ದಾವಣಗೆರೆ: ವರ್ಷದ ಹಿಂದೆ ವ್ಯಕ್ತಿಯೊಬ್ಬ ಸಾವಿನ ಜಾಡು ಹಿಡಿದು ಹೊರಟ ಪೊಲೀಸರು ಪ್ರಕರಣವನ್ನು ಭೇದಿಸಿದ್ದಾರೆ. ತನ್ನ ಅಕ್ರಮ ಸಂಬಂಧಕ್ಕೆ ಪತಿ ಅಡ್ಡಿ ಆಗುತ್ತಾನೆಂದು ತಿಳಿದ ಪಾಪಿ ಪತ್ನಿ ಪ್ರಿಯಕರನ ಜತೆ ಸೇರಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.
ಕೊಲೆಯಾದ ಒಂದು ವರ್ಷದ ಬಳಿಕ ಪ್ರಕರಣ ಭೇದಿಸಿದ ಪೊಲೀಸರು, ಇಲಿಯಾಸ್ ಅಹಮ್ಮದ್ ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಬಸವಪಟ್ಟಣದಲ್ಲಿ ಘಟನೆ ನಡೆದಿದೆ. 2023ರ ಫೆಬ್ರವರಿಯಲ್ಲಿ ಮಲೆಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿ ಅನಾಮಧೇಯ ಮೃತದೇಹ ನೀರಿನಲ್ಲಿ ಕೊಚ್ಚಿಕೊಂಡು ಬಂದಿತ್ತು. ಕಾಣೆಯಾದ ಇಲಿಯಾಸ್ ಅಹಮ್ಮದ್ ಇರಬಹುದು ಎಂದು ಪೊಲೀಸರು ಅನುಮಾನಗೊಂಡಿದ್ದರು.
ಕೂಡಲೇ ಮೃತನ ಮಕ್ಕಳ ಹಾಗೂ ಮೃತ ದೇಹದ ಡಿಎನ್ಎ ಪರೀಕ್ಷೆಗೆ ಕಳುಹಿಸಿದ್ದರು. ಡಿಎನ್ಎ ಪರೀಕ್ಷೆಯಲ್ಲಿ ಮೃತ ಇಲಿಯಾಸ್ ಅಹಮ್ಮದ್ ಎಂದು ಧೃಡವಾಗಿತ್ತು. ಬಳಿಕ ಇಲಿಯಾಸ್‌ನ ಸಾವಿನ ಜಾಡು ಹಿಡಿದು ಹೊರಟ ಬಸವಪಟ್ಟಣ ಪೊಲೀಸರು, ಇಲಿಯಾಸ್ ಪತ್ನಿ ಬಿಬಿ ಆಯೇಷಾ ಆಕೆಯ ಪ್ರಿಯಕರ ಮಂಜುನಾಥ್ ಕೊಲೆ ಅರೋಪಿಗಳೆಂದು ಸಾಬೀತಾಗಿದೆ.
ಪಾರ್ಟಿ ನೆಪದಲ್ಲಿ ಕೊಲೆ
ಪತಿ ಇಲಿಯಾಸ್‌ಗೆ ನಿದ್ದೆ ಮಾತ್ರೆ ಹಾಕಿ ಆಯೇಷಾ ಮತ್ತು ಮಂಜುನಾಥ್ ಇಬ್ಬರು ದೈಹಿಕ ಸಂಪರ್ಕ ಬೆಳೆಸುತ್ತಿದ್ದರು. ಮುಂದೊಂದು ದಿನ ನಮ್ಮಿಬ್ಬರ ಸಂಬಂಧಕ್ಕೆ ಪತಿ ಅಡ್ಡಿಯಾದರೆ ಅಂತ ಆಯೇಷಾಗೆ ಚಿಂತೆ ಕಾಡಿತ್ತು. ಹೀಗಾಗಿ ಪತಿ ಇಲಿಯಾಸ್‌ನನ್ನು ಕೊಂದರೆ ಅಕ್ರಮ ಸಂಬಂಧಕ್ಕೆ ಅಡ್ಡಿ ಇರುವುದಿಲ್ಲ ಎಂದು ಪ್ಲ್ಯಾನ್ ಮಾಡಿಕೊಂಡಿದ್ದರು. ಅದರಂತೆ ಮಂಜುನಾಥ್ ಉಪಾಯದಿಂದ ಇಲಿಯಾಸ್‌ನನ್ನು ಸಾಗರಪೇಟೆ ಬಳಿ ಡಾಬಾದಲ್ಲಿ ಪಾರ್ಟಿಗೆ ಕರೆದುಕೊಂಡು ಹೋಗಿದ್ದ. ಅಲ್ಲಿ ಮದ್ಯದಲ್ಲಿ ನಿದ್ರೆ ಮಾತ್ರೆ ಹಾಕಿ ಚೆನ್ನಾಗಿ ಮದ್ಯ ಕುಡಿಸಿದ್ದ.
ಬಲವಂತವಾಗಿ ಚಾನಲ್‌ನಲ್ಲಿ ಈಜಾಡಲು ಕರೆದುಕೊಂಡು ಹೋಗಿ ಮಂಜುನಾಥ್ ಕೊಲೆ ಮಾಡಿದ್ದ. ಇಲಿಯಾಸ್ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ 24/09/2024ರಂದು ಕುಟುಂಬಸ್ಥರ ದೂರು ನೀಡಿದ್ದರು. ತನಿಖೆ ಕೈಗೊಂಡ ಪೊಲೀಸರಿಗೆ ಇಲಿಯಾಸ್ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಇಲಿಯಾಸ್ ಪತ್ನಿ ಆಯೇಷಾ, ಪ್ರಿಯಕರ ಮಂಜುನಾಥ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಬಸವಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