ದಾವಣಗೆರೆ: ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರ ಸಹೋದರನ ಪುತ್ರ ಚಂದ್ರಶೇಖರ್ ಸಾವು ಪ್ರಕರಣದಲ್ಲಿ, ಮೃತನ ದೇಹದ ಮೇಲೆ ಯಾವುದೇ ಹಲ್ಲೆಯ ಗುರುತುಗಳಿಲ್ಲ ಎಂಬುದು ತಿಳಿದುಬಂದಿದೆ.
ಚಂದ್ರಶೇಖರ್ ದೇಹದ ಮೇಲೆ ಯಾವುದೇ ಹಲ್ಲೆಯ ಕಲೆಗಳಿಲ್ಲ ಎಂಬುದು ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿಯಲ್ಲಿ ಉಲ್ಲೇಖವಾಗಿದೆ ಎಂಬ ಮಾಹಿತಿ ವಿಸ್ತಾರ ನ್ಯೂಸ್‌ಗೆ ಉನ್ನತ ಮೂಲಗಳಿಂದ ಲಭ್ಯವಾಗಿದೆ.
ರೇಣುಕಾಚಾರ್ಯ ಅವರ ಕುಟುಂಬದವರು, ಚಂದ್ರುಗೆ ಸಾವಿನ ಮುನ್ನ ಹಲ್ಲೆಯಾಗಿತ್ತು ಎಂದು ಆರೋಪಿಸಿದ್ದರು. ಆದರೆ ಚಂದ್ರಶೇಖರ್ ಕೈಗೆ ಹಗ್ಗ ಕಟ್ಟಿರಲಿಲ್ಲ, ತಲೆಯ ಹಿಂಭಾಗಕ್ಕೂ ಹಲ್ಲೆ ಮಾಡಿರಲಿಲ್ಲ, ಚಂದ್ರು ದೇಹದ ಮೇಲೆ ಯಾವುದೇ ಆಯುಧಗಳ ಕಲೆಗಳಿಲ್ಲ ಎಂಬುದು ಸ್ಪಷ್ಟವಾಗಿದೆ.
ಸಿಎಂ ಬೊಮ್ಮಾಯಿಯವರ ಸೂಚನೆಯ ಹಿನ್ನೆಲೆಯಲ್ಲಿ ಹಲವು ಆಯಾಮಗಳಲ್ಲಿ ತನಿಖೆ ನಡೆದಿದೆ. ಆತ್ಮಹತ್ಯೆ ಅಥವಾ ಕೊಲೆ- ಮೂರೂ ಸಾಧ್ಯತೆಗಳನ್ನು ತನಿಖೆ ಮಾಡಲಾಗುತ್ತಿದೆ. ಚಂದ್ರು ದೇಹದ ಮೇಲೆ ಆಯುಧಗಳಿಂದ ಹಲ್ಲೆ ಮಾಡಿಲ್ಲವಾದರೂ, ಏನಾದರೂ ಇಂಜೆಕ್ಟ್ ಮಾಡಿದ್ದಾರಾ ಅನ್ನೋ ಬಗ್ಗೆಯೂ ಪರೀಕ್ಷೆ ನಡೆದಿದೆ. ಪ್ರಾಥಮಿಕ ವರದಿಯಲ್ಲಿ ಹತ್ಯೆಯ ಯಾವುದೇ ಸುಳಿವು ಸಿಕ್ಕಿಲ್ಲ. ಇನ್ನೊಂದು ವಾರದಲ್ಲಿ ಈ ಕುರಿತು ಪೊಲೀಸ್ ಇಲಾಖೆ ಮಾಹಿತಿ ಹೊರ ಹಾಕಲಿದೆ ಎಂದು ನಿರೀಕ್ಷಿಸಲಾಗಿದೆ.
ಇದನ್ನೂ ಓದಿ | ಚಂದ್ರು ಸಾವಿನ ಹಿನ್ನೆಲೆಯಲ್ಲಿ ಸಲಿಂಗಕಾಮದ ಒತ್ತಡ? ಸುಳಿ ಬಿಚ್ಚಿದ ಸಂಶಯ