ಬೆಂಗಳೂರು: ಬೆಂಗಳೂರಿನ ಸಿವಿಲ್ ನ್ಯಾಯಾಲಯ (Bangalore Civil Court) ಸೇರಿದಂತೆ ರಾಜ್ಯದ ನಾನಾ ಕೋರ್ಟ್‌ಗಳಲ್ಲಿ ಸೇವೆ ಸಲ್ಲಿಸಿ ನ್ಯಾಯದಾನ ಮಾಡಿದ ಹಿರಿಯ ನ್ಯಾಯಾಧೀಶ ಎನ್.ಎಂ. ರವಿ (Senior Judge NM Ravi) ಅವರು ವಿಧಿವಶರಾಗಿದ್ದಾರೆ (Death News).
ಶಿವಮೊಗ್ಗ ಮೂಲದವರಾಗಿರುವ ನ್ಯಾಯಾಧೀಶ ಎನ್.ಎಂ. ರವಿ ಅವರಿಗೆ 64 ವರ್ಷವಾಗಿತ್ತು. ಇದೇ ಜುಲೈ 30ಕ್ಕೆ 65ನೇ ವಸಂತಕ್ಕೆ ಕಾಲಿಡುತ್ತಿದ್ದರು. ಆದರೆ, ಬುಧವಾರ ಮುಂಜಾನೆ 3.56ಕ್ಕೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಮೂರು ದಿನಗ ಹಿಂದೆ ಅವರಿಗೆ ಆರೋಗ್ಯ ಸಮಸ್ಯೆ ಕಾಡಿದಾಗ ತುರ್ತಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬನ್ನೇರುಘಟ್ಟ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಯ ತುರ್ತು ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆದ ಬಳಿಕ ಅವರು ಚೇತರಿಸಿಕೊಂಡಿದ್ದು ಜನರಲ್ ವಾರ್ಡ್‌ಗೆ ಶಿಫ್ಟ್ ಮಾಡಲು ನಿರ್ಧಾರ ಮಾಡಲಾಗಿತ್ತು. ಇದರ ಮಧ್ಯೆ ನ್ಯಾ. ಎನ್.ಎಂ. ರವಿ ಅವರಿಗೆ ನಾಲ್ಕು ಬಾರಿ ಹೃದಯಾಘಾತ ಸಂಭವಿಸಿತ್ತು. ಬೆಳಗ್ಗಿನ ಜಾವ 3.56ಕ್ಕೆ ಕಾರ್ಡಿಯಾಕ್ ಅರೆಸ್ಟ್ ಆಗಿ ಅವರು ವಿಧಿವಶರಾದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ನ್ಯಾಯಾಧೀಶರಾಗಿ ಹೆಸರು ಗಳಿಸಿದ್ದ ಎನ್.ಎಂ. ರವಿ ಅವರು ಖ್ಯಾತ ಜ್ಯೋತಿಷಿ ರಾಜಗುರು ದ್ವಾರಕಾನಾಥ್ ಅವರ ಪುತ್ರ ಶಂಕರ್ ಗುಹಾ ಅವರ ಮಾವ. ಶಂಕರ್ ಗುಹಾ ಅವರ ಪತ್ನಿ ರಮ್ಯಾ ಗುಹಾ ಅವರ ತಂದೆಯಾಗಿದ್ದಾರೆ. ಮಕ್ಕಳಿಗೆ ಸಂಸ್ಕಾರಭರಿತ ಜೀವನವಿಧಾನವನ್ನು ಹೇಳಿಕೊಟ್ಟಿದ್ದ ಎನ್.ಎಂ. ರವಿ ಅವರು ಕೂಡಾ ದೈವಭಕ್ತರಾಗಿದ್ದು, ಬಡವರ ಕಷ್ಟಗಳಿಗೆ ಸ್ಪಂದಿಸುತ್ತಿದ್ದರು. ತ್ವರಿತ ನ್ಯಾಯದಾನವನ್ನು ಪ್ರತಿಪಾದಿಸುತ್ತಿದ್ದರು.
ನ್ಯಾ. ಎನ್.ಎಂ. ರವಿ ಅವರು ಬೆಂಗಳೂರು ಸಿವಿಲ್ ಕೋರ್ಟ್, ಮೈಸೂರಿನ ಜಿಲ್ಲಾ ಕೋರ್ಟ್, ದೇವನಹಳ್ಳಿ ಜಿಲ್ಲಾ ಕೋರ್ಟ್ ಸೇರಿದಂತೆ ಹಲವೆಡೆ ನ್ಯಾಯಾಧೀಶರಾಗಿ ಕಾರ್ಯ ನಿರ್ವಹಣೆ ಮಾಡಿದ್ದರು.
ಇದನ್ನೂ ಓದಿ: Death News: ಪ್ರಗತಿಪರ ರೈತ, ಶತಾಯುಷಿ ವೆಂಕಟರಮಣ ಸೀತಾರಾಮ ಹೆಗಡೆ ಇನ್ನಿಲ್ಲ