ / ಕ್ಯಾಟಗರಿ-1ರ ಅಭ್ಯರ್ಥಿಗಳಿಗೆ 5 ವರ್ಷ, ಕ್ಯಾಟಗರಿ 2ಎ / 2ಬಿ / 3ಎ / 3ಬಿ ಅಭ್ಯರ್ಥಿಗಳು 3 ವರ್ಷ ಮತ್ತು ಪಿಡಬ್ಲ್ಯುಡಿ / ವಿಧವಾ ಅಭ್ಯರ್ಥಿಗಳಿಗೆ 10 ವರ್ಷಗಳ ರಿಯಾಯಿತಿ ಇದೆ. ಎಸ್‌ಸಿ / ಎಸ್‌ಟಿ / ಕ್ಯಾಟಗರಿ-1/ ಪಿಡಬ್ಲ್ಯುಡಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಿಲ್ಲ. ಮಾಜಿ ಯೋಧರು ಅರ್ಜಿ ಶುಲ್ಕವಾಗಿ 50 ರೂ., ಕ್ಯಾಟಗರಿ 2ಎ / 2ಬಿ / 3ಎ / 3ಬಿ ಅಭ್ಯರ್ಥಿಗಳು 300 ರೂ., ಸಾಮಾನ್ಯ ವಿಭಾಗದ ಅಭ್ಯರ್ಥಿಗಳು 600 ರೂ. ಪಾವತಿಸಬೇಕು. ಅರ್ಜಿ ಶುಲ್ಕವನ್ನು ಆನ್‌ಲೈನ್‌ ಮೂಲಕ ಪಾವತಿಸುವುದು ಕಡ್ಡಾಯ.

ಆಯ್ಕೆ ವಿಧಾನ ಮತ್ತು ಮಾಸಿಕ ವೇತನ

ಕನ್ನಡ ಭಾಷಾ ಪರೀಕ್ಷೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಆಯ್ಕೆಯಾದವರಿಗೆ 33,450 ರೂ. – 62,600 ರೂ. ಮಾಸಿಕ ವೇತನ ನೀಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ಹೆಚ್ಚಿನ ಮಾಹಿತಿಗೆ ಹೆಲ್ಪ್‌ಲೈನ್‌ ನಂಬರ್‌: 080-30574957 / 30574901ಕ್ಕೆ ಕರೆ ಮಾಡಿ.

ಉಳಿಕೆ ವೃಂದದ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಹೈದರಾಬಾದ್‌-ಕರ್ನಾಟಕ ವೃಂದದ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ದಿನಾಂಕ ವಿಸ್ತರಣೆಯ ಪ್ರಕಟಣೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಸುವ ವಿಧಾನ

  • ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ.
  • ನಿಮ್ಮ ಮೊಬೈಲ್‌ ನಂಬರ್‌ ಮತ್ತು ಇಮೇಲ್‌ ಐಡಿ ನಮೂದಿಸಿ ಹೆಸರು ನೋಂದಾಯಿಸಿ.
  • ಹೊಸ ಪಾಸ್‌ವರ್ಡ್‌ ಬಳಸಿ ಲಾಗಿನ್‌ ಆಗಿ.
  • ಅಗತ್ಯ ಮಾಹಿತಿ ನೀಡಿ ಅಪ್ಲಿಕೇಷನ್‌ ಫಾರಂ ಭರ್ತಿ ಮಾಡಿ.
  • ಅಗತ್ಯ ದಾಖಲೆ, ಫೋಟೊ ಅಪ್‌ಲೋಡ್‌ ಮಾಡಿ.
  • ಆನ್‌ಲೈನ್‌ ಮೂಲಕ ಅರ್ಜಿ ಶುಲ್ಕ ಪಾವತಿಸಿ (ಅಗತ್ಯವಿದ್ದವರು ಮಾತ್ರ).
  • ಮತ್ತೊಮ್ಮೆ ವಿವರಗಳನ್ನು ಪರಿಶೀಲಿಸಿ ಅರ್ಜಿ ಸಲ್ಲಿಸಿ.
  • ಭವಿಷ್ಯದ ಅಗತ್ಯಗಳಿಗಾಗಿ ಅಪ್ಲಿಕೇಷನ್‌ ನಂಬರ್‌ / ರಿಕ್ವೆಸ್ಟ್‌ ನಂಬರ್‌ ತೆಗೆದಿಡಿ.

