Mysore Dasara: ದಸರಾ ಸ್ತಬ್ಧಚಿತ್ರಗಳ ಮೆರವಣಿಗೆ; ಕರುನಾಡ ಕಲಾ ವೈಭವ ಅನಾವರಣ
Prabhakar R
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ (Mysore Dasara) ಜಂಬೂ ಸವಾರಿಗೂ ಮುನ್ನಾ ನಗರದಲ್ಲಿ ಮಂಗಳವಾರ ಮಧ್ಯಾಹ್ನ ಕರುನಾಡ ಸಾಂಸ್ಕೃತಿಕ ಕಲಾ ವೈಭವ ಸಾರುವ ಸ್ತಬ್ಧಚಿತ್ರಗಳ ಮೆರವಣಿಗೆ ನಡೆಯಿತು. ಈ ಬಾರಿ ರಾಜ್ಯದ ವಿವಿಧ ಜಿಲ್ಲೆಗಳ 31 ಹಾಗೂ ವಿವಿಧ ಇಲಾಖೆಗಳ 18 ಸೇರಿ ಒಟ್ಟು 49 ಸ್ತಬ್ಧ ಚಿತ್ರಗಳು (tableau) ಚಿತ್ರಗಳು ಜಾನಪದ ಕಲಾತಂಡಗಳೊಂದಿಗೆ ಮೆರವಣಿಗೆಯಲ್ಲಿ ಸಾಗಿದವು.
ಬಾಗಲಕೋಟೆ ಜಿಲ್ಲೆಯಿಂದ ಬಾದಾಮಿ ಚಾಲುಕ್ಯರ ರಾಜವಂಶ ಹಾಗೂ ಶ್ರೀ ಬನಶಂಕರಿ ಸ್ತಬ್ಧ ಚಿತ್ರ, ಬೆಳಗಾವಿ ಜಿಲ್ಲೆಯಿಂದ ಮಹಾಲಿಂಗೇಶ್ವರ ದೇವಸ್ಥಾನ, ಗೋಕಾಕ್ ಫಾಲ್ಸ್, ಸುವರ್ಣಸೌಧ, ಕಿತ್ತೂರು ಚೆನ್ನಮ್ಮ ಸಂಗೊಳ್ಳಿ ರಾಯಣ್ಣ ಸ್ತಬ್ಧ ಚಿತ್ರ, ಮೈಸೂರು ಜಿಲ್ಲೆಯಿಂದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆಗಳ ಕುರಿತ ಸ್ತಬ್ಧ ಚಿತ್ರ, ಗದಗ ಜಿಲ್ಲೆಯಿಂದ ಸಬರಮತಿ ಆಶ್ರಮದ ಸ್ತಬ್ಧ ಚಿತ್ರ ಸೇರಿ 49 ಸ್ತಬ್ಧ ಚಿತ್ರಗಳ ಮೆರವಣಿಗೆ ನಡೆಯಿತು.