Site icon Vistara News

Davanagere News: ಅಮೆರಿಕದಲ್ಲಿ ದಾವಣಗೆರೆ ಮೂಲದ ದಂಪತಿ, 6 ವರ್ಷದ ಮಗ ಅನುಮಾನಾಸ್ಪದ ಸಾವು

Davanagere based Family

ದಾವಣಗೆರೆ: ಅಮೆರಿಕದ ಮೇರಿಲ್ಯಾಂಡ್‌ ರಾಜ್ಯದ ಬಾಲ್ಟಿಮೋರ್‌ನಲ್ಲಿ ದಾವಣಗೆರೆ (Davanagere News) ಮೂಲದ ದಂಪತಿ, 6 ವರ್ಷದ ಮಗ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ನಡೆದಿದೆ. ಕಳೆದ 9 ವರ್ಷಗಳ ಹಿಂದೆ ವಿವಾಹವಾಗಿದ್ದ ದಂಪತಿ ಅಮೆರಿಕದಲ್ಲಿ ನೆಲೆಸಿದ್ದರು. ಆದರೆ, ಈ ಮೂವರ ಸಾವು ಹಲವು ಅನುಮಾನಗಳನ್ನು ಹುಟ್ಟಿಸಿದೆ.

ಯೋಗೇಶ್ ಹೊನ್ನಾಳ್ (37), ಪ್ರತಿಭಾ ಹೊನ್ನಾಳ್(35), ಯಶ್ ಹೊನ್ನಾಳ್(6) ಮೃತರು. ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಹಾಲೆಕಲ್ಲು ಗ್ರಾಮದ ಕುಟುಂಬ ದಾವಣಗೆರೆಯಲ್ಲಿ ನೆಲೆಸಿತ್ತು. ಕಳೆದ 9 ವರ್ಷಗಳ ಹಿಂದೆ ಮದುವೆಯಾದ ನಂತರ ದಂಪತಿ ಅಮೆರಿಕದಲ್ಲಿ ನೆಲೆಸಿದ್ದರು. ಮೃತ ಪತಿ ಪತ್ನಿ ಇಬ್ಬರೂ ಎಂಜಿನಿಯರ್‌ ಆಗಿ ಕೆಲಸ ನಿರ್ವಹಿಸುತ್ತಿದ್ದರು.

ಸಾವಿಗೆ ನಿಖರ ಕಾರಣ ತಿಳಿಸುವಂತೆ ಹಾಗೂ ಮೃತದೆಹಗಳನ್ನು ಸ್ವದೇಶಕ್ಕೆ ತರಲು ವ್ಯವಸ್ಥೆ ಮಾಡುವಂತೆ ಕುಟುಂಬಸ್ಥರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ | Bike wheeling : ಕದ್ದ Rx ಬೈಕ್‌ನಲ್ಲಿ ವೀಲಿಂಗ್‌ ಮಾಡುತ್ತಿದ್ದ ಖತರ್ನಾಕ್‌ಗಳು ಅರೆಸ್ಟ್‌

ಆರ್‌ಟಿಪಿಎಸ್ ಘಟಕದಲ್ಲಿ ವಿದ್ಯುತ್‌ ಸ್ಪರ್ಶಿಸಿ ಕಾರ್ಮಿಕ ಸಾವು

ರಾಯಚೂರು: ತಾಲೂಕಿನ ಶಕ್ತಿನಗರದ (Raichur News) ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದ (ಆರ್‌ಟಿಪಿಎಸ್) 4ನೇ ಘಟಕದಲ್ಲಿ ವಿದ್ಯುತ್‌ ಸ್ಪರ್ಶದಿಂದ ಕಾರ್ಮಿಕ ಮೃತಪಟ್ಟಿರುವ ಘಟನೆ ಶನಿವಾರ ನಡೆದಿದೆ. ಯಾದಗಿರಿ ಮೂಲದ ನಿಂಗಪ್ಪ (45) ಮೃತ ಕಾರ್ಮಿಕ. ಆರ್‌ಟಿಪಿಎಸ್ 4ನೇ ಘಟಕದ ಇಎಸ್‌ಪಿಸಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ನಿಂಗಪ್ಪಗೆ ವಿದ್ಯುತ್‌ ತಗುಲಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ವಿದ್ಯುತ್ ಶಾಕ್‌ನಿಂದ ಕಾರ್ಮಿಕ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಆರ್‌ಟಿಪಿಎಸ್ ಘಟಕದ ಎದುರು ಕಾರ್ಮಿಕರು ಪ್ರತಿಭಟನೆ ನಡೆಸಿ, ಕಾರ್ಮಿಕರಿಗೆ ಸೂಕ್ತ ಭದ್ರತೆ ಜತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಜತೆಗೆ ಮೃತ ಕಾರ್ಮಿಕನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿದರು.