ಇದನ್ನೂ ಓದಿ: Job Alert: ನೈವೇಲಿ ಲಿಗ್ನೈಟ್ ಕಾರ್ಪೋರೇಷನ್‌ನಲ್ಲಿದೆ ಉದ್ಯೋಗಾವಕಾಶ; ಪದವಿ ಪಡೆದವರು ಅರ್ಜಿ ಸಲ್ಲಿಸಿ

Continue Reading
Advertisement
English Alphabet
ಬೆಂಗಳೂರು2 mins ago

English Alphabet: ಇಂಗ್ಲಿಷ್‌ನಲ್ಲಿ ಹೊಸ ಅಕ್ಷರ ವಿನ್ಯಾಸಕ್ಕಾಗಿ ಫ್ರಾನ್ಸ್‌ ವಿದ್ಯಾರ್ಥಿಗಳ ಪ್ರಯತ್ನ

Crime News
ಕ್ರೈಂ3 mins ago

Crime News: ಪತ್ನಿಯ ಪ್ರಿಯಕರನ ದ್ವೇಷಕ್ಕೆ ಬಲಿಯಾಯ್ತು ಎರಡು ಜೀವ; ಪಾರ್ಸಲ್‌ ಬಾಂಬ್‌ ಸ್ಫೋಟಕ್ಕೆ ಅಪ್ಪ-ಮಗಳು ಸಾವು

Viral News
ವೈರಲ್ ನ್ಯೂಸ್27 mins ago

Viral News: 17 ವರ್ಷದ ಯುವತಿ ಎರಡು ಬಾರಿ ಗರ್ಭಿಣಿ; ಪೋಷಕರು ಸೇರಿ 16 ಜನರ ವಿರುದ್ಧ ಕೇಸ್‌

Gratuity
ದೇಶ37 mins ago

Gratuity: ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್;‌ ಗ್ರಾಚ್ಯುಟಿ, ಶಿಕ್ಷಣ ಭತ್ಯೆ ಶೀಘ್ರವೇ 25% ಹೆಚ್ಚಳ!

Prajwal Revanna Case I was raped at gunpoint JDS women leader files complaint against Prajwal
ಹಾಸನ38 mins ago

Prajwal Revanna Case‌: ಗನ್‌ ಪಾಯಿಂಟ್‌ನಲ್ಲಿ ಜೆಡಿಎಸ್‌ ನಾಯಕಿ ಮೇಲೆ ಪ್ರಜ್ವಲ್‌ರಿಂದ ರೇಪ್‌? ಎಫ್‌ಐಆರ್‌ನಲ್ಲಿದೆ ಇಂಚಿಂಚು ಡಿಟೇಲ್ಸ್!

icc men's test team rankings
ಕ್ರೀಡೆ52 mins ago

ICC Men’s Test Team Rankings: ಅಗ್ರಸ್ಥಾನದಿಂದ ಕುಸಿತ ಕಂಡ ಭಾರತ; ವಿಶ್ವ ಚಾಂಪಿಯನ್​ ಆಸೀಸ್​ ನಂ.1

Bengaluru Rains
ಮಳೆ56 mins ago

Bengaluru Rains : ಬೆಂಗಳೂರಲ್ಲಿ ಶುರುವಾಯ್ತು ಮಳೆಗಾಲ; ಕವಿದ ಕಾರ್ಮೋಡ, ಭಯಂಕರ ವರ್ಷಧಾರೆ

Press Freedom Day
Latest1 hour ago

Press Freedom Day: ಇಂದು ಪತ್ರಿಕಾ ಸ್ವಾತಂತ್ರ್ಯ ದಿನ; ಏನಿದರ ಮಹತ್ವ?

Job Alert
ಉದ್ಯೋಗ1 hour ago

Job Alert: 76 ಮೋಟಾರ್ ವೆಹಿಕಲ್ ಇನ್ಸ್​ಪೆಕ್ಟರ್ ಹುದ್ದೆಗಳಿಗೆ ಇಂದೇ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ

Prajwal Revanna Case Another case against Revanna transferred to SIT Notice to Bhavani
ಕ್ರೈಂ2 hours ago

Prajwal Revanna Case: ರೇವಣ್ಣ ಮೇಲಿನ ಮತ್ತೊಂದು ಕೇಸ್‌ ಎಸ್‌ಐಟಿಗೆ ವರ್ಗ; ಭವಾನಿಗೂ ನೋಟಿಸ್‌!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ11 hours ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ21 hours ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ1 day ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ3 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20244 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20244 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ4 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Vote Jihad
Lok Sabha Election 20245 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20245 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20245 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

ಟ್ರೆಂಡಿಂಗ್‌