Site icon Vistara News

2nd puc Toppers| ಹಪ್ಪಳ ಮಾರುವವರ ಮಗಳು ಈಗ ಪಿಯುಸಿ ಟಾಪರ್‌! ಸಾಧನೆಗೆ ಯಾವುದೂ ಅಡ್ಡಿ ಅಲ್ಲ

2nd puc result

ಉಡುಪಿ: ಪ್ರತಿಯೊಬ್ಬ ಪೋಷಕರಿಗೂ ತಾವು ಸಾಧಿಸಲು ಆಗದೇ ಇರುವುದನ್ನು ತಮ್ಮ ಮಕ್ಕಳು ಸಾಧಿಸಬೇಕು ಎಂಬ ಹೆಬ್ಬಯಕೆ ಇರುವುದು ಸಹಜ. ಸಾಧಿಸುವ ಛಲವೊಂದಿದ್ದರೆ ಬಡತನ ಎಂದೂ ಅಕ್ಷರ ಜ್ಞಾನಕ್ಕೆ ಅಡ್ಡಿಯಾಗುವುದಿಲ್ಲ ಎಂಬುದನ್ನು ಉಡುಪಿಯ ಪುತ್ತೂರಿನ ಭವ್ಯ ನಾಯಕ್‌ ತೋರಿಸಿಕೊಟ್ಟಿದ್ದಾರೆ. ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ 600ಕ್ಕೆ 597 ಅಂಕ ಪಡೆದು ಇವರು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ | 2nd PU result | ಶನಿವಾರ 11 ಗಂಟೆಗೆ ಫಲಿತಾಂಶ ಪ್ರಕಟ; ರಿಸಲ್ಟ್‌ ನೋಡಲು ಹೀಗೆ ಮಾಡಿ

ಪೂರ್ಣಪ್ರಜ್ಞಾ ಪಿಯು ಕಾಲೇಜಿನ ವಿದ್ಯಾರ್ಥಿನಿ ಭವ್ಯ ನಾಯಕ್‌ ತಂದೆ ನಾರಾಯಣ ಅವರು ಹಪ್ಪಳ ಮಾರಾಟ ಮಾಡುತ್ತ ಮಗಳ ಬದುಕಿಗೆ ಆಸರೆಯಾಗಿದ್ದಾರೆ. ಮೊನ್ನೆಯಷ್ಟೇ ನಡೆದಿರುವ ಕೆ-ಸಿಇಟಿ ಪರೀಕ್ಷೆ ಬರೆದಿರುವ ಭವ್ಯ ಭವಿಷ್ಯದಲ್ಲಿ‌ ಎಂಜಿನಿಯರ್ ಆಗುವ ಆಸೆ ವ್ಯಕ್ತಪಡಿಸಿದ್ದಾಳೆ. ಯಾವುದೇ ಟೈಮ್ ಟೇಬಲ್ ಇತ್ಯಾದಿ ಬಳಸದೆ ನೇರ ವಿಷಯವನ್ನು ಗ್ರಹಿಸಿ ಮನವರಿಕೆ ಮಾಡಿಕೊಂಡರೆ ಉತ್ತಮ ಅಂಕ ಪಡೆಯಬಹುದೆಂದು ಭವ್ಯಾ ಅಭಿಪ್ರಾಯಪಟ್ಟಿದ್ದಾರೆ.

ಭವ್ಯಳ ತಾಯಿ ಉಮಾ ನಾಯಕ್ ಸಿಹಿ ಹಂಚಿ ಹರ್ಷ ವ್ಯಕ್ತಪಡಿಸಿದ್ದಾರೆ. “”ಮಗಳು ಇಂಗ್ಲಿಷ್‌ನಲ್ಲಿ ವೀಕ್‌ ಇದ್ದಳು. ಹೀಗಾಗಿ ಹೆಚ್ಚು ಶ್ರಮ ವಹಿಸುವಂತೆ ಆಗಾಗ ಹೇಳುತ್ತಾ ಇದ್ದೆ. ಒಟ್ಟು 5 ವಿಷಯಗಳಲ್ಲಿ 100ಕ್ಕೆ 100 ಅಂಕ ಗಳಿಸಿದ್ದು, ಇಂಗ್ಲೀಷ್ ನಲ್ಲಿ ಮಾತ್ರ 3 ಅಂಕ ಕಡಿಮೆ ಪಡೆದಿದ್ದಾಳೆ. ಆಕೆಯ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆʼʼ ಎಂದವರು ಸಂತಸ ವ್ಯಕ್ತಪಡಿಸಿದ್ದಾರೆ.  

ದ್ವಿತೀಯ ಪಿಯುಸಿ ಟಾಪರ್ಸ್‌

ಸಿಹಿ ತಿನ್ನಿಸಿ ಟಾಪರ್ಸ್ ಪೋಷಕರು ಸಂಭ್ರಮ

ರಾಜ್ಯದ ಹಲವು ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳ ಸಂಭ್ರಮ ಜೋರಾಗಿದೆ. ಹುಬ್ಬಳ್ಳಿಯ SJMVS ಕಾಲೇಜಿನ ಕಲಾ ವಿಭಾಗದ ಸಾನಿಕಾ ಗುಂಡೂರಾವ್ ಮೂರನೇ ರ‍್ಯಾಂಕ್‌ ಪಡೆದಿದ್ದಾರೆ. ವಿದ್ಯಾರ್ಥಿನಿಯ ಸಾಧನೆಗೆ ಶಿಕ್ಷಕರು, ಪಾಲಕರು ಸಂಭ್ರಮಾಚರಣೆ ಮಾಡಿದರು. ಪರಸ್ಪರ ಸಿಹಿ ತಿನ್ನಿಸಿ ಖುಷಿ ಪಟ್ಟರು. ಹಾಗೆಯೇ, ವಿಜಯನಗರ ಜಿಲ್ಲೆಯ ಇಬ್ಬರು ವಿದ್ಯಾರ್ಥಿಗಳು ಟಾಪರ್ ಆಗಿದ್ದಾರೆ. ಕೊಟ್ಟೂರಿನ ಇಂದು ಪಿಯು ಕಾಲೇಜಿನ ಶ್ವೇತ ಭೀಮಾಶಂಕರ್ ಭೈರಗೊಂಡ ಹಾಗೂ ಮಡಿವಾಳರ ಸಹನಾ ಕಲಾ ವಿಭಾಗದಲ್ಲಿ 600ಕ್ಕೆ 594 ಅಂಕ ಪಡೆದಿದ್ದಾರೆ. ಸತತ ಐದು ವರ್ಷಗಳಿಂದ ಕಲಾ ವಿಭಾಗದಲ್ಲಿ ಬಳ್ಳಾರಿಯ ಇಂದು ಪಿಯು ಕಾಲೇಜು ಟಾಪ್ ರ‍್ಯಾಂಕ್‌ ಪಡೆಯುತ್ತ ಬಂದಿದೆ.

ಇದನ್ನೂ ಓದಿ | 2nd puc result | ಮೇಲುಗೈ ಸಾಧಿಸಿದ ಬಾಲಕಿಯರು; ದಕ್ಷಿಣ ಕನ್ನಡ ಜಿಲ್ಲೆ ಫಸ್ಟ್‌, ಚಿತ್ರದುರ್ಗ ಲಾಸ್ಟ್

Exit mobile version