Site icon Vistara News

Chandru Death | ಈಗಲೇ ಮರ್ಡರ್‌ ಕೇಸ್‌ ದಾಖಲಿಸಿಕೊಳ್ಳಲು ಸಾಧ್ಯವಿಲ್ಲ ಎಂದ ಗೃಹಸಚಿವ ಆರಗ ಜ್ಞಾನೇಂದ್ರ

ಆರಗ ಜ್ಞಾನೇಂದ್ರ

ಬೆಂಗಳೂರು: ಹೊನ್ನಾಳಿ ಕ್ಷೇತ್ರದ ಬಿಜೆಪಿ ಶಾಸಕ ಹಾಗೂ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಸಹೋದರನ ಪುತ್ರ ಚಂದ್ರಶೇಖರ್‌ ಸಾವಿನ ಕುರಿತು ಈಗಲೇ ಕೊಲೆ ಮೊಕದ್ದಮೆ ದಾಖಲಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಪೊಲೀಸರು ಸೂಕ್ತ ರೀತಿಯಲ್ಲಿ ತನಿಖೆ ನಡೆಸುತ್ತಿಲ್ಲ ಎಂದು ರೇಣುಕಾಚಾರ್ಯ ಹೇಳಿಕೆ ಕುರಿತು ರಾಜಭವನದಲ್ಲಿ ಪ್ರತಿಕ್ರಿಯೆ ನೀಡಿದ ಆರಗ ಜ್ಞಾನೇಂದ್ರ, ಯುವಕನನ್ನು ಕಳೆದುಕೊಂಡಿರುವ ಕಾರಣ ಮನೆಯವರು ಭಾವುಕರಾಗಿ ಮಾತಾಡುತ್ತಾರೆ.

ಸ್ವಲ್ಪ ದಿನ ಆ ರೀತಿ ಇರುತ್ತದೆ. ನಾನು ಕೂಡಾ ರೇಣುಕಾಚಾರ್ಯ ಜೊತೆ ಮಾತಾಡುತ್ತೇನೆ. ಆ ಕುಟುಂಬಕ್ಕೆ ಬಹಳ ದೊಡ್ಡ ಹೊಡೆತ ಬಿದ್ದಿದೆ. ಗೃಹ ಇಲಾಖೆಯಿಂದ ತೀವ್ರತರವಾದ ತನಿಖೆ ಮಾಡಿಸುತ್ತಿದ್ದೇವೆ.

ಮೂರು ಜನ ತಜ್ಞ ವೈದ್ಯರ ನೇತೃತ್ವದಲ್ಲಿ ಪೋಸ್ಟ್ ಮಾರ್ಟಮ್ ನಡೆದಿದೆ. ಪೊಲೀಸ್ ವರದಿ ಬರುವವರೆಗೂ ನಾವು ಯಾರೂ ಏನೂ ಹೇಳಲು ಆಗುವುದಿಲ್ಲ. ಈಗ ಕೊಲೆ ಪ್ರಕರಣ ದಾಖಲು ಆಗಿಲ್ಲ. ಅಸಹಜ ಸಾವು ಎಂದು ಎಫ್‌ಐಆರ್‌ ದಾಖಲಾಗಿದೆ. ಪೋಸ್ಟ್‌ ಮಾರ್ಟಂ ವರದಿ ವರದಿ ಬಂದ ಬಳಿಕ, ಮರ್ಡರ್ ಅಗಿದ್ದರೆ ಮರ್ಡರ್ ಕೇಸ್ ದಾಖಲಾಗುತ್ತದೆ. ಈ ಹಂತದಲ್ಲಿ ಏನೂ ಹೇಳಲೂ ಆಗುವುದಿಲ್ಲ ಎಂದಿದ್ದಾರೆ.

ಇದನ್ನೂ ಓದಿ | Chandru Death | ಬಂತು ಡಯಾಟಮ್‌ ಪರೀಕ್ಷಾ ವರದಿ, ನೀರಿಗೆ ಬಿದ್ದ ಬಳಿಕವೇ ಪ್ರಾಣ ಕಳೆದುಕೊಂಡರಾ ಚಂದ್ರಶೇಖರ್‌?

Exit mobile version