Site icon Vistara News

‌Brand Bengaluru: ವಿದ್ಯುತ್‌ ಜತೆಗೆ ಕಸದ ಶುಲ್ಕವೂ ಸೇರ್ಪಡೆಗೆ ಸಲಹೆ: ಖಚಿತಪಡಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್‌

DK Shivakumar Thushar girinath

#image_title

ಬೆಂಗಳೂರು: ಅನೇಕ ನಗರಗಳಲ್ಲಿ ಕಸ ಸಂಗ್ರಹಣೆಗೆ ಶುಲ್ಕ ವಿಧಿಸಲಾಗುತ್ತಿದೆ. ಬೆಂಗಳೂರಿನಲ್ಲೂ ಶುಲ್ಕ ವಿಧಿಸಿ ವಿದ್ಯುತ್‌ ಬಿಲ್‌ ಜತೆಗೆ ಸೇರಿಸಬೇಕು ಎಂಬ ಸಲಹೆ ಬಂದಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ. ಬೆಂಗಳೂರಿನ ಸಮಗ್ರ ಅಭಿವೃದ್ಧಿಗಾಗಿ ನಾಗರಿಕರು ಹಾಗೂ ತಜ್ಞರಿಂದ ಸಲಹೆ ಕೇಳುವ BrandBengaluru.karnataka.gov.in ಪೋರ್ಟಲ್‌ಗೆ ಚಾಲನೆ ನೀಡಿದ ನಂತರ ಮಾತನಾಡಿದರು.

1 ಕೋಟಿ 60 ಲಕ್ಷ ಜನಸಂಖ್ಯೆ ಬೆಂಗಳೂರಿನಲ್ಲಿ ಇದೆ. 1 ಕೋಟಿ 30 ಲಕ್ಷ ಅಧಿಕೃತ ಜನಸಂಖ್ಯೆ. ಆದರೆ ಪ್ರತಿದಿನ ಬಂದು ಹೋಗವರ ಸಂಖ್ಯೆ ಹೆಚ್ಚಿದೆ. ಬೆಂಗಳೂರಿನ ಪ್ರಕೃತಿ ಗಮನದಲ್ಲಿಟ್ಟುಕೊಂಡು ಇಲ್ಲಿ ಬಂದು ನೆಲೆಸಲು ಇಚ್ಚೆ ಪಡುತ್ತಾರೆ. ಬೆಂಗಳೂರಿಗೆ ಬಂದವರು ಯಾರು ವಾಪಸು ಹೋಗಲ್ಲ.

ನಾನು ಸಹ ಬೆಂಗಳೂರಿನ ನಿವಾಸಿ. ಜನ ಸಮಾನ್ಯರ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದ್ದೇನೆ. ಬಿಲ್ಡರ್ಸ್, ಉದ್ಯಮಿಗಳು ಸಹ ಕರೆಸಿದ್ದೆ ಅವರ ಅಭಿಪ್ರಾಯ ಪಡೆದಿದ್ದೇನೆ. ಹಿರಿಯ ನಾಯಕರ ಅಭಿಪ್ರಾಯ ಸಹ ಸಂಗ್ರಹ ಮಾಡಿದ್ದೇನೆ. ಮಾಜಿ ಸಿಎಂಗಳನ್ನ ಭೇಟಿ ಮಾಡ್ತೀನಿ. ಬೊಮ್ಮಾಯಿ ಸಮಯ ಕೇಳಿದ್ದೆ. ಕಸಕ್ಕೆ ಕೆಲ ನಗರಗಳಲ್ಲಿ ತೆರಿಗೆ ಹಾಕುತ್ತಿದ್ದಾರೆ. ಇಲ್ಲೂ ಹಾಕಿ ಅಂತ ಸಲಹೆ ನೀಡಿದ್ದಾರೆ. ವಿದ್ಯುತ್ ಬಿಲ್ ಜತೆಗಿನ ಇದನ್ನ ಹಾಕಲು ಸಲಹೆ ಬಂದಿದೆ. ಆದರೆ ಈಗ ವಿದ್ಯುತ್ ಬಿಲ್ ಜತೆ ಹಾಕಲು ಸಾಧ್ಯವಿಲ್ಲ ಎಂದರು.