ಬೇಕರಿಗೆ ನುಗ್ಗಿ ದಾಂಧಲೆ; ಬೆಂಗಳೂರಲ್ಲಿ ಹೆಚ್ಚಿದ ಮಾಸ್ಕ್‌ಧಾರಿ ಪುಂಡರು!

ಬೆಂಗಳೂರು: ರಾಜಧಾನಿಯಲ್ಲಿ ಪುಂಡರ ದಾಂಧಲೆ ನಿಲ್ಲುವಂತೆ ಕಾಣುತ್ತಿಲ್ಲ. ಇಲ್ಲಿನ ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಿರಂತರವಾಗಿ ಪುಡಿ ರೌಡಿಗಳ ಕಿರಿಕ್‌ ಹೆಚ್ಚಾಗಿದೆ. ಸಿಕ್ಕ ಸಿಕ್ಕವರ ಮೇಲೆ ಹಲ್ಲೆ ಮಾಡುವುದು, ಅಂಗಡಿ ಮುಂಗಟ್ಟು ದ್ವಂಸ ಮಾಡುವುದು, ಮಾರಾಕಾಸ್ತ್ರ ಹಿಡಿದು ರೌಂಡ್ಸ್‌ ಹಾಕುವುದು ಮಾಡುತ್ತಿದ್ದಾರೆ. ಸದ್ಯ ಬೇಕರಿಯೊಂದಕ್ಕೆ ನುಗ್ಗಿದ ದುಷ್ಕರ್ಮಿಗಳು ದಾಂಧಲೆ ನಡೆಸಿದ್ದಾರೆ. ಮಾಸ್ಕ್‌ ಧರಿಸಿ ಎರಡ್ಮೂರು ಬೈಕ್‌ಗಳಲ್ಲಿ ಬಂದು ಪುಂಡರು ತುಂಗಾನಗರದ ಮಂಜುನಾಥ ಬೇಕರಿಗೆ ನುಗ್ಗಿದ್ದಾರೆ.

ಇದನ್ನೂ ಓದಿ | Attempt murder Case : ಪತಿಯಿಂದ ದೂರಾಗಿದ್ದ ಶಿಕ್ಷಕಿಗೆ ಚಾಕು ಹಾಕಿದ ಫೈಟರ್‌!

ಬಳಿಕ ಬೇಕರಿಯ ಶೋ ಕೇಸ್‌ನ ಗ್ಲಾಸ್‌ಗೆ ಕಲ್ಲು ಎತ್ತಿಹಾಕಿ ಪುಡಿ ಪುಡಿ ಮಾಡಿದ್ದಾರೆ. ಬೇಕರಿಯಲ್ಲಿ ತಿಂಡಿ ತಿನಿಸುಗಳನ್ನು ಚೆಲ್ಲಾಡಿ ಪರಾರಿ ಆಗಿದ್ದಾರೆ. ಖರ್ತನಾಕ್‌ಗಳು ಗಾಡಿ ನಂಬರ್ ಪ್ಲೇಟ್‌ ಕಾಣಬಾರದು ಎಂದು ಸಗಣಿ ಹಚ್ಚಿಕೊಂಡು ಬಂದು ಈ ಕೃತ್ಯ ಎಸಗಿದ್ದಾರೆ. ಪುಂಡರ ಕೃತ್ಯವೆಲ್ಲವೂ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಸದ್ಯ ಈ ಸಂಬಂಧ ಬ್ಯಾಡರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಯಾಕಾಗಿ ಈ ಕಿಡಿಗೇಡಿಗಳು ಈ ಕೃತ್ಯವೆಸಗಿದ್ದಾರೆ ಎಂಬುದರ ಕುರಿತು ತನಿಖೆ ನಡೆಸುತ್ತಿದ್ದಾರೆ. ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ದೃಶ್ಯವನ್ನು ಪೊಲೀಸರು ಪಡೆದುಕೊಂಡಿದ್ದಾರೆ.

Exit mobile version