ಬೆಂಗಳೂರನ್ನು ಉತ್ತಮಪಡಿಸಲು ಪೋರ್ಟಲ್‌ ಲಾಂಚ್ ಮಾಡ್ತಿದ್ದೇನೆ. ಪ್ರಮುಖ ನಗರಗಳಲ್ಲಿ ಪುಟ್ ಪಾತ್ ಸಮಸ್ಯೆ ಇದೆ. ಮಲ್ಲೇಶ್ವರ, ಬಸವನಗುಡಿಯಲ್ಲಿ ಪುಟ್ ಪಾತ್ ಸಮಸ್ಯೆ ಇದೆ. ಬೆಂಗಳೂರು ಟ್ರಾಫಿಕ್‌ನಲ್ಲಿ ಕೆಲಸ ಮಾಡಿದ ನಿವೃತ್ತ ಅಧಿಕಾರಿಗಳ ಅಭಿಪ್ರಾಯ ಸಂಗ್ರಹ ಮಾಡ್ತೀನಿ. ಟ್ರೈನ್ ಮತ್ತು ಬಸ್ಸು ಹೋಗುವ ರೀತಿ ಟನಲ್‌ ಮಾಡಬೇಕು ಅನ್ನೋ ಅಭಿಪ್ರಾಯ ಇದೆ. ಜಯದೇವ ಬಳಿ ಪೈಲಟ್ ಯೋಜನೆ ಅಂತ ಪರಿಗಣಿಸುತ್ತಿದ್ದೇವೆ. ಬೆಂಗಳೂರು ಪ್ಲಾನ್ಡ್‌ ಸಿಟಿ ಅಲ್ಲ. ಮುಂಬಯಿ, ದೆಹಲಿ ರೀತಿಯಲ್ಲಿ ಪ್ಲಾನ್ ಸಿಟಿ ಅಲ್ಲ. ಆದರೆ ಮುಂಬಯಿ ಮತ್ತು ದೆಹಲಿಯಲ್ಲಿ ಟ್ರಾಫಿಕ್ ಜಾಸ್ತಿ ಇದೆ. ನಮಗಿಂತಲೂ ಹೆಚ್ಚಿಜ ಟ್ರಾಫಿಕ್ ಇದೆ. ಇಲ್ಲಿ ನೀರು ನುಗ್ಗಿದರೂ ಸಮಸ್ಯೆ ಆಗುತ್ತೆ, ಅದನ್ನೇ ದೊಡ್ಡದಾಗಿ ಬರೆಯುತ್ತೀರಿ ಎಂದರು.

ಹಿಂದಿನ ಕಾಮಗಾರಿಗಳನ್ನು ಸರ್ಕಾರ ಸ್ಥಗಿತಗೊಳಿಸಿದೆ ಎಂಭ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿ, ಇನ್ನಷ್ಟು ದೊಡ್ಡಮಟ್ಟದಲ್ಲಿ ಮಾತನಾಡಲಿ. ಎಲ್ಲ ಬಿಚ್ಚಿಸ್ತೀನಿ. ಟೆಂಡರ್ ಡಬಲ್ ಆಗ್ತಿದೆ, ನಾವು ಅಧಿಕಾರಕ್ಕೆ ಬಂದ್ರೆ ಇದಕ್ಕೆ ಅವಕಾಶ ಕೊಡಲ್ಲ ಎಂದು ನಾವು ಚುನಾವಣೆ ಸಂದರ್ಭದಲ್ಲಿ ಹೇಳಿದ್ದೆವು. ನಾವು ಅದಕ್ಕೆ ಬದ್ಧರಾಗಿದ್ದೇವೆ. ಯಾವ ಗುತ್ತಿಗೆದಾರ ಏನು ಬೇಕಾದರೂ ಮಾಡಿಕೊಳ್ಳಲಿ. ಕಾನೂನಾತ್ಮಕವಾಗಿ ಪರಿಶೀಲನೆ ಮಾಡುವವರೆಗೂ ನಾವು ವರ್ಕ್ ಆರ್ಡರ್ ಕೊಡಲ್ಲ. ತನಿಖೆ ಬಳಿಕವೇ ಕಾಮಗಾರಿ ಬಿಲ್ ಬಿಡುಗಡೆ ಮಾಡ್ತೀವಿ ಎಂದರು.

ನಗರದಲ್ಲಿ ಇರೋ ಸ್ಲಮ್ ಶಿಫ್ಟ್ ಮಾಡುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಅಂತಹ ಸಲಹೆಗಳು ಬಂದಿವೆ. ಕೆಲವರು ಸರ್ಕಾರಿ ಜಾಗದಲ್ಲಿ ಇದ್ದಾರೆ. ಕೆಲ ಸ್ಲಮ್ ನಗರದ ಒಳಗೆ ಇವೆ. ಅದನ್ನ ಶಿಫ್ಟ್ ಮಾಡಲು ಸಮಯ ಬೇಕಾಗುತ್ತದೆ ಎಂದರು.

ಇದನ್ನೂ ಓದಿ: Rice Politics: ನಾಳೆ ಅಮಿತ್‌ ಶಾ ಭೇಟಿಗೆ ಸಿದ್ದರಾಮಯ್ಯ ದೆಹಲಿ ಪ್ರವಾಸ; ನಾನೂ ಹೋಗುವೆ ಎಂದ ಡಿಕೆಶಿ

Exit mobile version